For Quick Alerts
  ALLOW NOTIFICATIONS  
  For Daily Alerts

  ನರಸಿಂಹಸ್ವಾಮಿ ಅವತಾರದಲ್ಲಿ ಮಹೇಶ್ ಬಾಬು, ಅಭಿಮಾನಿಗಳಿಗೆ ಹಬ್ಬ

  By ರವೀಂದ್ರ ಕೊಟಕಿ
  |

  ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು 'ಮಿಲ್ಕ್ ಬಾಯ್' ಅಂತಲೇ ಆತನ ಫೀಮೇಲ್ ಫ್ಯಾನ್ಸ್ ಪ್ರೀತಿಯಿಂದ ಕರೆಯುತ್ತಾರೆ. ಹೌದು ವಯಸ್ಸು 45 ದಾಟಿದರೂ ನೋಡಲು ಯಂಗ್ ಅಂಡ್ ಎನರ್ಜೆಟಿಕ್ ಫೇಸ್ ಕಟ್, ಸೈಲೆಂಟ್ ಕಿಲ್ಲಿಂಗ್ ಲುಕ್ ಹೀಗಾಗಿಯೇ ಮಹೇಶ್ ಬಾಬು ಭಾರತದ ಮೋಸ್ಟ್ ಹ್ಯಾಂಡ್ಸಮ್ ಹೀರೋಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. (ಮೊದಲನೇ ಸ್ಥಾನದಲ್ಲಿ ಹೃತಿಕ್ ರೋಷನ್ ಇದ್ದಾರೆ) ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ನಾಯಕ ನಟ ಮಹೇಶ್ ಬಾಬು. ಹೀಗಾಗಿ ಮಹೇಶ್ ಬಾಬು ತಮ್ಮ ಚಿತ್ರಗಳಲ್ಲಿ ಆಕ್ಷನ್‌ನೊಂದಿಗೆ ಒಂದಷ್ಟು ಫ್ಯಾಮಿಲಿ ಸೆಂಟಿಮೆಂಟ್ ವರ್ಕೌಟ್ ಆಗುವಂತೆ ನೋಡಿಕೊಂಡು ಬಂದಿದ್ದಾರೆ.

  ಮಹೇಶ್ ಬಾಬು ಎಲ್ಲಾಥರದ ಪಾತ್ರಗಳಿಗೂ ಜೀವ ತುಂಬುವ ನಟ. 'ಒಕ್ಕಡು', 'ಪೋಕರಿ' ಚಿತ್ರಗಳಲ್ಲಿ ಮಾಸ್ ಎಂಟರ್ಟೈನ್ಮೆಂಟ್ ಕೊಟ್ಟವರು. 'ಆಗುಡು', 'ದೂಕುಡು' ಚಿತ್ರಗಳಲ್ಲಿ ಹಾಸ್ಯರಸವನ್ನು ಉಣಬಡಿಸಿದವರು. ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ 'ಮಹರ್ಷಿ', 'ಶ್ರೀಮಂತುಡು' ಅಂತಹ ಪ್ರಯೋಗಾತ್ಮಕ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡ ನಟ. ಇಮೇಜ್ ಹಂಗಿಲ್ಲದೆ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಅಂತಹ ಮಹಿಳಾ ಪ್ರಧಾನ ಚಿತ್ರದಲ್ಲೂ ನಟಿಸಿ ಅಭಿಮಾನಿಗಳ ಹೃದಯ ಗೆದ್ದ ನಟ ಮಹೇಶ್ ಬಾಬು. ಚಿತ್ರ ಯಾವುದೇ ಜೋನರ್ ನಲ್ಲಿದ್ದರು ಮಹೇಶ್ ಅವರ ಲುಕ್ ಮತ್ತು ಸ್ಟೈಲ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

  ಆದರೆ ಈಗ ಈ ವಿಷಯದಲ್ಲೂ ಬದಲಾವಣೆಗೆ ತೆರೆದುಕೊಂಡಿದ್ದಾರೆ. ತಮ್ಮ ಮುಂಬರುವ ಚಿತ್ರ 'ಸರ್ಕಾರ್ ವಾರಿ ಪಾಟ' ಚಿತ್ರದಲ್ಲಿ ಫುಲ್ ಡಿಫರೆಂಟ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಚಿತ್ರದ ಟೀಸರ್ ಕೂಡ ಮಹೇಶ್ ಬಾಬು ಅವರನ್ನು ವಿಭಿನ್ನವಾದ ಗೆಟಪ್‌ನಲ್ಲಿ ತೋರಿಸಿದೆ. ಟೀಸರ್‌ನಲ್ಲಿ ಮಹೇಶ್ ಲುಕ್ ನೋಡಿರುವ ಅವರ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. ಭಾರೀ ನಿರೀಕ್ಷೆಗಳೊಂದಿಗೆ ಚಿತ್ರ ಮುಂಬರುವ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿದೆ.

  'ರಾಮಾಯಣ' ಸಿನಿಮಾದಿಂದ ಹಿಂದೆ ಸರಿದ ಮಹೇಶ್ ಬಾಬು

  'ರಾಮಾಯಣ' ಸಿನಿಮಾದಿಂದ ಹಿಂದೆ ಸರಿದ ಮಹೇಶ್ ಬಾಬು

  ಏತನ್ಮಧ್ಯೆ, ಮಹೇಶ್ ಬಾಬು- ದೀಪಿಕಾ ಪಡುಕೋಣೆ -ಹೃತಿಕ್ ರೋಷನ್ ಕಾಂಬಿನೇಷನ್‌ನಲ್ಲಿ ತ್ರೀಡಿ ಫಾರ್ಮೆಟ್ ನಲ್ಲಿ ಸುಮಾರು 500 ಕೋಟಿ ವೆಚ್ಚದಲ್ಲಿ 'ರಾಮಾಯಣ' ನಿರ್ಮಾಣವನ್ನು ಘೋಷಿಸಲಾಗಿತ್ತು. ಕೆರಿಯರ್‌ನಲ್ಲಿ ಮೊದಲ ಬಾರಿಗೆ ಶ್ರೀರಾಮನ ಪಾತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ ಅಂತ ಅವರ ಅಭಿಮಾನಿಗಳು ಸಂಭ್ರಮಿಸಿದರು. ಅಲ್ಲದೆ ಫ್ಯಾನ್ ಮೇಡ್ ಶ್ರೀರಾಮಚಂದ್ರನ ಪಾತ್ರದಲ್ಲಿ ಮಹೇಶ್ ಬಾಬು ಫೋಟೋಶೂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಕೂಡ ಮಾಡಿದ್ದವು. ಮಹೇಶ್ -ಹೃತಿಕ್, ರಾಮ-ರಾವಣ ರಾಗಿ ಸೆಣಸಾಡುವ ಯುದ್ಧ ಸನ್ನಿವೇಶಗಳನ್ನು ನೋಡಲು ಜನತೆ ಕಾತುರದಿಂದ ಎದುರು ನೋಡಿದರು ಆದರೆ ಮಹೇಶ್ ಬಾಬು ಅವರು ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಹೊರಬಿತ್ತು. ಅನಂತರ, 'ರಾಮಾಯಣ' ಮುಂದಕ್ಕೆ ಸಾಗದೆ ಅಲ್ಲೇ ನಿಂತುಬಿಟ್ಟಿದೆ.

  ಚಿತ್ರತಂಡದಿಂದ ಹೊರಬಿದ್ದಿರುವ ಸುದ್ದಿ

  ಚಿತ್ರತಂಡದಿಂದ ಹೊರಬಿದ್ದಿರುವ ಸುದ್ದಿ

  ಶ್ರೀರಾಮಚಂದ್ರನ ಪಾತ್ರದಲ್ಲಿ ತಮ್ಮ ನಾಯಕನನ್ನು ನೋಡಲಾಗದೆ ನಿರಾಸೆ ಹೊಂದಿದ್ದ ಸೂಪರ್ ಸ್ಟಾರ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಶ್ರೀರಾಮನ ಪಾತ್ರದಲ್ಲಿ ನೋಡಲಾಗದೇ ಹೋದರು ಈಗ ನರಸಿಂಹಸ್ವಾಮಿಯ ಅವತಾರದಲ್ಲಿ ಮಹೇಶ್ ಬಾಬು ಅವರನ್ನು ನೋಡಬಹುದು. ಹಾಗಂತ ಯಾವುದೇ ಪೌರಾಣಿಕ ಚಿತ್ರದಲ್ಲಿ ಮಹೇಶ್ ಬಾಬು ಅಭಿನಯಿಸುತ್ತಿಲ್ಲ. ಬದಲಾಗಿ ಮುಂಬರುವ ಅವರ ಬಹು ನಿರೀಕ್ಷಿತ ಚಿತ್ರ 'ಸರ್ಕಾರ್ ವಾರಿ ಪಾಟ' ಚಿತ್ರದಲ್ಲಿನ ಒಂದು ಸನ್ನಿವೇಶದಲ್ಲಿ ನರಸಿಂಹಸ್ವಾಮಿ ರೂಪದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಚಿತ್ರ ತಂಡದಿಂದಲೇ ಹೊರಬಿದ್ದಿದೆ.

  ನರಸಿಂಹಸ್ವಾಮಿ ಅವತಾರದಲ್ಲಿ ಮಹೇಶ್ ಬಾಬು

  ನರಸಿಂಹಸ್ವಾಮಿ ಅವತಾರದಲ್ಲಿ ಮಹೇಶ್ ಬಾಬು

  'ಗೀತ ಗೋವಿಂದಂ' ನಿರ್ದೇಶಿಸಿದ್ದ ಪರಶುರಾಮ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿನ ಇಂಟರ್ವಲ್ ಬ್ಯಾಂಗ್ ಮೊದಲು ಒಂದು ದೊಡ್ಡ ಆಕ್ಷನ್ ಎಪಿಸೋಡ್ ಡೈರೆಕ್ಟರ್ ಪ್ಲಾನ್ ಮಾಡಿದ್ದಾರಂತೆ. ಸಾಹಸ ದೃಶ್ಯದ ಸಂದರ್ಭದಲ್ಲಿ ಖಳನಾಯಕ ಮಹೇಶ್ ಬಾಬು ಅವರನ್ನು ನರಸಿಂಹಸ್ವಾಮಿ ರೂಪದಲ್ಲಿ ಊಹಿಸಿಕೊಳ್ಳುತ್ತಾನಂತೆ. ಆ ಸಂದರ್ಭದಲ್ಲಿ ಮಹೇಶ್ ಬಾಬು ನರಸಿಂಹಸ್ವಾಮಿ ರೂಪದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ ಅಂತ ಹೇಳಲಾಗುತ್ತಿದೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಈಗಾಗಲೇ ಸಿಕ್ಕಾಪಟ್ಟೆ ಥ್ರಿಲ್ಲಾಗಿದ್ದಾರೆ. ತಮ್ಮ ಸೂಪರ್ ಸ್ಟಾರ್ ನಟನನ್ನು ನರಸಿಂಹಸ್ವಾಮಿ ರೂಪದಲ್ಲಿ ತುಂಬಿಕೊಳ್ಳಲು ಕಾತರದಿಂದ ಸಂಕ್ರಾಂತಿಗಾಗಿ ಕಾಯುತ್ತಿದ್ದಾರೆ. ಮೈತ್ರಿ ಫಿಲಂ ಮೇಕರ್ಸ್ , 14 ರೀಲ್ ಎಂಟರ್ಟೈನ್ಮೆಂಟ್ ಒಟ್ಟಿಗೆ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕೀರ್ತಿ ಸುರೇಶ್, ಮಹೇಶಬಾಬು ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜನವರಿ 14ರಂದು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

  ರಾಜಮೌಳಿ ಜೊತೆ ಮಹೇಶ್ ಸಿನಿಮಾ

  ರಾಜಮೌಳಿ ಜೊತೆ ಮಹೇಶ್ ಸಿನಿಮಾ

  ಮಹೇಶ್ ನಟಿಸಿರುವ 'ಸರ್ಕಾರು ವಾರಿ ಪಾಟ' ಸಿನಿಮಾವು ಜನವರಿ 13ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಳಿಕ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ. ಈ ಸಿನಿಮಾವು ಫಾರೆಸ್ಟ್ ಥ್ರಿಲ್ಲರ್ (ಅರಣ್ಯದಲ್ಲಿ ನಡೆಯುವ ಸಾಹಸ ಕತೆ) ಆಧರಿಸಿದ್ದಾಗಿದ್ದು, ಕತೆ ಬರೆದಿರುವುದು ರಾಜಮೌಳಿ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್. ಪುರಿ ಜಗನ್ನಾಥ್ ನಿರ್ದೇಶನದ 'ಜನ ಗಣ ಮನ' ಹೆಸರಿನ ಸಿನಿಮಾದಲ್ಲಿಯೂ ಮಹೇಶ್ ನಟಿಸಲಿದ್ದಾರೆ ಎನ್ನಲಾಗಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಸಿನಿಮಾದಲ್ಲಿಯೂ ಮಹೇಶ್ ನಟಿಸಲಿದ್ದಾರೆ.

  English summary
  Interesting update from Mahesh Babu's upcoming movie Sarkaru Vaari Paata. Mahesh will act in Rajamouli's next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X