For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಮತ್ತೆ ಬಾಲಿವುಡ್ ನಲ್ಲಿ ನಟಿಸಿಲ್ಲ ಯಾಕೆ?

  |
  <ul id="pagination-digg"><li class="next"><a href="/news/kichcha-sudeep-talks-ss-rajamouli-telugu-eega-success-067104.html">Next »</a></li></ul>

  ಕಿಚ್ಚ ಸುದೀಪ್ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. ಕನ್ನಡದ ಈ ನಟ ಬಾಲಿವುಡ್ ನಲ್ಲಿ ಕೂಡ ಸಾಕಷ್ಟು ಮೊದಲೇ ಗುರುತಿಸಿಕೊಂಡವರು. ರಾಮಗ ಗೋಪಾಲ್ ನಿರ್ದೇಶನದ ಮೂರ್ನಾಲ್ಕು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸುದೀಪ್, ನಂತರ ಏಕೆ ಬಾಲಿವುಡ್ ಚಿತ್ರಗಳಲ್ಲಿ ನಟಿಸಲಿಲ್ಲ? ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಸುದೀಪ್ ಏನೆಂದಿದ್ದಾರೆ?

  ಕನ್ನಡದಲ್ಲಿ ನಟಿಸುತ್ತಿದ್ದ ಕಿಚ್ಚ ಸುದೀಪ್ ಅವರ ಪ್ರತಿಭೆಯನ್ನು ಕನ್ನಡ ಹೊರತುಪಡಿಸಿ ಮೊದಲು ಗುರುತಿಸಿದ್ದು ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ತಮ್ಮ ನಿರ್ದೇಶನದ ರಣ್, ಫೂಂಕ್ ಹಾಗೂ ರಕ್ತ ಚರಿತ್ರಾ ಗಳಲ್ಲಿ ಸುದೀಪ್ ಅವರಿಗೆ ಅವಕಾಶವಿತ್ತು ಬಾಲಿವುಡ್ ಗುರುತಿಸುವಂತೆ ಮಾಡಿ ಸುದೀಪ್ ಅವರಿಗೆ ಕನ್ನಡವನ್ನು ಮೀರಿದ ಐಡೆಂಟಿಟಿ ಕೊಟ್ಟಿದ್ದರು.

  ನಂತರ, ನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಸುದೀಪ್ ಮತ್ತೆ ಕನ್ನಡದಲ್ಲಿ ಬಿಜಿಯಾದರರು. ಅಷ್ಟರಲ್ಲಿ ತೆಲುಗು ಯಶಸ್ವಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಸುದೀಪ್ ಅವರಿಗೆ ಆಹ್ವಾನವಿತ್ತರು. ಬಹಭಾಷಾ ಚಿತ್ರ ತೆಲುಗಿನ 'ಈಗ' ದಲ್ಲಿ ಖಳನಾಯಕನ (ವಿಲನ್) ಪಾತ್ರ ಮಾಡುವ ಮೂಲಕ ಸುದೀಪ್, ದಕ್ಷಿಣ ಭಾರತದ ಹೊಸ 'ಸೂಪರ್ ಸ್ಟಾರ್' ಆಗಿ ಹೆಸರುಮಾಡಿದ್ದು ಈಹ ಇತಿಹಾಸ.

  ಇಂಥಹ ಸುದೀಪ್ ಅವರಿಗೆ, 'ನೀವೇಕೆ ಬಾಲಿವುಡ್ ಕಡೆ ಸೆಟ್ಲ್ ಆಗಲಿಲ್ಲ?' ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಯ್ತು. ಅದಕ್ಕೆ ಸುದೀಪ್ ನೀಡಿದ ಉತ್ತರದ ಝಲಕ್ ಇಲ್ಲಿದೆ...ನನಗೆ ಬಾಲಿವುಡ್ ನನ್ನದೆಂಬ ಭಾವನೆ ಬರಲೇ ಇಲ್ಲ. ಅಲ್ಲಿ ಭಾವನೆಗಳ ವ್ಯಾಪಾರವೇ ನಡೆಯುತ್ತಿದೆ ಎಂದೇ ಅನಿಸತು. ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿಕೊಂಡು ನನ್ನ ಮನೆಯಾದ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾದೆ.

  ನಂತರ ಅವಕಾಶವೇ ಸಿಗಲಿಲ್ಲ ಎಂದಲ್ಲ. ಆದರೆ, ನನಗೆ ಒಂದೇ ರೀತಿಯ ಪಾತ್ರ ಮಾಡುವುದು ಇಷ್ವವಿರಲಿಲ್ಲ. ಹೀಗಾಗಿ ಅಲ್ಲಿಯೇ ನಟಿಸಿಕೊಂಡಿರಲು ಮನಸ್ಸಾಗಲಿಲ್ಲ. ನನ್ನ ವೃತ್ತಿಯ ಕ್ಷೇತ್ರ ಏನಿದ್ದರೂ ದಕ್ಷಿಣ ಭಾರತವೇ ಎನ್ನುವುದು ಮನದಟ್ಟಾಗಿತ್ತು. ಅಷ್ಟರಲ್ಲಿ ರಾಜಮೌಳಿಯವರ ತೆಲುಗಿನ 'ಈಗ' ಚಿತ್ರದ ಆಫರ್ ಬಂತು. ಕೇವಲ ತೆಲುಗಿನಲ್ಲಲ್ಲದೇ ತಮಿಳಿನಲ್ಲಿ 'ನಾನ್ ಈ' ಹಾಗೂ ಮಲಯಾಳಂನಲ್ಲಿ 'ಈಚ' ಹೆಸರಿನಲ್ಲಿ ಇದು ತೆರೆಕಂಡಿತು. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/kichcha-sudeep-talks-ss-rajamouli-telugu-eega-success-067104.html">Next »</a></li></ul>
  English summary
  Kichcha Sudeep told that even he acted in Bollywood movies, he didn't fee| that is his nest. He never thinks to settle there, as he felt the South India is his home. After the Grand Success of Telugu movie Eega, Sudeep became new South India Star and getting lots of chances. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X