For Quick Alerts
  ALLOW NOTIFICATIONS  
  For Daily Alerts

  ಯಾರಾದ್ರೂ ಓಕೆ, ಪೂಜಾ ಹೆಗ್ಡೆ ಜೊತೆ ಮಾತ್ರ ಕಿಸ್ ಬೇಡವೇ ಬೇಡ ಎಂದ ಸ್ಟಾರ್ ನಟ!

  |

  'ಅನ್ ಸ್ಟಾಪೆಬಲ್ ವಿತ್ ಎನ್ ಬಿ ಕೆ' ತೆಲುಗಿನಲ್ಲಿ ನಂದಮುರಿ ಬಾಲಕೃಷ್ಣ ನಡೆಸಿಕೊಡುವಂತಹ ಒಂದೊಳ್ಳೆ ಚರ್ಚಾ ಕಾರ್ಯಕ್ರಮ. ಕನ್ನಡದಲ್ಲಿ ಈ ಹಿಂದೆ 'ನಂಬರ್ ಒನ್ ಯಾರಿ ವಿತ್ ಶಿವಣ್ಣ' ಮಾದರಿಯಲ್ಲಿಯೇ ಇರುವ ಈ 'ಅನ್ ಸ್ಟಾಪೆಬಲ್ ವಿತ್ ಎನ್ ಬಿ ಕೆ' ಮೊದಲನೇ ಆವೃತ್ತಿ ದೊಡ್ಡ ಯಶಸ್ಸು ಸಾಧಿಸಿದ ನಂತರ ಇದೀಗ ದ್ವಿತೀಯ ಆವೃತ್ತಿಯನ್ನು ಆರಂಭಿಸಲಾಗಿದೆ.

  ಮೊದಲ ಆವೃತ್ತಿಯಂತೆಯೇ ಈ ಆವೃತ್ತಿಯನ್ನೂ ಆಹಾ ಓಟಿಟಿ ಅಪ್ಲಿಕೇಶನ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇನ್ನು ಈ ಬಾರಿಯ ಆವೃತ್ತಿಯ ಮೊದಲನೇ ಸಂಚಿಕೆಯಲ್ಲಿ ಆಂಧ್ರಪ್ರದೇಶ ರಾಜ್ಯದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಹಾಗೂ ತೆಲುಗು ದೇಶಂ ಪಾರ್ಟಿಯ ನಾಯಕ ನಾರಾ ಲೋಕೇಶ್ ಭಾಗವಹಿಸಿದ್ದರು. ಹೀಗೆ ಈ ಬಾರಿಯ 'ಅನ್ ಸ್ಟಾಪೆಬಲ್ ವಿತ್ ಎನ್ ಬಿ ಕೆ' ರಾಜಕಾರಣಿಗಳ ಸಂಚಿಕೆ ಮೂಲಕ ಆರಂಭವಾಗಿ ಸದ್ದು ಮಾಡಿದೆ.

  ಇನ್ನು ಕಾರ್ಯಕ್ರಮದ ದ್ವಿತೀಯ ಸಂಚಿಕೆ ನವೆಂಬರ್ 4ರಂದು ಬಿಡುಗಡೆಯಾಗಲಿದ್ದು, ಈ ಸಂಚಿಕೆಯಲ್ಲಿ ಇತ್ತೀಚಿಗಷ್ಟೆ ಮೇಜರ್ ಎಂಬ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ ಅಡಿವಿ ಶೇಷ್ ಹಾಗೂ 'ಒಕೆ ಒಕ ಜೀವಿತಮ್' ಎಂಬ ಬ್ಲಾಕ್ ಬಸ್ಟರ್ ಚಿತ್ರ ನೀಡಿದ ಶರ್ವಾನಂದ್ ಭಾಗವಹಿಸಿದ್ದಾರೆ. ಸಂಚಿಕೆಯನ್ನು ಪ್ರಸಾರ ಮಾಡುವ ಮುನ್ನ ಆಹಾ ಅಪ್ಲಿಕೇಶನ್ ಈ ಸಂಚಿಕೆಯ ಪ್ರೋಮೋ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಪ್ರೋಮೋದಲ್ಲಿರುವ ವಿವಿಧ ಅಂಶಗಳು ವೀಕ್ಷಕರ ಗಮನ ಸೆಳೆಯುತ್ತಿವೆ. ಅದರಲ್ಲಿಯೂ ಯಾವ ನಟಿ ಜೊತೆ ಕಿಸ್ ಬೇಡವೇ ಬೇಡ ಎನ್ನುತ್ತೀರ ಎಂದು ಬಾಲಕೃಷ್ಣ ಕೇಳಿದ ಪ್ರಶ್ನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಯಾವ ನಟಿ ಜೊತೆ ಕಿಸ್ ಬೇಡವೇ ಬೇಡ?

  ಯಾವ ನಟಿ ಜೊತೆ ಕಿಸ್ ಬೇಡವೇ ಬೇಡ?

  ಈ ಬಾರಿಯ 'ಅನ್ ಸ್ಟಾಪೆಬಲ್ ವಿತ್ ಎನ್ ಬಿ ಕೆ' ಕಾರ್ಯಕ್ರಮದ ಎರಡನೇ ಸಂಚಿಕೆಯ ಪ್ರೋಮೋದಲ್ಲಿ ನಿರೂಪಕ ಬಾಲಯ್ಯ 'ಯಾರಾದರೂ ಸರಿ ಈ ನಟಿ ಜೊತೆ ಮಾತ್ರ ಕಿಸ್ ಬೇಡವೇ ಬೇಡ ಅಂತ ಅನಿಸಿರುವುದು ಯಾವ ನಟಿಯ ಬಗ್ಗೆ?' ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವ ಮೇಜರ್ ಖ್ಯಾತಿಯ ಅಡಿವಿ ಶೇಷ್ ಪೂಜಾ ಹೆಗ್ಡೆ ಎಂದು ನೇರ ಉತ್ತರ ನೀಡಿದ್ದಾರೆ. ಅಡಿವಿ ಶೇಷ್ ನೀಡಿದ ಈ ಉತ್ತರ ಕಂಡು ಕಾರ್ಯಕ್ರಮದಲ್ಲಿ ಹಾಜರಿದ್ದ ವೀಕ್ಷಕರು ನಕ್ಕರು ಹಾಗೂ ಕೆಲವರು ಆಶ್ಚರ್ಯವನ್ನು ಸಹ ವ್ಯಕ್ತಪಡಿಸಿದರು.

  ಮನೆಯಲ್ಲಿ ಮದುವೆ ಯಾವಾಗ ಎಂದಾಗಲೆಲ್ಲ ಈ ನಟರ ಹೆಸರು ಹೇಳಿ ಬಿಡುತ್ತೇನೆ

  ಮನೆಯಲ್ಲಿ ಮದುವೆ ಯಾವಾಗ ಎಂದಾಗಲೆಲ್ಲ ಈ ನಟರ ಹೆಸರು ಹೇಳಿ ಬಿಡುತ್ತೇನೆ

  ಇನ್ನು ಕಾರ್ಯಕ್ರಮದಲ್ಲಿ ಮದುವೆ ವಿಚಾರ ಪ್ರಸ್ತಾಪವಾದಾಗ ಮಾತನಾಡಿದ ಅಡಿವಿ ಶೇಷ್ ಮನೆಯವರು ಈ ಕುರಿತು ಪ್ರಶ್ನೆ ಎತ್ತಿದಾಗ ಚಿತ್ರರಂಗದಲ್ಲಿ ಇನ್ನೂ ಮದುವೆಯಾಗದ ನನಗಿಂತ ಹಿರಿಯರಿದ್ದಾರೆ ಎಂದು ಜಾರಿಕೊಳ್ಳುತ್ತೇನೆ ಎಂದಿದ್ದಾರೆ. ಆ ಸಂದರ್ಭದಲ್ಲಿ ಪ್ರಭಾಸ್ ಅವರು ಹಾಗೂ ಶರ್ವಾನಂದ ಅವರು ಇನ್ನೂ ಸಹ ಮದುವೆಯಾಗಿಲ್ಲ ಎಂದು ಹೇಳಿ ನಾನು ಪಾರಾಗುತ್ತೇನೆ ಎಂದು ಅಡಿವಿ ಶೇಷ್ ಪಕ್ಕದಲ್ಲೇ ಇದ್ದ ಶರ್ವಾನಂದ್ ಅವರ ಕಾಲನ್ನು ಎಳೆದಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಶರ್ವಾನಂದ್ ನಾನೇ ಪ್ರಭಾಸ್ ಅವರ ಹೆಸರನ್ನು ಬಳಸಿ ತಪ್ಪಿಸಿಕೊಳ್ಳುತ್ತಿದ್ದೇನೆ ನೀನು ನೋಡಿದ್ರೆ ನನ್ನ ಹೆಸರು ಬಳಸಿಕೊಳ್ಳುತ್ತಿದ್ದೀಯ ಎಂದು ನಕ್ಕಿದ್ದಾರೆ.

  ನಟಿ ವಿಚಾರದಲ್ಲಿ ಈ ಹಿಂದೆ ಸದ್ದು ಮಾಡಿದ್ದ ಅಡಿವಿ ಶೇಷ್

  ನಟಿ ವಿಚಾರದಲ್ಲಿ ಈ ಹಿಂದೆ ಸದ್ದು ಮಾಡಿದ್ದ ಅಡಿವಿ ಶೇಷ್

  ಇನ್ನು ಅಡಿವಿ ಶೇಷ್ ನಟಿಯರ ಕುರಿತು ಈ ರೀತಿ ಓಪನ್ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ರೆಜಿನಾ ಕೆಸ್ಸಾಂಡ್ರಾ ಹುಡುಗರ ಸಾಮರ್ಥ್ಯ ಮ್ಯಾಗಿ ರೀತಿ ಎರಡೇ ನಿಮಿಷಗಳ ಕಾಲದ್ದು ಎಂದು ಮಾಡಿದ್ದ ಪೋಲಿ ಜೋಕ್ ಕುರಿತು ಪ್ರತಿಕ್ರಿಯಿಸಿದ್ದ ಅಡಿವಿ ಶೇಷ್ ನನ್ನ ಸಾಮರ್ಥ್ಯ ಹೆಚ್ಚಿದೆ ಎಂದು ವೇದಿಕೆ ಮೇಲೆ ರೆಜಿನಾ ಮುಂದೆಯೇ ಟಾಂಗ್ ನೀಡಿದ್ದರು.

  English summary
  I dont want to kiss Pooja Hegde says Adivi Sesh. Read on
  Thursday, November 3, 2022, 17:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X