For Quick Alerts
  ALLOW NOTIFICATIONS  
  For Daily Alerts

  ಕಾಜಲ್ ಅಗರ್‌ವಾಲ್ ನಿಶ್ಚಿತಾರ್ಥ ಸುದ್ದಿ ವಂದತಿ ಅಷ್ಟೇ!

  |

  ನಟಿ ಕಾಜಲ್ ಅಗರ್‌ವಾಲ್ ಅವರು ಮದುವೆ ವಿಚಾರ ಹೆಚ್ಚು ಸುದ್ದಿಯಾಗುತ್ತಿದೆ. ಮುಂಬೈ ಮೂಲದ ಉದ್ಯಮಿಯೊಬ್ಬರು ಜೊತೆ ಪ್ರೀತಿಯಲ್ಲಿದ್ದ ಕಾಜಲ್, ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಕಳೆದ ಎರಡ್ಮೂರು ದಿನಳಿಂದ ಚರ್ಚೆಯಾಗ್ತಿದೆ.

  ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

  35 ವರ್ಷದ ನಟಿ ಗುಟ್ಟಾಗಿ ಎಂಗೇಜ್‌ಮೆಂಟ್ ಮುಗಿಸಿಕೊಂಡಿದ್ದಾರೆ ಎಂಬ ವರದಿಗಳು ಆಗಿದ್ದವು. ಖಾಸಗಿ ಆಗಿ ನಡೆದ ಈ ಕಾರ್ಯಕ್ರಮದಲ್ಲಿ ಕಾಜಲ್ ಅವರ ಕುಟುಂಬಸ್ಥರು ಹಾಗು ಕೆಲವೇ ಕೆಲವು ಆತ್ಮೀಯರು ಮಾತ್ರ ಭಾಗಿಯಾಗಿದ್ದರು ಎಂದು ಹೇಳಲಾಗಿತ್ತು. ಆದ್ರೆ, ಅದೆಲ್ಲ ಕೇವಲ ವದಂತಿ ಎಂದು ತಿಳಿದು ಬಂದಿದೆ. ಮುಂದೆ ಓದಿ...

  ಸಿನಿಮಾ ಬಗ್ಗೆ ಮಾತ್ರ ಗಮನ

  ಸಿನಿಮಾ ಬಗ್ಗೆ ಮಾತ್ರ ಗಮನ

  'ಕಾಜಲ್ ಅಗರ್‌ವಾಲ್ ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಅವರು ಪ್ರಸ್ತುತ ತಮ್ಮ ವೃತ್ತಿಜೀವನ ಮತ್ತು ಚಲನಚಿತ್ರಗಳಲ್ಲಿ ನಿರತರಾಗಿದ್ದಾರೆ' ಎಂದು ನಟಿಯ ವಕ್ತಾರರು ಫಿಲ್ಮಿಬೀಟ್ ಇಂಗ್ಲಿಷ್ ವೆಬ್‌ಸೈಟ್‌ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ನಿಶ್ಚಿತಾರ್ಥ ಎನ್ನುವುದು ಬರಿ ವದಂತಿ ಅಷ್ಟೇ ಎನ್ನುವುದು ಪಕ್ಕಾ ಆಗಿದೆ.

  ಸದ್ದೇ ಇಲ್ಲದೆ ಎಂಗೇಜ್ ಆದರು ಕಾಜಲ್ ಅಗರ್ವಾಲ್

  ಸದ್ಯಕ್ಕೆ ಮದುವೆ ಇಲ್ಲ

  ಸದ್ಯಕ್ಕೆ ಮದುವೆ ಇಲ್ಲ

  ಸಿನಿಮಾ ಕಡೆ ಹೆಚ್ಚು ಗಮನ ನೀಡುತ್ತಿರುವುದರಿಂದ ಮದುವೆ ಬಗ್ಗೆ ಕಾಜಲ್ ನಿರ್ಧರಿಸಿಲ್ಲ. ಹಾಗೂ ಸದ್ಯಕ್ಕೆ ಮದುವೆ ಆಗುವ ಯಾವುದೇ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ. ಹಾಗಾದ್ರೆ, ನಿಸ್ಚಿತಾರ್ಥ ಸುದ್ದಿ ಏಕೆ ಚರ್ಚೆಯಾಗುತ್ತಿದೆ? ಉದ್ಯಮಿ ಗೌತಮ್ ಜೊತೆ ಕಾಜಲ್ ಡೇಟ್ ಮಾಡುತ್ತಿರುವುದು ನಿಜಾನಾ ಎಂಬ ವಿಷಯಗಳಿಗೆ ಉತ್ತರ ಸಿಕ್ಕಿಲ್ಲ.

  ಸಿನಿ ಇಂಡಸ್ಟ್ರಿ ವ್ಯಕ್ತಿಯನ್ನು ಮದುವೆ ಆಗಲ್ಲ

  ಸಿನಿ ಇಂಡಸ್ಟ್ರಿ ವ್ಯಕ್ತಿಯನ್ನು ಮದುವೆ ಆಗಲ್ಲ

  ಈ ಹಿಂದೆ ಲಕ್ಷ್ಮಿ ಮಂಚು ನಡೆಸಿಕೊಡುವ ಟಾಕ್ ಶೋನಲ್ಲಿ ಭಾಗವಹಿಸಿದ್ದ ಕಾಜಲ್ ಅಗರ್‌ವಾಲ್ 'ನಾನು ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದ ವ್ಯಕ್ತಿಯನ್ನು ಮದುವೆಯಾಗಲ್ಲ' ಎಂದು ಹೇಳಿಕೊಂಡಿದ್ದರು. ಹಾಗಾಗಿ, ಉದ್ಯಮಿ ಗೌತಮ್ ಹೆಸರು ಕಾಜಲ್ ಜೊತೆಯಲ್ಲಿ ಗಟ್ಟಿಯಾಗಿ ಅಂಟಿಕೊಂಡಿದೆ.

  ಆಚಾರ್ಯದಲ್ಲಿ ಕಾಜಲ್

  ಆಚಾರ್ಯದಲ್ಲಿ ಕಾಜಲ್

  ಮೆಗಾಸ್ಟಾರ್ ಚಿರಂಜೀವಿ ಅವರ 152ನೇ ಚಿತ್ರ ಆಚಾರ್ಯದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಮಲ್ ಹಾಸನ್ ಅವರ ಇಂಡಿಯನ್-2 ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇನ್ನು ದುಲ್ಕರ್ ಸಲ್ಮಾನ್ ಹಾಗೂ ಅದಿತಿ ರಾವ್ ಹೈದರಿ ಅಭಿನಯದ ಚಿತ್ರದಲ್ಲೂ ಕಾಜಲ್ ಬಣ್ಣ ಹಚ್ಚುತ್ತಿದ್ದಾರೆ.

  English summary
  South actress Kajal Aggarwal is Not Engaged with businessman says source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X