For Quick Alerts
  ALLOW NOTIFICATIONS  
  For Daily Alerts

  ''ಬಾಲ್ಯದಲ್ಲಿಯೇ ಅತ್ಯಾಚಾರಕ್ಕೆ ಒಳಗಾಗಿದ್ದೆ'' ತೆಲುಗು ಹಾಸ್ಯ ನಟ ಹೇಳಿಕೆ

  |

  ತೆಲುಗಿನ ಖ್ಯಾತ ಹಾಸ್ಯ ನಟ ರಾಹುಲ್ ರಾಮಕೃಷ್ಣ ಹೇಳಿಕೆ ಆಘಾತ ಮೂಡಿಸಿದೆ. ''ಬಾಲ್ಯದಲ್ಲಿಯೇ ನಾನು ಅತ್ಯಾಚಾರಕ್ಕೆ ಒಳಗಾಗಿದ್ದೆ'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

  'ಅರ್ಜುನ್ ರೆಡ್ಡಿ', 'ಗೀತಾ ಗೋವಿಂದಂ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ರಾಹುಲ್ ರಾಮಕೃಷ್ಣ ನಟಿಸಿದ್ದಾರೆ. ತೆಲುಗು ಸಿನಿಮಾ ನೋಡುವವರು ರಾಹುಲ್ ರನ್ನು ಗಮನಿಸುತ್ತಾರೆ. ಇತ್ತೀಚಿಗೆ ಬಿಡುಗಡೆಯಾದ ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗ್ಡೆ ನಟನೆಯ 'ಅಲಾ ವೈಕುಂಠಪುರಂಲೊ' ಸಿನಿಮಾದಲ್ಲಿಯೂ ರಾಹುಲ್ ಅಭಿನಯಿಸಿದ್ದರು.

  ಇದ್ದಕ್ಕಿದ್ದ ಹಾಗೆ ನಿನ್ನೆ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಮೇಲೆ ಆದ ಅತ್ಯಾಚಾರದ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ''ನಾನು ಬಾಲ್ಯದಲ್ಲಿಯೇ ಅತ್ಯಾಚಾರಕ್ಕೆ ಒಳಗಾಗಿದ್ದೆ. ನನ್ನ ದುಃಖದ ಬಗ್ಗೆ ಇದನ್ನು ಬಿಟ್ಟು ಇನ್ನೇನ್ನು ಹೇಳುವುದೋ ತಿಳಿಯುತ್ತಿಲ್ಲ. ಏಕೆಂದರೆ ಇದು ನನ್ನ ಬಗ್ಗೆ ನನಗೆ ತಿಳಿದುಕೊಳ್ಳುವಂತೆ ಮಾಡಿತ್ತು.'' ಎಂದು ರಾಹುಲ್ ಬರೆದುಕೊಂಡಿದ್ದಾರೆ.

  ನೋವು ಹಂಚಿಕೊಂಡ ರಾಹುಲ್ ರಾಮಕೃಷ್ಣಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಟ್ವೀಟ್ ಮಾಡಿ, ಧೈರ್ಯವಾಗಿ ಇರೀ... ನಿಮ್ಮ ಮುಂದಿನ ಸಿನಿಮಾ ಬದುಕಿಗೆ ಒಳೆಯದಾಗಿಲಿ ಎಂದಿದ್ದಾರೆ.

  ಅತ್ಯಾಚಾರದ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ರಾಮಕೃಷ್ಣ ಯಾವ ವಯಸ್ಸಿನಲ್ಲಿ ಈ ಘಟನೆ ನಡೆಯಿತು, ಆ ಘಟನೆಗೆ ಕಾರಣರಾದ ಹೆಸರನ್ನು ಬಹಿರಂಗ ಪಡಿಸಿಲ್ಲ.

  English summary
  I was raped during childhood rahul ramakrishna tweets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X