For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ಚಿತ್ರದಿಂದ ಆರ್‌ಆರ್‌ಆರ್‌ ಹೊಸ ಪೋಸ್ಟರ್ ಕಾಪಿನಾ?

  |

  ಎಸ್ ಎಸ್ ರಾಜಮೌಳಿ ನಿರ್ದೇಶನ ಹಾಗೂ ಅವರ ಸಿನಿಮಾ ಮೇಕಿಂಗ್ ಶೈಲಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ. ತಮ್ಮ ಪ್ರತಿಯೊಂದು ಚಿತ್ರಗಳಲ್ಲಿಯೂ ರಾಜಮೌಳಿ ಹೊಸತನ ಹಾಗೂ ಥ್ರಿಲ್ ಉಂಟು ಮಾಡುವ ಮೇಕಿಂಗ್ ಮೂಲಕ ಗಮನ ಸೆಳೆಯುತ್ತಾರೆ. ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ವಾಹ್ ಎನ್ನುವ ಫೀಲ್ ಕೊಡ್ತಾರೆ.

  ಆದರೆ, ರಾಜಮೌಳಿಯ ಕೆಲವು ಐಡಿಯಾಗಳು ಹಾಲಿವುಡ್ ಹಾಗೂ ಇನ್ನಿತರ ಸಿನಿಮಾಗಳಿಂದ ಕದ್ದಿರುವುದು ಅಥವಾ ಸ್ಫೂರ್ತಿಯಾಗಿಸಿಕೊಂಡು ಮಾಡ್ತಾರೆ ಎಂಬ ಆರೋಪವೂ ಇದೆ.

  ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?

  ಈಗ ಮತ್ತೊಮ್ಮೆ ಆ ವಿಚಾರ ಚರ್ಚೆಗೆ ಬಂದಿದೆ. ಕಾರಣ, ಆರ್ ಆರ್ ಆರ್ ಸಿನಿಮಾ ಹೊಸ ಪೋಸ್ಟರ್. ಆರ್‌ಆರ್‌ಆರ್ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಿದ ಸಂದರ್ಭದಲ್ಲಿ ರಾಜಮೌಳಿ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದರು. ಈ ಪೋಸ್ಟರ್‌ನಲ್ಲಿ ಎನ್‌ಟಿಆರ್ ಬೈಕ್ ಮೇಲೆ ಹಾಗೂ ರಾಮ್ ಚರಣ್ ಕುದುರೆ ಮೇಲೆ ಸವಾರಿ ಹೊರಟಿರುವ ದೃಶ್ಯವಿದೆ.

  ಈ ಪೋಸ್ಟರ್ ಕಂಡು ಸಿನಿಪ್ರೇಕ್ಷಕರು ಥ್ರಿಲ್ ಆಗಿದ್ದರು. ಇಬ್ಬರು ಹೀರೋಗಳಿಗೆ ಸಮಾನವಾದ ಬಿಲ್ಡಪ್ ನೀಡಲಾಗಿದೆ. ಇಬ್ಬರ ಇಮೇಜ್‌ಗೆ ಧಕ್ಕೆ ಬರದಂತೆ ಸಮತೋಲನವಾಗಿ ಸಿನಿಮಾ ಬರ್ತಿದೆ ಎಂದು ಹೇಳುವಂತಿತ್ತು.

  ಆದ್ರೀಗ, ಈ ಪೋಸ್ಟರ್ ಕದ್ದಿರುವುದು ಎಂಬ ಆರೋಪ ಬಂದಿದೆ. 2007ರಲ್ಲಿ ತೆರೆಕಂಡಿದ್ದ 'ಗೋಸ್ಟ್ ರೈಡರ್' ಚಿತ್ರದ ಪೋಸ್ಟರ್‌ನಿಂದ ಸ್ಫೂರ್ತಿಯಾಗಿಸಿಕೊಂಡು ಆರ್‌ಆರ್‌ಆರ್ ಪೋಸ್ಟರ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

  ಏಕಂದ್ರೆ, 'ಗೋಸ್ಟ್ ರೈಡರ್' ಪೋಸ್ಟರ್‌ನಲ್ಲೂ ಇದೇ ಕಾಂಬಿನೇಷನ್ ಇತ್ತು. ಒಬ್ಬರು ಬೈಕ್ ಮೇಲೆ ಇನ್ನೊಬ್ಬರು ಕುದುರೆ ಮೇಲೆ ಸವಾರಿ ಮಾಡುತ್ತಿರುವುದು. ಅದೇ ಪೋಸ್ಟರ್ ಹೋಲುವಂತೆ ಆರ್‌ಆರ್‌ಆರ್ ಪೋಸ್ಟರ್ ಬಂದಿದೆ.

  ಈ ಪೋಸ್ಟರ್‌ ಬಗ್ಗೆ ಚರ್ಚೆ ಏನೇ ಇದ್ದರೂ ಆರ್‌ಆರ್‌ಆರ್‌ ಚಿತ್ರದ ಮೇಲಿನ ಕುತೂಹಲ, ಕಾತುರ ಮಾತ್ರ ಸ್ವಲ್ಪವೂ ಕಮ್ಮಿಯಾಗಿಲ್ಲ. ಸ್ವತಃ ಚಿತ್ರತಂಡವೇ ಹೇಳಿರುವ ಪ್ರಕಾರ ಅಕ್ಟೋಬರ್ 13 ರಂದು ಸಿನಿಮಾ ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದೆ.

  ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಜೊತೆ ಆಲಿಯಾ ಭಟ್, ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಅಂತಾರಾಷ್ಟ್ರೀಯ ಕಲಾವಿದರಾದ ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಸಹ ತಾರಬಳಗದಲ್ಲಿದ್ದಾರೆ. ಡಿವಿವಿ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  ಮಾಡಿದ ತಪ್ಪನ್ನೆಲ್ಲ ಡೈರಿಯಲ್ಲಿ ಬರೆದು ಕ್ಷಮೆ ಕೇಳಿ ಪಶ್ಚಾತಾಪ ಪಟ್ಟಿದ್ದ ಜಯಶ್ರೀ | Filmibeat Kannada
  English summary
  SS Rajamouli Directional RRR movie New Poster inspired from Ghost rider Movie?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X