twitter
    For Quick Alerts
    ALLOW NOTIFICATIONS  
    For Daily Alerts

    'ರಾಬರ್ಟ್' ಚೆಲುವೆ ಆಶಾ ಭಟ್ ಮೊದಲ ತೆಲುಗು ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬಜೆಟ್‌ನಷ್ಟೂ ಗಳಿಸಲಿಲ್ಲ!

    |

    ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಕನ್ನಡದ ಚೆಲುವೆ ಆಶಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಮೂಲತಃ ಭದ್ರಾವತಿ ಊರಿನವರಾದ ಆಶಾ ಭಟ್ ರಾಬರ್ಟ್ ಚಿತ್ರದಲ್ಲಿ ಉತ್ತಮವಾಗಿ ಅಭಿನಯಿಸಿ ಕನ್ನಡ ಸಿನಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದರು.

    ಹೀಗೆ ರಾಬರ್ಟ್ ಚಿತ್ರದಲ್ಲಿ ಅಭಿನಯಿಸಿದ ನಂತರ ಒಂದಷ್ಟು ದಿನ ಆಶಾ ಭಟ್ ಸೈಲೆಂಟ್ ಆಗಿದ್ದರು. ಆಶಾ ಭಟ್ ಅಭಿನಯದ ಯಾವುದೇ ಚಿತ್ರದ ಬಗ್ಗೆ ಕೂಡ ಅಪ್ ಡೇಟ್ ಇರಲಿಲ್ಲ. ಹೀಗೆ ಒಂದೂವರೆ ವರ್ಷ ಕಳೆದ ಬಳಿಕ ನಟಿ ಆಶಾ ಭಟ್ ತೆಲುಗಿನ ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ವಿಷಯ ತಿಳಿದುಬಂತು.

    ಹೌದು, ತಮಿಳಿನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಓ ಮೈ ಕಡವುಲೆ' ತೆಲುಗು ರಿಮೇಕ್ ಆದ 'ಓರಿ ದೇವುಡ' ಎಂಬ ಚಿತ್ರದಲ್ಲಿ ಆಶಾ ಭಟ್ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ವಿಕ್ಟರಿ ವೆಂಕಟೇಶ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ವಿಶ್ವಕ್ ಸೇನ್ ನಾಯಕನಾಗಿ ಮತ್ತು ಮಿಥಿಲಾ ಪಾಲ್ಕರ್ ಆಶಾ ಭಟ್ ಜತೆ ಮತ್ತೋರ್ವ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಕಳೆದ ಅಕ್ಟೋಬರ್ 21ರಂದು ಬಿಡುಗಡೆಗೊಂಡ ಈ ಚಿತ್ರ ವೀಕ್ಷಿಸಿದ ಸಿನಿಪ್ರಿಯರು ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿದರು. ಈ ಚಿತ್ರಕ್ಕೆ ವ್ಯಕ್ತವಾದ ಆರಂಭದ ದಿನಗಳ ಪ್ರತಿಕ್ರಿಯೆ ಕಂಡು ಒಂದೊಳ್ಳೆ ಕಲೆಕ್ಷನ್ ಮಾಡಲಿದೆ ಎನ್ನಲಾಗಿತ್ತು. ಆದರೆ ಚಿತ್ರ ಅಂತಿಮವಾಗಿ ತನ್ನ ಬಜೆಟ್ ಮೊತ್ತವನ್ನು ಗಳಿಸುವಲ್ಲಿಯೂ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದೆ.

    ಒರಿ ದೇವುಡ ಕಲೆಕ್ಷನ್ ಹಾಗೂ ಬಜೆಟ್ ಎಷ್ಟು?

    ಒರಿ ದೇವುಡ ಕಲೆಕ್ಷನ್ ಹಾಗೂ ಬಜೆಟ್ ಎಷ್ಟು?

    ಆರಂಭದಲ್ಲಿ ಚಿತ್ರ ವೀಕ್ಷಿಸಿದ್ದ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದ ಒರಿ ದೇವುಡ ಸಂಪೂರ್ಣವಾಗಿ ಚಿತ್ರಮಂದಿರದಲ್ಲಿ ತನ್ನ ಓಟವನ್ನು ನಿಲ್ಲಿಸಿದ ನಂತರ 9.54 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ತಿಳಿಸಿದ್ದಾರೆ. ಇನ್ನು ಚಿತ್ರ ಸುಮಾರು 10 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು ಬಾಕ್ಸ್ ಆಫೀಸ್ ಮೂಲಕ ತನ್ನ ಬಜೆಟ್ ಮರಳಿ ಪಡೆಯುವಲ್ಲಿ ವಿಫಲವಾಗಿದೆ ಎಂದು ತಿಳಿಸಲಾಗಿದೆ. ಆದರೆ ಆಡಿಯೋ, ಸ್ಯಾಟಲೈಟ್ ಮತ್ತು ಓಟಿಟಿ ಹಕ್ಕುಗಳಿಂದ ಒರಿ ದೇವುಡ ಲಾಭ ಗಳಿಸಿರುವುದು ಖಚಿತ.

    21 ದಿನಕ್ಕೆ ಓಟಿಟಿಗೆ

    21 ದಿನಕ್ಕೆ ಓಟಿಟಿಗೆ

    ನವೆಂಬರ್ 11ರ ಮಧ್ಯರಾತ್ರಿಯಿಂದ ಒರಿ ದೇವುಡ ಚಿತ್ರ ಆಹಾ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮಿಂಗ್ ಆಗಲು ಆರಂಭಿಸಿದೆ. ಈ ಮೂಲಕ ಕೇವಲ 21 ದಿನಕ್ಕೆ ಓರಿ ದೇವುಡ ಒಟಿಟಿ ವೇದಿಕೆಗೆ ಲಗ್ಗೆ ಇಟ್ಟಿದೆ. ಚಿತ್ರಮಂದಿರದಲ್ಲಿ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ ಓಟಿಟಿಗೆ ಬಿಡುಗಡೆ ಮಾಡಿದ್ದರ ಬಗ್ಗೆ ಕೆಲ ತೆಲುಗು ಸಿನಿ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದರು. ಕೆಲವೆಡೆ ಜನ ಇನ್ನೂ ಸಹ ಚಿತ್ರವನ್ನು ವೀಕ್ಷಿಸುತ್ತಿದ್ದ ಕಾರಣ ಈ ರೀತಿಯ ಪ್ರತಿಕ್ರಿಯೆ ವ್ಯಕ್ತವಾಯಿತು.

    ಕನ್ನಡದಲ್ಲೂ ರಿಮೇಕ್!

    ಕನ್ನಡದಲ್ಲೂ ರಿಮೇಕ್!

    ಇನ್ನು ಒರಿ ದೇವುಡ ತಮಿಳಿನ ಓ ಮೈ ಕಡವುಲೆ ರಿಮೇಕ್ ಆಗಿದ್ದು, ಈ ಹಿಂದೆ ಇದೇ ಚಿತ್ರ ಕನ್ನಡಕ್ಕೂ ಲಕ್ಕಿ ಮ್ಯಾನ್ ಶೀರ್ಷಿಕೆಯಡಿಯಲ್ಲಿ ರಿಮೇಕ್ ಆಗಿತ್ತು. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡರೆ, ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸಿದ್ದರು ಹಾಗೂ ಸಂಗೀತಾ ಶೃಂಗೇರಿ ಮತ್ತು ರೋಶಿನಿ ಪ್ರಕಾಶ್ ನಾಯಕಿಯರಾಗಿ ಕಾಣಿಸಿಕೊಂಡಿದ್ದರು.

    ರಾಬರ್ಟ್ ಚಿತ್ರಕ್ಕೂ ಮುನ್ನ ಹಿಂದಿಯಲ್ಲಿ ನಟಿಸಿದ್ದ ಆಶಾ ಭಟ್

    ರಾಬರ್ಟ್ ಚಿತ್ರಕ್ಕೂ ಮುನ್ನ ಹಿಂದಿಯಲ್ಲಿ ನಟಿಸಿದ್ದ ಆಶಾ ಭಟ್

    ಇನ್ನು ನಟಿ ಆಶಾ ಭಟ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕೂ ಮುನ್ನ ಹಿಂದಿಯ ಜಂಗ್ಲಿ ಎಂಬ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದು ಮಾಡೆಲ್ ಆಗಿದ್ದ ಆಶಾ ಭಟ್ ನಟಿಸಿದ್ದ ಚೊಚ್ಚಲ ಚಲನಚಿತ್ರ. ಈ ಚಿತ್ರ ಕೂಡ 2 - 3 ಕೋಟಿ ಲಾಭ ಗಳಿಸಿದ್ದು ಬಿಟ್ಟರೆ ದೊಡ್ಡ ಮಟ್ಟದ ಗಳಿಕೆ ಕಂಡಿರಲಿಲ್ಲ. ಹೀಗೆ ಜಂಗ್ಲಿ, ರಾಬರ್ಟ್ ಹಾಗೂ ಒರಿ ದೇವುಡ ಚಿತ್ರಗಳ ಮೂಲಕ ಹಿಂದಿ, ಕನ್ನಡ ಹಾಗೂ ತೆಲುಗು ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಆಶಾ ಭಟ್ ಮುಂದೆ ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಕುತೂಹಲವಿದೆ.

    English summary
    Kannadathi Asha Bhat's first Telugu film Ori Devuda failed to recover it's at the box office. Take a look
    Friday, November 11, 2022, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X