For Quick Alerts
  ALLOW NOTIFICATIONS  
  For Daily Alerts

  'ಶೂಟಿಂಗ್‌ನಲ್ಲಿ ನರ್ವರ್ಸ್ ಆಗಿದ್ದ ನನಗೆ ಧೈರ್ಯ ತುಂಬಿದ್ದರು ಧನಂಜಯ್'

  |

  ನಟ ಧನಂಜಯ್ ಅಲಿಯಾಸ್ ಡಾಲಿ ಸಿನಿಮಾಗಳಲ್ಲಿ ಪಾತ್ರಕ್ಕೆ ಅನುಗುಣವಾಗಿ ಉಗ್ರವಾಗಿ ಕಾಣಿಸಿಕೊಳ್ಳುತ್ತಾರೆ. ಆನ್‌ಸ್ಕ್ರೀನ್‌ನಲ್ಲಿ ಎಷ್ಟು ಉಗ್ರರೋ ಆಫ್ ಸ್ಕ್ರೀನ್‌ ನಲ್ಲಿ ಅಷ್ಟೇ ವಿನಯವಂತರು ಧನಂಜಯ್.

  ಭಿನ್ನ-ಭಿನ್ನ ಪಾತ್ರಗಳನ್ನು ಪ್ರಯತ್ನಿಸುತ್ತಲೇ ಇರುವ ನಟ ಧನಂಜಯ್, ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದಲ್ಲಿ ಧನಂಜಯ್ ಗೆ ಒಂದು ಪಾತ್ರ ಮೀಸಲಿದೆ ಎನ್ನಲಾಗುತ್ತಿದೆ. ಸುದ್ದಿ ಇನ್ನಷ್ಟೆ ಅಧಿಕೃತಗೊಳ್ಳಬೇಕಿದೆ.

  ಸ್ಟಾರ್ ನಿರ್ದೇಶಕರ ಸಮ್ಮುಖದಲ್ಲಿ ಶುರುವಾಯ್ತು 'ರತ್ನನ್ ಪ್ರಪಂಚ'ಸ್ಟಾರ್ ನಿರ್ದೇಶಕರ ಸಮ್ಮುಖದಲ್ಲಿ ಶುರುವಾಯ್ತು 'ರತ್ನನ್ ಪ್ರಪಂಚ'

  ಈ ಹಿಂದೆಯೂ ಧನಂಜಯ್ ತೆಲುಗು ಸಿನಿಮಾವೊಂದರಲ್ಲಿ ನಟಿಸಿದ್ದರು ಸಿನಿಮಾದ ಹೆಸರು ಭೈರವಗೀತಾ, ಇದು ಕನ್ನಡದಲ್ಲಿಯೂ ಬಿಡುಗಡೆ ಆಗಿತ್ತು. ಸಿನಿಮಾದ ನಾಯಕಿ ಇರಾ ಮೋರ್ ಗೆ ಅದೇ ಮೊದಲನೇ ಸಿನಿಮಾ, ಕಠಿಣವಾದ ದೃಶ್ಯಗಳಲ್ಲಿ ನಟಿಸುವಾಗ ವಿಶೇಷವಾಗಿ ಧನಂಜಯ್ ಸಹಕರಿಸಿದ ರೀತಿಯನ್ನು ಸ್ಮರಿಸಿದ್ದರು ನಟಿ ಇರಾ.

  ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳು ಇದ್ದವು

  ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳು ಇದ್ದವು

  ಭೈರವ ಗೀತಾ ಬಂಡಾಯದ ಕತೆ ಹೊಂದಿದ್ದ ಸಿನಿಮಾ, ಸಿನಿಮಾದಲ್ಲಿ ಬಂಡಾಯದ ಅಂಶದ ಜೊತೆಗೆ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳು ಸಹ ಇದ್ದವು. ಹಲವು ಮುತ್ತಿನ ದೃಶ್ಯಗಳು, ಸರಸದ ದೃಶ್ಯಗಳು ಇದ್ದವು. ಮೊದಲ ಸಿನಿಮಾದಲ್ಲಿ ನಟಿಸುತ್ತಿದ್ದ ಇರಾ ಗೆ ಇದೆಲ್ಲವೂ ಸಾಕಷ್ಟು ಮುಜುಗರ, ಹೆದರಿಕೆ ಉಂಟುಮಾಡಿತ್ತು.

  ಡಾಲಿ ಧನಂಜಯ್ ಗೆ ಜೋಡಿಯಾದ 'ಬಿಗಿಲ್' ಸಿನಿಮಾದ ನಟಿಡಾಲಿ ಧನಂಜಯ್ ಗೆ ಜೋಡಿಯಾದ 'ಬಿಗಿಲ್' ಸಿನಿಮಾದ ನಟಿ

  ಮೊದಲ ಸಿನಿಮಾದಲ್ಲೇ ಮುತ್ತಿನ ದೃಶ್ಯ, ಹೆದರಿದ್ದ ನಟಿ ಇರಾ

  ಮೊದಲ ಸಿನಿಮಾದಲ್ಲೇ ಮುತ್ತಿನ ದೃಶ್ಯ, ಹೆದರಿದ್ದ ನಟಿ ಇರಾ

  ಈ ಬಗ್ಗೆ ಮಾತನಾಡಿದ್ದ ಇರಾ, 'ನಾನು ಬಹಳ ಶಿಸ್ತಿನ ಮಧ್ಯಮವರ್ಗದ ಕುಟುಂಬದಿಂದ ಬಂದವಳು. ನನ್ನ ತಂದೆ ವೃತ್ತಿಯಲ್ಲಿ ಲಾಯರ್, ಭೈರವ ಗೀತಾ ನನ್ನ ಮೊದಲ ಸಿನಿಮಾ, ಮೊದಲ ಸಿನಿಮಾದಲ್ಲಿಯೇ ಮುತ್ತಿನ ದೃಶ್ಯದಲ್ಲಿ ನಟಿಸುವುದು ನನಗೆ ಭಯ, ಮುಜುಗರ ಉಂಟು ಮಾಡಿತ್ತು' ಎಂದಿದ್ದರು.

  ಇರಾಗೆ ಧೈರ್ಯ ತುಂಬಿದ ಧನಂಜಯ್

  ಇರಾಗೆ ಧೈರ್ಯ ತುಂಬಿದ ಧನಂಜಯ್

  ಹೆದರಿದ್ದ ಇರಾಗೆ ಧೈರ್ಯ ತುಂಬಿದ ನಟ ಧನಂಜಯ್, ಇದು ವೃತ್ತಿಯ ಭಾಗ, ಇದನ್ನು ವೃತ್ತಿಯ ಭಾಗವನ್ನಾಗಿ ಮಾತ್ರವೇ ನೋಡಿ ನಟಿಸುವಂತೆ ಸಲಹೆ ಕೊಟ್ಟರು. ಆ ನಂತರ ನರ್ವರ್ಸ್ ಆಗದೆ ನಟಿಸಿದೆ. ದೃಶ್ಯಗಳು ಚೆನ್ನಾಗಿ ಬಂತು ಎಂದಿದ್ದಾರೆ.

  ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಧನಂಜಯ್

  ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಧನಂಜಯ್

  ನಟ ಧನಂಜಯ್ ಪ್ರಸ್ತುತ ಹಲವು ಸಿನಿಮಾಗಳನ್ನು ಕೈಯಲ್ಲಿ ಹಿಡಿದಿದ್ದಾರೆ. ಜಯರಾಜ್ ಜೀವನ ಆಧರಿಸಿದ ಸಿನಿಮಾ, ರತ್ನನ್ ಪರ್ಪಂಚ, ಶಿವರಾಜ್ ಕುಮಾರ್ ಜೊತೆಗೆ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುಷ್ಪಾ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ ಧನಂಜಯ್.

  ಮತ್ತೊಮ್ಮೆ ಮೋಡಿ ಮಾಡಲು ಒಟ್ಟಿಗೆ ಬರುತ್ತಿದ್ದಾರೆ ಟಗರು ಶಿವ-ಡಾಲಿಮತ್ತೊಮ್ಮೆ ಮೋಡಿ ಮಾಡಲು ಒಟ್ಟಿಗೆ ಬರುತ್ತಿದ್ದಾರೆ ಟಗರು ಶಿವ-ಡಾಲಿ

  English summary
  Actress Irra Mor thanked Dhananjay for making her comfortable while acting in a kissing scene in her first movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X