For Quick Alerts
  ALLOW NOTIFICATIONS  
  For Daily Alerts

  ತೆಲುಗು ಟಾಪ್ ನಟರ ಬಗ್ಗೆ ಕೃತಿ ಶೆಟ್ಟಿ ಕಮೆಂಟ್!

  |

  ನಟಿ ಕೃತಿ ಶೆಟ್ಟಿ ಸೌತ್ ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಮೊದಲ ಸಿನಿಮಾದ ಮೂಲಕವೇ ಬಂಪರ್ ಯಶಸ್ಸು ಕಂಡ ಕೃತಿ ಶೆಟ್ಟಿಗೆ, ಸಾಕಷ್ಟು ಸಿನಿಮಾಗಳ ಆಫರ್ ಬಂದಿದೆ. ಕೃತಿ ಶೆಟ್ಟಿಯ 'ವಾರಿಯರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು. ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ.

  ಕೃತಿ ಶೆಟ್ಟಿಗೆ ಈಗಾಗಲೇ ದೊಡ್ಡ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದೆ. ಹಾಗಾಗಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಹೆಚ್ಚಿನ ಕುತೂಹಲ ಇರುತ್ತೆ. ಜೊತೆಗೆ ಕೃತಿ ಸ್ಟಾರ್ ನಟರಾಜ ತೆಗೆದರೆ ಹಂಚಿಕೊಳ್ಳುವುದನ್ನು ನೋಡಲು ಅವರ ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ.

  ರಶ್ಮಿಕಾ ರೀತಿ ಬೆಳೆಯುದಿಲ್ಲವಂತೆ ಕೃತಿ ಶೆಟ್ಟಿ: ಹೀಗಂತಿರೋದ್ಯಾಕೆ?ರಶ್ಮಿಕಾ ರೀತಿ ಬೆಳೆಯುದಿಲ್ಲವಂತೆ ಕೃತಿ ಶೆಟ್ಟಿ: ಹೀಗಂತಿರೋದ್ಯಾಕೆ?

  ಸತ್ಯ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿರುವ ಕೃತಿ ಶೆಟ್ಟಿ ತೆಲುಗಿನ ಸ್ಟಾರ್ ನಟರ ಬಗ್ಗೆ ಮಾತನಾಡಿದ್ದಾರೆ. ನಟ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಮಹೇಶ್ ಬಾಬು, ಅಲ್ಲು ಅರ್ಜುನ್ ಬಗ್ಗೆ ಕೃತಿ ಶೆಟ್ಟಿ ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

  ಅಲ್ಲು ಅರ್ಜುನ್, ಮಹೇಶ್ ಬಾಬು ಸೂಪರ್!

  ಅಲ್ಲು ಅರ್ಜುನ್, ಮಹೇಶ್ ಬಾಬು ಸೂಪರ್!

  ಸಂದರ್ಶನ ಒಂದರಲ್ಲಿ ಮಾತನಾಡಿದ ಕೃತಿ ಶೆಟ್ಟಿ ನಟ ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ಸೂಪರ್ ಸ್ಟೈಲಿಶ್ ಎಂದ ನಟಿ ಕೃತಿ ಶೆಟ್ಟಿ ನಟ ಮಹೇಶ್ ಬಾಬು ಸೂಪರ್ ಹ್ಯಾಂಡ್ಸಮ್ ಎಂದಿದ್ದಾರೆ. ಕೃತಿಯ ಈ ಕಮೆಂಟ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದಷ್ಟು ಬೇಗ ಈ ನಟರ ಜೊತೆಗೆ ನಟಿಸಿ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

  ಕೃತಿ ಶೆಟ್ಟಿಯನ್ನು ತಿರಸ್ಕರಿಸಿದ ತೆಲುಗು ಸ್ಟಾರ್ ನಟರು: ಕಾರಣ ಕೇಳಿದ್ರೆ ಅಚ್ಚರಿ ಆಗುತ್ತೆ!ಕೃತಿ ಶೆಟ್ಟಿಯನ್ನು ತಿರಸ್ಕರಿಸಿದ ತೆಲುಗು ಸ್ಟಾರ್ ನಟರು: ಕಾರಣ ಕೇಳಿದ್ರೆ ಅಚ್ಚರಿ ಆಗುತ್ತೆ!

  ರಾಮ್‌ಚರಣ್, ರಾಮ್‌ ಪೋತಿನೇನಿ!

  ರಾಮ್‌ಚರಣ್, ರಾಮ್‌ ಪೋತಿನೇನಿ!

  ನಟ ರಾಮ್‌ಚರಣ್ ತೇಜ ಬಗ್ಗೆ ಕೃತಿ ಶೆಟ್ಟಿ ಮಾತನಾಡಿದ್ದಾರೆ. ರಾಮ್‌ ಚರಣ್ ತುಂಬಾನೆ ಕ್ಯೂಟ್ ಎಂದಿದ್ದಾರೆ. ಜೊತೆಗೆ ರಾಮ್ ಪೋತಿನೇನಿ ತುಂಬಾನೆ ಎನರ್ಜಿಟಿಕ್, ಅವರಿಂದ ಆ ಎನರ್ಜಿಟಿಕ್ ಗುಣವನ್ನು ಅಳವಡಿಕೊಳ್ಳ ಬೇಕು ಅನಿಸುತ್ತದೆ ಎಂದಿದ್ದಾರೆ ನಟಿ ಕೃತಿ ಶೆಟ್ಟಿ. ಮೊದಲ ಸಿನಿಮಾದಲ್ಲೇ ಸ್ಟಾರ್ ಆಗಿ ಮಿಂಚಿದ ನಟಿ ಕೃತಿಗೆ ಅದ್ಯಾಕೋ ಇನ್ನೂ ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ದೊಡ್ಡ ಸಿನಿಮಾಗಳು ಸಿಗ್ತಿಲ್ಲ.

  ಜೂನಿಯರ್ ಎನ್‌ಟಿಆರ್ ಜೊತೆ ಕೃತಿ ಶೆಟ್ಟಿ!

  ಜೂನಿಯರ್ ಎನ್‌ಟಿಆರ್ ಜೊತೆ ಕೃತಿ ಶೆಟ್ಟಿ!

  'ಉಪ್ಪೇನ', 'ಶ್ಯಾಮ್ ಸಿಂಘ ರಾಯ್', 'ಬಂಗಾರಾಜು' ಸಿನಿಮಾಗಳು ತೆರೆಮೇಲೆ ಬಂದ ಕೃತಿ ಶೆಟ್ಟಿಯ ಇನ್ನು 3 ಸಿನಿಮಾಗಳು ರಿಲೀಸ್ ಆಗಬೇಕಿದೆ. ಇದರ ನಡುವೆ ಕೃತಿ ಶೆಟ್ಟಿ ನಟ ಜೂನಿಯರ್ ಎನ್‌ಟಿಆರ್ ಜೊತೆಗೆ ನಟಿಸಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಆದರೆ ಅದು ಯಾವ ಚಿತ್ರಕ್ಕೆ ಎನ್ನುವ ಸುದ್ದಿ ಸದ್ಯದಲ್ಲಿಯೇ ಹೊರ ಬರುತ್ತದೆ.

  English summary
  Krithi Shetty Comment On Jr NTR, Ram Charan, Mahesh babu, Know More,
  Saturday, July 9, 2022, 9:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X