Just In
Don't Miss!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Sports
ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಪಟ್ಟಿ
- News
ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೈಡನ್ ನೀಡಲಿರುವ ಆದೇಶಗಳಿವು
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Automobiles
ಭಾರೀ ಗಾತ್ರದ ಎಸ್ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿನಿಮಾರಂಗದ ಸೆಳೆತಕ್ಕೆ ಒಳಗಾದ ಕಾಜಲ್ ಅಗರ್ವಾಲ್ ಪತಿ
ನಟಿ ಕಾಜಲ್ ಅಗರ್ವಾಲ್ ಕೆಲವು ದಿನಗಳ ಹಿಂದಷ್ಟೆ ಉದ್ಯಮಿ ಗೌತಮ್ ಕಿಚಲು ಜೊತೆಗೆ ವಿವಾಹವಾಗಿದ್ದಾರೆ. ಹನಿಮೂನ್‌ಗೆ ಮಾಲ್ಡೀವ್ಸ್ ತಿರುಗಿ ಬಂದ ಈ ಜೋಡಿ, ವಾಪಸ್ ಬಂದ ಮೇಲೂ ಒಟ್ಟಿಗೆ ತಿರುಗಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಹನಿಮೂನ್ ಮುಗಿಸಿ ಬಂದ ಕೂಡಲೇ ಸಿನಿಮಾ ಕೆಲಸ ಪ್ರಾರಂಭಿಸಿರುವ ಕಾಜಲ್ ಅಗರ್ವಾಲ್, ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ನಟಿಸುತ್ತಿರುವ ಆಚಾರ್ಯ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರೀಕರಣ ಸೆಟ್‌ಗೆ ಪತಿ ಗೌತಮ್ ಕಿಚಲು ಅನ್ನು ಸಹ ಕರೆದೊಯ್ದಿದ್ದರು. ನವ ದಂಪತಿಗೆ ನಟ ಚಿರಂಜೀವಿ ಹೂಗುಚ್ಛ ನಿಡಿ ಅಭಿನಂದಿಸಿದ ಚಿತ್ರ ವೈರಲ್ ಆಗಿತ್ತು.
ಹೊಸ ಸುದ್ದಿಯೆಂದರೆ ಉದ್ಯಮಿಯಾಗಿರುವ ಕಾಜಲ್ ಪತಿ ಗೌತಮ್ ಕಿಚಲು ಸಹ ಚಿತ್ರರಂಗದ ಸೆಳೆತಕ್ಕೆ ಸಿಲುಕಿದ್ದು, ಸಿನಿಮಾಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ಹೊಸ ನಿರ್ಮಾಣ ಸಂಸ್ಥೆ ಪ್ರಾರಂಭಿಸಲಿದ್ದಾರೆ
ಯಾಹೂ ಸೇರಿದಂತೆ ಕೆಲವು ತೆಲುಗು ಸುದ್ದಿವಾಹಿನಿಗಳು ವರದಿ ಮಾಡಿರುವಂತೆ. ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚಲು ಸೇರಿಕೊಂಡು ಹೊಸದೊಂದು ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಲಿದ್ದಾರೆ.

ಒಳಾಂಗಣ ವಿನ್ಯಾಸ ಸಂಸ್ಥೆ ಹೊಂದಿದ್ದಾರೆ
ಗೌತಮ್ ಕಿಚಲು ಈಗಾಗಲೇ ದೇಶದ ಪ್ರತಿಷ್ಟಿತ ಒಳಾಂಗಣ ವಿನ್ಯಾಸ ಸಂಸ್ಥೆಗಳಲ್ಲಿ ಒಂದಾದ ಹೋಮ್ ಡೆಕೋರ್ ನ ಮಾಲೀಕರು. ಈ ಜೋಡಿ ಹೊಸದೊಂದು ಒಳಾಂಗಣ ವಿನ್ಯಾಸದ ಬ್ರ್ಯಾಂಡ್ ಅನ್ನು ಬಬಿಡುಗಡೆ ಮಾಡಲಿದೆಯಂತೆ. ಅದಾದ ನಂತರ ನಿರ್ಮಾಣ ಸಂಸ್ಥೆಯ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಉದ್ಯಮಿ ಆಗಿರುವ ಗೌತಮ್ ಕಿಚಲು
ಗೌತಮ್ ಕಿಚಲು ಉತ್ತಮ ಉದ್ಯಮಿ ಆಗಿದ್ದು, ಸಿನಿಮಾ ರಂಗದ ಸಾಧ್ಯ-ಅಸಾಧ್ಯತೆಗಳ ಬಗ್ಗೆ ಲೆಕ್ಕಾಚಾರ ಹಾಕಿದ್ದು, ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿ ಒಟಿಟಿಗಳಿಗಾಗಿ ವೆಬ್ ಸರಣಿ, ಹೊಸಬರ ಸಿನಿಮಾಗಳನ್ನು ಮಾಡಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಕನ್ನಡದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಕಾಜಲ್
ಇನ್ನು ನಟಿ ಕಾಜಲ್ ಅಗರ್ವಾಲ್ ಪ್ರಸ್ತುತ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಮೋಸಗಾಳ್ಳು, ಇಂಡಿಯನ್ 2 , ಹಿಂದಿಯಲ್ಲಿ ಮುಂಬೈ ಸಗಾ, ಮೆರುಪು, ಮಲಯಾಳಂ ನಲ್ಲಿ ದುಲ್ಕರ್ ಸಲ್ಮಾನ್ ಜೊತೆ ಒಂದು ಸಿನಿಮಾ ಮತ್ತು ಕನ್ನಡದ ತಥಾಸ್ತು ಸಿನಿಮಾಗಳಲ್ಲಿ ನಟಿಸಲಿದ್ದಾರೆ.