Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಆಚಾರ್ಯ' ಸಿನಿಮಾದಿಂದಾದ ನಷ್ಟ ಭರಿಸಲು ಆಸ್ತಿ ಮಾರಲು ಮುಂದಾದ ನಿರ್ದೇಶಕ
ಸಿನಿಮಾ ರಂಗವೇ ಹೀಗೆ, ಒಂದು ಸಿನಿಮಾದಿಂದ ಸಾಮಾನ್ಯನು ರಾಜನಾಗಿಬಿಡುತ್ತಾನೆ ಅಂತೆಯೇ ರಾಜನಾಗಿದ್ದವನೂ ರಸ್ತೆಗೆ ಬಂದು ಬಿಡುತ್ತಾನೆ.
ಅದರಲ್ಲೂ ಸ್ಟಾರ್ ನಟರನ್ನು ಹಾಕಿಕೊಂಡು ಮಾಡಿದ ಭಾರಿ ಬಜೆಟ್ ಸಿನಿಮಾ ಫ್ಲಾಪ್ ಆದರೆ ಮುಗಿದಂತೆಯೇ ಕತೆ. ಈಗ ತೆಲುಗಿನ 'ಆಚಾರ್ಯ' ಸಿನಿಮಾಕ್ಕೆ ಆಗಿರುವುದು ಹೀಗೆಯೇ. ಚಿರಂಜೀವಿ, ರಾಮ್ ಚರಣ್ ತೇಜ, ಪೂಜಾ ಹೆಗ್ಡೆ ಅಂಥಹಾ ಕೋಟ್ಯಂತರ ಸಂಭಾವನೆಯ ಸ್ಟಾರ್‌ಗಳನ್ನು ಹಾಕಿಕೊಂಡು ಮಾಡಿದ ಸಿನಿಮಾ ಪೂರ್ಣವಾಗಿ ನೆಲಕಚ್ಚಿದೆ.
ಸಿನಿಮಾ ಮಾಡಿದ್ದ ನಿರ್ಮಾಪಕರು ಬೀದಿಗೆ ಬಂದಿರುವ ಜೊತೆಗೆ ನಿರ್ದೇಶಕ ಕೊರಟಾಲ ಶಿವ ಸಹ ಗಳಿಸಿದ್ದನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ. ಈ ಸಿನಿಮಾದಿಂದ ಆಗಿರುವ ನಷ್ಟವನ್ನು ಸರಿತೂಗಿಸಿಕೊಡುವಂತೆ ಪ್ರತಿಭಟನೆ ನಡೆಸಿದ್ದು, ಇದೀಗ ಕೊಟ್ಟ ಮಾತಿನಂತೆ ಹಣ ವಾಪಸ್ಸು ನೀಡಲು ಕೊರಟಾಲ ಶಿವ ತಮ್ಮ ಆಸ್ತಿ ಮಾರಾಟಕ್ಕೆ ಇಟ್ಟಿದ್ದಾರೆ!

ಹೈದರಾಬಾದ್‌ನ ಆಸ್ತಿ ಮಾರಾಟಕ್ಕಿಟ್ಟ ಕೊರಟಾಲ ಶಿವ
ಸಿನಿಮಾದ ನಿರ್ದೇಶಕ ಕೊರಟಾಲ ಶಿವ ಹೈದರಾಬಾದ್‌ನಲ್ಲಿನ ತಮ್ಮ ಫ್ಲಾಟ್ ಒಂದನ್ನು ಮಾರಾಟಕ್ಕೆ ಇಟ್ಟಿದ್ದು, ಸಿನಿಮಾದಿಂದ ನಷ್ಟವಾದ ವಿತರಕರಿಗೆ ಹಣ ವಾಪಸ್ ನೀಡಲೆಂದೇ ಈ ಆಸ್ತಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೈದರಾಬಾದ್‌ನಲ್ಲಿರುವ ಸುಮಾರು 40-45 ಕೋಟಿ ಮೌಲ್ಯದ ಆಸ್ತಿಯನ್ನು ಕೊರಟಾಲ ಶಿವ ಮಾರಾಟ ಮಾಡುತ್ತಿದ್ದು, ವಿತರಕರಿಂದ ಪಡೆದ ಹಣವನ್ನು ವಾಪಸ್ ನೀಡಲಿದ್ದಾರೆ.

ಕೊರಟಾಲ ಶಿವ ಸಹ ಬಂಡವಾಳ ಹೂಡಿದ್ದರು
ನಿರ್ದೇಶಕ ಕೊರಟಾಲ ಶಿವ, ಸಿನಿಮಾ ನಿರ್ದೇಶನದ ಜೊತೆಗೆ ಸಿನಿಮಾದ ಮೇಲೆ ಬಂಡವಾಳ ಸಹ ಹೂಡಿದ್ದರಿಂದ ಈ ಸಮಸ್ಯೆ ತಂದುಕೊಂಡಿದ್ದಾರೆ ಎನ್ನಲಾಗುತ್ತಿದೆ. 'ಆಚಾರ್ಯ' ಸಿನಿಮಾವನ್ನು ನಿರಂಜನ್ ರೆಡ್ಡಿ ಹಾಗೂ ಅನ್ವೇಶ್ ರೆಡ್ಡಿ ನಿರ್ಮಾಣ ಮಾಡಿದ್ದರು. ಆದರೆ ನಿರಂಜನ್ ರೆಡ್ಡಿಯ ಪಾಲನ್ನು ಹಣ ನೀಡಿ ಕೊರಟಾಲ ಶಿವ ಖರೀದಿಸಿ, ಕೆಲವು ವಿತರಕರೊಟ್ಟಿಗೆ ಮಾತಾಡಿ ಸಿನಿಮಾವನ್ನು ಮಾರಾಟ ಮಾಡಿದ್ದರು. ಆದರೆ ಸಿನಿಮಾ ದೊಡ್ಡ ಫ್ಲಾಪ್ ಆದ ಕಾರಣ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಿಜಾಮಾಬಾದ್ ಹಾಗೂ ಸೀಡೆಡ್ ಪ್ರದೇಶಗಳ ವಿತರಕ ಒತ್ತಾಯ
ನಿಜಾಮಾಬಾದ್ ಹಾಗೂ ಸೀಡೆಡ್ ಪ್ರದೇಶಗಳ ವಿತರಕರು ಕೊರಟಾಲ ಶಿವ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಆಂಧ್ರದ ಗ್ರಾಮಾಂತರ ಭಾಗದಲ್ಲಿ ಕೊರಟಾಲ ಶಿವ ಸಂಬಂಧಿಯೊಬ್ಬರು ಹಾಗೂ ಕೆಲವು ಗೆಳೆಯರೇ ಸಿನಿಮಾವನ್ನು ವಿತರಣೆ ಮಾಡಿದ್ದರಿಂದ ಅವರಿಂದ ಹೆಚ್ಚಿನ ಒತ್ತಡ ಕೊರಟಾಲ ಶಿವ ಮೇಲಿಲ್ಲ ಎನ್ನಲಾಗುತ್ತಿದೆ.

ಚಿರಂಜೀವಿ ಸಹ ಸಹಾಯ ಮಾಡಿದ್ದಾರೆ
'ಆಚಾರ್ಯ' ಸಿನಿಮಾಕ್ಕೆ ಸುಮಾರು 140 ಕೋಟಿ ಖರ್ಚು ಮಾಡಲಾಗಿತ್ತು. ಆದರೆ ಈ ಸಿನಿಮಾ ಬಂಡವಾಳದ ಅರ್ಧದಷ್ಟು ಹಣವನ್ನೂ ಗಳಿಸಲಿಲ್ಲ. ಹಾಗಾಗಿ ಉಳಿಕೆ ಹಣವನ್ನು ಕೊರಟಾಲ ಶಿವ ಹಾಗೂ ಮತ್ತೊಮ್ಮ ನಿರ್ಮಾಪಕ ಅನ್ವೇಶ್ ರೆಡ್ಡಿಯೇ ತುಂಬಬೇಕಿದೆ. ಈ ಸಿನಿಮಾವನ್ನು ರಾಮ್ ಚರಣ್ ತೇಜ ಒಡೆತನದ ಕೋನಿಡೇಲ ನಿರ್ಮಾಣ ಸಂಸ್ಥೆ ಪ್ರೆಸೆಂಟ್ ಮಾಡಿತ್ತು. ನಟ ಚಿರಂಜೀವಿ ಸಹ ಕೊರಟಾಲ ಶಿವಗೆ ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ.