For Quick Alerts
  ALLOW NOTIFICATIONS  
  For Daily Alerts

  ಹೀರೋಗಳ ಟ್ರೆಂಡ್ ನಡುವೆ ಮಿರ ಮಿರ ಮಿಂಚಿದ ಕಾಜಲ್ ಅಗರ್‌ವಾಲ್

  |

  ಸಾಮಾನ್ಯವಾಗಿ ಸಿನಿಮಾಗಳು ರಿಲೀಸ್ ಆದರೆ ಚಿತ್ರಮಂದಿರದ ಎದುರು ಹೀರೋಗಳ ಕಟೌಟ್, ಬ್ಯಾನರ್, ಫ್ಲೆಕ್ಸ್ ರಾರಾಜಿಸುತ್ತವೆ. ಅದರಲ್ಲೂ ಸ್ಟಾರ್ ನಟರ ಚಿತ್ರ ಬಿಡುಗಡೆಯಾದರೆ ಇಡೀ ಥಿಯೇಟರ್ ಹೀರೋ ಮಯವಾಗಿರುತ್ತದೆ.

  ಹೀರೋಗಳ ಟ್ರೆಂಡ್ ನಡುವೆಯೂ ನಟಿ ಕಾಜಲ್ ಅಗರ್‌ ವಾಲ್‌ಗೆ ವಿಶೇಷವಾದ ಗೌರವ ಸಿಕ್ಕಿದೆ. ಕಾಜಲ್ ನಾಯಕಿಯಾಗಿ ನಟಿಸಿರುವ 'ಮೋಸಗಾಳ್ಳು' ಸಿನಿಮಾ ತೆರೆಕಂಡಿರುವ ಚಿತ್ರಮಂದಿರದ ಎದುರು ಕಾಜಲ್ ಅವರ ಭಾರಿ ಎತ್ತರದ ಬ್ಯಾನರ್ ಹಾಕಿ ಸಂಭ್ರಮಿಸಿದ್ದಾರೆ.

  30 ವರ್ಷಗಳಿಂದ ಕಾಜಲ್ ಅಗರ್ವಾಲ್ ಅನ್ನು ಕಾಡುತ್ತಿದೆ ಈ ಕಾಯಿಲೆ30 ವರ್ಷಗಳಿಂದ ಕಾಜಲ್ ಅಗರ್ವಾಲ್ ಅನ್ನು ಕಾಡುತ್ತಿದೆ ಈ ಕಾಯಿಲೆ

  ಕಾಜಲ್ ಅಗರ್‌ವಾಲ್ ಕಟೌಟ್ ನಿಲ್ಲಿಸಿ ಪಟಾಕಿ ಸಿಡಿಸಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀರೋಗಳ ಟ್ರೆಂಡ್ ಆಗಿರುವ ಈ ಕಾಲದಲ್ಲಿ ನಟಿಯರ ಕಟೌಟ್, ಬ್ಯಾನರ್‌ಗಳು ಹಾಕಿ ಸಂಭ್ರಮಿಸುವುದು ಬಹಳ ಅಪರೂಪ. ಈ ವಿಚಾರದಲ್ಲಿ ಕಾಜಲ್ ಅಭಿಮಾನಿಗಳು ಗಮನ ಸೆಳೆದಿದ್ದಾರೆ.

  ಅಂದ್ಹಾಗೆ, 'ಮೋಸಗಾಳ್ಳು' ಸಿನಿಮಾದಲ್ಲಿ ವಿಷ್ಣು ಮಂಚು ನಾಯಕನಟನಾಗಿ ಅಭಿನಯಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮೋಹನ್ ಬಾಬು ಅವರ ಪುತ್ರನ ಸಿನಿಮಾ ಎಂಬ ಕಾರಣಕ್ಕೆ ಹೆಚ್ಚು ಸದ್ದು ಮಾಡುತ್ತಿದೆ.

  'ಮೋಸಗಾಳ್ಳು' ಸಿನಿಮಾ ನಿನ್ನೆಯಷ್ಟೇ (ಮಾರ್ಚ್ 19) ತೆರೆಕಂಡಿದೆ. ವಿಷ್ಣು ಮಂಚು ಸ್ವತಃ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜೆಫ್ರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  ಹೀರೋಗಳ ಅಬ್ಬರದಲ್ಲಿ ನಟಿಯರನ್ನು ಕಡೆಗಣನೆ ಮಾಡಲಾಗುತ್ತದೆ ಎಂಬ ಆರೋಪ ಆಗಾಗ ಕೇಳಿಬರುತ್ತದೆ. ಆದರೆ, ಇಂತಹ ಸಂದರ್ಭಗಳನ್ನು ನೋಡಿದಾಗ ಕ್ರೇಜ್ ಎನ್ನುವುದು ಬರಿ ಹೀರೋಗಳಿಗೆ ಮಾತ್ರವಲ್ಲ, ನಾಯಕಿಯರಿಗೂ ಇದೆ ಎಂಬ ಅಭಿಪ್ರಾಯಕ್ಕೆ ಕಾರಣವಾಗಿದೆ.

  Recommended Video

  ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಟಗರು ಪುಟ್ಟಿ | Manvitha Kamath | Filmibeat Kannada

  ಕಾಜಲ್ ಅಗರ್‌ವಾಲ್ ಮದುವೆ ಆದ್ಮೇಲೆ ಬಿಡುಗಡೆಯಾಗುತ್ತಿರುವ ಎರಡನೇ ಸಿನಿಮಾ 'ಮೋಸಗಾಳ್ಳು'. ಇದರ ಜೊತೆ ಬಾಲಿವುಡ್‌ನಲ್ಲಿ 'ಮುಂಬೈ ಸಾಗ' ಚಿತ್ರವೂ ತೆರೆಕಂಡಿದ್ದು, ಆ ಸಿನಿಮಾದಲ್ಲೂ ಕಾಜಲ್ ನಟಿಸಿದ್ದಾರೆ.

  English summary
  Actress Kajal Aggarwal fans celebrated mosagallu movie release in front of sudarshan theater. video viral.
  Saturday, March 20, 2021, 14:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X