Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒತ್ತಡದ ನಡುವೆಯೂ RRR ಚಿತ್ರೀಕರಣದಿಂದ ಬಿಡುವು ಪಡೆದ ಜೂ.ಎನ್‌ಟಿಆರ್
ಬಹುನಿರೀಕ್ಷಿತ ಸಿನಿಮಾ ಆರ್‌ಆರ್‌ಆರ್ ಚಿತ್ರೀಕರಣ ಭರದಿಂದ ಸಾಗಿದೆ. ಕೊರೊನಾ ಲಾಕ್‌ಡೌನ್ ಕಾರಣದಿಂದ ಸಿನಿಮಾ ಈಗಾಗಲೇ ತಡವಾಗಿದೆ. ನಟ-ನಟಿಯರ ಡೇಟ್ಸ್‌ಗಳು ವ್ಯತ್ಯಾಸವಾಗಿವೆ. ಹಾಗಾಗಿ ಶೀಘ್ರವಾಗಿ ಚಿತ್ರೀಕರಣ ಮುಗಿಸುವ ಧಾವಂತದಲ್ಲಿದೆ ಚಿತ್ರತಂಡ.
ಸುಮಾರು ಒಂದು ತಿಂಗಳಿಂದಲೂ ಆರ್‌ಆರ್‌ಆರ್ ಚಿತ್ರೀಕರಣ ಭರದಿಂದ ಸಾಗಿದೆ. ನಟರಾದ ಜೂ.ಎನ್‌ಟಿಆರ್, ರಾಮ್‌ಚರಣ್ ತೇಜಾ ಇನ್ನೂ ಹಲವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ರಾತ್ರಿ-ಹಗಲೆನ್ನದೆ ಚಿತ್ರೀಕರಣ ಸಾಗುತ್ತಿದೆ.
ಇಷ್ಟೊಂದು ಒತ್ತಡದ ನಡುವೆ ಚಿತ್ರೀಕರಣ ನಡೆಯುತ್ತಿರುವ ಸಂದರ್ಭದಲ್ಲಿಯೇ ನಟ ಎನ್‌ಟಿಆರ್ ಹಠಾತ್ತನೆ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹೌದು, ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿರುವ ಜೂ.ಎನ್‌ಟಿಆರ್ ವಾರದ ಬಳಿಕ ಮತ್ತೆ ಚಿತ್ರೀಕರಣಕ್ಕೆ ಬರಲಿದ್ದಾರೆ.

ಕುಟುಂಬದ ಕಾರಣಕ್ಕೆ ಚಿತ್ರೀಕರಣದಿಂದ ಬ್ರೇಕ್
ಜೂ.ಎನ್‌ಟಿಆರ್ ಬ್ರೇಕ್ ತೆಗೆದುಕೊಂಡಿರುವುದು ಕುಟುಂಬದ ಕಾರಣಕ್ಕೆ. ಕೊರೊನಾ ಸಮಯದಲ್ಲಿ ಮನೆ ಬಿಟ್ಟು ಹೊರಗೆ ಹೋಗದೇ ಇದ್ದ ಕುಟುಂಬವನ್ನು ಜಾಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಜೂ.ಎನ್‌ಟಿಆರ್ ಹಾಗಾಗಿ ಚಿತ್ರೀಕರಣದಿಂದ ಬಿಡುವು ಪಡೆದುಕೊಂಡಿದ್ದಾರೆ.

ಮಕ್ಕಳು ಪತ್ನಿಯೊಂದಿಗೆ ದುಬೈಗೆ ಜೂ.ಎನ್‌ಟಿಆರ್
ಮಕ್ಕಳಾದ ಭಾರ್ಗವ್ ರಾಮ್, ಅಭಯ್ ರಾಮ್ ಹಾಗೂ ಪತ್ನಿ ಲಕ್ಷ್ಮಿಯನ್ನು ದುಬೈ ಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ನವೆಂಬರ್ 22 ಕ್ಕೆ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ನಟ ಜೂ.ಎನ್‌ಟಿಆರ್. ನಂತರ ಅವರ ಭಾಗದ ಚಿತ್ರೀಕರಣ ಮುಂದುವರೆಯಲಿದೆ.

ಸ್ಟಾರ್‌ಗಳ ನೆಚ್ಚಿನ ತಾಣವಾಗಿದೆ ದುಬೈ
ದುಬೈ ಹಲವು ಸ್ಟಾರ್‌ಗಳ ನೆಚ್ಚಿನ ಪ್ರವಾಸಿ ಸ್ಥಳವಾಗಿದೆ. ಸಂಜಯ್ ದತ್, ಮೋಹನ್‌ಲಾಲ್, ಶಾರುಖ್ ಖಾನ್, ಮಹೇಶ್ ಬಾಬು ಹಾಗೂ ಕುಟುಂಬ ಸಹ ದುಬೈಗೆ ತೆರಳಿದ್ದರು. ಈಗ ಜೂ.ಎನ್‌ಟಿಆರ್ ಸಹ ದುಬೈ ಗೆ ತೆರಳುತ್ತಿದ್ದಾರೆ.

ಭರದಿಂದ ಸಾಗುತ್ತಿದೆ ಚಿತ್ರೀಕರಣ
ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಜೂ.ಎನ್‌ಟಿಆರ್ ರಾತ್ರಿ ಸಮಯ ಕೊರೆಯುವ ಚಳಿಯಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿರುವ ವಿಡಿಯೋ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಆರ್‌ಆರ್‌ಆರ್ ಸಿನಿಮಾದಲ್ಲಿ ರಾಮ್ ಚರಣ್ ತೇಜಾ, ಆಲಿಯಾ ಭಟ್, ಒಲಿವಿಯಾ ಮೋರಿಸ್, ಅಜಯ್ ದೇವಗನ್ ಸಹ ನಟಿಸುತ್ತಿದ್ದಾರೆ.