For Quick Alerts
  ALLOW NOTIFICATIONS  
  For Daily Alerts

  ಪುರಿ ಜಗನ್ನಾಥ್ ಜೊತೆಗೆ ಯಶ್ 'ಜನ ಗಣ ಮನ' ಮಾಡೋದು ಪಕ್ಕಾ.?

  |
  KGF 2 ನಂತರ ಯಶ್ ಮಾಡುವ ಸಿನಿಮಾ ಯಾವುದು ಗೊತ್ತಾ..? | YASH | KGF2 | MAHESH BABU | POORIJAGANATH

  ಕಳೆದ ಎರಡು ವರ್ಷಗಳಿಂದ ರಾಕಿಂಗ್ ಸ್ಟಾರ್ ಯಶ್ 'ಕೆ.ಜಿ.ಎಫ್' ಚಿತ್ರದಲ್ಲೇ ಬಿಜಿಯಿದ್ದಾರೆ. 'ಕೆ.ಜಿ.ಎಫ್' ಚಾಪ್ಟರ್ 1 ಸೂಪರ್ ಡ್ಯೂಪರ್ ಹಿಟ್ ಆದ್ಮೇಲೆ, 'ಕೆ.ಜಿ.ಎಫ್-2' ಚಿತ್ರಕ್ಕೆ ಯಶ್ ಚಾಲನೆ ಕೊಟ್ಟಿದ್ದಾರೆ. ಸದ್ಯ 'ಕೆ.ಜಿ.ಎಫ್-2' ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ.

  'ಕೆ.ಜಿ.ಎಫ್-2' ಚಿತ್ರದ ಕಂಪ್ಲೀಟ್ ಆದ್ಮೇಲೆ ಯಶ್ ಕೈಗೆತ್ತಿಕೊಳ್ಳಲಿರುವ ಪ್ರಾಜೆಕ್ಟ್ ಯಾವುದು.? ಈ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಕೊರೆಯುತ್ತಿದೆ. ಆದ್ರೆ, ಈ ಪ್ರಶ್ನೆಗೆ ಈಗ ಉತ್ತರ ಸಿಗಲ್ಲ. ಯಾಕಂದ್ರೆ, ಯಶ್ ಯಾವುದಕ್ಕೂ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

  'ಮೈ ನೇಮ್ ಈಸ್ ಕಿರಾತಕ' ಚಿತ್ರಕ್ಕೆ ಓಕೆ ಎಂದಿದ್ದರೂ, ಅದು ಯಾವಾಗ ಶುರುವಾಗುತ್ತೋ ಗೊತ್ತಿಲ್ಲ. ಹೀಗಿದ್ದರೂ, ಟಾಲಿವುಡ್ ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಜೊತೆಗೆ ಯಶ್ 'ಜನ ಗಣ ಮನ' ಎಂಬ ಸಿನಿಮಾ ಮಾಡ್ತಾರಂತೆ ಎಂಬ ಅಂತೆ-ಕಂತೆ ಕೇಳಿಬರುತ್ತಿದೆ. ಈ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಮುಂದೆ ಓದಿರಿ..

  ಎಲ್ಲೆಲ್ಲೂ ಇದೇ ಗುಲ್ಲು.!

  ಎಲ್ಲೆಲ್ಲೂ ಇದೇ ಗುಲ್ಲು.!

  'ಜನ ಗಣ ಮನ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಟಾಲಿವುಡ್ ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ 'ಜನ ಗಣ ಮನ' ರೆಡಿ ಮಾಡುವ ಯೋಚನೆ ಪುರಿ ಜಗನ್ನಾಥ್ ಗಿದೆ. ಅಪ್ಪಟ ದೇಶಭಕ್ತಿ ಚಿತ್ರವಾಗಿರುವ 'ಜನ ಗಣ ಮನ'ದಲ್ಲಿ ನಟ ಯಶ್ ನಟಿಸಲಿದ್ದಾರಂತೆ ಎಂಬ ಗುಸುಗುಸು ತೆಲುಗು ಸಿನಿ ಅಂಗಳದಲ್ಲಿ ಹಬ್ಬಿದೆ.

  ಕೆಜಿಎಫ್ ಟೀಸರ್ ಬಂದಿಲ್ಲ, ಆದರೆ ಭರ್ಜರಿ ಡೈಲಾಗ್ ಇಲ್ಲಿದೆ ನೋಡಿಕೆಜಿಎಫ್ ಟೀಸರ್ ಬಂದಿಲ್ಲ, ಆದರೆ ಭರ್ಜರಿ ಡೈಲಾಗ್ ಇಲ್ಲಿದೆ ನೋಡಿ

  ನಟ ಯಶ್ ಏನಂತಾರೆ.?

  ನಟ ಯಶ್ ಏನಂತಾರೆ.?

  ''ಪುರಿ ಜಗನ್ನಾಥ್ ಕಥೆ ಹೇಳಿದ್ದು ನಿಜ. ಕಥೆ ಇಷ್ಟವಾಗಿದ್ದು ನಿಜ. ಆದ್ರೆ ಅದೊಂದು ದೊಡ್ಡ ಜವಾಬ್ದಾರಿ. ಇವತ್ತು ನಾನು ಓಕೆ ಅಂತೀನಿ. ಆದ್ರೆ, ಅದಕ್ಕೂ ಮುನ್ನ 100 ತರಹ ಆಂಗಲ್ ನಲ್ಲಿ ನಾನು ಯೋಚನೆ ಮಾಡಬೇಕು. ಡೇಟ್ಸ್, ಟೈಮ್ ಎಲ್ಲಾ ಸರಿಯಾಗಿ ಸೆಟ್ ಆಗಿ, ಆ ಟೈಮ್ ಗೆ ಸಬ್ಜೆಕ್ಟ್ ಸಿಕ್ಕಿದ್ರೆ ಚಿತ್ರ ಮಾಡುವೆ. ಸದ್ಯಕ್ಕೆ ಈ (ಕೆಜಿಎಫ್) ಸಿನಿಮಾ ಮುಗಿಯಬೇಕು'' ಎಂದಿದ್ದಾರೆ ನಟ ಯಶ್.

  'ಮೈ ನೇಮ್ ಇಸ್ ಕಿರಾತಕ' ಚಿತ್ರ ಆಗುತ್ತಾ? ಅಥವಾ ನಿಂತು ಹೋಯ್ತಾ?'ಮೈ ನೇಮ್ ಇಸ್ ಕಿರಾತಕ' ಚಿತ್ರ ಆಗುತ್ತಾ? ಅಥವಾ ನಿಂತು ಹೋಯ್ತಾ?

  ಮಹೇಶ್ ಬಾಬುಗೆ ಹೋಗಿತ್ತು ಆಫರ್.!

  ಮಹೇಶ್ ಬಾಬುಗೆ ಹೋಗಿತ್ತು ಆಫರ್.!

  ಅಸಲಿಗೆ, 'ಜನ ಗಣ ಮನ' ಚಿತ್ರದ ಆಫರ್ ನ ನಿರ್ದೇಶಕ ಪುರಿ ಜಗನ್ನಾಥ್ ಮೊದಲು ನೀಡಿದ್ದು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ. ಆದ್ರೆ, ಕಾರಣಾಂತರಗಳಿಂದ ಈ ಪ್ರಾಜೆಕ್ಟ್ ನ ಮಹೇಶ್ ಬಾಬು ಡ್ರಾಪ್ ಮಾಡಿದ್ದಾರೆ ಎನ್ನಲಾಗಿದೆ. ಹಾಗೇ, ವಿಜಯ್ ದೇವರಕೊಂಡಗೂ 'ಜನ ಗಣ ಮನ' ಚಿತ್ರದ ಆಫರ್ ಹೋಗಿತ್ತು ಎಂಬ ಸುದ್ದಿ ಇದೆ.

  ಒಂದು ವರ್ಷದ ರಾಕಿ ಭಾಯ್ ಜೀವನದಲ್ಲಿ ನಡೆದ 10 ಪ್ರಮುಖ ಘಟನೆಗಳುಒಂದು ವರ್ಷದ ರಾಕಿ ಭಾಯ್ ಜೀವನದಲ್ಲಿ ನಡೆದ 10 ಪ್ರಮುಖ ಘಟನೆಗಳು

  ಯಶ್ ಗ್ರೀನ್ ಸಿಗ್ನಲ್ ಕೊಡ್ತಾರಾ.?

  ಯಶ್ ಗ್ರೀನ್ ಸಿಗ್ನಲ್ ಕೊಡ್ತಾರಾ.?

  'ಜನ ಗಣ ಮನ' ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ಕೊಡ್ತಾರಾ ಎಂಬ ಪ್ರಶ್ನೆಗೆ ಯಶ್ ಸ್ಪಷ್ಟವಾಗಿ ಉತ್ತರ ಕೊಟ್ಟಿಲ್ಲ. ಸದ್ಯಕ್ಕೆ 'ಕೆ.ಜಿ.ಎಫ್' ಮುಗಿಯಲಿ ಎಂದಷ್ಟೇ ಹೇಳಿದ್ದಾರೆ. 'ಕೆ.ಜಿ.ಎಫ್' ಮುಗಿಯುವವರೆಗೂ ಯಶ್ ಗಾಗಿ ಪುರಿ ಜಗನ್ನಾಥ್ ಕಾಯ್ತಾರಾ.? ನೋಡೋಣ.

  English summary
  Is Yash planning to do Jana Gana Mana movie with Telugu Director Puri Jagannath.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X