For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ ಕನ್ನಡತಿ ರಚಿತಾ ರಾಮ್

  |

  ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಟಾಲಿವುಡ್ ಕಡೆ ಮುಖ ಮಾಡುತ್ತಿದ್ದಾರೆ. ಕನ್ನಡದಲ್ಲಿ ಅಯುಷ್ಮಾನ್ ಭವ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ರಚಿತಾ ಕೈಯಲ್ಲಿ ಸಾಕಷ್ಟು ಕನ್ನಡ ಸಿನಿಮಾಗಳಿವೆ. ಇದರ ಜೊತೆಗೆ ರಚ್ಚು ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

  ಮೂಲಗಳ ಪ್ರಕಾರ ರಚಿತಾ ರಾಮ್ ಟಾಲಿವುಡ್ ನ ಖ್ಯಾತ ನಟ ನಂದಮುರಿ ಬಾಲಕೃಷ್ಣಗೆ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿವೆ. ಬಾಲಕೃಷ್ಣ ಸದ್ಯ 'ರೂಲರ್' ಚಿತ್ರದ ಚಿತ್ರೀಕರಣ ಮುಗಿಸಿ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. ಹೊಸ ಸ್ಟೈಲ್ ಮತ್ತು ಲುಕ್ ಮೂಲಕ ಗಮನ ಸೆಳೆಯುತ್ತಿರುವ ಬಾಲಕೃಷ್ಣ, ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ನಿರ್ದೇಶಕ ಬಯೋಪತಿ ಶ್ರೀನು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ ರಚಿತಾ ರಾಮ್ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

  59 ವರ್ಷದ ಬಾಲಕೃಷ್ಣ ಸ್ಟೈಲ್ ಗೆ ಟಾಲಿವುಡ್ ಫಿದಾ59 ವರ್ಷದ ಬಾಲಕೃಷ್ಣ ಸ್ಟೈಲ್ ಗೆ ಟಾಲಿವುಡ್ ಫಿದಾ

  ಇನ್ನು ವಿಶೇಷ ಅಂದರೆ ಈ ಚಿತ್ರದಲ್ಲಿ ಬಾಲಿವುಡ್ ಮುನ್ನಭಾಯ್ ಸಂಜಯ್ ದತ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಂಜಯ್ ದತ್ ಸದ್ಯ ಕೆಜಿಎಫ್-2 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಬಾಲಕೃಷ್ಣ ಸಿನಿಮಾಗೂ ವಿಲನ್ ಆಗಿ ಕಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ ಅಷ್ಟೆ.

  ಅಂದ್ಮೇಲೆ ರಚಿತಾ ರಾಮ್ ಬಾಲಿವುಡ್ ನಟ ಸಂಜಯ್ ದತ್ ಮತ್ತು ಬಾಲಕೃಷ್ಣ ಇಬ್ಬರು ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವ ಸಂತಸದಲ್ಲಿದ್ದಾರೆ. ಈ ಮೂಲಕ ರಚಿತಾ ಮೊದಲ ಬಾರಿಗೆ ತೆಲುಗು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ರಚಿತಾ ಅಭಿನಯದ 'ಐ ಲವ್ ಯು' ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಆದರೆ ಮೊದಲ ಬಾರಿಗೆ ತೆಲುಗು ಸಿನಿಮಾಗೆ ನಾಯಕಿಯಾಗುತ್ತಿದ್ದಾರೆ. ರಚಿತಾ ಕೈಯಲ್ಲಿ ಸದ್ಯ ರಮೇಶ್ ಅರವಿಂದ್ ಅಭಿನಯದ ಮತ್ತು ನಿರ್ದೇಶನದ '100', 'ಏಪ್ರಿಲ್', 'ಏಕ್ ಲವ್ ಯಾ', 'ಡಾಲಿ', 'ಸೀರೆ' ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ. ಇದರ ಜೊತೆಗೆ ಬಾಲಕೃಷ್ಣ ಜೊತೆ ಕಾಣಿಸಿಕೊಳ್ಳಲಿದ್ದಾರೆ.

  English summary
  Kannada actress Rachita Ram heroine for Telugu Actor Balakrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X