For Quick Alerts
  ALLOW NOTIFICATIONS  
  For Daily Alerts

  'ಕಾಂತಾರ ತೆಲುಗು' ಘರ್ಜನೆ; ಹಿಂದಿ ವರ್ಷನ್ ಒಟ್ಟು ಗಳಿಕೆಗಿಂತ ಹೈದರಾಬಾದ್ ಫಸ್ಟ್ ಡೇ ಗಳಿಕೆಯೇ ಹೆಚ್ಚು!

  |

  ಮೊದಲಿಗೆ ಕನ್ನಡದಲ್ಲಿ ಬಿಡುಗಡೆಗೊಂಡು ಅಬ್ಬರಿಸಿ ಬೊಬ್ಬಿರಿದಿದ್ದ ಕಾಂತಾರ ಇದೀಗ ತೆಲುಗಿನಲ್ಲಿಯೂ ತನ್ನ ನಾಗಾಲೋಟವನ್ನು ಮುಂದುವರೆಸಿದೆ.

  ನಿನ್ನೆ ( ಅಕ್ಟೋಬರ್ 15 ) ಕಾಂತಾರ ತೆಲುಗು ಹಾಗೂ ತಮಿಳು ಡಬ್ಬಿಂಗ್ ವರ್ಷನ್ ಬಿಡುಗಡೆಗೊಂಡಿದ್ದು, ತೆಲುಗಿನಲ್ಲಿ ಕಾಂತಾರ ಹವಾ ಜೋರಾಗಿದೆ. ಕಾಂತಾರ ಚಿತ್ರದ ಬೆಳಗಿನ ಪ್ರದರ್ಶನಗಳಿಗೆ ತೆಲುಗು ಪ್ರೇಕ್ಷಕರ ಪ್ರತಿಕ್ರಿಯೆ ಸಾಮಾನ್ಯವಾಗಿತ್ತು. ಬೆಳಿಗ್ಗೆ ಮತ್ತು ಮಧ್ಯಾಹ್ನದ ಪ್ರದರ್ಶನಗಳು ಅಲ್ಲಲ್ಲಿ ಸೋಲ್ಡ್ ಔಟ್ ಆಗಿದ್ದವು ಹಾಗೂ ಬಹುತೇಕ ಕಡೆ ಚಿತ್ರ ಸಾಮಾನ್ಯ ಬುಕ್ಕಿಂಗ್ ಕಂಡಿತ್ತು. ಆದರೆ ಬೆಳಗಿನ ಪ್ರದರ್ಶನ ನೋಡಿ ಹೊರಬಂದ ತೆಲುಗು ಸಿನಿಪ್ರೇಕ್ಷಕರು ಮಾಧ್ಯಮಗಳ ಮುಂದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಕಾಂತಾರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

  ಹೀಗಾಗಿಯೇ ತೆಲುಗು ರಾಜ್ಯಗಳಾದ್ಯಂತ ಕಾಂತಾರ ಚಿತ್ರದ ಸಂಜೆ ಮತ್ತು ರಾತ್ರಿಯ ಪ್ರದರ್ಶನಗಳು ಭರ್ತಿಯಾಗಿದ್ದವು. ಹೈದರಾಬಾದ್ ನಗರದ ರಾತ್ರಿ ಮತ್ತು ತಡರಾತ್ರಿಯ ಪ್ರದರ್ಶನಗಳು ಹೌಸ್ ಫುಲ್ ಆಗಿದ್ದವು. ಕಾಂತಾರ ಚಿತ್ರಕ್ಕೆ ಬಿಡುಗಡೆಯ ದಿನ ಸಂಜೆಯ ನಂತರ ಆದ ಬುಕ್ಕಿಂಗ್ ಕಂಡು ಸ್ವತಃ ಟಾಲಿವುಡ್ ಸಿನಿ ಪ್ರೇಕ್ಷಕರೇ ದಂಗಾಗಿ ಹೋದರು. ಹೀಗೆ ಬಿಡುಗಡೆಯ ದಿನ ನಿಧಾನವಾಗಿ ತೆಲುಗು ರಾಜ್ಯಗಳಲ್ಲಿ ಪಿಕ್ ಆಗಿರುವ ಕಾಂತಾರ ತೆಲುಗು ಅವತರಣಿಕೆ ಮೊದಲ ದಿನ ಹೈದರಾಬಾದ್ ನಗರದಲ್ಲಿ ಹಿಂದಿ ವರ್ಷನ್ ಭಾರತದಾದ್ಯಂತ ಮೊದಲ ದಿನ ಗಳಿಸಿದ್ದಕ್ಕಿಂತ ಹೆಚ್ಚು ಹಣವನ್ನು ಸಂಪಾದಿಸಿದೆ.

   ಹಿಂದಿ ವರ್ಷನ್ ಮೊದಲ ದಿನದ ಗಳಿಕೆಗಿಂತ ಹೈದರಾಬಾದ್ ಗಳಿಕೆ ಹೆಚ್ಚು!

  ಹಿಂದಿ ವರ್ಷನ್ ಮೊದಲ ದಿನದ ಗಳಿಕೆಗಿಂತ ಹೈದರಾಬಾದ್ ಗಳಿಕೆ ಹೆಚ್ಚು!

  ಕಾಂತಾರ ಹಿಂದಿ ಅವತರಣಿಕೆ ಶುಕ್ರವಾರ ( ಅಕ್ಟೋಬರ್ 14 ) ತೆರೆ ಕಂಡಿತ್ತು ಹಾಗೂ ತೆಲುಗು ಅವತರಣಿಕೆ ಶನಿವಾರ ( ಅಕ್ಟೋಬರ್ 15 ) ಬಿಡುಗಡೆಗೊಂಡಿತು. ಕಾಂತಾರ ಹಿಂದಿ ಮೊದಲನೇ ದಿನ ದೇಶದಾದ್ಯಂತ 1.27 ಕೋಟಿ ಗಳಿಕೆ ಮಾಡಿತ್ತು. ಇತ್ತ ಕಾಂತಾರ ಶನಿವಾರ ಹೈದರಾಬಾದ್ ನಗರ ಒಂದರಲ್ಲಿಯೇ 1.5 ಕೋಟಿ ಗಳಿಕೆ ಮಾಡಿದೆ. ಹೈದ್ರಾಬಾದ್ ನಗರದ ಮೊದಲ ದಿನದ ಗಳಿಕೆಯಲ್ಲಿ ಕಾಂತಾರ ಹಿಂದಿ ವರ್ಷನ್ ಕಲೆಕ್ಷನ್ ಕೂಡ ಸೇರಿದೆ. ಆದರೆ ಹಿಂದಿ ವರ್ಷನ್ ಪ್ರದರ್ಶನಗಳ ಸಂಖ್ಯೆ ತೀರಾ ಕಡಿಮೆ ಇದ್ದು, ಇದರಲ್ಲಿ ಬಹುತೇಕ ಪಾಲು ತೆಲುಗು ಅವತರಣಿಕೆಯದ್ದೇ ಎಂದೇ ಹೇಳಬಹುದು.

  ಹೈದರಾಬಾದ್ ಮಾತ್ರವಲ್ಲದೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶ

  ಹೈದರಾಬಾದ್ ಮಾತ್ರವಲ್ಲದೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶ

  ಹೈದರಾಬಾದ್ ಮಾತ್ರವಲ್ಲದೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಉಳಿದ ಪ್ರಮುಖ ನಗರಗಳು ಹಾಗೂ ಪಟ್ಟಣಗಳ ಬಹುತೇಕ ಚಿತ್ರಮಂದಿರಗಳಲ್ಲಿ ಕಾಂತಾರ ಮೊದಲ ದಿನ ತುಂಬಿದ ಪ್ರದರ್ಶನವನ್ನು ಕಂಡಿದೆ. ಅದರಲ್ಲಿಯೂ ರಾತ್ರಿ ಪ್ರದರ್ಶನಗಳಿಗೆ ಜನಸಾಗರ ಹರಿದು ಬಂದಿದ್ದು 11 ಗಂಟೆಯ ನಂತರವೂ ಹಲವೆಡೆ ಹೆಚ್ಚುವರಿ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು.

   ಆರ್‌ಟಿಸಿ ಎಕ್ಸ್ ರಸ್ತೆಯಲ್ಲಿ ಕಾಂತಾರ ಅಬ್ಬರ

  ಆರ್‌ಟಿಸಿ ಎಕ್ಸ್ ರಸ್ತೆಯಲ್ಲಿ ಕಾಂತಾರ ಅಬ್ಬರ

  ಶನಿವಾರ ಹೈದರಾಬಾದ್ ನಗರದ ಆರ್ ಟಿ ಸಿ ಎಕ್ಸ್ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ಚಿತ್ರಗಳ ಪೈಕಿ ರಾತ್ರಿಯ ಪ್ರದರ್ಶನದಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡ ಏಕೈಕ ಚಿತ್ರ ಕಾಂತಾರ. ಇನ್ನುಳಿದಂತೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಪ್ರದರ್ಶನಗಳಲ್ಲಿಯೂ ಕಾಂತಾರ ಇತರೆ ಚಿತ್ರಗಳಿಗಿಂತ ಹೆಚ್ಚು ಗಳಿಕೆ ಕಂಡಿದೆ.

   ಶನಿವಾರ ಆರ್‌ಟಿಸಿ ಎಕ್ಸ್ ರಸ್ತೆಯ ಚಿತ್ರಮಂದಿರಗಳಲ್ಲಿ ವಿವಿಧ ಚಿತ್ರಗಳು ಮಾಡಿದ ಕಲೆಕ್ಷನ್

  ಶನಿವಾರ ಆರ್‌ಟಿಸಿ ಎಕ್ಸ್ ರಸ್ತೆಯ ಚಿತ್ರಮಂದಿರಗಳಲ್ಲಿ ವಿವಿಧ ಚಿತ್ರಗಳು ಮಾಡಿದ ಕಲೆಕ್ಷನ್

  15-10-2022ರ ಶನಿವಾರ

  ಸಂಜೆ ಪ್ರದರ್ಶನ:

  ಸುದರ್ಶನ್ 35MM ಚಿತ್ರಮಂದಿರ: ಗಾಡ್‌ಫಾದರ್ - 30945 ರೂಪಾಯಿಗಳು

  ದೇವಿ 70 MM: ನಾ ವೆಂಟ ಪಡುತುನ್ನ ಚಿನ್ನಾಡೆವಡಮ್ಮ - 3385 ರೂಪಾಯಿಗಳು

  ಸಂಧ್ಯಾ 70 MM: ಕಾಂತಾರ - 142800 ರೂಪಾಯಿಗಳು

  ಸಂಧ್ಯಾ 35 MM: ಬಾಯ್‌ಫ್ರೆಂಡ್ ಫಾರ್ ಹೈಯರ್ - 7815 ರೂಪಾಯಿಗಳು

  ಶಾಂತ್ 70 MM: ಕ್ರೇಜಿ ಫೆಲೋ - 4515 ರೂಪಾಯಿಗಳು

  ಸಪ್ತಗಿರಿ 70 MM: ರಾರಾಜು - 5390 ರೂಪಾಯಿಗಳು

  ರಾತ್ರಿ ಪ್ರದರ್ಶನ:

  ಸುದರ್ಶನ್ 35MM ಚಿತ್ರಮಂದಿರ: ಗಾಡ್‌ಫಾದರ್ - 43015 ರೂಪಾಯಿಗಳು

  ದೇವಿ 70 MM: ರೆಬೆಲ್ ( ಮರು ಬಿಡುಗಡೆ ) - 118910 ರೂಪಾಯಿಗಳು

  ಸಂಧ್ಯಾ 70 MM: ಕಾಂತಾರ - ಹೌಸ್ ಫುಲ್

  ಸಂಧ್ಯಾ 35 MM: ರೆಬೆಲ್ ( ಮರು ಬಿಡುಗಡೆ ) - 3600 ರೂಪಾಯಿಗಳು

  ಶಾಂತ್ 70 MM: ಕ್ರೇಜಿ ಫೆಲೋ - 2955 ರೂಪಾಯಿಗಳು

  ಸಪ್ತಗಿರಿ 70 MM: ರಾರಾಜು - 2620 ರೂಪಾಯಿಗಳು

  English summary
  Kantara Telugu Box Office: Hyderabad City Day 1 Gross crossed 1.5 crores. Take a look
  Sunday, October 16, 2022, 11:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X