For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ಸಿನಿಮಾ ಸ್ಪೆಷಲ್: ಜೂ ಎನ್‌ಟಿಆರ್ ಐಡಿ ಕಾರ್ಡ್ ವೈರಲ್

  |

  'ಬಾಹುಬಲಿ' ಯಶಸ್ಸಿನ ನಂತರ ಎಸ್‌ಎಸ್‌ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಚಿತ್ರ ಆರ್‌ಆರ್‌ಆರ್. ಪ್ರಸ್ತುತ ಉಕ್ರೇನ್‌ನಲ್ಲಿ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ರಾಜಮೌಳಿ, ನಟ ರಾಮ್ ಚರಣ್ ತೇಜ , ಜೂನಿಯರ್ ಎನ್‌ಟಿಆರ್ ಸೇರಿದಂತೆ ಚಿತ್ರತಂಡ ಭಾಗಿಯಾಗಿದೆ.

  ಹೀರೊ ಅಂದ್ರೆ ಹೀಗಿರಬೇಕು, ವೈರಲ್ ಆಯ್ತು ಜೂ ಏನ್ ಟಿ ಆರ್ ಫೋಟೋ

  ಆರ್‌ಆರ್‌ಆರ್ ಚಿತ್ರತಂಡ ಉಕ್ರೇನ್ ಬಂದಿಳಿದ ಫೋಟೋಗಳು ಇತ್ತೀಚಿಗಷ್ಟೆ ವೈರಲ್ ಆಗಿದ್ದವು. ಇದರ ಬೆನ್ನಲ್ಲೆ ಆಗಸ್ಟ್ 5 ರಂದು ಜೂನಿಯರ್ ಎನ್‌ಟಿಆರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಆರ್‌ಆರ್‌ಆರ್‌ ಚಿತ್ರತಂಡ ಕೊಟ್ಟಿರುವ ಐಡಿ ಕಾರ್ಡ್ ಹಂಚಿಕೊಂಡು, 'ಸಿನಿಮಾ ಸೆಟ್‌ನಲ್ಲಿ ಮೊದಲ ಸಲ ಐಡಿ ಕಾರ್ಡ್ ಧರಿಸಿದ್ದು' ಎಂದು ಕ್ಯಾಪ್ಷನ್ ಹಾಕಿದ್ದಾರೆ. ಎನ್‌ಟಿಆರ್ ತಮ್ಮ ಐಡಿ ಕಾರ್ಡ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದರೆ, ಅವರ ಹಿಂ‌ದೆ ಕುಳಿತುಕೊಂಡಿರುವ ರಾಜಮೌಳಿ ಸಹ ''ನನ್ನ ಬಳಿಯೂ ಐಡಿ ಕಾರ್ಡ್ ಇದೆ'' ಎಂದು ತೋರಿಸುತ್ತಿದ್ದಾರೆ.

  ಯುರೋಪ್‌ಗೆ ಹಾರಿದ ರಾಜಮೌಳಿ 'RRR' ತಂಡ; ಕಾರಣವೇನು?ಯುರೋಪ್‌ಗೆ ಹಾರಿದ ರಾಜಮೌಳಿ 'RRR' ತಂಡ; ಕಾರಣವೇನು?

  ಸಾಮಾನ್ಯವಾಗಿ ವಿದೇಶಗಳಿಗೆ ಹೋದಾಗ ಈ ರೀತಿ ಐಡಿ ಕಾರ್ಡ್ ಧರಿಸುವುದು ಸಹಜ. ಸಿನಿಮಾದ ತಂತ್ರಜ್ಞರು ಐಡಿ ಕಾರ್ಡ್ ಕಡ್ಡಾಯವಾಗಿ ಧರಿಸಿರುತ್ತಾರೆ. ಸ್ಟಾರ್ ನಟರು ಐಡಿ ಕಾರ್ಡ್ ಹಾಕಿಕೊಳ್ಳುವ ಕುರಿತು ಇದುವರೆಗೂ ಎಲ್ಲಿಯೂ ವರದಿಯಾಗಿಲ್ಲ. ಆದ್ರೀಗ, ಆರ್‌ಆರ್‌ಆರ್ ಸೆಟ್‌ನಲ್ಲಿ ಎನ್‌ಟಿಆರ್ ಸಹ ಐಡಿ ಕಾರ್ಡ್ ಧರಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ.

  ಆರ್‌ಆರ್‌ಆರ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಆದರೆ, ಪ್ರಮುಖವಾದ ದೃಶ್ಯ ಹಾಗು ಹಾಡೊಂದಕ್ಕಾಗಿ ಉಕ್ರೇನ್‌ಗೆ ಚಿತ್ರತಂಡ ಹೋಗಿದೆ. ರಾಮ್ ಚರಣ್ ಮತ್ತು ಎನ್‌ಟಿಆರ್ ಇಬ್ಬರು ಒಟ್ಟಿಗೆ ಈ ಸೀನ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದೆ ಓದಿ...

  'KGF-2' ದಾಖಲೆ ಮುರಿದ 'RRR': ಭರ್ಜರಿ ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟ'KGF-2' ದಾಖಲೆ ಮುರಿದ 'RRR': ಭರ್ಜರಿ ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟ

  ಎನ್‌ಟಿಆರ್-ರಾಮ್ ಚರಣ್ ಫೋಟೋ

  ಎನ್‌ಟಿಆರ್-ರಾಮ್ ಚರಣ್ ಫೋಟೋ

  ಎರಡು ದಿನಗಳ ಹಿಂದೆ ನಟ ರಾಮ್ ಚರಣ್ ವಿಮಾನದಲ್ಲಿ ತನ್ನ ಟೀಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದರು. ಆರ್‌ಆರ್‌ಆರ್ ಚಿತ್ರೀಕರಣಕ್ಕಾಗಿ ಉಕ್ರೇನ್‌ಗೆ ಹೋಗುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದ್ದರು. ರಾಮ್ ಚರಣ್ ಉಕ್ರೇನ್ ತಲುಪಿದ ಮೇಲೂ ಕೆಲವು ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿರುವ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸ್ವಾತಂತ್ರ್ಯ ವೀರರ ಕಥೆ

  ಸ್ವಾತಂತ್ರ್ಯ ವೀರರ ಕಥೆ

  ಆರ್‌ಆರ್‌ಆರ್ ಐತಿಹಾಸಿಕ ಕಥಾಹಂದರ ಹೊಂದಿದೆ. ಸ್ವಾತಂತ್ರ್ಯ ಹೋರಾಟಗಾರ ಕೊಮ್ಮರನ್ ಭೀಮ್ ಮತ್ತು ಅಲ್ಲುರಿ ಸೀತಾರಾಮರಾಜು ಪಾತ್ರಗಳಲ್ಲಿ ಜೂ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ ನಟಿಸುತ್ತಿದ್ದಾರೆ. ಡಿವಿವಿ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸುಮಾರು 450ಕೋಟಿಗೂ ಅಧಿಕ ಬಜೆಟ್ ಆಗಿದೆ ಎಂದು ಹೇಳಲಾಗಿದೆ.

  ಸದ್ದು ಮಾಡ್ತಿರುವ 'ದೋಸ್ತಿ' ಹಾಡು

  ಸದ್ದು ಮಾಡ್ತಿರುವ 'ದೋಸ್ತಿ' ಹಾಡು

  ಇತ್ತೀಚಿಗಷ್ಟೆ ಆರ್‌ಆರ್‌ಆರ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿತ್ತು. ದೋಸ್ತಿ ಹೆಸರಿನಲ್ಲಿ ಬಂದಿದ್ದ ಈ ಹಾಡು ಫ್ರೆಂಡ್‌ಷಿಪ್ ಕುರಿತಾಗಿದೆ. ಐದು ಭಾಷೆಗಳಲ್ಲಿ ಈ ಹಾಡು ಮೂಡಿ ಬಂದಿದ್ದು, ಇದೊಂದು ರೀತಿ ಪ್ರಮೋಷನಲ್ ಹಾಡಿನ ರೀತಿ ಬಳಕೆ ಮಾಡಲಾಗುತ್ತಿದೆ. ಎಂಎಂ ಕೀರವಾಣಿ ಸಂಗೀತ ನಿರ್ದೇಶಿಸಿದ್ದು, ದೋಸ್ತಿ ಹಾಡಿಗೆ ಧ್ವನಿಯಾಗಿದ್ದ ಐದು ಗಾಯಕರು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯ ದೃಶ್ಯದಲ್ಲಿ ರಾಮ್ ಚರಣ್ ಮತ್ತು ಎನ್‌ಟಿಆರ್ ಸಹ ಬಂದು ಹೋಗ್ತಾರೆ. ಈಗಾಗಲೇ ಆರ್‌ಆರ್‌ಆರ್ ಚಿತ್ರದ ಆಡಿಯೋ ಹಕ್ಕು ಭರ್ಜರಿ ಬೆಲೆಗೆ ಮಾರಾಟವಾಗಿದೆ.

  ಬಿಡುಗಡೆ ಬಗ್ಗೆ ನಿರ್ಧಾರವಾಗಿಲ್ಲ

  ಬಿಡುಗಡೆ ಬಗ್ಗೆ ನಿರ್ಧಾರವಾಗಿಲ್ಲ

  ಆರ್‌ಆರ್ಆರ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿದೆ. ಸದ್ಯದ ಮಾಹಿತಿ ಪ್ರಕಾರ, ಟಾಕಿ ಪೋಷನ್ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಸಹ ನಡೆಯುತ್ತಿದೆ. ಎರಡು ಭಾಷೆಯಲ್ಲಿ ಡಬ್ಬಿಂಗ್ ಮುಗಿದಿದೆ ಎನ್ನಲಾಗಿದೆ. ಇನ್ನು ಚಿತ್ರದ ಬಿಡುಗಡೆ ಬಗ್ಗೆ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿಂದೆ ಪ್ರಕಟಿಸಿದಂತೆ ಅಕ್ಟೋಬರ್ 13ಕ್ಕೆ ಆರ್‌ಆರ್‌ಆರ್ ಚಿತ್ರ ತೆರೆಗೆ ಬರಬೇಕಿತ್ತು. ಆದರೆ, ಕೋವಿಡ್ ಎರಡನೇ ಅಲೆಯಿಂದ ಬದಲಾದ ಪರಿಸ್ಥಿತಿಯಲ್ಲಿ ಮತ್ತೆ ಹೊಸ ದಿನಾಂಕ ಘೋಷಿಸಬೇಕಿದೆ.

  ಕಲಾವಿದರ ಬಳಗ ದೊಡ್ಡದಿದೆ

  ಕಲಾವಿದರ ಬಳಗ ದೊಡ್ಡದಿದೆ

  ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜ ಜೊತೆಯಲ್ಲಿ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾ ಪಾತ್ರದಲ್ಲಿ ಹಿಂದಿ ನಟಿ ಅಲಿಯಾ ಭಟ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಹಾಲಿವುಡ್ ಕಲಾವಿದರು ಚಿತ್ರದಲ್ಲಿದ್ದಾರೆ.

  English summary
  Junior NTR get ID Card in RRR movie set and he shares in instagram said that 'this is my first id card on set''.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X