For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 4ಕ್ಕೆ ಥಿಯೇಟರ್‌ಗೆ ಬರ್ತಿದೆ ಕೋಟಿಗೊಬ್ಬ 3 ತೆಲುಗು ವರ್ಷನ್

  |

  ಕಿಚ್ಚ ಸುದೀಪ್ ಕೋಟಿಗೊಬ್ಬ 3 ಚಿತ್ರ ರಿಲೀಸ್ ಆಗಿ ತಕ್ಕಮಟ್ಟಿನ ರೆಸ್ಪಾನ್ಸ್ ಪಡೆದುಕೊಂಡಿದೆ. ಬಹು ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡೋದ್ರಲ್ಲಿ ಹಿಂದೆ ಬಿದ್ದಿರಲಿಲ್ಲಾ. ಕಿಚ್ಚ ಸುದೀಪ್ ಚಿತ್ರಗಳು ಅಂದ್ರೇನೆ ಹಾಗೆ. ಅಲ್ಲಿ ಆಡಿಯನ್ಸ್‌ಗಳು ಹೆಚ್ಚು, ಕ್ರೇಝ್ ಕೂಡ ಅಷ್ಟೇ ಇರುತ್ತೆ. ಇದೀಗ ಕೋಟಿಗೊಬ್ಬ 3 ಚಿತ್ರತಂಡದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ ಅದುವೇ ಕೋಟಿಗೊಬ್ಬ 3ನ ತೆಲುಗು ಡಬ್ ಸಿನಿಮಾ ರಿಲೀಸ್ ಆಗುತ್ತಿರೋದು.

  ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆದ ಕೆಲ ದಿನಗಳಲ್ಲೆ ಚಿತ್ರದ ಡಬ್ಬಿಂಗ್ ರೈಟ್ಸ್ ಕೋಟಿ ಮೊತ್ತಕ್ಕೆ ಸೇಲ್ ಆಗಿತ್ತು. ಹೀಗಾಗಿ ತೆಲುಗಿನಲ್ಲಿ ಡಬ್ಬಿಂಗ್ ಕೆಲಸವನ್ನು ಆರಂಭ ಮಾಡಲಾಗಿತ್ತು. ಇದೀಗ ಡಬ್ಬಿಂಗ್ ಕೆಲಸಗಳೆಲ್ಲವೂ ಪೂರ್ಣಗೊಂಡಿದ್ದು, ತೆಲುಗು ವರ್ಷನ್‌ನ ಕೋಟಿಗೊಬ್ಬ 3 ರಿಲೀಸ್‌ಗೆ ಸಜ್ಜಾಗಿದೆ. ಇದು ಕಿಚ್ಚಾ ಸುದೀಪ್ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮವನ್ನುಂಟು ಮಾಡಿದೆ. ಅಷ್ಟಕ್ಕು ಕೋಟಿಗೊಬ್ಬ 3 ತೆಲುಗು ವರ್ಷನ್ ರಿಲೀಸ್ ಆಗುತ್ತಿರೋದು ಫೆಬ್ರವರಿ 4ಕ್ಕೆ.

  ಕಿಚ್ಚ ಸುದೀಪ್​ ನಟನೆಯ ಈ ಸಿನಿಮಾ ಸಾಕಷ್ಟು ಆಕ್ಷನ್​ ದೃಶ್ಯಗಳನ್ನು ಹೊಂದಿದೆ. ಸುದೀಪ್​ ಅವರು ಡಬಲ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಸಖತ್​ ಥ್ರಿಲ್​ ನೀಡಿತ್ತು. ಕೆಲವರು ಎರಡು ಬಾರಿ ಚಿತ್ರಮಂದಿರದತ್ತ ಮುಖ ಮಾಡಿದ್ದರು. ಈಗ 'ಕೋಟಿಗೊಬ್ಬ 3' ತೆಲುಗಿನಲ್ಲಿ ರಿಲೀಸ್​ ಆಗೋಕೆ ರೆಡಿ ಆಗಿದೆ. ಫೆಬ್ರವರಿ 4ರಂದು ಸಿನಿಮಾ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ​ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

  ಕಿಚ್ಚ ಸುದೀಪ್​ ಅವರಿಗೂ ಟಾಲಿವುಡ್​ಗೂ ಒಳ್ಳೆಯ ನಂಟಿದೆ. ಖ್ಯಾತ ನಿರ್ದೇಶಕ ರಾಜಮೌಳಿ ಆ್ಯಕ್ಷನ್​ ಕಟ್​ ಹೇಳಿದ್ದ 'ಈಗ' ಸಿನಿಮಾದಲ್ಲಿ ಸುದೀಪ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರು 'ಬಾಹುಬಲಿ' ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈ ಕಾರಣಕ್ಕೆ ಟಾಲಿವುಡ್​ ಮಂದಿಗೆ ಸುದೀಪ್​ ಪರಿಚಯ ಇದೆ. ಹೀಗಾಗಿ, 'ಕೋಟಿಗೊಬ್ಬ 3' ಸಿನಿಮಾ ತೆಲುಗಿನಲ್ಲಿ ರಿಲೀಸ್​ ಆಗುತ್ತಿದೆ.

  ಡಬ್ಬಿಂಗ್​ ಕಾರ್ಯಗಳು ವಿಳಂಬವಾದ್ದರಿಂದ 'ಕೋಟಿಗೊಬ್ಬ 3' ತೆಲುಗು ಅವತರಣಿಕೆಯ ರಿಲೀಸ್​ ದಿನಾಂಕ ವಿಳಂಬವಾಗಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಈಗ ತೆಲುಗಿನಲ್ಲಿ ಯಾವುದೇ ದೊಡ್ಡ ಚಿತ್ರಗಳು ರಿಲೀಸ್​ ಆಗುತ್ತಿಲ್ಲ. ಇದರ ಲಾಭವನ್ನು ಚಿತ್ರತಂಡ ಪಡೆದುಕೊಳ್ಳುತ್ತಿದೆ. ಈ ಸಿನಿಮಾಗೆ ಟಾಲಿವುಡ್​ ಮಂದಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  ಪೋಲೆಂಡ್‌ನಲ್ಲಿ ನಡೆಯುವ ಸಾಲುಸಾಲು ಬಾಂಬ್ ಬ್ಲ್ಯಾಸ್ಟ್, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಭರಣಗಳ ಕಳ್ಳತನದ ಹಿಂದೆ ಘೋಸ್ಟ್ ಪಾತ್ರವಿದೆ ಎಂದು ಇಂಟರ್ ಪೋಲ್ ಪೊಲೀಸರು ಮತ್ತು ವಿಲನ್, ಅವನನ್ನೇ ಹೋಲುವ ಸತ್ಯನ ಹಿಂದೆ ಬೀಳುತ್ತಾರೆ, ಸತ್ಯ ಜೈಲು ಪಾಲಾಗುತ್ತಾನೆ. ಅಲ್ಲಿ, ಎಸಿಪಿ ಕಿಶೋರ್ (ರವಿಶಂಕರ್) ಅವರ ಪರಿಚಯವಾಗುತ್ತದೆ. ಅಲ್ಲಿಂದ ಇಬ್ಬರೂ ಜೈಲಿನಿಂದ ತಪ್ಪಿಸಿಕೊಳ್ಳುತ್ತಾರೆ. ಮುಂದೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಮೂಲಕ ಸತ್ಯ-ಘೋಸ್ಟ್ ಪಾತ್ರಗಳು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತೆ.

  Kotigobba 3 Telugu version Will be releasing on February 4 In theaters

  ಸತ್ಯ ಮತ್ತು ಶಿವ ಎನ್ನುವ ಎರಡು ಪಾತ್ರದಲ್ಲಿ ಸತ್ಯ ಎನ್ನುವ ಕ್ಯಾರೆಕ್ಟರ್ ಮಾತ್ರ ಕೋಟಿಗೊಬ್ಬ -2 ಕ್ಲೈಮ್ಯಾಕ್ಸಿನಲ್ಲಿ ಉಳಿದುಕೊಂಡಿರುತ್ತದೆ. ಸತ್ಯ ಮತ್ತು ಪ್ರೇಕ್ಷಕನನ್ನು ಗೊಂದಲಕ್ಕೆ ದೂಡುವ ಇನ್ನೊಂದು ಪಾತ್ರ ಯಾವುದು ಎನ್ನುವ ಸಸ್ಪೆನ್ಸ್ ಅನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ತೆರೆಯ ಮೇಲೆ ತಂದಿದ್ದಾರೆ. ಜೊತೆಗೆ, ಘೋಸ್ಟ್ ಪಾತ್ರವನ್ನು ತಂದು, ಇನ್ನಷ್ಟು ಹುಳ ಬಿಟ್ಟಿದ್ದಾರೆ. ತನ್ನ ಆಶ್ರಮದ ಹುಡುಗಿಗೆ ಅಪರೂಪದ ಕಾಯಿಲೆ ಎದುರಾದಾಗ, ಅದರ ಚಿಕಿತ್ಸೆಗಾಗಿ ಪೋಲೆಂಡಿಗೆ ಹೋಗುವ ನಾಯಕನಿಗೆ ನಾಯಕಿಯ ಪರಿಚಯವಾಗುತ್ತದೆ. ಎಲ್ಲಾ ಚಿತ್ರದಂತೆ, ಇಲ್ಲೂ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಹೀಗೆ ಸಾಕಷ್ಟು ಟ್ವಿಸ್ಟ್‌ಗಳನ್ನು 'ಕೋಟಿಗೊಬ್ಬ 3' ಹೊಂದಿದೆ. ಹೀಗಾಗಿ ತೆಲುಗು ಪ್ರೇಕ್ಷಕರಿಗು ಇದು ಹಿಡಿಸೋದ್ರಲ್ಲಿ ಡೌಟಿಲ್ಲ.

  ಇನ್ನು ಪಾತ್ರವರ್ಗಕ್ಕೆ ಬರೋದಾದರೇ ನಾಯಕಿಯಾಗಿ ಮಡೋನಾ ಸೆಬಾಸ್ಟಿಯನ್‌, ಪ್ರಮುಖ ವಿಲನ್ ಆಗಿ ನವಾಬ್ ಶಾ, ಇಂಟರ್ ಪೋಲ್ ಅಧಿಕಾರಿಯಾಗಿ ಅಫ್ತಾಬ್ ಶಿವದಾಸಿನಿ, ಪೊಲೀಸ್ ಅಧಿಕಾರಿಣಿಯಾಗಿ ಶ್ರದ್ದಾ ದಾಸ್, ಜೈಲಿನಲ್ಲಿರುವ ಪೊಲೀಸ್ ಅಧಿಕಾರಿಯಾಗಿ ರವಿಶಂಕರ್, ನಾಯಕನ ತಾಯಿಯ ಪಾತ್ರದಲ್ಲಿ ಅಭಿರಾಮಿ, ವಿಲನ್ ಆಪ್ತನಾಗಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ.

  'ಕೋಟಿಗೊಬ್ಬ 3' ಸಿನಿಮಾ ರಿಲೀಸ್ ಒಂದು ದಿನ​ ವಿಳಂಬವಾದರೂ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿತ್ತು. ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ ಫುಲ್​ ಪ್ರದರ್ಶನ ಕಂಡಿತ್ತು. ರಾಜ್ಯಾದ್ಯಂತ ನೂರಾರು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಮೊದಲ ದಿನ 'ಕೋಟಿಗೊಬ್ಬ 3' ಬರೋಬ್ಬರಿ 12.5 ಕೋಟಿ ರೂಪಾಯಿ ಗಳಿಸಿತ್ತು ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇದೇ ಅಬ್ಬರ ಟಾಲಿವುಡ್​ನಲ್ಲೂ ಇರಲಿದೆಯೇ ಎಂಬುದು ಸದ್ಯದ ಕುತೂಹಲ.

  English summary
  Kichcha sudeep Starrer Kotigobba 3 Telugu version Will be releasing on February 4 In theaters.
  Sunday, January 30, 2022, 17:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X