twitter
    For Quick Alerts
    ALLOW NOTIFICATIONS  
    For Daily Alerts

    ಚಿಕ್ಕಬಳ್ಳಾಪುರ: RRR ಕಾರ್ಯಕ್ರಮದಲ್ಲಿ ರಾಜಕೀಯ ಜಗಳ, ಸ್ವಲ್ಪದರಲ್ಲಿ ತಪ್ಪಿತು ಅನಾಹುತ!

    |

    ಸಿನಿಮಾ ಹಾಗೂ ರಾಜಕೀಯದ ನಡುವೆ ಬಹಳ ತೆಳು ಗೆರೆ ಇದೆ ತೆಲುಗು ರಾಜ್ಯಗಳಲ್ಲಿ. ಸಿನಿಮಾ ನಟರಾಗಿ ಜನಪ್ರಿಯರಾದವರು ರಾಜಕೀಯ ಪ್ರವೇಶ ಮಾಡುವುದು ತೆಲುಗಿನಲ್ಲಿ ತೀರಾ ಸಾಮಾನ್ಯ ಸಂಗತಿ. ಸಿನಿಮಾಗಳಲ್ಲಿ ಸಕ್ರಿಯರಾಗಿರುವ ದೊಡ್ಡ ದೊಡ್ಡ ಸ್ಟಾರ್ ನಟರು ರಾಜಕೀಯ ಪಕ್ಷಗಳನ್ನು ಕಟ್ಟಿರುವುದು, ರಾಜಕೀಯ ಪಕ್ಷಗಳ ಬಹಿರಂಗ ಬೆಂಬಲಿಗರು ಆಗಿದ್ದಾರೆ. ಸ್ಟಾರ್ ನಟರ ಅಭಿಮಾನಿಗಳು ಸಿನಿಮಾ ಪ್ರೇಮಿಗಳಾಗಿರುವ ಜೊತೆಗೆ ಆಯಾ ಸ್ಟಾರ್ ನಟರ ರಾಜಕೀಯ ಕಾರ್ಯಕರ್ತರೂ ಆಗಿರುತ್ತಾರೆ. ಅತಿರೇಕದ ಅಭಿಮಾನದ ಜೊತೆಗೆ, ಪಕ್ಷ ರಾಜಕೀಯ ವೈಷಮ್ಯವೂ ಬೆರತು ಸ್ಟಾರ್ ನಟರ ಅಭಿಮಾನಿಗಳ ನಡುವೆ ಸೂಕ್ಷ್ಮ ಸನ್ನಿವೇಶ ಸದಾ ಇರುತ್ತದೆ. ಇಂಥಹಾ ಸಮಯದಲ್ಲಿ ಎರಡು ಭಿನ್ನ ಪಕ್ಷಗಳ, ಎರಡು ಭಿನ್ನ ಸ್ಟಾರ್ ಕುಟುಂಬಗಳ ತಾರಾ ನಟರಾದ ರಾಮ್ ಚರಣ್ ತೇಜ ಹಾಗೂ ಜೂ ಎನ್‌ಟಿಆರ್ ಅವರನ್ನು ಒಟ್ಟಿಗೆ ಸೇರಿಸಿಕೊಂಡು ರಾಜಮೌಳಿ RRR ಸಿನಿಮಾ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ: RRR ಕಾರ್ಯಕ್ರಮರಲ್ಲಿ ರಾಜಕೀಯ ಜಗಳ, ಸ್ವಲ್ಪದರಲ್ಲಿ ತಪ್ಪಿತು ಅನಾಹುತ!

    ಸಿನಿಮಾ ಹಾಗೂ ರಾಜಕೀಯದ ನಡುವೆ ಬಹಳ ತೆಳು ಗೆರೆ ಇದೆ ತೆಲುಗು ರಾಜ್ಯಗಳಲ್ಲಿ. ಸಿನಿಮಾ ನಟರಾಗಿ ಜನಪ್ರಿಯರಾದವರು ರಾಜಕೀಯ ಪ್ರವೇಶ ಮಾಡುವುದು ತೆಲುಗಿನಲ್ಲಿ ತೀರಾ ಸಾಮಾನ್ಯ ಸಂಗತಿ.

    RRR ಇವೆಂಟ್‌ನಲ್ಲಿ ಬಾಟಲಿ, ಚಪ್ಪಲಿ ಎಸೆದಾಟ, ಪೊಲೀಸರ ಲಾಠಿ ಪ್ರಹಾರಕ್ಕೆ ಕೆಲವರಿಗೆ ಗಾಯRRR ಇವೆಂಟ್‌ನಲ್ಲಿ ಬಾಟಲಿ, ಚಪ್ಪಲಿ ಎಸೆದಾಟ, ಪೊಲೀಸರ ಲಾಠಿ ಪ್ರಹಾರಕ್ಕೆ ಕೆಲವರಿಗೆ ಗಾಯ

    ಸಿನಿಮಾಗಳಲ್ಲಿ ಸಕ್ರಿಯರಾಗಿರುವ ದೊಡ್ಡ ದೊಡ್ಡ ಸ್ಟಾರ್ ನಟರು ರಾಜಕೀಯ ಪಕ್ಷಗಳನ್ನು ಕಟ್ಟಿರುವುದು, ರಾಜಕೀಯ ಪಕ್ಷಗಳ ಬಹಿರಂಗ ಬೆಂಬಲಿಗರು ಆಗಿದ್ದಾರೆ. ಸ್ಟಾರ್ ನಟರ ಅಭಿಮಾನಿಗಳು ಸಿನಿಮಾ ಪ್ರೇಮಿಗಳಾಗಿರುವ ಜೊತೆಗೆ ಆಯಾ ಸ್ಟಾರ್ ನಟರ ರಾಜಕೀಯ ಕಾರ್ಯಕರ್ತರೂ ಆಗಿರುತ್ತಾರೆ.

    ಅತಿರೇಕದ ಅಭಿಮಾನದ ಜೊತೆಗೆ, ಪಕ್ಷ ರಾಜಕೀಯ ವೈಷಮ್ಯವೂ ಬೆರತು ಸ್ಟಾರ್ ನಟರ ಅಭಿಮಾನಿಗಳ ನಡುವೆ ಸೂಕ್ಷ್ಮ ಸನ್ನಿವೇಶ ಸದಾ ಇರುತ್ತದೆ. ಇಂಥಹಾ ಸಮಯದಲ್ಲಿ ಎರಡು ಭಿನ್ನ ಪಕ್ಷಗಳ, ಎರಡು ಭಿನ್ನ ಸ್ಟಾರ್ ಕುಟುಂಬಗಳ ತಾರಾ ನಟರಾದ ರಾಮ್ ಚರಣ್ ತೇಜ ಹಾಗೂ ಜೂ ಎನ್‌ಟಿಆರ್ ಅವರನ್ನು ಒಟ್ಟಿಗೆ ಸೇರಿಸಿಕೊಂಡು ರಾಜಮೌಳಿ RRR ಸಿನಿಮಾ ಮಾಡಿದ್ದಾರೆ. ರಾಮ್ ಚರಣ್-ಜೂ ಎನ್‌ಟಿಆರ್ ಪರಸ್ಪರ ಬಹಳ ಒಳ್ಳೆಯ ಸ್ನೇಹಿತರೇ ಸರಿ ಆದರೆ ಅವರಿಬ್ಬರ ಕುಟುಂಬಗಳ ಅಭಿಮಾನಿಗಳ ನಡುವೆ ಇರುವ ಗುಪ್ತ ವೈಷಮ್ಯ ಮರೆಯಾಗಿಲ್ಲ. ನಿನ್ನೆ ರಾಜ್ಯದ ಚಿಕ್ಕಬಳ್ಳಾಪುರದಲ್ಲಿ ನಡೆದ RRR ಪ್ರೀ ರಿಲೀಸ್‌ ಇವೆಂಟ್‌ ಇದಕ್ಕೆ ಸಾಕ್ಷಿಯಾಯಿತು.

    ಎರಡೂ ಪಕ್ಷಗಳ ಬಾವುಟಗಳೂ ರಾರಾಜಿಸುತ್ತಿದ್ದವು

    ಎರಡೂ ಪಕ್ಷಗಳ ಬಾವುಟಗಳೂ ರಾರಾಜಿಸುತ್ತಿದ್ದವು

    ರಾಮ್‌ ಚರಣ್ ತೇಜರ ಚಿಕ್ಕಪ್ಪ ಪವನ್ ಕಲ್ಯಾಣ್‌ ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿದ್ದು ಪಕ್ಷಕ್ಕೆ ದೊಡ್ಡ ಸಂಖ್ಯೆಯ ಕಾರ್ಯಕರ್ತರಿದ್ದಾರೆ. ಮತ್ತೊಂದೆಡೆ ಜೂ ಎನ್‌ಟಿಆರ್ ನೇರವಾಗಿ ತೆಲುಗುದೇಶಂ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ. ಜೂ ಎನ್‌ಟಿಆರ್ ಅವರ ತಾತ ಪ್ರಾರಂಭಿಸಿದ ಪಕ್ಷವದು. ಅವರ ಕುಟುಂಬದ ರಾಜಕೀಯ ಪಕ್ಷವೇ ಅದು. ಈ ಪಕ್ಷಕ್ಕೂ ದೊಡ್ಡ ಸಂಖ್ಯೆಯ ಕಾರ್ಯಕರ್ತರಿದ್ದಾರೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲ ಆಂಧ್ರದ ಗಡಿನಾಡಿನಲ್ಲಿಯೂ ಈ ಎರಡು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ.

    ತೆಲುಗು ದೇಶಂ ಬಾವುಟ ನೆಟ್ಟರು ಅಭಿಮಾನಿಗಳು

    ತೆಲುಗು ದೇಶಂ ಬಾವುಟ ನೆಟ್ಟರು ಅಭಿಮಾನಿಗಳು

    ನಿನ್ನೆ RRR ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆದ ಸ್ಥಳದಲ್ಲಿ ಸೌಂಡ್ ಸಿಸ್ಟಂ ಜೋಡಿಸಲು ಇಟ್ಟಿದ್ದ ಬೃಹತ್ ಕಬ್ಬಿಣದ ಸರಳುಗಳಿಂದ ಮಾಡಿದ ಸ್ಟ್ಯಾಂಡ್ ಮೇಲೆ ಜನಸೇನಾ ಪಕ್ಷದ ದೊಡ್ಡ ಬಾವುಟ ಕಟ್ಟಲಾಗಿತ್ತು. ಅದರಲ್ಲಿ ಪವನ್ ಕಲ್ಯಾಣ್ ಜೊತೆಗೆ ರಾಮ್ ಚರಣ್ ತೇಜ ಚಿತ್ರಗಳಿದ್ದವು. ಬಳಿಕ ತೆಲುಗು ದೇಶಂ ಪಕ್ಷದ ಬಾವುಟ ಹಿಡಿದು ಮೈದಾನ ಪ್ರವೇಶಿಸಿದ ದೊಡ್ಡ ಗುಂಪೊಂದು ಆ ಬೃಹತ್ ಕಬ್ಬಿಣದ ಸ್ಟ್ಯಾಂಡ್ ಮೇಲೆ ಹತ್ತಿ ಅಲ್ಲಿ ಕಟ್ಟಲಾಗಿದ್ದ ರಾಮ್ ಚರಣ್ ಚಿತ್ರವಿದ್ದು ಜನಸೇನಾ ಪಕ್ಷದ ಬಾವುಟ ಕಿತ್ತೊಗೆದು ಅದೇ ಸ್ಥಳದಲ್ಲಿ ಜೂ ಎನ್‌ಟಿಆರ್ ಚಿತ್ರವಿದ್ದ ತೆಲುಗು ದೇಶಂ ಪಕ್ಷದ ಬಾವುಟ ನೆಟ್ಟರು.

    ಬಾವುಟ ಕಿತ್ತೊಗೆದ ಜೂ ಎನ್‌ಟಿಆರ್ ಅಭಿಮಾನಿಗಳು

    ಬಾವುಟ ಕಿತ್ತೊಗೆದ ಜೂ ಎನ್‌ಟಿಆರ್ ಅಭಿಮಾನಿಗಳು

    ಜನಸೇನಾ ಬಾವುಟ ಕಿತ್ತೊಗೆಯುತ್ತಿದ್ದಂತೆ ಸ್ಥಳದಲ್ಲಿ ಜೋರಾಗಿ ಕೂಗಾಟ ಶುರುವಾಯಿತು. ಜನಸೇನಾ ಬಾವುಟ ಕಿತ್ತು ಹಾಕಿದ್ದನ್ನು ರಾಮ್ ಚರಣ್ ತೇಜ ಅಭಿಮಾನಿಗಳು ವಿರೋಧಿಸಿದರು. ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳ ನಡುವೆ ಮಾತಿಗೆ ಮಾತು ಸಹ ಬೆಳೆಯಿತು. ಇನ್ನೇನು ಎರಡೂ ಗುಂಪುಗಳು ಕೈ-ಕೈ ಮಿಲಾಯಿಸಲಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆಗಬಹುದಾಗಿದ್ದ ದೊಡ್ಡ ಅನಾಹುತವೊಂದನ್ನು ತಪ್ಪಿಸಿದರು.

    ಅಭಿಮಾನಿಗಳ ನಡುವೆ ಸಂಘರ್ಷ ಸಾಧ್ಯತೆ

    ಅಭಿಮಾನಿಗಳ ನಡುವೆ ಸಂಘರ್ಷ ಸಾಧ್ಯತೆ

    ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಇಬ್ಬರಿಗೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸಿನಿಮಾ ಬಿಡುಗಡೆ ಆದ ಬಳಿಕ ಇಬ್ಬರು ಫ್ಯಾನ್ಸ್‌ಗಳ ನಡುವೆ ಕಿತ್ತಾಟ ಆಗದಿರುವಂತೆ ಈಗಾಗಲೇ ಇಬ್ಬರು ನಟರ ಅಭಿಮಾನಿ ಸಂಘಗಳ ನಡುವೆ ಮಾತುಕತೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏನೇ ಮಾತುಕತೆ ಆಗಿದ್ದರೂ ಅಭಿಮಾನಿಗಳು ಸುಮ್ಮನಿರುವವರಲ್ಲ. ಇಬ್ಬರೂ ನಟರನ್ನು ಸಮಾನವಾಗಿ ತೆರೆ ಮೇಲೆ ತೋರಿಸಲಾಗಿದೆ ಯಾವೊಬ್ಬ ಸ್ಟಾರ್ ನಟನ ಅಭಿಮಾನಿಗಳಿಗೂ ನೋವಾಗದಂತೆ ಸಿನಿಮಾದ ಕತೆಯನ್ನು ಡಿಸೈನ್ ಮಾಡಲಾಗಿದೆ ಎಂದು ರಾಜಮೌಳಿ ಹಲವು ಬಾರಿ ಹೇಳಿದ್ದಾರೆ. ಆದರೂ ಆತಂಕವಂತೂ ಇದ್ದೇ ಇದೆ.

    English summary
    RRR pre release event organized in Chikkaballapura yesterday. Their is a verbal fight happened between Jr NTR fans and Ram Charan fans over political issue.
    Monday, March 21, 2022, 10:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X