For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್: ಕೊನೆಯ ಬ್ಯಾಚುಲರ್ ಪಾರ್ಟಿ ಎಂಜಾಯ್ ಮಾಡಿದ ನಟಿ ಕಾಜಲ್ ಅಗರ್ವಾಲ್

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ಮತ್ತು ಸುಂದರ ನಟಿ ಕಾಜಲ್ ಅಗರ್ವಾಲ್ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಕಾಜಲ್ ಮದುವೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದರೆ ಈ ಬಗ್ಗೆ ಮಗಧೀರ ಸುಂದರಿ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮದುವೆ ವಿಚಾರವನ್ನು ಅಧಿಕೃತವಾಗಿ ಬಹಿರಂಗ ಪಡಿಸಿದ್ದಾರೆ.

  ಕಾಜಲ್, ಮುಂಬೈ ಮೂಲಕ ಉದ್ಯಮಿ ಗೌತಮ್ ಜೊತೆ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ತಿಂಗಳು 30ರಂದು ಕಾಜಲ್, ಬಹುಕಾಲದ ಗೆಳೆಯ ಗೌತಮ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ತೀರ ಖಾಸಗಿಯಾಗಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗುತ್ತಿದ್ದಾರೆ. ಮದುವೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಭಾಕಿ ಇದೆ. ಸದ್ಯದಲ್ಲೇ ಸಾಂಸಾರಿಕ ಜೀವನ ಪ್ರಾರಂಭಿಸುವ ಕಾಜಲ್ ಈಗ ಪಾರ್ಟಿ ಮೂಡ್ ನಲ್ಲಿದ್ದಾರೆ. ಹೌದು, ಕಾಜಲ್ ಸ್ನೇಹಿತರ ಜೊತೆ ಸೇರಿ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಮುಂದೆ ಓದಿ...

  ಕೊರೊನಾ ನಡುವೆ ಕಾಜಲ್ ಮದುವೆ: ಖುಷಿ ವಿಷಯ ಹಂಚಿಕೊಂಡ ನಟಿ

  ಮದುವೆಗೂ ಮುನ್ನ ಕಾಜಲ್ ಕೊನೆಯ ಪಾರ್ಟಿ

  ಮದುವೆಗೂ ಮುನ್ನ ಕಾಜಲ್ ಕೊನೆಯ ಪಾರ್ಟಿ

  ಕಾಜಲ್ ಅಗರ್ವಾಲ್ ಬ್ಯಾಚುಲರ್ ಪಾರ್ಟಿಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಾಜಲ್ ಸಹೋದರಿ, ನಟಿ ನೇಹ ಸೇರಿದಂತೆ ಅನೇಕರು ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ಖುಷಿಯನ್ನು ನೇಹಾ ಅಗರ್ವಾಲ್ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮದುಮಗಳು ಕಾಜಲ್ ಕಪ್ಪು ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸಿದ್ದಾರೆ.

  ಪಾರ್ಟಿಯಲ್ಲಿ ಕಾಜಲ್ ಮಸ್ತ್ ಎಂಜಾಯ್

  ಪಾರ್ಟಿಯಲ್ಲಿ ಕಾಜಲ್ ಮಸ್ತ್ ಎಂಜಾಯ್

  ಕೊರೊನಾ ವೈರಸ್ ಹಾವಳಿಯ ಪರಿಣಾಮ ಕೆಲವೇ ಕೆಲವು ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಕಾಜಲ್ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಕಾಜಲ್ ಗೆ ಸ್ನೇಹಿತರು, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅಭಿನಂದನೆ ತಿಳಿಸುತ್ತಿದ್ದಾರೆ. ಮದುವೆ ತಾಯಾರಿಯಲ್ಲಿರುವ ಕಾಜಲ್ ಊಹಾಪೋಹಗಳಿಗೆ ತೆರೆ ಎಳೆದು, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಸದ್ದೇ ಇಲ್ಲದೆ ಎಂಗೇಜ್ ಆದರು ಕಾಜಲ್ ಅಗರ್ವಾಲ್

  ಮದುವೆ ಬಗ್ಗೆ ಕಾಜಲ್ ಅಗರ್ವಾಲ್ ಹೇಳಿದ್ದನು?

  ಮದುವೆ ಬಗ್ಗೆ ಕಾಜಲ್ ಅಗರ್ವಾಲ್ ಹೇಳಿದ್ದನು?

  ಮದುವೆ ಸುದ್ದಿ ವೈರಲ್ ಆಗುತ್ತಿದ್ದಂತೆ ಕಾಜಲ್ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. "ಇಷ್ಟು ದಿನ ನೀವುಗಳು ನನ್ನನ್ನು ಪ್ರೀತಿಸಿದ್ದೀರಿ, ಅಭಿಮಾನಿಸಿದ್ದೀರಿ. ನನ್ನ ಈ ಹೊಸ ಪಯಣಕ್ಕೆ ನಿಮ್ಮಗಳ ಹಾರೈಕೆ, ಆಶೀರ್ವಾದವನ್ನು ನಾನು ಮತ್ತು ಗೌತಮ್ ಕೇಳುತ್ತಿದ್ದೇವೆ" ಎಂದು ಹೇಳಿದ್ದಾರೆ.

  ಮದುವೆ ನಂತರವೂ ಅಭಿನಯ ಮುಂದುವರೆಸುತ್ತೇನೆ

  ಮದುವೆ ನಂತರವೂ ಅಭಿನಯ ಮುಂದುವರೆಸುತ್ತೇನೆ

  "ನಾನು ಇಷ್ಟು ವರ್ಷಗಳಿಂದ ಅತಿಯಾಗಿ ಪ್ರೀತಿಸಿದ್ದ, ನಿಮ್ಮನ್ನು ಮನರಂಜಿಸುವ ಕಾರ್ಯವನ್ನು ಮುಂದುವರೆಸಲಿದ್ದೇನೆ. ಹೊಸ ಉದ್ದೇಶ, ಹೊಸ ಅರ್ಥದೊಂದಿಗೆ ನಾನು ನನ್ನ ಪ್ರೇಕ್ಷಕರನ್ನು ಮನರಂಜಿಸುವ ಕಾರ್ಯ ಮಾಡಲಿದ್ದೇನೆ" ಎಂದಿದ್ದಾರೆ ಕಾಜಲ್. ಮದುವೆ ನಂತರವೂ ನಟನೆ ಬಿಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

  ಅತ್ತಿಗೆಯನ್ನು ಧ್ರುವ ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ | Filmibeat Kannada
  English summary
  Actres Kajal Aggarwal's last bachelorette party photo viral in social media. kajal aggarwal to tie the knot with gautam on October 30th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X