For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ನೋಡಿ ಜ್ಯೂ. ಎನ್‌ಟಿಆರ್ ಫೋನ್ ಮಾಡಿದ್ದರು: ಅವರೊಟ್ಟಿಗೆ ಸಿನಿಮಾ?: ರಿಷಬ್ ಶೆಟ್ಟಿ

  |

  ತಿಂಗಳು ಕಳೆದರೂ ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಹವಾ ಕಮ್ಮಿ ಆಗಿಲ್ಲ. ವಿಶ್ವದಾದ್ಯಂತ ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಸಾಕಷ್ಟು ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇತ್ತೀಚೆಗೆ ತೆಲುಗು ನಟ ಜ್ಯೂ. ಎನ್‌ಟಿಆರ್ ನೋಡಿ ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿಗೆ ಫೋನ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  'ಕಾಂತಾರ' ಸಿನಿಮಾ 6ನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶಾದ್ಯಂತ ಸುತ್ತಾಡಿ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ಜೊತೆಗೆ ಸಿನಿಮಾ ಪ್ರಚಾರ ಮುಂದುವರೆಸಿದ್ದಾರೆ. ಈಗಾಗಲೇ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ 250 ರೂ. ಕ್ಲಬ್ ಸೇರುವ ಸುಳಿವು ಸಿಗುತ್ತಿದೆ. ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಸಿನಿಮಾ ಇನ್ನು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂ ಸಾಕಷ್ಟು ಜನ ಸ್ಟಾರ್ ಕಲಾವಿದರು, ತಂತ್ರಜ್ಞರು ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ.

  'ಕಾಂತಾರ' ಒಂದೆರಡು ವಾರ ಓಡುತ್ತೆ ಅನ್ಕೊಂಡಿದ್ದೆ, 'ಗಂಧದಗುಡಿ' ರಿಲೀಸ್ ಡೇಟ್ ಗೊತ್ತಿರಲಿಲ್ಲ: ಝೈದ್ ಖಾನ್'ಕಾಂತಾರ' ಒಂದೆರಡು ವಾರ ಓಡುತ್ತೆ ಅನ್ಕೊಂಡಿದ್ದೆ, 'ಗಂಧದಗುಡಿ' ರಿಲೀಸ್ ಡೇಟ್ ಗೊತ್ತಿರಲಿಲ್ಲ: ಝೈದ್ ಖಾನ್

  ಆಕ್ಷನ್ ಥ್ರಿಲ್ಲರ್ 'ಕಾಂತಾರ' ಸಕ್ಸಸ್ ಬೆನ್ನಲ್ಲೇ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಬಗ್ಗೆ ಚರ್ಚೆ ನಡೀತಿದೆ. 'ಕಾಂತಾರ' ಸೀಕ್ವೆಲ್ ಬರುತ್ತಾ? ರಿಷಬ್ ಬೇರೆ ಕಲಾವಿದರಿಗೆ ಆಕ್ಷನ್ ಕಟ್ ಹೇಳ್ತಾರಾ? ತೆಲುಗು ಸಿನಿಮಾ ಮಾಡ್ತಾರಾ? ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರಾ? ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಮುಂದುವರೆದಿದೆ.

  ಜ್ಯೂ. ಎನ್‌ಟಿಆರ್ ಜೊತೆ ರಿಷಬ್ ಶೆಟ್ಟಿ ಸಿನಿಮಾ?

  ಜ್ಯೂ. ಎನ್‌ಟಿಆರ್ ಜೊತೆ ರಿಷಬ್ ಶೆಟ್ಟಿ ಸಿನಿಮಾ?

  "ನಾನು ಜ್ಯೂ. ಎನ್‌ಟಿಆರ್ ದೊಡ್ಡ ಅಭಿಮಾನಿ. 'ಕಾಂತಾರ' ಸಿನಿಮಾ ನೋಡಿ ತಾರಕ್ ಫೋನ್ ಮಾಡಿ ಅಭಿನಂದಿಸಿದರು. ನಾನು ಅವರಿಗೆ ಧನ್ಯವಾದಗಳು ಹೇಳಲು ಬಯಸುತ್ತೇನೆ. ಸದ್ಯಕ್ಕೆ ಅವರೊಟ್ಟಿಗೆ ಸಿನಿಮಾ ಮಾಡುವ ಆಲೋಚನೆ ಇಲ್ಲ. ಮೊದಲು ಕಥೆ, ಕಾನ್ಸೆಪ್ಟ್ ಸೆಲೆಕ್ಟ್ ಮಾಡಿದ ನಂತರ ನಟಿಯರ ಆಯ್ಕೆಯ ಬಗ್ಗೆ ಯೋಚಿಸುತ್ತೇನೆ. "ಮೊದಲು ನಟನನ್ನು ದೃಷ್ಟಿಯಲ್ಲಿ ಇಷ್ಟುಕೊಂಡು ಸ್ಕ್ರಿಪ್ಟ್ ಡೆವಲಪ್ ಮಾಡುವುದು ಗೊತ್ತಿಲ್ಲ. ಕಥೆ ಸಿದ್ಧವಾದ ಮೇಲೆಯೇ ಕಲಾವಿದರ ಆಯ್ಕೆಯ ಬಗ್ಗೆ ಯೋಚಿಸುತ್ತೇನೆ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

  'ಕಾಂತಾರ- 2' ಬಗ್ಗೆಯೂ ರಿಷಬ್ ಮಾತು

  'ಕಾಂತಾರ- 2' ಬಗ್ಗೆಯೂ ರಿಷಬ್ ಮಾತು

  ಸದ್ಯ 'ಕಾಂತಾರ' ವಿಜಯಯಾತ್ರೆಯಲ್ಲಿ ರಿಷಬ್ ಶೆಟ್ಟಿ ತೊಡಗಿಸಿಕೊಂಡಿದ್ದಾರೆ. ದೆಹಲಿಯಲ್ಲೂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. "ಸದ್ಯಕ್ಕೆ ಎರಡು ತಿಂಗಳು ವಿರಾಮ ತೆಗೆದುಕೊಳ್ಳುತ್ತೇನೆ. ಆ ನಂತರ ತನ್ನ ಮುಂದಿನ ಚಿತ್ರಗಳ ಬಗ್ಗೆ ಯೋಚಿಸುತ್ತೇನೆ. ಇನ್ನು 'ಕಾಂತಾರ 2' ಚಿತ್ರದ ಬಗ್ಗೆ ಈಗ ಯಾವ ಆಲೋಚನೆಯೂ ಇಲ್ಲ. ಸಿನಿಮಾ ಬಿಡುಗಡೆ ಆಗಿ 35 ದಿನ ಕಳೆದಿದೆ. ಇನ್ನೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿದೆ. ನಾನು ಇನ್ನು ಸಿನಿಮಾ ಪ್ರಚಾರ ಮಾಡುತ್ತಿದ್ದೇನೆ. ಹಾಗಾಗಿ ಈಗ ಬರೀ 'ಕಾಂತಾರ' ಸಿನಿಮಾದ ಬಗ್ಗೆ ಮಾತನಾಡುತ್ತೇನೆ" ಎಂದಿದ್ದಾರೆ.

  ತಾರಕ್ ನೆಚ್ಚಿನ ನಟ ಎಂದಿದ್ದ ರಿಷಬ್

  ತಾರಕ್ ನೆಚ್ಚಿನ ನಟ ಎಂದಿದ್ದ ರಿಷಬ್

  ಇನ್ನು 'ಕಾಂತಾರ' ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗುವ ವೇಳೆ ರಿಷಬ್ ಶೆಟ್ಟಿ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ನಿರೂಪಕಿ ತೆಲುಗು ಸ್ಟಾರ್‌ಗಳ ಬಗ್ಗೆ ಕೇಳಿದ ಪ್ರಶ್ನೆಗೆ "ಎನ್‌ಟಿಆರ್, ಕೃಷ್ಣಗಾರು, ಬಾಲಯ್ಯ ಬಾಬು ಸಿನಿಮಾಗಳನ್ನು ನೋಡುತ್ತೇನೆ. ಆದರೆ ನನ್ನ ಅಚ್ಚುಮೆಚ್ಚಿನ ನಟ ಜೂ.ಎನ್‌ಟಿಆರ್. ಯಾಕಂದ್ರೆ, ಅವರ ಅಮ್ಮನ ಹುಟ್ಟೂರು ನನ್ನ ಊರು. ಕುಂದಾಪುರದವರು. ತುಂಬಾ ಅದ್ಭುತ ನಟ." ಎಂದು ರಿಷಬ್ ಶೆಟ್ಟಿ ಹೇಳಿದ್ದರು.

  ತಾರಕ್‌ ಕುಂದಾಪುರದ ನಂಟು

  ತಾರಕ್‌ ಕುಂದಾಪುರದ ನಂಟು

  ಜೂ.ಎನ್‌ಟಿಆರ್ ಅಮ್ಮ ಶಾಲಿನಿ ಹುಟ್ಟಿ ಬೆಳೆದ ಊರು ಕುಂದಾಪುರ. ಈ ಹಿಂದೆ ತೆಲುಗು ಬಿಗ್‌ಬಾಸ್ ವೇದಿಕೆಯಲ್ಲೂ ಈ ಮಾತನ್ನು ತಾರಕ್ ಹೇಳಿದ್ದರು. ನಾನು ಕುಂದಾಪುರಕ್ಕೆ ಆಗಾಗ ಬರುತ್ತೇನೆ. ಕರ್ನಾಟಕ ಮತ್ತು ಕನ್ನಡ ನನ್ನ ಜೀವನದ ಬಹು ಮುಖ್ಯ ಅಂಗ" ಎಂದಿದ್ದರು. ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತಾರಕ್ ಬಂದಿದ್ದರು. ಅಪ್ಪು- ಜ್ಯೂ. ಎನ್‌ಟಿಆರ್ ಆತ್ಮೀಯ ಸ್ನೇಹಿತರು. ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾರಕ್ ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದರು.

  English summary
  jr Ntr Called And Appreciated Me After Watching My Kantara Film Says Rishab shetty. He Also Reacts About Doing Movie with jr Ntr. know more.
  Sunday, November 6, 2022, 9:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X