twitter
    For Quick Alerts
    ALLOW NOTIFICATIONS  
    For Daily Alerts

    ಜೂ.ಎನ್‌ಟಿಆರ್‌ಗೆ ಅವಹೇಳನ: ಜಗನ್ ಕ್ಷಮೆಗೆ ಅಭಿಮಾನಿಗಳ ಒತ್ತಾಯ

    |

    ತೆಲುಗು ರಾಜ್ಯಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಪ್ರಮುಖರು ಜೂ ಎನ್‌ಟಿಆರ್. ಸಿನಿಮಾ ಮಾತ್ರವೇ ಅಲ್ಲದೆ, ರಾಜಕೀಯದಲ್ಲೂ ಅವರ ಕುಟುಂಬ ಗುರುತಿಸಿಕೊಂಡಿರುವ ಹಾಗೂ ಸ್ವತಃ ಜೂ ಎನ್‌ಟಿಆರ್ ಸಹ ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗಿರುವ ಕಾರಣ ಅವರ ಬಗ್ಗೆ ಆಗಾಗ್ಗೆ ವಿವಿಧ ರಾಜಕೀಯ ಮುಖಂಡರು ಆರೋಪಗಳನ್ನು ಮಾಡುತ್ತಿರುತ್ತಾರೆ.

    ಚುನಾವಣೆ ಸಮಯದಲ್ಲಿ ಬಿಟ್ಟರೆ ಬಹುತೇಕ ರಾಜಕೀಯದಿಂದ ದೂರವೇ ಉಳಿದಿರುವ ಜೂ ಎನ್‌ಟಿಆರ್ ಬಗ್ಗೆ ಸಾಮಾನ್ಯವಾಗಿ ವಿಪಕ್ಷಗಳು ವ್ಯಕ್ತಿಗತ ಆರೋಪ ಮಾಡುವುದಿಲ್ಲ, ಆದರೆ ಇದೀಗ ವೈಎಸ್‌ಆರ್ ಪಕ್ಷದ ಮುಖಂಡರೊಬ್ಬರು ಸುಖಾ ಸುಮ್ಮನೆ ಜೂ ಎನ್‌ಟಿಆರ್ ವಿಷಯ ತೆಗೆದು ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಜೂ. ಎನ್‌ಟಿಆರ್, ರಾಜಮೌಳಿ ನಡುವೆ ವೈಮನಸ್ಸು: ಟಾಲಿವುಡ್‌ನಲ್ಲೇನಿದು ಸುದ್ದಿ?ಜೂ. ಎನ್‌ಟಿಆರ್, ರಾಜಮೌಳಿ ನಡುವೆ ವೈಮನಸ್ಸು: ಟಾಲಿವುಡ್‌ನಲ್ಲೇನಿದು ಸುದ್ದಿ?

    ವೈಎಸ್‌ಆರ್ ಪಕ್ಷದ ಅಂಬಾಟಿ ರಾಮ್‌ಬಾಬು, ಎಂಎಲ್‌ಸಿ ಅನಂತ್‌ ಬಾಬು ಬಂಧನದ ವಿಚಾರವಾಗಿ ಮಾತನಾಡುತ್ತಾ ಜೂ ಎನ್‌ಟಿಆರ್‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಇದು ಜೂ ಎನ್‌ಟಿಆರ್ ಅಭಿಮಾನಿಗಳನ್ನು ಕೆರಳಿಸಿದ್ದು, ಆಂಧ್ರ ಸಿಎಂ ಜಗನ್, ಜೂ ಎನ್‌ಟಿಆರ್‌ಗೆ ಕ್ಷಮಾಪಣೆ ಕೇಳಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

    ಚಂದ್ರಬಾಬು ನಾಯ್ಡು ಹಾಗೂ ಪುತ್ರನ ಬಗ್ಗೆ ವಿರೋಧ

    ಚಂದ್ರಬಾಬು ನಾಯ್ಡು ಹಾಗೂ ಪುತ್ರನ ಬಗ್ಗೆ ವಿರೋಧ

    ಎಂಎಲ್‌ಸಿ ಅನಂತ್‌ ಬಾಬು ಬಂಧನದ ವಿಚಾರವಾಗಿ ಟಿಡಿಪಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಗಳು ನಡೆಯುತ್ತಿದ್ದು, ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಅಂಬಾಟಿ ರಾಮ್‌ಬಾಬು, ಟಿಡಿಪಿ ಪಕ್ಷದ ಮುಖಂಡ, ಮಾಜಿ ಸಿಎಂ ಚಂದ್ರಬಾಬು ಹಾಗೂ ಹಾಗೂ ಮಾಜಿ ಮಂತ್ರಿ ಲೋಕೇಶ್ ಅನ್ನು ಟೀಕಿಸುತ್ತಾ, 'ಆಂಧ್ರಕ್ಕೆ ಹಿಡಿದಿರುವ ಶನಿ ಚಂದ್ರಬಾಬು ನಾಯ್ಡು, ತೆಲಂಗಾಣಕ್ಕೆ ಹಿಡಿದಿರುವ ಶನಿ ಲೋಕೇಶ್ ಬಾಬು'' ಎಂದಿದ್ದಾರೆ.

    ಜೂ ಎನ್‌ಟಿಆರ್ ಬಗ್ಗೆ ವ್ಯಂಗ್ಯ

    ಜೂ ಎನ್‌ಟಿಆರ್ ಬಗ್ಗೆ ವ್ಯಂಗ್ಯ

    ಮುಂದುವರೆದು, ಟಿಡಿಪಿ ಪಕ್ಷವನ್ನು ಮುನ್ನಡೆಸಲು ಇವರ ಕೈಲಿ ಸಾಧ್ಯವಾಗುತ್ತಿಲ್ಲ. ಲೋಕೇಶ್ ಬಾಬು ಬದಲಿಗೆ ಆ 'ಜೂ ಎನ್‌ಟಿಆರ್‌ ಅನ್ನೋ ಡೂನಿಯರ್ ಎಂಟಿಆರ್ ಅನ್ನೋ ಕರೆದುಕೊಂಡು ಬನ್ನಿ' ಅವನಿಂದಾದರೂ ಪಕ್ಷ ಸ್ವಲ್ಪ ಮುಂದಕ್ಕೆ ಹೋಗುತ್ತದೆ. ನಮ್ಮ ಜಗನ್ ಮೋಹನ್ ರೆಡ್ಡಿಯನ್ನು ತಡೆದುಕೊಳ್ಳುವುದು ಲೋಕೇಶ್ ಬಾಬು ಕೈಲಿ ಆಗುತ್ತಿಲ್ಲ ಎಂದು ಟಿಡಿಪಿ ಮುಖಂಡರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅಂಬಾಟಿ ರಾಮ್‌ಬಾಬು ಹೇಳಿದ್ದಾರೆ.

    ಅಂಬಾಟಿ ರಾಮ್‌ಬಾಬು ವಿರುದ್ಧ ಆಕ್ರೋಶ

    ಅಂಬಾಟಿ ರಾಮ್‌ಬಾಬು ವಿರುದ್ಧ ಆಕ್ರೋಶ

    ಜೂನಿಯರ್ ಎನ್‌ಟಿಆರ್ ಅನ್ನು ಡೂನಿಯರ್ ಎನ್‌ಟಿಆರ್ ಎಂದು ವ್ಯಂಗ್ಯ ಮಾಡಿದ ಕಾರಣಕ್ಕೆ ಅಂಬಾಟಿ ರಾಮ್‌ಬಾಬು ವಿರುದ್ಧ ಜೂ ಎನ್‌ಟಿಆರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಂಬಾಟಿಯನ್ನು ಟೀಕಿಸುವ ಜೊತೆಗೆ ಸಿಎಂ ಜಗನ್ ಮೋಹನ್ ರೆಡ್ಡಿ, ಜೂ ಎನ್‌ಟಿಆರ್‌ ಅವರಿಗೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

    ಆಡಿಯೋ ಬಿಡುಗಡೆ ಮಾಡಿದ ಅಭಿಮಾನಿಗಳು

    ಆಡಿಯೋ ಬಿಡುಗಡೆ ಮಾಡಿದ ಅಭಿಮಾನಿಗಳು

    ಇದು ಮಾತ್ರವೇ ಅಲ್ಲದೆ, ತಮ್ಮ ಮೆಚ್ಚಿನ ನಾಯಕ ಜೂ ಎನ್‌ಟಿಆರ್ ಅನ್ನು ವ್ಯಂಗ್ಯ ಮಾಡಿದ ಅಂಬಾಟಿ ರಾಮ್‌ಬಾಬು ಅವರ ಹಳೆಯ ಆಡಿಯೋ ಕ್ಲಿಪ್ ಒಂದನ್ನು ಅಭಿಮಾನಿಗಳು ಬಿಡುಗಡೆ ಮಾಡಿದ್ದು, ಆ ಆಡಿಯೋ ಕ್ಲಿಪ್‌ನಲ್ಲಿ ಅಂಬಾಟಿ ರಾಮ್‌ಬಾಬು ಮಹಿಳೆಯೊಬ್ಬರ ಬಳಿ ಅವಾಚ್ಯವಾಗಿ, ಅಸಭ್ಯವಾಗಿ ಮಾತನಾಡುತ್ತಿರುವ ರೆಕಾರ್ಡಿಂಗ್‌ ಇದೆ. ಅಸಲಿಗೆ ಜೂ ಎನ್‌ಟಿಆರ್ ಸಕ್ರಿಯ ರಾಜಕೀಯದಿಂದ ದೂರ ಇರುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಟಿಡಿಪಿ ಪರವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ಅವರ ತಾತನವರೇ ಕಟ್ಟಿದ ಟಿಡಿಪಿ ಪಕ್ಷ ಇದೀಗ ಹೀನಾಯ ಸ್ಥಿತಿಯಲ್ಲಿದ್ದು, ಪಕ್ಷವನ್ನು ಉಳಿಸಲು ಜೂ ಎನ್‌ಟಿಆರ್ ಅನ್ನು ಸಕ್ರಿಯ ರಾಜಕೀಯಕ್ಕೆ ಕರೆತರಬೇಕು ಎಂಬ ಒತ್ತಡ ಜೋರಾಗಿ ಕೇಳಿ ಬರುತ್ತಿದೆ.

    English summary
    YSR congress party leader Ambati Rambabu talked loosley about Jr NTR so Jr NTR fans asks apology from CM Jagan Mohan Reddy.
    Tuesday, May 24, 2022, 12:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X