For Quick Alerts
  ALLOW NOTIFICATIONS  
  For Daily Alerts

  ಸೌಂದರ್ಯ ಜೊತೆಗಿದ್ದ ಸುಂದರ ಸಂಬಂಧದ ಬಗ್ಗೆ ಜಗಪತಿ ಬಾಬು ಮಾತು

  |

  ದಕ್ಷಿಣ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟಿ, ಅಪ್ರತಿಮ ಸೌಂದರ್ಯವತಿ ನಟಿ ಸೌಂದರ್ಯ, ಇಹಲೋಕ ತ್ಯಜಿಸಿ 16 ವರ್ಷಗಳು ಕಳೆದಿವೆ. 2004ರಲ್ಲಿ ದುರಂತ ಅಂತ್ಯಕಂಡ ಸೌಂದರ್ಯ ಈಗ ನೆನಪು ಮಾತ್ರ. ಆದರೀಗ ನಟಿ ಸೌಂದರ್ಯ ಹೆಸರು ಮತ್ತೆ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ಜಗಪತಿ ಬಾಬು ಹೇಳಿಕೆ.

  'ಹೌದು ನನಗೆ ಸೌಂದರ್ಯ ಜೊತೆ ಸಂಬಂಧವಿತ್ತು' ಎಂದು ಜಗಪತಿ ಬಾಬು ಒಪ್ಪಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಗಾಸಿಪ್ ಗಳಿಗೇನು ಕಮ್ಮಿ ಇಲ್ಲ. ಗಾಸಿಪ್, ಲಿಂಕ್ ಅಪ್ ನಟಿ ಸೌಂದರ್ಯ ಅವರನ್ನೂ ಬಿಟ್ಟಿರಲಿಲ್ಲ. ಈ ಹಿಂದೆ ನಟಿ ಸೌಂದರ್ಯ ಅವರಿಗೆ ಜಗಪತಿ ಬಾಬು ಜೊತೆ ಸಂಬಂಧವಿತ್ತು ಎನ್ನುವ ಸುದ್ದಿ ಸಾಕಷ್ಟು ವರ್ಷಗಳಿಂದ ಹರಿದಾಡುತ್ತಿತ್ತು. ಆದರೀಗ ಈ ವಿಚಾರವಾಗಿ ಜಗಪತಿ ಬಾಬು ಮಾತನಾಡಿದ್ದಾರೆ. ಇತ್ತೀಚಿಗೆ ನಡೆದ ಮಾಧ್ಯಮ ಸಂವಾದ ವೇಳೆ ಜಗಪತಿ ಬಾಬು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  ಜಗಪತಿ ಬಾಬು ಮತ್ತು ಸೌಂದರ್ಯ

  ಜಗಪತಿ ಬಾಬು ಮತ್ತು ಸೌಂದರ್ಯ

  ನಟಿ ಸೌಂದರ್ಯ ಮತ್ತು ಖ್ಯಾತ ನಟ ಜಗಪತಿ ಬಾಬುನ ನಡುವಿನ ಸಂಬಂಧ ಅಂದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸೌಂದರ್ಯ ಮತ್ತು ಜಗಪತಿ ಬಾಬು ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ಇಬ್ಬರ ಅನ್ಯೋನ್ಯತೆ ನೋಡಿ ಇವರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೀಗ ಈಬಗ್ಗೆ ಜಗಪತಿ ಬಾಬು ಸ್ಪಷ್ಟನೆ ನೀಡಿದ್ದಾರೆ.

  ನನಗೆ ಸೌಂದರ್ಯ ಅವರೊಂದಿಗೆ ಸಂಬಂಧವಿತ್ತು

  ನನಗೆ ಸೌಂದರ್ಯ ಅವರೊಂದಿಗೆ ಸಂಬಂಧವಿತ್ತು

  ನನಗೆ ಸೌಂದರ್ಯ ಜೊತೆ ಸಂಬಂಧವಿತ್ತು. ನಾವಿಬ್ಬರು ಉತ್ತಮ ಸ್ನೇಹಿತರಾಗಿದ್ದೆವು. ಸೌಂದರ್ಯ ಅವರ ಸಹೋದರ ನನಗೆ ಉತ್ತಮ ಸ್ನೇಹಿತರು. ನಾನು ಅವರ ಮನೆಗೆ ಆಗಾಗ ಭೇಟಿ ನೀಡುತ್ತಿದ್ದೆ. ಆದರೆ ಜನರು ಅವರ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದರು. ಆವರು ನಮ್ಮ ಸಂಬಂಧವನ್ನು ಎಂದಿಂಗೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ" ಎಂದು ಬೇಸರದಿಂದ ಹೇಳಿದ್ದಾರೆ.

  ನಮ್ಮದು ವಿಭಿನ್ನವಾದ ಸಂಬಂಧವಾಗಿತ್ತು

  ನಮ್ಮದು ವಿಭಿನ್ನವಾದ ಸಂಬಂಧವಾಗಿತ್ತು

  "ಜನರು ನಮ್ಮಿಬ್ಬರ ಸಂಬಂಧದ ಬಗ್ಗೆ ಮಾತನಾಡುವಾಗಲೆಲ್ಲ ನಾನು ಕಾಂಪ್ಲಿಮೆಂಟ್ ಆಗಿ ತೆಗೆದಿಕೊಳ್ಳುತ್ತಿದ್ದೆ. ಇದರಲ್ಲಿ ಮುಚ್ಚಿಡುವಂತಹದ್ದು ಏನು ಇಲ್ಲ. ಸಾಮಾನ್ಯವಾಗಿ ಸಂಬಂಧವನ್ನು ದೈಹಿಕ ಸಂಬಂಧವೆಂದು ಭಾವಿಸುತ್ತಾರೆ. ಆದರೆ ನಮ್ಮದು ವಿಭಿನ್ನವಾದ ಸಂಬಂಧವಾಗಿತ್ತು" ಎಂದು ನಟ ಜಗಪತಿ ಬಾಬು ಅನೇಕ ವರ್ಷಗಳ ಬಳಿಕ ಸೌಂದರ್ಯ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

  ಸೌಂದರ್ಯ ಮತ್ತು ಜಗಪತಿ ಬಾಬು ಸಿನಿಮಾ

  ಸೌಂದರ್ಯ ಮತ್ತು ಜಗಪತಿ ಬಾಬು ಸಿನಿಮಾ

  ಸೌಂದರ್ಯ ಮತ್ತು ಜಗಪತಿ ಬಾಬು ಇಬ್ಬರು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. 'ರೈತು ಭಾರತಂ' ಸಿನಿಮಾ ಮೂಲಕ ಸೌಂದರ್ಯ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದ ಜೊತೆಗೆ ಬಾಲಿವುಡ್ ನಲ್ಲಿಯೂ ಅಭಿನಯಿಸಿದ್ದಾರೆ. ಆಪ್ತಮಿತ್ರ ಸೌಂದರ್ಯ ಅಭಿನಯದ ಕೊನೆಯ ಸಿನಿಮಾ. ಜಗಪತಿ ಬಾಬು ತಮಿಳು. ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ. ಸದ್ಯ ಜಗಪತಿ ಬಾಬು ರಾಬರ್ಟ್ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ.

  English summary
  South Indian Actor Jagapathi Babu agree about his affair with Actress Soundarya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X