For Quick Alerts
  ALLOW NOTIFICATIONS  
  For Daily Alerts

  ಬಾಲನಟಿಯನ್ನು ನಾಯಕಿಯಾಗಿ ಡೇಟ್ಸ್ ಕೇಳಿದ್ದ ಅಲ್ಲು ಅರ್ಜುನ್: ಆಕೆಯ ಉತ್ತರ ಕೇಳಿ ಶಾಕ್!

  |

  'ಗಂಗೋತ್ರಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ಈಗ ಸ್ಟೈಲಿಶ್ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಮೊದಲ ಚಿತ್ರದಲ್ಲಿ ಹೈಸ್ಕೂಲ್ ಹುಡುಗನ ಪಾತ್ರದಲ್ಲಿ ನಟಿಸಿದ್ದ ಬನ್ನಿ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಕೆ. ರಾಘವೇಂದ್ರ ರಾವ್ ನಿರ್ದೇಶನದ 'ಗಂಗೋತ್ರಿ' ಚಿತ್ರದಲ್ಲಿ ಬಾಲ ನಟಿಯಾಗಿ ಕಾವ್ಯಾ ಕಲ್ಯಾಣ್‌ ರಾಮ್ ನಟಿಸಿದ್ದರು. ಆ ಚಿಕ್ಕ ಹುಡುಗಿ ಈಗ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದೇ ವೇಳೆ ಸಂದರ್ಶನಲ್ಲಿ 'ಗಂಗೋತ್ರಿ' ಸಿನಿಮಾ ಚಿತ್ರೀಕರಣದ ಇಂಟ್ರೆಸ್ಟಿಂಗ್ ವಿಚಾರಗಳನ್ನು ಕಾವ್ಯಾ ಹಂಚಿಕೊಂಡಿದ್ದಾರೆ.

  ಮೊದಲ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಅಭಿನಯ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ಆದರೆ ಆತನ ಲುಕ್ಸ್ ನೋಡಿ ಹೀರೊ ಮೆಟೀರಿಯಲ್ ಅಲ್ಲ ಅಂತಲೇ ಕೆಲವರು ಮಾತನಾಡಿಕೊಂಡಿದ್ದರು. 'ಗಂಗೋತ್ರಿ' ಚಿತ್ರದ ಸಿಂಹಾದ್ರಿಗೂ ಇಂದಿನ ಸ್ಟೈಲಿಶ್‌ ಸ್ಟಾರ್‌ಗೂ ಅಜಗಜಾಂತರ ವ್ಯತ್ಯಾಸ ಇದೆ. ಅಂದು ಆಡಿಕೊಂಡವರೇ ಇಂದು ಐಕಾನ್ ಸ್ಟಾರ್ ಎಂದು ಮೆರೆಸುತ್ತಿದ್ದಾರೆ. ಸದ್ಯ 'ಪುಷ್ಪ'ರಾಜ್ ಆಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಕ್ಸಸ್ ಕಂಡ ಬನ್ನಿ ಸೆಕೆಂಡ್ ಪಾರ್ಟ್‌ನಲ್ಲಿ ನಟಿಸ್ತಿದ್ದಾರೆ.

  ಜಾಹೀರಾತಿನಲ್ಲಿ ನಟಿಸಲು ಅಲ್ಲು ಅರ್ಜುನ್ ಪಡೆವ ಸಂಭಾವನೆ ಎಷ್ಟು ಗೊತ್ತೆ?ಜಾಹೀರಾತಿನಲ್ಲಿ ನಟಿಸಲು ಅಲ್ಲು ಅರ್ಜುನ್ ಪಡೆವ ಸಂಭಾವನೆ ಎಷ್ಟು ಗೊತ್ತೆ?

  'ಗಂಗೋತ್ರಿ' ಚಿತ್ರದಲ್ಲಿ ಬಾಲ ನಟಿಯಾಗಿ ನಟಿಸಿದ್ದ ಕಾವ್ಯಾ ಕಲ್ಯಾಣ್‌ ರಾಮ್ ಸ್ಟೈಲಿಶ್ ಸ್ಟಾರ್ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಹಾಲು ಗಲ್ಲದ ಪುಟಾಣಿ ಕಾವ್ಯಾ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ್ದರು. 'ಗಂಗೋತ್ರಿ' ಚಿತ್ರದ ವೇಳೆ ಆಕೆಗೆ ಐದಾರು ವರ್ಷ ವಯಸ್ಸು. ಚಿತ್ರೀಕರಣದ ವೇಳೆ "ನೀನು ದೊಡ್ಡವಳಾದ ಮೇಲೆ ನನ್ನ ಜೊತೆ ಹೀರೋಯಿನ್ ಆಗಿ ನಟಿಸ್ತೀಯಾ" ಎಂದು ಅಲ್ಲು ಅರ್ಜುನ್ ತಮಾಷೆಯಾಗಿ ಕೇಳಿದ್ದರಂತೆ. ಸಿಕ್ಕಾಪಟ್ಟೆ ಚಾಲಾಕಿಯಾಗಿದ್ದ ಕಾವ್ಯಾ "ನಾನು ಹೀರೊಯಿನ್ ಆಗುವ ವೇಳೆಗೆ ನಿಮಗೆ ವಯಸ್ಸಾಗಿ ಮುದುಕ ಆಗಿಬಿಟ್ಟಿರುತ್ತೀರಾ" ಎಂದು ಚಮಕ್ ಕೊಟ್ಟಿದ್ದಳಂತೆ. ಆಕೆಯ ಮಾತು ಕೇಳಿ ಸೆಟ್‌ನಲ್ಲಿ ಎಲ್ಲರೂ ಗೊಳ್ಳೆಂದು ನಕ್ಕಿದ್ದರಂತೆ. ಬನ್ನಿ ಮಾತ್ರವಲ್ಲ ಸಾಕಷ್ಟು ನಟರು ಕಾವ್ಯಾ ಚಿಕ್ಕವಳಿದ್ದಾಗ ಇದೇ ಪ್ರಶ್ನೆ ಕೇಳುತ್ತಿದ್ದರಂತೆ.

  ಅಲ್ಲು ಅರ್ಜುನ್ ಅಂದು ಕೇಳಿದ ಪ್ರಶ್ನೆಯನ್ನು ಈಗ ಕಾವ್ಯಾ ಮುಂದಿಟ್ಟರೆ ಗ್ಯಾರೆಂಟಿ ಒಪ್ಪಿಕೊಳ್ಳುತ್ತಾರೆ. ಆದರೆ ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಈಗ ಆಕೆಗೆ ಅದು ಅಂತಹ ಅವಕಾಶ ಸಿಗುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಕಾವ್ಯಾ ಬಾಲನಟಿಯಾಗಿ ಸಕ್ಸಸ್ ಕಂಡಿದ್ದರೂ, ನಾಯಕಿಯಾಗಿ ಈಗ ಚಿತ್ರರಂಗಕ್ಕೆ ಬರ್ತಿದ್ದಾರೆ. ಈ ಹಿಂದೆ ಕೆ. ರಾಘವೇಂದ್ರ ರಾವ್ ಸಾರಥ್ಯದ 'ಪೆಳ್ಳಿಸಂದಡಿ' ಚಿತ್ರದಲ್ಲಿ ಈಕೆ ನಟಿಸಬೇಕಿತ್ತಂತೆ. ಆದರೆ ಆ ಸುವರ್ಣಾವಕಾಶ ಕನ್ನಡದ ನಟಿ ಶ್ರೀಲೀಲಾ ಪಾಲಾಗಿತ್ತು.

  Kavya kalyan ram reveals Funny Moments With Allu Arjun During Gangotri Movie Shooting.

  ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೋಟೊಗಳ ಮೂಲಕ ಕಾವ್ಯಾ ಸದ್ದು ಮಾಡುತ್ತಿದ್ದಾರೆ. ಸದ್ಯ 'ಮಸೂದ' ಅನ್ನುವ ಸಿನಿಮಾ ಮೂಲಕ ಕಾವ್ಯಾ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ತಿರುವೀರ್, ಸಂಗೀತ ಕೂಡ ಚಿತ್ರದ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ. ಸಾಯಿಕಿರಣ್ ನಿರ್ದೇಶನದ ಈ ಸಿನಿಮಾ ಟೀಸರ್ ರಿಲೀಸ್ ಆಗಿದೆ.

  English summary
  Kavya kalyan ram reveals Funny Moments With Allu Arjun During Gangotri Movie Shooting. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X