For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದೀರಿ' ಎಂದು ನಂಬಿಸಿ ಖ್ಯಾತ ನಟಿಯ ಕಿಡ್ನಾಪ್

  |

  ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಜೊತೆ ನಟಿಸುವ ಅವಕಾಶ ಸಿಗುತ್ತೆ ಎಂದರೆ ಯಾವ ನಟಿಯರು ಮಿಸ್ ಮಾಡಿಕೊಳ್ಳುವುದಿಲ್ಲ. ಹಾಗೆ ಪ್ರಭಾಸ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ ಎಂದು ನಂಬಿ ಮೋಸ ಹೋದ ಬಾಲಿವುಡ್ ನ ನಟಿ ಈಗ ಕಾಣೆಯಾಗಿದ್ದು, ಕಿಡ್ನಾಪ್ ಆಗಿರುವ ಶಂಕೆ ವ್ಯಕ್ತವಾಗಿದೆ.

  ಮೋಸ ಹೋದ ನಟಿ ತೆಲುಗಿನ ರಾಹು ಸಿನಿಮಾದ ಖ್ಯಾತಿಯ ನಾಯಕಿ ನಟಿ ಕೃತಿ ಗರ್ಗ್. ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಹೆಸರಿನಲ್ಲಿ ನಟಿ ಕೃತಿಗೆ ಫೋನ್ ಮಾಡಿ ಮೋಸ ಮಾಡಲಾಗಿದೆ ಎನ್ನುವ ವಿಚಾರ ಕೇಳಿ ಬರುತ್ತಿದೆ. "ನಟ ಪ್ರಭಾಸ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ನೀವು ತುಂಬ ಅದ್ಭುತವಾಗಿ ನಟಿಸುತ್ತೀರಾ. ನಿಮ್ಮಂತ ನಟಿ ನಮ್ಮ ಸಿನಿಮಾಗೆ ಬೇಕು. ಚಿತ್ರದಕಥೆ ಬಗ್ಗೆ ಮಾತನಾಡಬೇಕು ಬನ್ನಿ" ಎಂದು ಕೃತಿಗೆ ಫೋನ್ ಮಾಡಿದ ವ್ಯಕ್ತಿ ಹೇಳಿದ್ದಾರೆ.

  ಲೆಜೆಂಡರಿ ನಿರ್ದೇಶಕರ ಮಗನ ಜೊತೆ ಅನುಷ್ಕಾ ಶೆಟ್ಟಿ ಮದುವೆ?ಲೆಜೆಂಡರಿ ನಿರ್ದೇಶಕರ ಮಗನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

  ಈ ವಿಚಾರವನ್ನು 'ರಾಹು' ಖ್ಯಾತಿಯ ನಿರ್ದೇಶಕ ಸುಬ್ಬು ವೇದುಲ ಬಳಿಯೂ ಕೇಳಿಕೊಂಡಿದ್ದಾರೆ. ಅಲ್ಲದೆ ಪ್ರಭಾಸ್ ಜೊತೆ ನಟಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಕೃತಿ ಸೀದಾ ಕರೆ ಮಾಡಿದ ನಿರ್ದೇಶಕರ ಬಳಿ ಮಾತನಾಡಲು ಹೋಗಿದ್ದಾರೆ. ಅದೆ ಕೊನೆ ಆನಂತರ ಕೃತಿ ಯಾರ ಫೋನಿಗೂ ಸಿಕ್ಕಿಲ್ಲ. ಕುಟುಂಬದವರು ಮತ್ತು ಸ್ನೇಹಿತರು ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿದೆಯಂತೆ.

  ಕೃತಿ ಸಂಪರ್ಕಕ್ಕೆ ಸಿಗದೆ ಇರುವುದು ಕುಟುಂಬದವರಲ್ಲಿ ಆತಂಕ ಮನೆಮಾಡಿದೆ. ಕೃತಿಯನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ನಿರ್ದೇಶಕ ಸುಬ್ಬು ದೂರು ದಾಖಲಿಸಿದ್ದಾರೆ. ಹೈದರಾಬಾದ್ ನ ಪಂಜಾಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  English summary
  Telugu Actress kriti Garg was kidnapped after promising to get a chance to work with Prabhas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X