For Quick Alerts
  ALLOW NOTIFICATIONS  
  For Daily Alerts

  ಈಗ ಬಿಡುಗಡೆ ನಂತರ ಕಿಚ್ಚ ಸುದೀಪ್ ಮಾತುಗಳು

  |
  <ul id="pagination-digg"><li class="next"><a href="/news/kichcha-sudeep-words-success-telugu-eega-ss-rajamouli-066514.html">Next »</a></li></ul>

  ಕಿಚ್ಚ ಸುದೀಪ್ ಈಗ ಆಲ್ ಇಂಡಿಯಾ ಲೆವಲ್ ನಲ್ಲಿ ಪ್ರಕಾಶಿಸುತ್ತಿದ್ದಾರೆ. ಕನ್ನಡದಲ್ಲಿ ಏನೇನೂ ಅಲ್ಲ ಎಂಬಂತಿದ್ದ ಸುದೀಪ್ ಈಗ ಸೌತ್ ಇಂಡಿಯಾ ಸೂಪರ್ ಸ್ಟಾರ್ ಎಂಬಂತಾಗಿದ್ದಾರೆ. ಈಗಾಗಲೇ ಸೂಪರ್ ಸ್ಟಾರ್ ಸ್ಥಾನದಲ್ಲಿ ವಿರಾಜಮಾನವಾಗಿರುವ ಇನ್ನೊಬ್ಬ ಕನ್ನಡಿಗ ರಜನಿಕಾಂತ್, ಸುದೀಪ್ ಅಭಿನಯ ಮೆಚ್ಚಿ ಬೆನ್ನುತಟ್ಟಿದ್ದಾರೆ. ತೆಲುಗು ಪ್ರಿನ್ಸ್ ಮಹೇಶ್ ಬಾಬು ಕೂಡ ಕಿಚ್ಚನ ನಟನೆಗೆ ಶಹಬ್ಬಾಸ್ ಎಂದಿದ್ದಾರೆ.

  ಜಗತ್ತಿನ 1200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಎಸ್ ಎಸ್ ರಾಜಮೌಳಿಯವರ 'ಈಗ' ಚಿತ್ರ, ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿದೆ ಎಂಬ ಮಾತು ಕೇಳಿಬರುತ್ತಿದೆ. ಕಿಚ್ಚ ಸುದೀಪ್ ನಟನೆ ಬಗ್ಗೆಯಂತೂ ಭಾಷೆ-ರಾಜ್ಯಗಳನ್ನು ಮೀರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಸುದೀಪ್ ಯಾಕೆ ಕನ್ನಡದಲ್ಲಿ ಮಿಂಚಿರಲಿಲ್ಲ.

  ಸ್ಯಾಂಡಲ್ ವುಡ್ ನಲ್ಲಿ ದಿನಬೆಳಗಾದರೆ ಕಿರಿಕಿರಿ, ಕಾಲೆಳೆತ. ಅನಾವಶ್ಯಕ ವಾದ-ವಿವಾದಗಳು, ಮನಸ್ತಾಪಗಳು, ಗುಂಪು, ಗಲಾಟೆ, ಆರೋಪ-ಪ್ರತ್ಯಾರೋಪಗಳು. ಎಂತಹ ಅದ್ಭುತ ಪಾತ್ರಗಳನ್ನು ನಿರ್ವಹಿಸಿದರೂ, ಅಪರೂಪವೆನಿಸುವ ಸಿನಿಮಾಗಳನ್ನು ನಿರ್ದೇಶಿಸಿದರೂ ಬೆನ್ನುತಟ್ಟುವವರಿಲ್ಲ, ಗುರುತಿಸುವವರಿಲ್ಲ. ಇವೆಲ್ಲವುಗಳಿಂದ ತೀವ್ರವಾಗಿ ಬೇಸತ್ತಿದ್ದರು ಸುದೀಪ್ ಎಂಬುದು ಅವರು ಈಗಾಡುವ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ.

  ಈಗ ಚಿತ್ರದ ಮೂಲಕ ಸುದೀಪ್ ನಟನೆಗೆ ಸಿಗಬೇಕಾದ ಮಾನ್ಯತೆ ಸಿಗುತ್ತಿದೆ. ತೆಲುಗು ಚಿತ್ರದ ಮೂಲಕ ಹಾಗೂ ಅದರ ತಮಿಳು, ಮಲಯಾಳಂ ಆವೃತ್ತಿ ಮೂಲಕ ಇಡೀ ದಕ್ಷಿಣ ಭಾರತವೇ ಅವರನ್ನೀಗ ಆರಾಧಿಸುತ್ತಿದೆ. ಇನ್ನೇನು ಸದ್ಯದಲ್ಲೇ ಹಿಂದಿಯಲ್ಲೂ ಸುದೀಪ್ ಬಿರುಗಾಳಿ ಎಬ್ಬಿಸಲಿದ್ದಾರೆ. ಸುದೀಪ್ ಅವರಂತ ಪ್ರತಿಭಾನ್ವಿತ ನಟನಿಗೆ ಕನ್ನಡದಲ್ಲಿ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಎಂಬುದೀಗ ಜಗಜ್ಜಾಹೀರಾಗಿದೆ.

  ಕನ್ನಡ ಚಿತ್ರರಂಗದ ಮೇಲೆ ಸುದೀಪ್ ಬಹಳಷ್ಟು ಪ್ರೀತಿಯಿಟ್ಟುಕೊಂಡಿದ್ದರು. ಇಲ್ಲೇ ನಟಿಸಿ, ಇಲ್ಲೇ ನಿರ್ದೇಶಿಸಿ ಇಲ್ಲಿಯ ಮೂಲಕವೇ ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ತೆಲುಗು ಚಿತ್ರದ ಮೂಲಕ ಸುದೀಪ್ ಈಗ ಆಕಾಶದೆತ್ತರಕ್ಕೆ ಏರಿದ್ದಾರೆ. ಇಲ್ಲಿ ಪ್ರತಿಭೆ ಗುರುತಿಸುವವರ ಸಂಖ್ಯೆ ಕಡಿಮೆ ಎಂಬುದು ಸುದೀಪ್ ಅವರಿಗೆ ಮನವರಿಕೆಯಾಗಿದೆ.

  ಆದರೆ 'ಈಗ'ದಲ್ಲಿ ಮಾಡಿರುವ ನಟನೆ ಸುದೀಪ್ ಅವರಿಗೆ ಹೊಸದಲ್ಲ. ಸುದೀಪ್ ಈವೆರಗೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಈ ರೀತಿ ನಟಿಸಿದ್ದಾರೆ. ಆದರೆ ಅವೆಲ್ಲಾ ಒಟ್ಟಿಗೆ ಬಂದಿರಲಿಲ್ಲ ಅಷ್ಟೇ. ಈಗ ಚಿತ್ರದಲ್ಲಿ ಅದು ಒಟ್ಟಾಗಿ ಬಂದಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸುದೀಪ್, "ನಾಯಕಿಯನ್ನು ಓರೆಗಣ್ಣಿನಿಂದ ನೋಡುವ ಶೈಲಿಯನ್ನು ನಾನು ನನ್ನ ಮೂರನೇ ಚಿತ್ರ 'ವಾಲಿ'ಯಲ್ಲೇ ಮಾಡಿದ್ದೆ. ಆದರೆ ಆಗ ಯಾರೂ ಗುರುತಿಸಲಿಲ್ಲ" ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/kichcha-sudeep-words-success-telugu-eega-ss-rajamouli-066514.html">Next »</a></li></ul>
  English summary
  After the Grand opening and success of Kannada actor Kichcha Sudeep's screening Telugu movie 'Eega', Sudeep told his Internal Words. Now, Sudeep's Popularity is beyond the State and he is Super Star in All India Level. His present words are here to read. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X