For Quick Alerts
  ALLOW NOTIFICATIONS  
  For Daily Alerts

  ಸುದೀಪ್ 'ಈಗ' ರಾಜಮೌಳಿ ಬಗ್ಗೆ ಹೇಳುತ್ತಿರುವುದೇನು?

  |
  <ul id="pagination-digg"><li class="next"><a href="/news/ss-rajamouli-kichcha-sudeep-telugu-movie-eega-066622.html">Next »</a></li></ul>

  ಕಿಚ್ಚ ಸುದೀಪ್ ಈಗ ಕೇವಲ ಕನ್ನಡ ಹಾಗೂ ಬಾಲಿವುಡ್ ಪ್ರೇಕ್ಷಕರು ಮಾತ್ರ ಬಲ್ಲ ನಟರಲ್ಲ. ಅವರೀಗ 'ಸೌತ್ ಇಂಡಿಯಾ ಸೂಪರ್ ಸ್ಟಾರ್' ಆಗಿ ಬದಲಾಗಿದ್ದಾರೆ. ಎಸ್ ಎಸ್ ರಾಜಮೌಳಿಯವರ, ಇದೀಗ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ 'ಈಗ' ಚಿತ್ರದ ಮೂಲಕ ಕನ್ನಡ ನಟ ಸುದೀಪ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುತ್ತಿದ್ದಾರೆ.

  ಕಿಚ್ಚ ಸುದೀಪ್ ಅಭಿಮಾನಿಗಳ ಪಾಲಿಗೆ 'ಈಗ' ಚಿತ್ರವೆಂದರೆ ಸುದೀಪ್ ಮತ್ತು ಸುದೀಪ್. ತೆಲುಗು ಚಿತ್ರರಂಗದವರಿಗೆ 'ಈಗ' ಎಂದರೆ ಅದು ರಾಜಮೌಳಿ ಮಾತ್ರ ಎಂಬಂತಿರುವುದು ಈಗ ಬದಲಾಗಿದೆ. ಈಗವರಿಗೆ ಈಗ ಎಂದರೆ ರಾಜಮೌಳಿ ಮತ್ತು ಸುದೀಪ್ ಎಂಬಂತಾಗಿದೆ. ಅದು ಕಿಚ್ಚನ ಸಾಮರ್ಥ್ಯ ಹಾಗೂ ಪ್ರತಿಭೆಗೆ ಸಂದ ಗೌರವ ಎಂಬುದು ಈಗ ಜಗಜ್ಜಾಹೀರು.

  ಆದರೆ, ಕನ್ನಡ ನಟ ಸುದೀಪ್ ಈ ಬಗ್ಗೆ ಏನು ಹೇಳುತ್ತಾರೆ? ಈ ಕುತೂಹಲ ಎಲ್ಲರಿಗೂ ಅತ್ಯಂತ ಸಹಜ. ಕಾರಣ, ಒಂದು ಚಿತ್ರಕ್ಕೆ ನಿರ್ದೇಶಕನೇ ಸೂತ್ರಧಾರ. ಚಿತ್ರದ ಯಶಸ್ಸು ಅಥವಾ ಸೋಲು ಎರಡಕ್ಕೂ ಕಾರಣ ನಿರ್ದೇಶಕನೇ ಎಂಬುದು ಚಿತ್ರರಂಗದ ಹಲವರ ಅಭಿಪ್ರಾಯ. ಆದರೂ ಕಲಾವಿದರೂ ಕೂಡ ಅಷ್ಟೇ ಮುಖ್ಯ ಎಂಬುದೂ ನಿರ್ವಿವಾದ. ಕಲಾವಿದರಿಲ್ಲದೇ ಚಿತ್ರವೆಲ್ಲಿದೆ? ಹೀಗಾಗಿ ಸುದೀಪ್ ಮಾತೀಗೀಗ ಎಲ್ಲಿಲ್ಲದ ಬೆಲೆ.

  ರಾಜಮೌಳಿ ಚಿತ್ರ 'ಈಗ' ಹಾಗೂ ಅದರ ಯಶಸ್ಸಿನ ಬಗ್ಗೆ ಸುದೀಪ್ " ಯಾರೇನೇ ಅಂದರೂ 'ಈಗ' ಚಿತ್ರ ರಾಜಮೌಳಿಯ ಕನಸಿನ ಕೂಸು. 'ನೊಣ' ಎಂಬ ಪಾತ್ರದ ಕಲ್ಪನೆ ಹುಟ್ಟಿದಲ್ಲಿಂದ ಹಿಡಿದು ಚಿತ್ರ ತೆರೆಗೆ ಬರುವವರೆಗೂ ಅವೆಲ್ಲವೂ ರಾಜಮೌಳಿಯವರದೇ ಸೃಷ್ಟಿ. ನಾವೇನಿದ್ದರೂ ಅವರ ಚಿತ್ರದ ಪಾತ್ರಗಳು ಮಾತ್ರ. 'ಈಗ'ದ ಯಶಸ್ಸಿನ ಸಂಪೂರ್ಣ ಕೀರ್ತಿ ನಿರ್ದೇಶಕ ರಾಜಮೌಳಿಗೇ ಸಲ್ಲಬೇಕು". ಎಂದಿದ್ದಾರೆ.

  ಹೋದಲ್ಲೆಲ್ಲಾ ಈ ಕುರಿತು ಕೇಳಲಾಗಿದ್ದ ಪ್ರಶ್ನೆಗೆ ಸುದೀಪ್ ಬಾಯಿಂದ ಬಂದಿದ್ದು ಇದೊಂದೇ ಉತ್ತರ. ಪ್ರತಿ ಸಂದರ್ಶನಗಳಲ್ಲೂ ಇದನ್ನೇ ಹೇಳುತ್ತಿದ್ದಾರೆ ಕಿಚ್ಚ ಸುದೀಪ್. ನಟ ಸುದೀಪ್ ಈಗ ಚಿತ್ರದ ಖಳನಾಯಕನ ಪಾತ್ರದ ಮೂಲಕ ಇಡೀ ಜಗತ್ತನ್ನೇ ಮೆಚ್ಚಿಸಿದ್ದರೂ ಅದರ ಕ್ರೆಡಿಟ್ಟನ್ನು ಮಾತ್ರ ಸಂಪೂರ್ಣವಾಗಿ ನಿರ್ದೇಶಕರಿಗೆ ಬಿಟ್ಟುಕೊಟ್ಟು ಪ್ರಾಮಾಣಿಕತೆ ಹಾಗೂ ದೊಡ್ಡತನ ಮೆರೆಯುತ್ತಿದ್ದಾರೆ.

  ಈಗ್ಗೆ ಎರಡು ವರ್ಷಗಳ ಹಿಂದಿನ ಮಾತಿದು. ರಾಮ್ ಗೋಪಾಲ್ ವರ್ಮಾರ ಹಿಂದಿಯ 'ರಣ್' ಚಿತ್ರದಲ್ಲಿನ ಸುದೀಪ್ ಅಭಿನಯವನ್ನು ಮೆಚ್ಚಿದ್ದ ರಾಜಮೌಳಿ, ಅಳುಕಿನಿಂದಲೇ ಸುದೀಪ್‌ರನ್ನು ಭೇಟಿ ಮಾಡಿದ್ದಾರೆ. ತಮ್ಮ ಮುಂಬರುವ ಚಿತ್ರದ ಪಾತ್ರವೊಂದರ ಬಗ್ಗೆ ಸುದೀಪ್ ಅವರಲ್ಲಿ ಪ್ರಸ್ತಾಪಿಸಿ "ಮಾಡುವಿರಾ?" ಎಂದು ಕೇಳಿದ್ದಾರೆ. ಹೆಚ್ಚೇನೂ ಯೋಚಿಸದ ಸುದೀಪ್ 'ಓಕೆ' ಎಂದಿದ್ದಾರೆ.

  ಸುದೀಪ್ ತಕ್ಷಣ ಒಪ್ಪಿಕೊಳ್ಳಲು ಕಾರಣ, ಈ ಮೊದಲು ರಾಜಮೌಳಿ ನಿರ್ದೇಶಿಸಿದ್ದ ಎಂಟೂ ಚಿತ್ರಗಳೂ ಸೂಪರ್ ಹಿಟ್ ಆಗಿದ್ದು. ಆ ನಂಬಿಕೆಯಿಂದ ರಾಜಮೌಳಿ ಕಥೆಯನ್ನು ಬಿಡಿಸಿ ಹೇಳಿರದಿದ್ದರೂ ಸುದೀಪ್ ಒಪ್ಪಿದ್ದರು. ಅದೂ ಇಷ್ಟು ದಿನವೂ ನಾಯಕರಾಗಿ ನಟಿಸಿದ್ದ ಸುದೀಪ್ ಆಂಗ್ರಿ ಯಂಗ್ ಮ್ಯಾನ್ ಲುಕ್ ಹೊಂದಿರುವ ಖಳನಾಯಕನ ಪಾತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಮುಂದಿನದೆಲ್ಲಾ ಈಗ ಇತಿಹಾಸ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/ss-rajamouli-kichcha-sudeep-telugu-movie-eega-066622.html">Next »</a></li></ul>
  English summary
  Telugu movie Eega is screening successfully all over the world now. In this time. both Kichcha Sudeep and director SS Rajamouli are telling exchanging the credit of Success to each other. It is the Greatness, attracting the everybody.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X