twitter
    For Quick Alerts
    ALLOW NOTIFICATIONS  
    For Daily Alerts

    ಹೈದರಾಬಾದ್‌ನಲ್ಲಿ 'ಕಾಂತಾರ'ಕ್ಕಾಗಿ ಕೇವಲ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗು ಚಿತ್ರ ಎತ್ತಂಗಡಿ!

    |
    Kantara Telugu got one more extra theatre in RTC X road at Hyderabad on Day 2

    ಮೊದಲಿಗೆ ಕನ್ನಡದಲ್ಲಿ ಬಿಡುಗಡೆಗೊಂಡು ಬೃಹತ್ ಯಶಸ್ಸು ಸಾಧಿಸಿದ್ದ ಕಾಂತಾರ ಇದೀಗ ತೆಲುಗು ಭಾಷೆಗೂ ಡಬ್ ಆಗಿದೆ. ಶನಿವಾರ ( ಅಕ್ಟೋಬರ್ 15 ) ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಕಾಂತಾರ ತೆಲುಗು ಅವತರಣಿಕೆ ದೊಡ್ಡ ಮಟ್ಟದಲ್ಲಿಯೇ ಬಿಡುಗಡೆಗೊಂಡಿತು.

    ಬಿಡುಗಡೆಯ ದಿನದ ಬೆಳಗಿನ ಪ್ರದರ್ಶನದ ಟಿಕೆಟ್ ಬುಕಿಂಗ್ ಸಾಮಾನ್ಯವಾಗಿತ್ತು. ಆದರೆ ಬೆಳಗಿನ ಪ್ರದರ್ಶನವನ್ನು ವೀಕ್ಷಿಸಿ ಹೊರಬಂದ ಸಿನಿಪ್ರೇಕ್ಷಕರು ಕಾಂತಾರ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದರು ಹಾಗೂ ಬಾಯಿಂದ ಬಾಯಿಗೆ ಕಾಂತಾರ ತೆಲುಗು ಅವತರಣಿಕೆಯ ಪ್ರಚಾರ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಪರಿಣಾಮ ಬಿಡುಗಡೆಯ ದಿನದ ಸಂಜೆ ಮತ್ತು ರಾತ್ರಿ ಪ್ರದರ್ಶನದ ಟಿಕೆಟ್‌ಗಳು ವೇಗವಾಗಿ ಮಾರಾಟವಾದವು.

    ಹೀಗೆ ಬಿಡುಗಡೆಯ ದಿನದ ಸಂಜೆ ಪ್ರದರ್ಶನದಿಂದ ಅಬ್ಬರಿಸಲು ಆರಂಭಿಸಿದ ಕಾಂತಾರ ಎರಡನೇ ದಿನವೂ ಸಹ ತೆಲುಗು ರಾಜ್ಯಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶೇಷವೆಂದರೆ ಹೈದರಾಬಾದ್ ನಗರದ ಆರ್ ಟಿ ಸಿ ಎಕ್ಸ್ ರಸ್ತೆಯಲ್ಲಿರುವ 2 ಚಿತ್ರಮಂದಿರಗಳಲ್ಲಿ ಕಾಂತಾರ ಚಿತ್ರದ ಪ್ರದರ್ಶನ ನಡೆದಿದೆ.

    ಹೌದು, ಈ ರಸ್ತೆಯಲ್ಲಿನ ಸಂಧ್ಯಾ 70 MM ಚಿತ್ರಮಂದಿರದಲ್ಲಿ ಮಾತ್ರ ಕಾಂತಾರ ಬಿಡುಗಡೆಯ ದಿನ ಪ್ರದರ್ಶನಗೊಂಡಿತ್ತು. ಆದರೆ ಎರಡನೇ ದಿನ ಶಾಂತಿ 70 MM ಚಿತ್ರಮಂದಿರದಲ್ಲಿಯೂ ಸಹ ಕಾಂತಾರ ತೆಲುಗು ಅವತರಣಿಕೆಯ ಪ್ರದರ್ಶನವನ್ನು ಮಾಡಲಾಗಿದೆ. ಈ ಮೂಲಕ ಕಾಂತಾರ ಹೈದ್ರಾಬಾದ್ ನಗರದ ಆರ್ ಟಿಸಿ ಎಕ್ಸ್ ರಸ್ತೆಯಲ್ಲಿರುವ 2 ಮುಖ್ಯ ಚಿತ್ರಮಂದಿರಗಳಲ್ಲಿ ಸದ್ಯ ಪ್ರದರ್ಶನವನ್ನು ಕಾಣುತ್ತಿದೆ.

    ಕ್ರೇಜಿ ಫೆಲೋ ಬದಲು ಕಾಂತಾರ

    ಕ್ರೇಜಿ ಫೆಲೋ ಬದಲು ಕಾಂತಾರ

    ಇನ್ನು ಕಾಂತಾರ ಎರಡನೇ ದಿನ ಬಿಡುಗಡೆಗೊಂಡಿರುವ ಈ ಶಾಂತಿ 70 MM ಚಿತ್ರಮಂದಿರದಲ್ಲಿ ಕಳೆದ ಶುಕ್ರವಾರವಷ್ಟೇ ( ಅಕ್ಟೋಬರ್ 14 ) ಕ್ರೇಜಿ ಫೆಲೊ ಎಂಬ ತೆಲುಗು ಚಿತ್ರ ಬಿಡುಗಡೆಗೊಂಡಿತ್ತು. ಶುಕ್ರವಾರ ಹಾಗೂ ಶನಿವಾರದಂದು ಶಾಂತಿ ಚಿತ್ರಮಂದಿರದಲ್ಲಿ ಕಳಪೆ ಪ್ರದರ್ಶನ ಕಂಡ ಕ್ರೇಜಿ ಫೆಲೊ ಚಿತ್ರವನ್ನು ಮೂರನೇ ದಿನದಿಂದ ಎತ್ತಂಗಡಿ ಮಾಡಲಾಗಿದ್ದು, ಆ ಜಾಗಕ್ಕೆ ಕಾಂತಾರ ಬಂದಿದೆ.

    ಕಾಂತಾರ ಎರಡನೇ ದಿನ ಹೈದರಾಬಾದ್ ಆರ್ ಟಿ ಸಿ ರಸ್ತೆ ಚಿತ್ರಮಂದಿರಗಳಲ್ಲಿ ಗಳಿಸಿದ್ದೆಷ್ಟು?

    ಕಾಂತಾರ ಎರಡನೇ ದಿನ ಹೈದರಾಬಾದ್ ಆರ್ ಟಿ ಸಿ ರಸ್ತೆ ಚಿತ್ರಮಂದಿರಗಳಲ್ಲಿ ಗಳಿಸಿದ್ದೆಷ್ಟು?

    ಇನ್ನು ಭಾನುವಾರದಿಂದ ( ಅಕ್ಟೋಬರ್ 16 ) ಕ್ರೇಜಿ ಫೆಲೊ ಬದಲಾಗಿ ಕಾಂತಾರ ಚಿತ್ರವನ್ನು ಶಾಂತಿ 70 MM ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗಿದ್ದು, ಒಂದೇ ರಸ್ತೆಯ ಒಟ್ಟು 2 ಪ್ರಮುಖ ಚಿತ್ರಮಂದಿರಗಳಲ್ಲಿ ಕಾಂತಾರ ಪ್ರದರ್ಶನವಾಗುತ್ತಿದೆ. ಹೀಗೆ ಭಾನುವಾರದಂದು ( ಅಕ್ಟೋಬರ್ 16 ) ಕಾಂತಾರ ಈ ಎರಡೂ ಚಿತ್ರಮಂದಿರಗಳಲ್ಲಿಯೂ ಯಾವ ರೀತಿಯ ಪ್ರದರ್ಶನ ಕಂಡಿತು ಎಂಬುದರ ಕುರಿತ ವಿವರ ಕೆಳಕಂಡಂತಿದೆ.

    ಸಂಧ್ಯಾ 70 MM:

    ಬೆಳಗ್ಗೆ ಪ್ರದರ್ಶನ: 75570 ರೂಪಾಯಿಗಳು

    ಮ್ಯಾಟಿನಿ: ಹೌಸ್ ಫುಲ್

    ಸಂಜೆ ಪ್ರದರ್ಶನ: ಹೌಸ್ ಫುಲ್

    ರಾತ್ರಿ ಪ್ರದರ್ಶನ: ಹೌಸ್ ಫುಲ್


    ಶಾಂತಿ 70 MM:

    ಬೆಳಗ್ಗೆ ಪ್ರದರ್ಶನ: 11075 ರೂಪಾಯಿಗಳು

    ಮ್ಯಾಟಿನಿ: 29025 ರೂಪಾಯಿಗಳು

    ಸಂಜೆ ಪ್ರದರ್ಶನ: 102395 ರೂಪಾಯಿಗಳು

    ರಾತ್ರಿ ಪ್ರದರ್ಶನ: 98875 ರೂಪಾಯಿಗಳು

    ಕೆಜಿಎಫ್ 1 ದಾಖಲೆ ಮುರಿಯುವ ಸಾಧ್ಯತೆ

    ಕೆಜಿಎಫ್ 1 ದಾಖಲೆ ಮುರಿಯುವ ಸಾಧ್ಯತೆ

    ಇನ್ನು ಕಾಂತಾರ ಭಾರತದಾದ್ಯಂತ ಅಬ್ಬರಿಸುತ್ತಿರುವ ರೀತಿಯನ್ನು ಗಮನಿಸಿದರೆ ಯಶ್ ಅಭಿನಯದ ಕೆಜಿಎಫ್ 1 ಚಿತ್ರ ನಿರ್ಮಿಸಿರುವ 250 ಕೋಟಿ ಕಲೆಕ್ಷನ್ ದಾಖಲೆಯನ್ನು ಮುರಿಯುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ. ಚಿತ್ರ ಈಗಾಗಲೇ ನೂರು ಕೋಟಿ ಕ್ಲಬ್ ಸೇರಿದ್ದು, ಸದ್ಯ ಪ್ಯಾನ್ ಇಂಡಿಯಾ ಬಿಡುಗಡೆಯಾಗಿರುವುದರಿಂದ ಕಲೆಕ್ಷನ್ ವೇಗ ಮತ್ತಷ್ಟು ಹೆಚ್ಚಲಿದೆ ಹಾಗೂ ಚಿತ್ರ ಇನ್ನೂರು ಕೋಟಿ ಕ್ಲಬ್ ಸೇರಲಿದೆ.

    English summary
    Kantara Telugu got one more extra theatre in RTC X road at Hyderabad on Day 2
    Monday, October 17, 2022, 12:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X