For Quick Alerts
  ALLOW NOTIFICATIONS  
  For Daily Alerts

  ಮೇಡಮ್ ಟುಸ್ಸಾಡ್ಸ್ ನಲ್ಲಿ ಕಾಜಲ್ ಮೇಣದ ಪ್ರತಿಮೆ: ಹೊಸ ಇತಿಹಾಸ ಬರೆದ ನಟಿ.!

  |

  ಸಿಂಗಾಪೂರ್ ನಲ್ಲಿರುವ ಮೇಡಮ್ ಟ್ಯುಸ್ಸಾಡ್ಸ್ ಗ್ಯಾಲರಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ರವರ ಮೇಣದ ಪ್ರತಿಮೆ ಅನಾವರಣಗೊಳ್ಳಲಿದೆ. ವಿಶೇಷ ಅಂದ್ರೆ ಮೇಡಮ್ ಟ್ಯುಸ್ಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆ ಪಡೆಯುತ್ತಿರುವ ದಕ್ಷಿಣ ಭಾರತದ ಮೊಟ್ಟ ಮೊದಲ ನಟಿ ಕಾಜಲ್ ಅಗರ್ವಾಲ್. ಆ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ ಕಾಜಲ್ ಅಗರ್ವಾಲ್.

  ಫೆಬ್ರವರಿ 5, 2020 ರಂದು ಸಿಂಗಾಪುರ್ ನ ಮೇಡಮ್ ಟ್ಯುಸ್ಸಾಡ್ಸ್ ನಲ್ಲಿ ತಮ್ಮ ಮೇಣದ ಪ್ರತಿಮೆಯನ್ನು ಕಾಜಲ್ ಅಗರ್ವಾಲ್ ಅನಾವರಣಗೊಳಿಸಲಿದ್ದಾರೆ. ಮೇಣದ ಪ್ರತಿಮೆಗಾಗಿ ಈಗಾಗಲೇ ಚರ್ಮದ ಬಣ್ಣ, ಕಣ್ಣಿನ ಗುಡ್ಡೆಯ ಬಣ್ಣ, ಕೂದಲ ಬಣ್ಣ, ಎತ್ತರ ಇತ್ಯಾದಿ ವಿವರಗಳನ್ನು ಕಾಜಲ್ ಅಗರ್ವಾಲ್ ರಿಂದ ಪಡೆಯಲಾಗಿದೆ. ಮುಂದೆ ಓದಿರಿ...

  ಸಂತಸಗೊಂಡ ಕಾಜಲ್ ಅಗರ್ವಾಲ್

  ಸಂತಸಗೊಂಡ ಕಾಜಲ್ ಅಗರ್ವಾಲ್

  ''ಚಿಕ್ಕವಳಿದ್ದಾಗ ನಾನು ಮೇಡಮ್ ಟ್ಯುಸ್ಸಾಡ್ಸ್ ಗೆ ಭೇಟಿ ನೀಡಿದ್ದೆ. ಅಲ್ಲಿನ ಮೇಣದ ಪ್ರತಿಮೆಗಳನ್ನು ನೋಡಿ ಬೆರಗಾಗಿದ್ದೆ. ಈಗ ನನ್ನದೇ ಮೇಣದ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ಸಂತೋಷವಾಗಿದೆ'' ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಜಲ್ ಅಗರ್ವಾಲ್ ಬರೆದುಕೊಂಡಿದ್ದಾರೆ.

  ಮೊದಲ ದಕ್ಷಿಣ ಭಾರತದ ನಟಿ

  ಮೊದಲ ದಕ್ಷಿಣ ಭಾರತದ ನಟಿ

  ಸಿಂಗಾಪುರ್ ನಲ್ಲಿರುವ ಮೇಡಮ್ ಟ್ಯುಸ್ಸಾಡ್ಸ್ ನಲ್ಲಿ ಶ್ರೀದೇವಿ, ಕರಣ್ ಜೋಹರ್, ಅನುಷ್ಕಾ ಶರ್ಮಾ ಮತ್ತು ಮಹೇಶ್ ಬಾಬು ರವರ ಮೇಣದ ಪ್ರತಿಮೆಗಳಿವೆ. ಇದೀಗ ಇದೇ ಲಿಸ್ಟ್ ಗೆ ಕಾಜಲ್ ಅಗರ್ವಾಲ್ ಸೇರ್ಪಡೆಗೊಳ್ಳುತ್ತಿದ್ದಾರೆ. ಮೇಡಮ್ ಟ್ಯುಸ್ಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆ ಪಡೆಯುತ್ತಿರುವ ದಕ್ಷಿಣ ಭಾರತದ ಮೊಟ್ಟ ಮೊದಲ ನಟಿ ಕಾಜಲ್ ಅಗರ್ವಾಲ್. ಇನ್ನೂ ಲಂಡನ್ ನಲ್ಲಿರುವ ಮೇಡಮ್ ಟ್ಯುಸ್ಸಾಡ್ಸ್ ನಲ್ಲಿ ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಬಚ್ಚನ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಮುಂತಾದವರ ಮೇಣದ ಪ್ರತಿಮೆಗಳಿವೆ.

  ಬಹುಬೇಡಿಕೆಯ ನಟಿ

  ಬಹುಬೇಡಿಕೆಯ ನಟಿ

  2007 ರಲ್ಲಿ 'ಲಕ್ಷ್ಮಿ ಕಲ್ಯಾಣಂ' ಚಿತ್ರದ ಮೂಲಕ ಟಾಲಿವುಡ್ ಗೆ ಪದಾರ್ಪಣೆ ಮಾಡಿದ ಕಾಜಲ್ ಅಗರ್ವಾಲ್ ಸದ್ಯ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. 'ಮಗಧೀರ', 'ಆರ್ಯ-2', 'ಡಾರ್ಲಿಂಗ್', 'ಬೃಂದಾವನ', 'ಬಾದ್ಷಾ' ಮುಂತಾದ ಹಿಟ್ ಸಿನಿಮಾಗಳ ನಾಯಕಿ ಕಾಜಲ್ ಅಗರ್ವಾಲ್.

  ಕಾಜಲ್ ಕೈಯಲ್ಲಿರುವ ಚಿತ್ರಗಳು ಯಾವುವು.?

  ಕಾಜಲ್ ಕೈಯಲ್ಲಿರುವ ಚಿತ್ರಗಳು ಯಾವುವು.?

  ಇದೀಗ ಕಾಜಲ್ ಅಗರ್ವಾಲ್ ಅಭಿನಯದ 'ಕ್ವೀನ್' ಚಿತ್ರದ ರೀಮೇಕ್ ಆಗಿರುವ 'ಪ್ಯಾರಿಸ್ ಪ್ಯಾರಿಸ್', ಕಮಲ್ ಹಾಸನ್ ಜೊತೆಗಿನ 'ಇಂಡಿಯನ್-2' ಮತ್ತು ಬಾಲಿವುಡ್ ಗ್ಯಾಂಗ್ ಸ್ಟರ್ ಡ್ರಾಮಾ 'ಮುಂಬೈ ಸಾಗಾ' ಬಿಡುಗಡೆ ಆಗಬೇಕಿದೆ.

  English summary
  Kajal Agarwal becomes first South Indian Actress to get Madame Tussauds wax statue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X