For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್ ನೀಲ್ ಜೊತೆ ಸಿನಿಮಾ: ಸುಳಿವು ಕೊಟ್ಟ ಜೂ ಎನ್‌ಟಿಆರ್

  |

  ಜೂ ಎನ್‌ಟಿಆರ್ 'ಆರ್‌ಆರ್‌ಆರ್' ಸಿನಿಮಾದ ಚಿತ್ರೀಕರಣ ಮುಗಿಸಿ ಚಿತ್ರೀಕರಣದಿಂದ ಬಿಡುವು ಪಡೆದು ಕುಟುಂಬದೊಟ್ಟಿಗೆ ಪ್ಯಾರಿಸ್‌ಗೆ ತೆರಳಿದ್ದಾರೆ.

  'ಆರ್‌ಆರ್‌ಆರ್' ಚಿತ್ರೀಕರಣ ಮುಗಿಸಿರುವ ಜೂ ಎನ್‌ಟಿಆರ್ ಅವರ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ವತಃ ಜೂ ಎನ್‌ಟಿಆರ್ ಮಾತನಾಡಿದ್ದಾರೆ.

  ಪ್ಯಾರಿಸ್‌ಗೆ ತೆರಳುವ ಮುಂಚೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಜೂ ಎನ್‌ಟಿಆರ್ ತಮ್ಮ ಮುಂದಿನ ಎರಡು ಸಿನಿಮಾಗಳು ಯಾವುವು, ನಿರ್ದೇಶಕರ್ಯಾರು ಹಾಗೂ ಚಿತ್ರೀಕರಣ ಯಾವಾಗ ಪ್ರಾರಂಭವಾಗಲಿದೆ ಎಂಬುದನ್ನು ಹೇಳಿದ್ದಾರೆ. ಪ್ರಶಾಂತ್ ನೀಲ್ ಜೊತೆ ಮಾಡಲಿರುವ ಸಿನಿಮಾ ಬಗ್ಗೆಯೂ ಜೂ ಎನ್‌ಟಿಆರ್ ಮಾತನಾಡಿದ್ದಾರೆ. ಜೊತೆಗೆ 'ಆರ್ಆರ್ಆರ್' ಸಿನಿಮಾದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

  ಕೊರಟಾಲ ಶಿವ ಜೊತೆ ಮುಂದಿನ ಸಿನಿಮಾ

  ಕೊರಟಾಲ ಶಿವ ಜೊತೆ ಮುಂದಿನ ಸಿನಿಮಾ

  'ಆರ್‌ಆರ್‌ಆರ್' ಬಿಡುಗಡೆ ಬಳಿಕ ಜೂ ಎನ್‌ಟಿಆರ್ ತಮ್ಮ ಮೂವತ್ತನೇ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಸಿನಿಮಾವನ್ನು ಹಿಟ್ ನಿರ್ದೇಶಕ ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾವು ರಿವೇಂಜ್ ಕತೆಯನ್ನು ಹೊಂದಿರಲಿದೆಯಂತೆ. ಕೊರಟಾಲ ಶಿವ ಐದು ವರ್ಷದ ಹಿಂದೆ ಜೂ ಎನ್‌ಟಿಆರ್‌ಗಾಗಿ 'ಜನತಾ ಗ್ಯಾರೇಜ್' ಸಿನಿಮಾ ನಿರ್ದೇಶಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಮಲಯಾಳಂನ ನಟ ಮೋಹನ್‌ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಾಯಕಿಯರಾಗಿ ಸಮಂತಾ ಅಕ್ಕಿನೇನಿ ಮತ್ತು ಕನ್ನಡತಿ ನಿತ್ಯ ಮೆನನ್ ನಟಿಸಿದ್ದರು.

  ಪ್ರಶಾಂತ್ ನೀಲ್ ಜೊತೆ ಸಿನಿಮಾ ಯಾವಾಗ?

  ಪ್ರಶಾಂತ್ ನೀಲ್ ಜೊತೆ ಸಿನಿಮಾ ಯಾವಾಗ?

  ಒಂದು ಬಾರಿಗೆ ಒಂದು ಸಿನಿಮಾದಲ್ಲಿ ಮಾತ್ರವೇ ನಟಿಸುವ ಜೂ ಎನ್‌ಟಿಆರ್, ಕೊರಟಾಲ ಶಿವ ಜೊತೆಗಿನ ಸಿನಿಮಾದ ಚಿತ್ರೀಕರಣ ಮುಗಿಸಿದ ಬಳಿಕ ಪ್ರಶಾಂತ್ ನೀಲ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಅದು ಅವರ 31ನೇ ಸಿನಿಮಾ ಆಗಿರಲಿದೆ. ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ 2022 ರ ಅಕ್ಟೋಬರ್ ತಿಂಗಳಲ್ಲಿ ಸೆಟ್ಟೇರಲಿದೆ ಎಂದು ಸ್ವತಃ ಜೂ ಎನ್‌ಟಿಆರ್ ತಿಳಿಸಿದ್ದಾರೆ. ಆ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳು ಇಟ್ಟುಕೊಂಡಿರುವ ಬಗ್ಗೆಯೂ ಜೂ ಎನ್‌ಟಿಆರ್ ಹೇಳಿದ್ದಾರೆ.

  ಪ್ರಭಾಸ್ ಸಿನಿಮಾ ನಿರ್ದೇಶಿಸುತ್ತಿರುವ ಪ್ರಶಾಂತ್ ನೀಲ್

  ಪ್ರಭಾಸ್ ಸಿನಿಮಾ ನಿರ್ದೇಶಿಸುತ್ತಿರುವ ಪ್ರಶಾಂತ್ ನೀಲ್

  ಪ್ರಶಾಂತ್ ನೀಲ್ ಪ್ರಸ್ತುತ ಪ್ರಭಾಸ್ ಜೊತೆಗೆ 'ಸಲಾರ್' ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. 'ಸಲಾರ್' ಸಿನಿಮಾ ಇನ್ನೇನು ಕ್ಲೈಮ್ಯಾಕ್ಸ್ ಹಂತದಲ್ಲಿದೆ. 'ಸಲಾರ್' ಸಿನಿಮಾದ ಬಿಡುಗಡೆ ಬಳಿಕ ಜೂ ಎನ್‌ಟಿಆರ್ ಸಿನಿಮಾವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ. ಈ ನಡುವೆ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ 2' ಸಿನಿಮಾ ಬಗ್ಗೆ ದೇಶದ ಸಿನಿ ಪ್ರೇಮಿಗಳು ಭಾರಿ ನಿರೀಕ್ಷೆಯಿಂದ ಎದುರು ನೋಡುತ್ತಿದ್ದು, ಸಿನಿಮಾವು ಏಪ್ರಿಲ್ 30 ರಂದು ಬಿಡುಗಡೆ ಆಗಲಿದೆ. ಜೂ ಎನ್‌ಟಿಆರ್ ಮಾತ್ರವೇ ಅಲ್ಲದೆ, ಅಲ್ಲು ಅರ್ಜುನ್ ಜೊತೆಗೂ ಪ್ರಶಾಂತ್ ನೀಲ್ ಸಿನಿಮಾ ಮಾಡುವ ಸಾಧ್ಯತೆ ಇದೆ.

  ಒಂದು ಹಾಡಿಗೆ ಗಂಟೆಗಳವರೆಗೆ ತಾಲೀಮು

  ಒಂದು ಹಾಡಿಗೆ ಗಂಟೆಗಳವರೆಗೆ ತಾಲೀಮು

  ಇನ್ನು ಅದೇ ಸಂದರ್ಶನದಲ್ಲಿ 'ಆರ್‌ಆರ್‌ಆರ್' ಸಿನಿಮಾದ ಹಾಡೊಂದರ ಬಗ್ಗೆ ಮಾತನಾಡಿದ್ದಾರೆ ಜೂ ಎನ್‌ಟಿಆರ್. ಇದೀಗ ವೈರಲ್ ಆಗಿರುವ 'ನಾಟು ನಾಟು' ಹಾಡಿಗಾಗಿ ದಿನಕ್ಕೆ 12 ಗಂಟೆಗಳ ತಾಲೀಮು ಮಾಡುತ್ತಿದ್ದರಂತೆ ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ. ಇಬ್ಬರೂ ನಟರ ಕೈ-ಕಾಲಿನ ಚಲನೆ ಸಹ ಒಟ್ಟಿಗೆ ಆಗಬೇಕು ಎಂಬುದು ನಿರ್ದೇಶಕ ರಾಜಮೌಳಿ ಬೇಡಿಕೆ ಆಗಿತ್ತಂತೆ ಹಾಗಾಗಿ ಇಬ್ಬರು ನಟರು ಬಹಳ ತಾಲೀಮು ಮಾಡಿದರಂತೆ. ತಾಲೀಮಿನ ದೃಶ್ಯಗಳನ್ನು ರೆಕಾರ್ಡ್ ಮಾಡಿ ಎಲ್ಲಿ ತಾಳ ತಪ್ಪುತ್ತಿದ್ದೇವೆ ಎಂದು ಗಮನಿಸಿ ಮತ್ತೆ ಮಾಡುತ್ತಿದ್ದೆವು ಎಂದಿದ್ದಾರೆ ಜೂ ಎನ್‌ಟಿಆರ್. ಈಗ ಹಾಡು ಬಿಡುಗಡೆ ಆಗಿದ್ದು, ನಮ್ಮ ಡ್ಯಾನ್ಸ್ ಸ್ಟೆಪ್ಸ್ ಬಹಳ ವೈರಲ್ ಆಗಿದೆ'' ಎಂದಿದ್ದಾರೆ ಜೂ ಎನ್‌ಟಿಆರ್.

  English summary
  Jr NTR talks about movie with director Prashanth Neel. He said movie with Prashanth Neel will start shooting from 2022 October.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X