For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಮಾಡಿದರೆ ತಪ್ಪಾ? ನೀನು ಮಾಡಿದರೆ ಸರೀನಾ? ಸಮಂತಾಳನ್ನು ಟ್ರೋಲ್

  |

  ಸಮಂತಾ ರುತ್ ಪ್ರಭು ಏನೇ ಮಾಡಿದರೂ ಈಗ ಅದೊಂದು ಸುದ್ದಿಯಾಗುತ್ತದೆ. ಒಂದು ವೇಳೆ ಏನೂ ಮಾತನಾಡದೆ ಹೋದರೂ ಅದು ಕೂಡ ಒಂದು ಸುದ್ದಿಯಾಗುತ್ತದೆ. ಕಡೆಗೆ ಸಮಂತಾ ಕೆಮ್ಮಿದರೂ ಕೂಡ ಅದೊಂದು ದೊಡ್ಡ ಸುದ್ದಿಯಾಗಿ ಬಿಂಬಿತವಾಗುತ್ತದೆ. ನಾಗಚೈತನ್ಯ ಜೊತೆಗಿನ ವಿವಾಹ ಬಂಧನವನ್ನು ಮುರಿದುಕೊಂಡು ವಿಚ್ಛೇದನ ಪಡೆದ ಮೇಲೆ ಸಮಂತಾಳ ಪ್ರತಿ ನಡೆ ಕೂಡ ರಾಷ್ಟ್ರೀಯ ಸುದ್ದಿಯಾಗುತ್ತಿದೆ. ಅತ್ತ ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ' ಚಿತ್ರದಲ್ಲಿನ ಐಟಂ ಸಾಂಗ್ ಇರಬಹುದು, ತಾಪ್ಸೀ ಪನ್ನು ನಿರ್ಮಾಣದಲ್ಲಿ ಸಮಂತಾ ನಟಿಸಲಿರುವ ಹಿಂದಿ ಚಿತ್ರ ಆಗಬಹುದು ಅಥವಾ ಹಾಲಿವುಡ್ ನಿಂದ ಬಂದಿರುವ ಆಫರ್ ಇರಬಹುದು ಇದೆಲ್ಲವೂ ಈಗಲೂ ಸಮಂತಾಳಿಗೆ ಇರುವ ಜನಪ್ರಿಯತೆಯನ್ನು ಸೂಚಿಸುತ್ತದೆ. ಹೀಗಾಗಿಯೇ ಸೋಶಿಯಲ್ ಮೀಡಿಯಾ ಗಳಲ್ಲಿ ಸಮಂತಾಗೆ ಸಂಬಂಧಿಸಿದಂತೆ ದಿನಕ್ಕೊಂದು ಯಾವುದೋ ಒಂದು ರೀತಿಯ ಸುದ್ದಿ ಹೊರಬೀಳುತ್ತಲೇ ಇರುತ್ತದೆ.

  ಸಮಂತಾ ಆರೋಗ್ಯದ ಬಗ್ಗೆ ವದಂತಿಗಳು

  ಸಮಂತಾ ಆರೋಗ್ಯದ ಬಗ್ಗೆ ವದಂತಿಗಳು

  ನಾಗಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಮಾನಸಿಕ ನೆಮ್ಮದಿಗಾಗಿ ಚಾರ್ ಧಾಮ್ ಯಾತ್ರೆ ಮುಗಿಸಿ ಬಂದ ಸಮಂತಾ, ಇತ್ತೀಚೆಗಷ್ಟೆ ತಿರುಪತಿಗೆ ಭೇಟಿ ಕೊಟ್ಟು ಶ್ರೀನಿವಾಸನ ಆಶೀರ್ವಾದ ಪಡೆದುಕೊಂಡು ಬಂದಿದ್ದಾಳೆ. ಅಲ್ಲದೆ ಇತ್ತೀಚಿನ 'ಪುಷ್ಪ' ಚಿತ್ರದಲ್ಲಿನ ಐಟಂ ಸಾಂಗ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಸಮಂತಾಳ ನಿದ್ದೆಗೆಡಿಸುವ ಸುದ್ದಿಯೊಂದು ಸೋಮವಾರ ಹೊರಬಿತ್ತು. ಸಮಂತಾ ಆರೋಗ್ಯ ಸ್ಥಿತಿ ಕುರಿತು ಸೋಮವಾರ ಹೊರಬಿದ್ದ ವದಂತಿ ಎಷ್ಟು ವೈರಲ್ ಆಗಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಸಮಂತಾ ಅವರ ಮ್ಯಾನೇಜರ್ ಏನೂ ಆಗಿಲ್ಲ ಮತ್ತು ಅವರು ಸುರಕ್ಷಿತವಾಗಿದ್ದಾರೆ ಎಂದು ಘೋಷಿಸಿದಾಗ ವದಂತಿಗಳು ನಿಂತವು.

  ಆರೋಗ್ಯ ಸ್ಥಿತಿಯ ಬಗ್ಗೆ ಸ್ಪಷ್ಟನೆ...

  ಆರೋಗ್ಯ ಸ್ಥಿತಿಯ ಬಗ್ಗೆ ಸ್ಪಷ್ಟನೆ...

  ಸಮಂತಾ ಅವರ ಆರೋಗ್ಯದ ಬಗ್ಗೆ ವದಂತಿಗಳು ಎಲ್ಲರಿಗೂ ತಿಳಿದಿವೆ. ಸ್ವಲ್ಪ ಗಂಟಲಿನ ತುರಿಕೆ ಮತ್ತು ಕೆಮ್ಮಿನ ಪರೀಕ್ಷೆಯ ನಂತರ ಸಮಂತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಮಂತಾಗೆ ಕರೋನಾ ತಗುಲಿದೆ ಎಂದು ವದಂತಿಗಳು ಹಬ್ಬಿದ್ದವು. ಹಿಂದಿನ ದಿನ ಸಮಂತಾ ಕೂಡ ಕಡಪ, ತಿರುಮಲಕ್ಕೆ ಹೋಗಿದ್ದರು. ಆದಾಗ್ಯೂ, ಸಮಂತಾ ಬಗ್ಗೆ ವದಂತಿಗಳನ್ನು ಆಕೆಯ ಮ್ಯಾನೇಜರ್ ನಿರಾಕರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬರುವ ವದಂತಿಗಳನ್ನು ನಂಬಬೇಡಿ ಎಂದು ಸಮಂತಾ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ತನಗೆ ಸ್ವಲ್ಪ ಅನಾರೋಗ್ಯವಿದೆ ಮತ್ತು ಪರೀಕ್ಷೆಗಳ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಸಮಂತಾ ಕೂಡ ಹೇಳಿದ್ದಾರೆ. ಸಮಂತಾ ಸಂಪೂರ್ಣ ಸೇಫ್ ಆಗಿದ್ದೇನೆ ಎಂದು ಅಭಿಮಾನಿಗಳಿಗೆ ಅಸಲಿ ವಿಷಯ ತಿಳಿಸಿದ್ದಾರೆ.

  ಸಮಂತಾ ಭಾವುಕರಾಗಿ ಬರೆದುಕೊಂಡಿದ್ದಾರೆ

  ಸಮಂತಾ ಭಾವುಕರಾಗಿ ಬರೆದುಕೊಂಡಿದ್ದಾರೆ

  ಆದಾಗ್ಯೂ, ಇತ್ತೀಚೆಗೆ, ಸಮಂತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಡ್ರಾಸ್ಟ್ರಿಂಗ್‌ನೊಂದಿಗೆ ಸುತ್ತುವರಿದ ಚೀಲದಂತೆ ಕಾಣುತ್ತದೆ. ಆದರೆ ಸಮಂತಾ ಮುಖ ತೋರಿಸಲಿಲ್ಲ. ಹುಶ್, ಸಶಾ ( ಸಮಂತಾಳ ಮುದ್ದಿನ ಬೆಕ್ಕುಗಳು)
  ಸಮಂತಾಳ ಹಾಸಿಗೆಯ ಮೇಲೆ ಮಲಗಿದ್ದವು. ಸಾಮಾನ್ಯವಾಗಿ ಇವರೊಂದಿಗೆ ಆಟವಾಡುತ್ತಾ ಕಾಣಿಸಿಕೊಳ್ಳುವ ಸಮಂತಾ ಅನಾರೋಗ್ಯದ ಕಾರಣ ಅವುಗಳೊಂದಿಗೆ ಆಟವಾಡುತ್ತಿಲ್ಲ ಎಂಬುವುದು ಅದರಿಂದ ಗೊತ್ತಾಗುತ್ತಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಮಂತಾ 'ಚಿಂತಿಸಬೇಡಿ.. ಈ ಒಂದು ದಿನ ನನಗೆ ಆರೋಗ್ಯ ಸರಿಯಿಲ್ಲ.. ಅದಕ್ಕೇ ನಿಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಸಮಂತಾ ಭಾವುಕರಾಗಿ ಬರೆದುಕೊಂಡಿದ್ದಾರೆ.

  ಇನ್ನಿಲ್ಲದ ತಲೆನೋವನ್ನು ಕೂಡ ತಂದಿದೆ

  ಇನ್ನಿಲ್ಲದ ತಲೆನೋವನ್ನು ಕೂಡ ತಂದಿದೆ

  ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದಲ್ಲಿ ಸಮಂತಾ 'ಊ ಅಂತಾವಾ ಮಾ...' ಎಂಬ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಈ ಐಟಂ ಸಾಂಗ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಮಂತಾಳ ಗ್ರೇಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ವರ್ಷದ ದೊಡ್ಡ ಹಿಟ್ ಐಟಂ ಸಾಂಗ್‌ಗಳಲ್ಲಿ ಇದು ಕೂಡ ಒಂದಾಗಿದೆ. ಈಗ ಇದೆ ಐಟಂಸಾಂಗ್ ಸಮಂತಾಗೆ ಇನ್ನಿಲ್ಲದ ತಲೆನೋವನ್ನು ಕೂಡ ತಂದಿದೆ. ಒಂದಡೆ ಈ ಹಾಡಿನ ಸಾಹಿತ್ಯದಲ್ಲಿ ಪುರುಷರನ್ನು ಕಾಮಪಿಪಾಸುಗಳು ಎಂಬಂತೆ ಬಿಂಬಿಸುವ ಕೆಲಸವಾಗಿದೆ ಅಂತ ಹೇಳಿ ಪುರುಷ ಸಂಘಗಳು ಕೋರ್ಟ್ ಮೆಟ್ಟಲೇರಿದೆ.

  ಪುರುಷ ಸಂಘಟನೆಗಳು ಹಾಡಿನ ವಿರುದ್ಧ ತಿರುಗಿ ಬಿದ್ದಿವೆ

  ಪುರುಷ ಸಂಘಟನೆಗಳು ಹಾಡಿನ ವಿರುದ್ಧ ತಿರುಗಿ ಬಿದ್ದಿವೆ

  ಇತ್ತ ಪುರುಷ ಸಂಘಟನೆಗಳು ಹಾಡಿನ ವಿರುದ್ಧ ತಿರುಗಿ ಬಿದ್ದಿರುವ ಸಮಯದಲ್ಲೇ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿಮಾನಿಗಳು ಕೂಡ ಸಮಂತಾಳನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಮಹೇಶ್ ಬಾಬು ಅಭಿಮಾನಿಗಳು ಹೀಗೆ ಸಮಂತಾಳನ್ನು ಟ್ರೋಲ್ ಮಾಡಲು ಕಾರಣವು ಇದೆ. 2014ರಲ್ಲಿ ಬಿಡುಗಡೆಯಾದ ಮಹೇಶ್ ಬಾಬು ಅಭಿನಯದ '1 ನೆನೊಕ್ಕಡಿನೆ' ಚಿತ್ರದಲ್ಲಿ ಒಂದು ಹಾಡಿನಲ್ಲಿ ನಾಯಕಿ ಕೃತಿ ಸನನ್ ಮಹೇಶ್ ಬಾಬು ಅವರ ಹೆಜ್ಜೆಗುರುತುಗಳನ್ನು ಹಿಂಬಾಲಿಸಿ ಕೊಂಡು ಹೋಗುವ ದೃಶ್ಯವಿದೆ. ಆ ದೃಶ್ಯಕ್ಕೆ ಸಂಬಂಧಿಸಿದಂತೆ ಸಮಂತಾ ಅವರು ಮಾಡಿದ್ದ ಕಾಮೆಂಟ್‌ಗಳು ಕೋಲಾಹಲ ಎಬ್ಬಿಸಿತ್ತು. 'ಪುರುಷರ ಹೆಜ್ಜೆಗುರುತುಗಳನ್ನು ಹಿಂಬಾಲಿಸಿ ಕೊಂಡು ಹೋಗುವ ಸ್ಥಿತಿಯಲ್ಲಿ ಮಹಿಳೆಯನ್ನು ತೋರಿಸುವುದು ನಿಜಕ್ಕೂ ಸಿನಿಮಾರಂಗದಲ್ಲಿನ ದುರಂತ' ಅಂತ ಕಾಮೆಂಟ್ ಮಾಡಿದ್ದರು.

  ಕರ್ಮ ರಿಟರ್ನ್ಸ್ ಬ್ಯಾಕ್...

  ಕರ್ಮ ರಿಟರ್ನ್ಸ್ ಬ್ಯಾಕ್...

  ಮಹೇಶ್ ಬಾಬು ಅವರ ಫೋಟೋ ಹಿಡಿದು ಅಂದು ಮಾಡಿದ್ದ ಕಾಮೆಂಟ್ ವಿರುದ್ಧ ಮಹೇಶ್ ಬಾಬು ಅಭಿಮಾನಿಗಳು ಈಗ ತಿರುಗಿ ಬೀಳಲು ಕಾರಣ ಸಿಕ್ಕಿದೆ. ಇದೇ ಕಾರಣಕ್ಕೆ ಈಗ ಮಹೇಶ್ ಬಾಬು ಅಭಿಮಾನಿಗಳು 'ಕರ್ಮ ರಿಟರ್ನ್ಸ್ ಬ್ಯಾಕ್...' ಅಂತೇಳಿ ಸಮಂತಾಳನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸಮಂತಾ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಆ ಗೆಳೆತನದಿಂದಲೇ ಇತ್ತೀಚೆಗಷ್ಟೇ ತಮ್ಮ 'ಪುಷ್ಪ' ಸಿನಿಮಾದಲ್ಲಿ ಸಮಂತಾ ವಿಶೇಷ ಹಾಡಿನಲ್ಲಿ ಕುಣಿದಿದ್ದಾರೆ. 'ಊ ಅಂತಾವಾ ಮಾ.. ಊ ಅಂತಾವಾ' ಹಾಡಿನಲ್ಲಿ ಸಮಂತಾ ಕುಣಿಯುವಾಗ, ಒಂದು ದೃಶ್ಯದಲ್ಲಿ ಸಹ ನಟನ ಎದೆಯ ಮೇಲೆ ಸಮಂತಾ ಕಾಲು ಇಟ್ಟಿದ್ದಾಳೆ. ಫೋಟೋ ಕೂಡ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಮಹೇಶ್ ಬಾಬು ಅಭಿಮಾನಿಗಳ ಟ್ರೋಲ್

  ಮಹೇಶ್ ಬಾಬು ಅಭಿಮಾನಿಗಳ ಟ್ರೋಲ್

  ಮಹೇಶ್ ಬಾಬು ಅಭಿಮಾನಿಗಳ ಟ್ರೋಲ್
  ಈಗ ಇದನ್ನೇ ಹಿಡಿದಿರುವ ಮಹೇಶ್ ಬಾಬು ಅಭಿಮಾನಿಗಳು ' ಅಂದು ಪುರುಷ ಸ್ತ್ರೀ ಸಮಾನತೆ ಬಗ್ಗೆ ಮಾತನಾಡಿದ ಸಮಂತಾ, ಇವತ್ತು ಒಬ್ಬ ಪುರುಷನ ಎದೆಯ ಮೇಲೆ ಹೇಗೆ ಕಾಲಿಟ್ಟು ಕುಣಿಯುತ್ತಿರುವೆ? ಇಲ್ಲಿ ಸಮಾನತೆ ನಿನಗೆ ಕಂಡು ಬರಲಿಲ್ಲವೇ?' ಅಂತೇಳಿ ಪ್ರಶ್ನೆಗಳ ಸುರಿಮಳೆ ಮಾಡಿ ಸಮಂತಾಳನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಮಹೇಶ್ ಬಾಬು ಬಗ್ಗೆ ಮಾಡಿದ್ದ ಕಾಮೆಂಟ್‌ಗಳನ್ನು ರಿವರ್ಸ್ ಮಾಡಿ ಸಮಂತಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. 'ಮಹೇಶ್ ಬಾಬು ಮಾಡಿದರೆ ತಪ್ಪಾ? ನೀನು ಮಾಡಿದರೆ ಸರಿನಾ?! ಅದಕ್ಕೆ ಕರ್ಮ ಅಂತ ಒಂದಿರುತ್ತದೆ, ಅದು ವಾಪಸ್ಸು ಮತ್ತೆ ನಮ್ಮ ಕಡೆಗೆ ಬರುತ್ತದೆ'ಅಂತ ಹೇಳಿ ಸಮಂತಾ ಮೇಲೆ ಸಿಕ್ಕಾಪಟ್ಟೆ ಟ್ರೋಲಿಂಗ್ ಮಾಡುತ್ತಿದ್ದಾರೆ. ಒಂದು ಕಡೆ ಅನಾರೋಗ್ಯ, ಇನ್ನೊಂದು ಕಡೆ ಮಹೇಶ್ ಬಾಬು ಅಭಿಮಾನಿಗಳ ಟ್ರೋಲ್, ಇನ್ನೊಂದು ಪುರುಷ ಸಂಘಟನೆಗಳು ಹಾಡಿನ ಮೇಲೆ ಕೇಸು ದಾಖಲಿಸಿರುವುದು, ಒಟ್ಟಾರೆ ಸಮಂತಾ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿದೆ.

  English summary
  If Mahesh Babu do it's wrong? if you do it the same, is it right? Prince fans trolling Samantha. Mahesh Babu fans are diging at Samantha by taking her old tweet.
  Friday, December 17, 2021, 9:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X