For Quick Alerts
  ALLOW NOTIFICATIONS  
  For Daily Alerts

  ಸುದೀಪ್-ರಾಜಮೌಳಿ 'ಈಗ' ಬಾಕ್ಸ್ ಆಫೀಸ್ ವರದಿ

  By * ಶ್ರೀರಾಮ್ ಭಟ್
  |

  ಎಸ್ ಎಸ್ ರಾಜಮೌಳಿ ನಿರ್ದೇಶನ ಹಾಗೂ ಕನ್ನಡ ನಟ ಕಿಚ್ಚ ಸುದೀಪ್ ಅಭಿನಯದ ತೆಲುಗು ಚಿತ್ರ 'ಈಗ', ಬಾಕ್ಸ್ ಆಫೀಸಿನಲ್ಲಿ ಹೊಸ ದಾಖಲೆ ನಿರ್ಮಿಸಿ ಭಾರೀ ಯಶಸ್ಸಿನೊಂದಿಗೆ ಜಗತ್ತಿನಾದ್ಯಂತ ಮುನ್ನುಗ್ಗುತ್ತಿದೆ. ತೆಲುಗು ಈಗ ಚಿತ್ರದ ತಮಿಳು ಹಾಗೂ ಮಲಯಾಳಂ ಭಾಷೆಗಳೂ ಆವೃತ್ತಿಗಳೂ ಕೂಡ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿವೆ.

  ಈಗ ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿ ಭಾರೀ ಗಳಿಕೆಯನ್ನು ದಾಖಲಿಸಿದೆ. ಈ ಚಿತ್ರದ ಮೊದಲ ವಾರದ ಒಟ್ಟೂ ಗಳಿಕೆ ರು. 56 ಕೋಟಿಯಾಗಿದೆ. ಆಂಧ್ರ ಪ್ರದೇಶದಲ್ಲಿ ರು. 27 ಕೋಟಿ, ತಮಿಳುನಾಡು ರು. 12 ಕೋಟಿ, ಕರ್ನಾಟಕ ರು. 4 ಕೋಟಿ, ಕೇರಳ ರು. 3 ಕೋಟಿ ಹಾಗೂ ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿ 10 ಕೋಟಿಗಳಷ್ಟು ಗಳಿಕೆಯನ್ನು ಈ ಚಿತ್ರ ಬಾಚಿಕೊಂಡಿದೆ.

  ಕರ್ನಾಕದಲ್ಲಿ ಬಿಡುಗಡೆಯಾದ ಮೊದಲ ವಾರದಲ್ಲಿ ಒಂದು ಚಿತ್ರ ರು. 4 ಕೋಟಿ ಗಳಿಸಿದ್ದು ಇದೇ ಮೊದಲು. ಈ ಕೀರ್ತಿ ಕನ್ನಡಿಗರಾದ ಸುದೀಪ್ ಹಾಗೂ ರಾಜಮೌಳಿಯವರ ತೆಲುಗು ಚಿತ್ರಕ್ಕೆ ಸೇರುತ್ತದೆ. ಈ ಚಿತ್ರದ ಮೊದಲ ವಾರದ ಕಲೆಕ್ಷನ್ ಇಡೀ ಚಿತ್ರರಂಗಕ್ಕೆ ಅಚ್ಚರಿ ಹುಟ್ಟಿಸಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಈಗ ಚಿತ್ರ 'ಹೌಸ್ ಫುಲ್' ಪ್ರದರ್ಶನ ಕಾಣುತ್ತಿದೆ.

  ಕನ್ನಡ ನಟ ಕಿಚ್ಚ ಸುದೀಪ್ ಈಗ ಕನ್ನಡ ಹಾಗೂ ಬಾಲಿವುಡ್ಡಿನಲ್ಲಿ ಮಾತ್ರ ಗುರುತಿಸಿಕೊಂಡಿರುವ ನಟನಲ್ಲ. ಅವರೀಗ 'ಸೌತ್ ಇಂಡಿಯಾ ಸೂಪರ್ ಸ್ಟಾರ್'. ಕರ್ನಾಟಕದ ರಾಯಚೂರಿನವರಾದ ನಿರ್ದೇಶಕ ಎಸ್ ಎಸ್ ರಾಜಮೌಳಿಯವರೂ ಕೂಡ ಈಗ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ. ನಟ ಕಿಚ್ಚನ ಅಭಿನಯ ಸಾಮರ್ಥ್ಯಕ್ಕೆ ಜಗತ್ತೇ ಬೆರಗಾಗಿ ತಲೆದೂಗುತ್ತಿದೆ.

  ಕಿಚ್ಚ ಸುದೀಪ್ ಅಭಿಮಾನಿಗಳ ಪಾಲಿಗಂತೂ 'ಈಗ' ಚಿತ್ರ ದೊಡ್ಡ ಹಬ್ಬವನ್ನೇ ಸೃಷ್ಟಿಸಿದೆ. ಭಾರತದ ಘಟಾನುಘಟಿ ಸ್ಟಾರ್ ಗಳೆಲ್ಲಾ ದೇಶ-ಭಾಷೆಯ ಬೇಧ-ಭಾವ ಮರೆತು ಮುಕ್ತವಾಗಿ ಸುದೀಪ್ ಅಭಿನಯವನ್ನು ಹೊಗಳಿದ್ದಾರೆ. ಕನ್ನಡಿಗರಿಗೆ ಈಗ ಚಿತ್ರವೆಂದರೆ ಅದು ಸುದೀಪ್ ಮಾತ್ರ ಎಂಬಂತಿತ್ತು. ತೆಲುಗು ಪ್ರೇಕ್ಷಕರಿಗೆ ಈಗ ಚಿತ್ರವೆಂದರೆ ಅದು ರಾಜಮೌಳಿ ಮಾತ್ರ ಎಂದಾಗಿತ್ತು. ಆದರೆ ಈಗ ಜಗತ್ತಿಗೆ ಬೇರೆಯದೇ ಅಭಿಪ್ರಾಯ ಸೃಷ್ಟಿಯಾಗಿದೆ.

  ಇದೀಗ 'ಈಗ' ಚಿತ್ರವೆಂದರೆ ಎಂದರೆ ಅದು ರಾಜಮೌಳಿ ಮತ್ತು ಸುದೀಪ್ ಎಂಬಂತಾಗಿದೆ. ಅದು ಕಿಚ್ಚನ ಸಾಮರ್ಥ್ಯ ಹಾಗೂ ಪ್ರತಿಭೆ ಎಂಬುದು ಈಗ ಜಗಜ್ಜಾಹೀರು ಮಾಡಿದ್ದಷ್ಟೇ ಅಲ್ಲ, ಎಸ್ ಎಸ್ ರಾಜಮೌಳಿ 'ಸೋಲಿಲ್ಲದ ಸರದಾರ' ಎಂಬುದನ್ನು ನಿರೂಪಿಸಿದೆ. ಮೊದಲ ವಾರದಲ್ಲೇ ಬರೋಬ್ಬರಿ ರು. 56 ಕೋಟಿ ಗಳಿಕೆ ದಾಖಲಿಸಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. (ಒನ್ ಇಂಡಿಯಾ ಕನ್ನಡ)

  English summary
  SS Rajamouli and Kichcha Sudeep combination Telugu movie 'Eega' recorded huge success in all over the world. It has collected Rs 56 Crore in the Box Office at first week. Kichcha Sudeep and Rajamouli are popular in all over the world now. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X