For Quick Alerts
  ALLOW NOTIFICATIONS  
  For Daily Alerts

  ಸ್ಯಾಮ್-ಚೈ ವಿಚ್ಛೇದನ: ಅಮೀರ್ ಖಾನ್ ಕಾರಣ ಎಂದು ಟೀಕಿಸಿದ ಕಂಗನಾ

  |

  ತೆಲುಗಿನ ಮೋಸ್ಟ್ ಬ್ಯೂಟಿಫುಲ್ ಜೋಡಿ ಎಂದು ಗುರುತಿಸಿಕೊಂಡಿದ್ದ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಕೊನೆಗೊಂಡಿದೆ. ಹಲವು ದಿನಗಳಿಂದ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಡಿವೋರ್ಸ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ವರದಿಗಳು ಆಗಿದ್ದವು. ಅಂತಿಮವಾಗಿ ಈ ಸುದ್ದಿ ನಿಜವಾಯಿತು. ಅಕ್ಟೋಬರ್ 2 ರಂದು ಶನಿವಾರ ಸ್ವತಃ ಸಮಂತಾ ಈ ಕುರಿತು ಅಧಿಕೃತವಾಗಿ ಪೋಸ್ಟ್ ಹಾಕಿ ವಿಚ್ಛೇದನ ಬಗ್ಗೆ ದೃಢಪಡಿಸಿದರು. ಈ ಮೂಲಕ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಕೊನೆ ಮಾಡಿದರು. ಈ ಸುದ್ದಿ ಸ್ಯಾಮ್ ಮತ್ತು ಚೈ ವಿಚ್ಛೇದನ ಸಂಗತಿ ಅಭಿಮಾನಿಗಳಿಗೆ ಆಘಾತ ನೀಡಿದೆ.

  ಸಮಂತಾ-ನಾಗ ಚೈತನ್ಯ ದಾಂಪತ್ಯದಲ್ಲಿ ಮೂಡಿರುವ ಮನಸ್ತಾಪ ಭೇಗ ಬಗೆಹರಿದು, ಇಬ್ಬರು ಮತ್ತೆ ಒಂದಾಗಲಿ ಎಂದು ಕೇಳಿಕೊಳ್ಳುತ್ತಿದ್ದವರಿಗೆ ಇದು ಅಚ್ಚರಿ ಉಂಟು ಮಾಡಿತು. ಹೊರಜಗತ್ತಿನ ಕಣ್ಣಿಗೆ ತುಂಬಾ ಚೆನ್ನಾಗಿದ್ದ ಇವರಿಬ್ಬರು ದೂರವಾಗಲು ಅಸಲಿ ಕಾರಣ ಏನೆಂದು ಸ್ಪಷ್ಟವಾಗಿ ತಿಳಿಯದ ಕಾರಣ ಅಭಿಮಾನಿಗಳು ಇನ್ನು ಗೊಂದಲದಲ್ಲಿದ್ದಾರೆ.

  ಸಮಂತಾ-ಚೈತನ್ಯ ವಿಚ್ಛೇದನ; ನಟ ಸಿದ್ದಾರ್ಥ ಗೂಡಾರ್ಥದ ಟ್ವೀಟ್!ಸಮಂತಾ-ಚೈತನ್ಯ ವಿಚ್ಛೇದನ; ನಟ ಸಿದ್ದಾರ್ಥ ಗೂಡಾರ್ಥದ ಟ್ವೀಟ್!

  ಈ ನಡುವೆ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ. ಸಮಂತಾ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ 'ತಲೈವಿ' ನಟಿ ನಾಗ್ ಮತ್ತು ಅಮೀರ್ ಖಾನ್ ವಿರುದ್ಧ ಟೀಕಿಸಿದ್ದಾರೆ. ಮುಂದೆ ಓದಿ...

  ಡಿವೋರ್ಸ್‌ ವಿಚಾರದಲ್ಲಿ ಪುರುಷರದ್ದೇ ತಪ್ಪು

  ಡಿವೋರ್ಸ್‌ ವಿಚಾರದಲ್ಲಿ ಪುರುಷರದ್ದೇ ತಪ್ಪು

  ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಕಂಗನಾ ರಣಾವತ್, ಡಿವೋರ್ಸ್ ವಿಚಾರದಲ್ಲಿ ನೂರಕ್ಕೆ ಒಂದರಷ್ಟು ಮಹಿಳೆಯರದ್ದು ತಪ್ಪು ಇರುತ್ತದೆ. ಪುರುಷನಿಂದಲೇ ವಿಚ್ಛೇದನ ಸಂಸ್ಕೃತಿ ಹೆಚ್ಚಾಗುತ್ತಿದೆ. ಬಟ್ಟೆ ಬದಲಾಯಿಸುವಂತೆ ಮಹಿಳೆಯರನ್ನು ಬದಲಾಯಿಸುವವರನ್ನು ಪ್ರೋತ್ಸಾಹಿಸುವುದನ್ನು ಮೊದಲು ಬಿಡಿ ಎಂದು ಕಂಗನಾ ಟೀಕಿಸಿದ್ದಾರೆ. ಸಮಂತಾ ಮತ್ತು ಚೈ ಡಿವೋರ್ಸ್‌ನಲ್ಲಿ ಅಮೀರ್ ಖಾನ್ ಪಾತ್ರವಿದೆ ಎಂದು ಕ್ವೀನ್ ಕಂಗನಾ ಗುಡುಗಿದ್ದಾರೆ.

  ನೂರರಲ್ಲಿ ಒಬ್ಬ ಮಹಿಳೆ ತಪ್ಪು ಮಾಡ್ತಾರೆ

  ನೂರರಲ್ಲಿ ಒಬ್ಬ ಮಹಿಳೆ ತಪ್ಪು ಮಾಡ್ತಾರೆ

  ''ವಿಚ್ಛೇದನದ ವಿಷಯದಲ್ಲಿ ಯಾವಾಗಲೂ ಪುರುಷನದ್ದೆ ತಪ್ಪಾಗಿರುತ್ತದೆ. ತಾನೊಬ್ಬ ಸಂಪ್ರದಾಯವಾದಿ ಅಥವಾ ಜಡ್ಜ್‌ಮೆಂಟ್ ಮಾಡಬಲ್ಲ ವ್ಯಕ್ತಿಯಾಗಿರಬಹುದು. ಆದರೆ ಮಹಿಳೆ ಮತ್ತು ಪುರುಷನ ಸ್ವಭಾವ ಮತ್ತು ಚಲನಶೀಲತೆಯನ್ನು ಆ ದೇವರು ಈ ರೀತಿ ಸೃಷ್ಟಿಸಿರುತ್ತಾನೆ. ಪ್ರಾಚೀನವಾಗಿ, ವೈಜ್ಞಾನಿಕವಾಗಿ ಪುರುಷ ಒಂದು ರೀತಿ ಬೇಟೆಗಾರ ಇದ್ದಂತೆ. ಮಹಿಳೆ ಒಂದು ರೀತಿ ಪೋಷಕಿ. ಮಹಿಳೆಯರನ್ನು ಬಟ್ಟೆಯ ರೀತಿ ಬದಲಾಯಿಸುವ ಮತ್ತು ಕೊನೆಯಲ್ಲಿ ಒಳ್ಳೆಯ ಸ್ನೇಹಿತರು ಎಂದು ಬಿಂಬಿಸಿಕೊಳ್ಳುವವರ ಮೇಲೆ ದಯೆ ತೋರಿಸುವುದು ನಿಲ್ಲಿಸಿ. ಹೌದು, ನೂರು ಮಹಿಳೆಯರಲ್ಲಿ ಒಬ್ಬ ಮಹಿಳೆ ತಪ್ಪು ಮಾಡಬಹುದು. ಇದು ನಿಜವಾದ ಅಂಕಿ-ಅಂಶ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಂದ ಬೆಂಬಲ ಪಡೆದುಕೊಳ್ಳುತ್ತಿರುವ ಇಂತವರಿಗೆ ನಾಚಿಕೆಯಾಗಬೇಕು. ವಿಚ್ಛೇದನ ಸಂಸ್ಕೃತಿ ಈ ಹಿಂದಿಗಿಂತಲೂ ಹೆಚ್ಚು ಬೆಳೆಯುತ್ತಿದೆ'' ಎಂದು ಕಂಗನಾ ರಣಾವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ದಾಂಪತ್ಯ ಜೀವನ ಅಂತ್ಯಗೊಳಿಸಿದ ನಾಗ ಚೈತನ್ಯ- ಸಮಂತಾದಾಂಪತ್ಯ ಜೀವನ ಅಂತ್ಯಗೊಳಿಸಿದ ನಾಗ ಚೈತನ್ಯ- ಸಮಂತಾ

  ಅಮೀರ್ ಖಾನ್‌ ಬಗ್ಗೆ ಕಂಗನಾ ಟೀಕೆ

  ಅಮೀರ್ ಖಾನ್‌ ಬಗ್ಗೆ ಕಂಗನಾ ಟೀಕೆ

  ''ದಿಢೀರ್ ಅಂತಾ ಡಿವೋರ್ಸ್ ಘೋಷಿಸಿದ ಈ ದಕ್ಷಿಣ ಭಾರತದ ನಟ ಮದುವೆಯಾಗಿ ನಾಲ್ಕು ವರ್ಷ ಆಗಿತ್ತು, 10 ವರ್ಷದಿಂದಲೂ ಆಕೆಯೊಂದಿಗೆ ಪರಿಚಯ ಹೊಂದಿದ್ದರು. ಆದರೆ ಬಾಲಿವುಡ್ ಸೂಪರ್ ಸ್ಟಾರ್, ಡಿವೋರ್ಸ್ ಎಕ್ಸ್‌ಪರ್ಟ್ ಹಾಗೂ ಹಲವು ಮಹಿಳೆಯರು ಮತ್ತು ಮಕ್ಕಳು ಜೀವನ ಹಾಳು ಮಾಡಿದವರ ಸಂಪರ್ಕಕ್ಕೆ ಬಂದರು. ಆ ನಟನಿಗೆ ಈ ವಿಚಾರದಲ್ಲಿ ಮಾರ್ಗದರ್ಶನ ಮಾಡಿ ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಂಡರು. ಇದು ಕಣ್ಣಿಗೆ ಕಾಣದ ಸಂಗತಿಯೇನು ಅಲ್ಲ. ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಿಮ್ಮೆಲ್ಲರಿಗೂ ತಿಳಿದಿದೆ'' ಎಂದು ಕಂಗನಾ ಪರೋಕ್ಷವಾಗಿ ಅಮೀರ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.

  ಇಬ್ಬರಿಗೆ ಡಿವೋರ್ಸ್ ಕೊಟ್ಟಿರುವ ಅಮೀರ್ ಖಾನ್

  ಇಬ್ಬರಿಗೆ ಡಿವೋರ್ಸ್ ಕೊಟ್ಟಿರುವ ಅಮೀರ್ ಖಾನ್

  1986ರಲ್ಲಿ ರೀನಾ ದತ್ತಾ ಜೊತೆ ನಟ ಅಮೀರ್ ಖಾನ್ ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳು. ಆದರೆ, 2002ರ ಡಿಸೆಂಬರ್‌ನಲ್ಲಿ ವಿಚ್ಛೇದನ ಪಡೆದುಕೊಂಡರು. ನಂತರ 2005ರಲ್ಲಿ ಕಿರಣ್ ರಾವ್ ಜೊತೆ ಎರಡನೇ ಮದುವೆಯಾದರು. ಈಗ 2021ರ ಜುಲೈ ತಿಂಗಳಲ್ಲಿ ಕಿರಣ್ ರಾವ್ ಜೊತೆಗಿನ ದಾಂಪತ್ಯದಿಂದಲೂ ಅಧಿಕೃತವಾಗಿ ದೂರವಾಗಿರುವುದಾಗಿ ಘೋಷಿಸಿಕೊಂಡರು.

  English summary
  Bollywood Actress Kangana Ranaut Reacts on Samantha-Naga Chaitanya Divorce in instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X