For Quick Alerts
  ALLOW NOTIFICATIONS  
  For Daily Alerts

  ವಿದೇಶಿ ಯುವಕನ ಜೊತೆಗೆ ತೆಲುಗು ನಟಿ ರಿಚಾ ಅದ್ಧೂರಿ ಕಲ್ಯಾಣ

  |

  ಬೆಳ್ಳಿ ಪರದೆ ಮೇಲೆ ಮಿಂಚಿದ್ದು ಕೇವಲ ನಾಲ್ಕು ವರ್ಷಗಳು... ಅಭಿನಯಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ... ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡ ನಟಿ... ಹಿಟ್ ಮೇಲೆ ಹಿಟ್ ಕೊಟ್ಟರೂ ಚಿತ್ರರಂಗಕ್ಕೆ ಗುಡ್ ಬೈ ಹೇಳಿದಾಕೆ ನಟಿ ರಿಚಾ ಗಂಗೋಪಾಧ್ಯಾಯ್.

  2013 ರ ಬಳಿಕ ಬಣ್ಣದ ಬದುಕಿನ ಕಡೆಗೆ ತಿರುಗಿ ನೋಡದ ರಿಚಾ ಗಂಗೋಪಾಧ್ಯಾಯ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆರು ವರ್ಷಗಳಿಂದ ಎಲ್ಲೂ ಸದ್ದು ಮಾಡದ ಮಾಜಿ ನಟಿ ರಿಚಾ ಗಂಗೋಪಾಧ್ಯಾಯ್ ವೈವಾಹಿಕ ಬದುಕಿಗೆ ಅಡಿಯಿಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ವಿದೇಶಿ ಯುವಕನ ಜೊತೆಗೆ ರಿಚಾ ಮದುವೆ

  ವಿದೇಶಿ ಯುವಕನ ಜೊತೆಗೆ ರಿಚಾ ಮದುವೆ

  ಮಿಶಿಗನ್ ನಲ್ಲಿ ಬೆಳೆದ ರಿಚಾ ಗಂಗೋಪಾಧ್ಯಾಯ್, ಅಲ್ಲಿನ ಬಹುಕಾಲದ ಗೆಳೆಯ ಜೋ ಲ್ಯಾಂಗೆಲ್ಲಾ ಜೊತೆಗೆ ಹೊಸ ಜೀವನ ಆರಂಭಿಸಿದ್ದಾರೆ. ಮೂರು ತಿಂಗಳ ಹಿಂದೆ ರಿಚಾ-ಜೋ ಲ್ಯಾಂಗೆಲ್ಲಾ ಮದುವೆ ನಡೆದಿದ್ದು, ಹಿಂದು ಮತ್ತು ಕ್ರೈಸ್ತ ಸಂಪ್ರದಾಯದಂತೆ ವಿವಾಹ ಮಹೋತ್ಸವ ನೆರವೇರಿದೆ.

  ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಮದುವೆ ಸಂಭ್ರಮ ಬಲು ಜೋರುಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಮದುವೆ ಸಂಭ್ರಮ ಬಲು ಜೋರು

  ಮಿಶಿಗನ್ ನಲ್ಲಿ ವಿವಾಹ ಮಹೋತ್ಸವ

  ಮಿಶಿಗನ್ ನಲ್ಲಿ ವಿವಾಹ ಮಹೋತ್ಸವ

  ಕಳೆದ ಜನವರಿಯಲ್ಲಿ ರಿಚಾ ಗಂಗೋಪಾಧ್ಯಾಯ್ ಮತ್ತು ಜೋ ಲ್ಯಾಂಗೆಲ್ಲಾ ರವರ ನಿಶ್ಚಿತಾರ್ಥ ನಡೆದಿತ್ತು. ಮೂರು ತಿಂಗಳ ಹಿಂದೆ ಮಿಶಿಗನ್ ನಲ್ಲಿ ವಿವಾಹ ಮಾಡಿಕೊಂಡಿರುವ ಸುದ್ದಿಯನ್ನ ಇದೀಗ ರಿಚಾ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾರೆ.

  ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್ ಮದುವೆಯ ಅದ್ಭುತ ಕ್ಷಣಗಳಿವುಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್ ಮದುವೆಯ ಅದ್ಭುತ ಕ್ಷಣಗಳಿವು

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ರಿಚಾ ಮತ್ತು ಜೋ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಎರಡು ವರ್ಷಗಳಿಂದ ಈ ಜೋಡಿ ಲವ್ ಮಾಡುತ್ತಿದ್ದರು. ಅಸಲಿಗೆ, ರಿಚಾ ಮತ್ತು ಜೋ ಎಂ.ಬಿ.ಎ ಕ್ಲಾಸ್ ಮೇಟ್ಸ್. ಒಟ್ಟಿಗೆ ಓದುವಾಗ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಇಬ್ಬರ ಲವ್ ಸ್ಟೋರಿಗೆ ಕುಟುಂಬಸ್ಥರು ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ಅದ್ಧೂರಿ ಕಲ್ಯಾಣ ನಡೆದಿದೆ.

  ಸಂತಸಗೊಂಡ ರಿಚಾ

  ಸಂತಸಗೊಂಡ ರಿಚಾ

  ''ನಾನು ಚಿತ್ರರಂಗವನ್ನು ಬಿಟ್ಟು ಆರು ವರ್ಷಗಳಾದರೂ, ಜನ ನನ್ನ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ನಾನು ಚಿರಋಣಿ'' ಎಂದು ಸೋಷಿಯಲ್ ಮೀಡಿಯಾದಲ್ಲಿ ರಿಚಾ ಗಂಗೋಪಾಧ್ಯಾಯ್ ಸಂತಸ ವ್ಯಕ್ತಪಡಿಸಿದ್ದಾರೆ.

  ರಿಚಾ ಹಿನ್ನಲೆ

  ರಿಚಾ ಹಿನ್ನಲೆ

  ರಿಚಾ ಗಂಗೋಪಾಧ್ಯಾಯ್ ಹುಟ್ಟಿದ್ದು ನವದೆಹಲಿಯಲ್ಲಾದರೂ, ಬೆಳೆದಿದೆಲ್ಲ ಮಿಶಿಗನ್ ನಲ್ಲಿ. ರಿಚಾ ತಂದೆ-ತಾಯಿ 1989 ರಿಂದ ಯು.ಎಸ್ ನಲ್ಲೇ ಸೆಟಲ್ ಆಗಿದ್ದಾರೆ. 2007 ರಲ್ಲಿ ಮಿಸ್ ಇಂಡಿಯಾ ಮಿಶಿಗನ್, ಮಿಸ್ ಇಂಡಿಯಾ ಯು.ಎಸ್ ಕಿರೀಟ ತೊಟ್ಟ ಸುಂದರಿ ರಿಚಾ, ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು 2008 ರಲ್ಲಿ ಮುಂಬೈಗೆ ಬಂದಿಳಿದರು. ಅನುಪಮ್ ಖೇರ್ ಅಕ್ಟಿಂಗ್ ಸ್ಕೂಲ್ ನಲ್ಲಿ ನಟನೆ ಕಲಿತ ರಿಚಾ, ಹಲವು ಜಾಹೀರಾತುಗಳಲ್ಲಿ ಮಿಂಚಿದ್ದಾರೆ.

  ರಿಚಾ ಅಭಿನಯದ ಚಿತ್ರಗಳು

  ರಿಚಾ ಅಭಿನಯದ ಚಿತ್ರಗಳು

  2010 ರಲ್ಲಿ ಬಿಡುಗಡೆ ಆದ 'ಲೀಡರ್' ಚಿತ್ರದ ಮೂಲಕ ಬೆಳ್ಳಿತೆರೆಗೆ ರಿಚಾ ಪದಾರ್ಪಣೆ ಮಾಡಿದರು. ಅಲ್ಲಿಂದ ಶುರುವಾದ ರಿಚಾ ಸಿನಿ ಪಯಣ 'ನಾಗವಲ್ಲಿ', 'ಮಿರಪಕಾಯ್', 'ಮಾಯಕ್ಕಮ್ ಎನ್ನ', 'ಒಸ್ತೆ', 'ಸಾರೊಚ್ಚಾರು', 'ಮಿರ್ಚಿ', 'ಭಾಯ್' ಚಿತ್ರಗಳಲ್ಲಿ ಮುಂದುವರೆಯಿತು.

  2013ರಲ್ಲಿ ಚಿತ್ರರಂಗಕ್ಕೆ ಗುಡ್ ಬೈ

  2013ರಲ್ಲಿ ಚಿತ್ರರಂಗಕ್ಕೆ ಗುಡ್ ಬೈ

  ನಾಲ್ಕು ವರ್ಷಗಳಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ರಿಚಾ, ರಾನಾ ದಗ್ಗುಬಾಟಿ, ವೆಂಕಟೇಶ್, ನಾಗಾರ್ಜುನ, ಪ್ರಭಾಸ್, ಧನುಷ್, ಸಿಲಂಬರಸನ್ ಅಂತಹ ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡರು. 2013 ರಲ್ಲಿ ಓದಿನ ಕಡೆಗೆ ಒಲವು ತೋರಿಸಿದ ರಿಚಾ ಸಿನಿ ಲೋಕಕ್ಕೆ ಗುಡ್ ಬೈ ಹೇಳಿದರು.

  English summary
  Telugu Actress Richa Gangopadhyay got married to Joe Langella.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X