For Quick Alerts
  ALLOW NOTIFICATIONS  
  For Daily Alerts

  ಈಗ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾದ ಕಿಚ್ಚ ಸುದೀಪ್

  |
  <ul id="pagination-digg"><li class="next"><a href="/news/ss-rajamouli-upendra-om-shivarajkumar-kannada-movie-066761.html">Next »</a></li></ul>

  ಕನ್ನಡ ನಟ ಕಿಚ್ಚ ಸುದೀಪ್ ಬೆತ್ತಲೆ ಫೋಸ್ ನೀಡಿದ್ದಾರೆ. ಯಾರೇನೂ ಗಾಬರಿಪಡುವ ಅಗತ್ಯವಿಲ್ಲ. ಭಾರೀ ಹವಾ ಕ್ರಿಯೆಟ್ ಮಾಡಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ರಾಜಮೌಳಿ ನಿರ್ದೇಶನದ ತೆಲುಗು 'ಈಗ' ಚಿತ್ರದಲ್ಲಿ ನಮ್ಮ ಕಿಚ್ಚ ಸುದೀಪ್ ಬೆತ್ತಲೆಯಾಗಿದ್ದಾರೆ. ಈಗ' ಚಿತ್ರದಲ್ಲಿ ಅಗತ್ಯವಿದ್ದ ಒಂದು ಸನ್ನಿವೇಶಕ್ಕೆ ಪಾತ್ರಧಾರಿ ಸುದೀಪ್ ನಿರ್ದೇಶಕರು ಹೇಳಿದಂತೆ ಬೆತ್ತಲಾಗಿದ್ದಾರೆ.

  ಈಗಾಗಲೇ ಚಿತ್ರ ನೋಡಿದವರಿಗೆ ಇದು ಯಾಕೆಂದು ಗೊತ್ತಿದೆ. ನೋಡದಿರುವವರಿಗೆ ಚಿತ್ರ ನೋಡಿದ ಕ್ಷಣ ಸುದೀಪ್ ಬೆತ್ತಲೆಯಾದ ಮರ್ಮ ಗೊತ್ತಾಗಲಿದೆ. ಆದರೆ ಚಿತ್ರ ನೋಡದವರಿಗೆ ಈಗಲೇ ಗೊತ್ತಾಗಬೇಕಿದ್ದರೆ ಮುಂದೆ ಓದಿ... 'ಸುದೀಪ್ ಸ್ಟೀಮ್ ಬಾತ್ ಯಂತ್ರದೊಳಗೆ ಕುಳಿತಿರುವಾಗ ನೊಣ (ಈಗ)ದ ಕಾಟ ಶುರುವಾಗಿರುತ್ತದೆ. ಪಾತ್ರಧಾರಿ ಸುದೀಪ್ ಅವರಿಗೆ ಅಲ್ಲಿ ಭಾರೀ ಪೀಕಲಾಟ ಪ್ರಾರಂಭವಾಗಿರುತ್ತದೆ.

  ಹೇಗೋ ಕಷ್ಟಪಟ್ಟು ಯಂತ್ರದೊಳಗಿಂದ ಹೊರ ಬಂದ ನಂತರ ತಮಗೆ ಕಾಟ ಕೊಡುತ್ತಿರುವ ನೊಣದಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಸುದೀಪ್ ತಮ್ಮ ಟವೆಲ್ ಬಿಚ್ಚುತ್ತಾರೆ. ಆಗ ಬೇರೆ ಇನ್ನೇನಾಗಲು ಸಾಧ್ಯ? ಸುದೀಪ್ ಬೆತ್ತಲಾಗುವ ದೃಶ್ಯವಿದೆ. ವಾಸ್ತವದಲ್ಲಿ ಸುದೀಪ್ ಬೆತ್ತಲಾಗಿರುವುದಿಲ್ಲ. ಆದರೆ ಪ್ರೇಕ್ಷಕರು ಹಾಗೆ ಭಾವಿಸುವಂತೆ ಚಿತ್ರದಲ್ಲಿ ಸನ್ನಿವೇಶವನ್ನು ಸೃಷ್ಟಿಸಲಾಗಿದೆ'.

  ಇದು ಈಗ ಚಿತ್ರದಲ್ಲಿ ಸುದೀಪ್ ಬೆತ್ತಲಾದ ಪರಿ. "ರಾಜಮೌಳಿ ಚಿತ್ರದಲ್ಲಿ ಸನ್ನಿವೇಶಗಳ ಸೃಷ್ಟಿ, ಕಥೆ, ಚಿತ್ರಕಥೆ ಹಾಗೂ ನಿರೂಪಣೆ ಅದೆಷ್ಟು ಬಿಗಿಯಾಗಿದೆ ಎಂದರೆ ಯಾವೊಂದು ಸನ್ನಿವೇಶವೂ ಅನಗತ್ಯ ಎನಿಸುವುದಿಲ್ಲ. ಅಗತ್ಯವಿದ್ದ ಯಾವ ಸನ್ನಿವೇಶವೂ ಮಿಸ್ ಆಗಿಲ್ಲ, ಅನಗತ್ಯವಾಗಿ ಯಾವ ಸನ್ನಿವೇಶವೂ ಸೇರಿಕೊಂಡಿಲ್ಲ" ಎಂಬುದು ಚಿತ್ರ ನೋಡಿದವರ ಸ್ಪಷ್ಟ ಅಭಿಪ್ರಾಯ.

  ಇಷ್ಟನ್ನು ಹೇಳಿದ ಮೇಲೆ ಸುದೀಪ್ ಈಗ ಚಿತ್ರದಲ್ಲಿ ಬೆತ್ತಲಾದ ಬಗ್ಗೆ ಯಾರೂ ಆಕ್ಷೇಪಣೆ ವ್ಯಕ್ತಪಡಿಸಲಾಗದು. ನಿರ್ದೇಶಕ ರಾಜಮೌಳಿಯವರಿಗೆ ಚಿತ್ರಕ್ಕೆ ಕಲಾವಿದರಿಂದ ಏನು ಮಾಡಿಸಬೇಕೆಂಬು ಗೊತ್ತು. ಹಾಗೇ ಆ ಚಿತ್ರದ ಕಲಾವಿದರಾದ ಸುದೀಪ್, ಸಮಂತಾ, ನಾಣಿ ಹಾಗೂ ಮಿಕ್ಕವರಿಗೆ ಚಿತ್ರದಲ್ಲಿರುವ ಪಾತ್ರಕ್ಕೆ ತಾವು ನ್ಯಾಯ ಒದಗಿಸಬೇಕೆಂಬುದೂ ಗೊತ್ತು. ಹೀಗಾಗಿ ಈ ಬೆತ್ತಲೆ ಪ್ರಕರಣ ಯಾವುದೇ ವಿವಾದಕ್ಕೆ ಕಾರಣವಾಗಿಲ್ಲ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/ss-rajamouli-upendra-om-shivarajkumar-kannada-movie-066761.html">Next »</a></li></ul>
  English summary
  Kichcha Sudeep acted in a nude scene at SS Rajamouli's Telugu movie Eega. Because of a required scene, the director Rajamouli created like nude not in fact but by creativity. That looks like Sudeep is in Nude from their creative talent. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X