For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: '96' ತೆಲುಗು ರಿಮೇಕ್ 'ಜಾನು' ಟ್ರೇಲರ್ ಬಂತು

  |

  '96' ತಮಿಳು ಸಿನಿಮಾ ತೆಲುಗಿನಲ್ಲಿ ನಿರ್ಮಾಣವಾಗಿದೆ. 'ಜಾನು' ಚಿತ್ರದ ಟ್ರೇಲರ್ ಇಂದು (ಜನವರಿ 29) ಬಿಡುಗಡೆಯಾಗಿದೆ.

  ವೇದಿಕೆ ಮೇಲಿದ್ದ ಚೇರ್ ತೆಗೆದು ಹಾಕಿದ ಡಿ ಬಾಸ್ ದರ್ಶನ್..? | Munduvareda Adhyaya | Darshan | Aditya

  ಸಿನಿಮಾ ಟ್ರೇಲರ್ ಇಷ್ಟ ಆಗುತ್ತದೆ. '96' ಸಿನಿಮಾ ನೋಡಿದ್ದರೂ, 'ಜಾನು' ಹೊಸದಾಗಿದೆ ಎನ್ನುವ ಭಾವನೆ ನೀಡುತ್ತಿದೆ. ಪ್ರಮುಖವಾಗಿ ಶರ್ವಾನಂದ್ ಹಾಗು ಸಮಂತಾ ನಟನೆ ತುಂಬ ಚೆನ್ನಾಗಿದೆ. ಮ್ಯೂಸಿಕ್ ಮತ್ತು ಕ್ಯಾಮರಾ ವರ್ಕ್ ಹೈಲೈಟ್ ಆಗಿದೆ.

  ಪ್ರೇಕ್ಷಕರ ತಿರಸ್ಕಾರಕ್ಕೆ ಒಳಗಾದ ಸಮಂತಾ: ಕಾರಣ ಏನು?

  '96' ಸಿನಿಮಾದಲ್ಲಿ ಭಾವನೆಗಳು ಪ್ರತಿ ದೃಶ್ಯದಲ್ಲಿಯೂ ತುಂಬ ಚೆನ್ನಾಗಿ ಮೂಡಿಬಂದಿದ್ದವು. ಇಲ್ಲಿಯೂ ಸಿನಿಮಾ ಆ ವಿಚಾರದಲ್ಲಿ ಸೋತಿಲ್ಲ. ಮನಸ್ಸಿಗೆ ಹತ್ತಿರ ಆಗುವ ಅನೇಕ ದೃಶ್ಯಗಳು ಇಲ್ಲಿಯೂ ಚೆನ್ನಾಗಿ ಚಿತ್ರೀಕರಣ ಮಾಡಲಾಗಿದೆ.

  ಸಿನಿಮಾದ ಟ್ರೇಲರ್ ಕೆಲವರಿಗೆ ಇಷ್ಟವಾಗಿದೆ. ಇನ್ನು ಕೆಲವರು ವಿಜಯ್ ಸೇತುಪತಿ ಹಾಗೂ ತ್ರಿಷಾರನ್ನು ಬಿಟ್ಟು ಆ ಪಾತ್ರದಲ್ಲಿ ಬೇರೆ ಯಾರನ್ನು ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

  '96' ಚಿತ್ರದ ನಿರ್ದೇಶಕ ಪ್ರೇಮ್ ಕುಮಾರ್ ಅವರೇ ಈ ಸಿನಿಮಾವನ್ನು ಮಾಡಿದ್ದಾರೆ. ಹಳೆಯ ಚಿತ್ರದ ಕೆಲವು ಹಿನ್ನಲೆ ಸಂಗೀತವನ್ನು ಹಾಡುಗಳನ್ನು ಹಾಗೆಯೇ ಬಳಸಿಕೊಳ್ಳಲಾಗಿದೆ. ಫೆಬ್ರವರಿ 7 ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಫಲಿತಾಂಶದ ಬಗ್ಗೆ ದೊಡ್ಡ ಕುತೂಹಲವಿದೆ.

  English summary
  'Jaanu' telugu movie trailer released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X