For Quick Alerts
  ALLOW NOTIFICATIONS  
  For Daily Alerts

  RRR ಚಿತ್ರೀಕರಣದ ವೇಳೆ ಜೂ.ಎನ್‌ಟಿಆರ್ ಕಣ್ಣಿಗೆ ಗಾಯ: ಸ್ಪಷ್ಟನೆ ನೀಡಿದ ಚಿತ್ರತಂಡ

  |

  ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ತೆಲುಗಿನ 'ಆರ್‌ಆರ್‌ಆರ್‌' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಜೂ.ಎನ್‌ಟಿಆರ್, ರಾಮ್‌ ಚರಣ್ ತೇಜ, ಆಲಿಯಾ ಭಟ್ ಇನ್ನಿತರೆ ನಟರುಗಳು ಹಗಲಿರುಳು ಮರೆತು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

  ಹೀರೊ ಅಂದ್ರೆ ಹೀಗಿರಬೇಕು, ವೈರಲ್ ಆಯ್ತು ಜೂ ಏನ್ ಟಿ ಆರ್ ಫೋಟೋ

  ಕೊರೊನಾ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ಈಗಾಗಲೆ ತಡವಾಗಿದೆ. ಹಾಗಾಗಿ ಸಿನಿಮಾದ ಚಿತ್ರೀಕರಣಕ್ಕೆ ರಾಜಮೌಳಿ ವೇಗ ನೀಡಿದ್ದಾರೆ. ಸಿನಿಮಾದಲ್ಲಿ ಬರೋಬ್ಬರಿ ಹತ್ತು ಫೈಟ್ ದೃಶ್ಯಗಳಿದ್ದು ಅವುಗಳಲ್ಲಿ ಕೆಲವು ಫೈಟ್ ದೃಶ್ಯಗಳ ಚಿತ್ರೀಕರಣದಲ್ಲಿ ಜೂ.ಎನ್‌ಟಿಆರ್, ರಾಮ್ ಚರಣ್ ತೇಜ ತೊಡಗಿಕೊಂಡಿದ್ದಾರೆ.

  ಈ ನಡುವೆ 'ಆರ್‌ಆರ್‌ಆರ್' ಸಿನಿಮಾದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದು, ವಿಡಿಯೋದಲ್ಲಿ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ತಮಾಷೆಯಾಗಿ ಮಾತನಾಡುತ್ತಾ ಕೂತಿದ್ದಾರೆ. ಅವರಿಬ್ಬರ ವಿಡಿಯೋವನ್ನು ಹಳೆಯ ಕ್ಯಾಮೆರಾ ಒಂದರಲ್ಲಿ ರಾಜಮೌಳಿ ಸೆರೆಹಿಡಿಯುತ್ತಿದ್ದಾರೆ. ಆದರೆ ಈ ವಿಡಿಯೋ ಟ್ವೀಟ್ ಮಾಡಿದ ಬಳಿಕ ಜೂ.ಎನ್‌ಟಿಆರ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

  ಕಣ್ಣಿಗೆ ಗಾಯ ಮಾಡಿಕೊಂಡರೇ ಜೂ.ಎನ್‌ಟಿಆರ್

  ಕಣ್ಣಿಗೆ ಗಾಯ ಮಾಡಿಕೊಂಡರೇ ಜೂ.ಎನ್‌ಟಿಆರ್

  ವಿಡಿಯೋದಲ್ಲಿ ಜೂ.ಎನ್‌ಟಿಆರ್ ಕಣ್ಣಿನ ಬಳಿ ಗಾಯವಾಗಿರುವುದನ್ನು ಅಭಿಮಾನಿಗಳು ಗುರುತಿಸಿದ್ದಾರೆ. ವಿಡಿಯೋದಲ್ಲಿ ಜೂ.ಎನ್‌ಟಿಆರ್ ಕಣ್ಣಿಗೆ ಕಪ್ಪು ಕನ್ನಡಕ ಧರಿಸಿರುವುದರಿಂದ ಜೂ.ಎನ್‌ಟಿಆರ್ ಕಣ್ಣಿಗೆ ಗಾಯವಾಗಿದೆ ಎಂದುಕೊಂಡು, ಘಟನೆ ಬಗ್ಗೆ 'ಆರ್‌ಆರ್‌ಆರ್' ಚಿತ್ರತಂಡವು ಅಧಿಕೃತ ಹೇಳಿಕೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅಭಿಮಾನಿಗಳಿಗೆ ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿರುವ 'ಆರ್‌ಆರ್‌ಆರ್' ಚಿತ್ರತಂಡ ಅದು ಗಾಯವಲ್ಲ ಬದಲಿಗೆ ಮೇಕಪ್‌ ಅಷ್ಟೆ ಎಂದಿದೆ. ಚಿತ್ರತಂಡ ಈ ಟ್ವೀಟ್ ಜೂ.ಎನ್‌ಟಿಆರ್ ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.

  ಹತ್ತು ಫೈಟ್‌ಗಳಿವೆ 'ಆರ್ಆರ್ಆರ್' ಸಿನಿಮಾದಲ್ಲಿ

  ಹತ್ತು ಫೈಟ್‌ಗಳಿವೆ 'ಆರ್ಆರ್ಆರ್' ಸಿನಿಮಾದಲ್ಲಿ

  'ಆರ್ಆರ್ಆರ್' ಸಿನಿಮಾದಲ್ಲಿ ಬರೋಬ್ಬರಿ ಹತ್ತು ಫೈಟ್ ದೃಶ್ಯಗಳಿವೆ. ಅಜಯ್ ದೇವಗನ್ ಸಹ ಒಂದು ಫೈಟ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಪಾತ್ರಗಳು ಸಹ ಪರಸ್ಪರ ಫೈಟ್ ಮಾಡುತ್ತವೆ. ಇಬ್ಬರು ನಾಯಕರು ಒಬ್ಬರ ಮೇಲೊಬ್ಬರು ಫೈಟ್ ಮಾಡುವ ದೃಶ್ಯವಂತೂ ಸಿನಿಮಾದ ಹೈಲೈಟ್ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಹಾಲಿವುಡ್‌ನ ಆಕ್ಷನ್ ನಿರ್ದೇಶಕ ನಿಕ್ ಪೋವೆಲ್ ಹಲವು ಆಕ್ಷನ್ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ. ಕೆಲವು ಸ್ಥಳೀಯ ಫೈಟ್ ಮಾಸ್ಟರ್‌ಗಳು ಸಹ 'ಆರ್ಆರ್ಆರ್' ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ.

  ದೊಡ್ಡ ತಾರಾಗಣವಿರುವ ಸಿನಿಮಾ

  ದೊಡ್ಡ ತಾರಾಗಣವಿರುವ ಸಿನಿಮಾ

  'ಆರ್ಆರ್‌ಆರ್' ಸಿನಿಮಾದಲ್ಲಿ ಜೂ.ಎನ್‌ಟಿಆರ್, ರಾಮ್ ಚರಣ್ ತೇಜ, ಅಜಯ್ ದೇವಗನ್, ಆಲಿಯಾ ಭಟ್, ಶ್ರೆಯಾ ಶಿರಿನ್, ಒಲಿವಿಯಾ ಮೋರಿಸ್, ಸಮುದ್ರಕಿಣಿ, ರಾಜೀವ್ ಕಂಕಾಲ, ಛತ್ರಪತಿ ಶೇಖರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದಲ್ಲಿ ರಾಮ್ ಚರಣ್ ತೇಜ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ನಟಿಸಿದ್ದರೆ ಜೂ.ಎನ್‌ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್, ಜೂ.ಎನ್‌ಟಿಆರ್ ತಂದೆ ಹಾಗೂ ಶ್ರೆಯಾ ಶಿರಿನ್ ರಾಮ್ ಚರಣ್ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಭಾರತೀಯ ನಟರ ಜೊತೆಗೆ ಹಲವು ವಿದೇಶಿ ನಟರು ಸಹ 'ಆರ್ಆರ್ಆರ್' ಸಿನಿಮಾದಲ್ಲಿ ನಟಿಸಿದ್ದಾರೆ.

  ಅಕ್ಟೋಬರ್ 13ಕ್ಕೆ ಸಿನಿಮಾ ಬಿಡುಗಡೆ

  ಅಕ್ಟೋಬರ್ 13ಕ್ಕೆ ಸಿನಿಮಾ ಬಿಡುಗಡೆ

  'ಆರ್ಆರ್ಆರ್' ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನಿರ್ದೇಶಿಸಿದ್ದು, ಡಿವಿವಿ ದಯಾನಂದ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾವು ಇತ್ತೀಚೆಗಷ್ಟೆ 'ದೋಸ್ತಿ' ಎಂಬ ಹಾಡೊಂದನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಿತು. ಆ ಹಾಡು ಸಖತ್ ಹಿಟ್ ಆಗಿದೆ. ಸಿನಿಮಾದ ಚಿತ್ರೀಕರಣವು ಕೊನೆಯ ಹಂತದಲ್ಲಿದ್ದು, ಸಿನಿಮಾದ ಪೋಸ್ಟ್ ಪ್ರಡೊಕ್ಷನ್ ಕಾರ್ಯವು ಚಿತ್ರೀಕರಣದ ಜೊತೆ-ಜೊತೆಯಾಗಿಯೇ ಸಾಗುತ್ತಿದೆ. ಸಿನಿಮಾವು ಅಕ್ಟೋಬರ್ 13ರಂದು ಬಿಡುಗಡೆ ಆಗಲಿದೆ. ಸಿನಿಮಾವು ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದ್ದು, ಈಗಾಗಲೇ ಸ್ಯಾಟಲೈಟ್, ಡಿಜಿಟಲ್ ಹಕ್ಕುಗಳು ಕೋಟ್ಯಂತರ ಹಣಕ್ಕೆ ಮಾರಾಟವಾಗಿದೆ.

  English summary
  Jr NTR hurt while shooting RRR movie. A image getting viral in that Je NTR's eye got injured. Movie team issue clarification.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X