For Quick Alerts
  ALLOW NOTIFICATIONS  
  For Daily Alerts

  RRR ಬಗ್ಗೆ ಆಸಕ್ತಿಕರ ವಿಷಯ ಬಿಚ್ಚಿಟ್ಟ ರಾಜಮೌಳಿ ತಂದೆ

  |

  ತೆಲುಗಿನ ಆರ್‌ಆರ್‌ಆರ್‌ ಸಿನಿಮಾ ಭಾರತದ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ರಾಜಮೌಳಿ ನಿರ್ದೇಶಿಸಿ, ಜೂ.ಎನ್‌ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್ ಅಂಥಹಾ ಸೂಪರ್ ಸ್ಟಾರ್‌ಗಳು ನಟಿಸಿರುವ ಈ ಸಿನಿಮಾ ಬಗ್ಗೆ ಭಾರಿ ಕುತೂಹಲ ಏರ್ಪಟ್ಟಿದೆ.

  ತೆಲುಗು ರಾಜ್ಯದ ಹೋರಾಟಗಾರರಾದ ಕೋಮರಂ ಭೀಮ್, ಅಲ್ಲೂರಿ ಸೀತಾರಾಮ ರಾಜು ಜೀವನ ಕುರಿತಾದ ಸಿನಿಮಾ ಆರ್‌ಆರ್‌ಆರ್‌ ಆಗಿದ್ದು ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಅದರಲ್ಲಿಯೂ ಫೈಟ್ ದೃಶ್ಯಗಳು, ಆಲಿಯಾ ಭಟ್, ಅಜಯ್ ದೇವಗನ್ ನಟಿಸಿರುವ ಚಿತ್ರಗಳ ಚಿತ್ರೀಕರಣ ಮುಗಿದಿದೆ.

  ಆರ್‌ಆರ್‌ಆರ್‌ ಸಿನಿಮಾಕ್ಕೆ ರಾಜಮೌಳಿ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರೇ ಕತೆ ಬರೆದಿದ್ದು, ಚಿತ್ರೀಕರಣದಲ್ಲಿ ಹಾಗೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈವರೆಗೆ ಚಿತ್ರೀಕರಣಗೊಂಡಿರುವ ಭಾಗಗಳನ್ನೆಲ್ಲ ನೋಡಿರುವ ವಿಜಯೇಂದ್ರ, ಟಾಕ್‌ ಶೋ ಒಂದರಲ್ಲಿ ಸಿನಿಮಾ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

  ಆಲಿಯಾ ಭಟ್ ಸಿನಿಮಾದ ಪ್ರಮುಖ ಅಂಶ: ವಿಜಯೇಂದ್ರ

  ಆಲಿಯಾ ಭಟ್ ಸಿನಿಮಾದ ಪ್ರಮುಖ ಅಂಶ: ವಿಜಯೇಂದ್ರ

  ಆರ್‌ಆರ್‌ಆರ್‌ ಸಿನಿಮಾದಲ್ಲಿ ಆಲಿಯಾ ಭಟ್ ಪಾತ್ರದ ಬಗ್ಗೆ ಮಾತನಾಡಿರುವ ವಿಜಯೇಂದ್ರ ಪ್ರಸಾದ್, 'ಸಿನಿಮಾದಲ್ಲಿ ಆಲಿಯಾ ಭಟ್ ಪಾತ್ರ ಬಹಳ ಪ್ರಧಾನವಾದದ್ದು, ಆಲಿಯಾ ಭಟ್ ತೆರೆಯ ಮೇಲೆ ಇರುವವರೆಗೂ ಆಕೆಯದ್ದೇ ಸಿನಿಮಾ. ಆಕೆಯ ಪಾತ್ರ ಅದ್ಭುತವಾಗಿ ತೆರೆಯ ಮೇಲೆ ಬಂದಿದೆ. ಆಲಿಯಾ ಭಟ್ ಸಹ ಅದ್ಭುತವಾಗಿ ನಟಿಸಿದ್ದಾಳೆ. ಆಕೆಯ ಪಾತ್ರ ತೆರೆಯ ಮೇಲೆ ಬಂದಾಗ ಎಲ್ಲರ ಕಣ್ಣು ಆಕೆಯತ್ತಲೇ ಇರುತ್ತವೆ' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

  ಫೈಟ್‌ ದೃಶ್ಯಗಳು ಕಣ್ಣೀರು ತರಿಸುತ್ತವೆ: ವಿಜಯೇಂದ್ರ ಪ್ರಸಾದ್

  ಫೈಟ್‌ ದೃಶ್ಯಗಳು ಕಣ್ಣೀರು ತರಿಸುತ್ತವೆ: ವಿಜಯೇಂದ್ರ ಪ್ರಸಾದ್

  ಆರ್‌ಆರ್‌ಆರ್‌ ಸಿನಿಮಾದ ಫೈಟ್‌ ದೃಶ್ಯಗಳ ಬಗ್ಗೆಯೂ ಮಾತನಾಡಿರುವ ವಿಜಯೇಂದ್ರ ಪ್ರಸಾದ್. 'ಸಾಮಾನ್ಯವಾಗಿ ನಾವು ಫೈಟ್‌ ದೃಶ್ಯ ನೋಡುವಾಗ ಹೊಡಿ, ಹಾಕು ಎಂದು ಅಬ್ಬರಿಸುತ್ತೇವೆ. ಆದರೆ ಆರ್‌ಆರ್‌ಆರ್‌ ಸಿನಿಮಾದ ಫೈಟ್‌ ದೃಶ್ಯಗಳು ಭಾವನಾತ್ಮಕವಾಗಿವೆ. ಇಬ್ಬರು ಒಳ್ಳೆಯರು ಹೊಡೆದಾಡಬೇಕಾದರೆ ನಾವು ಯಾರ ಪರವಹಿಸಲು ಸಾಧ್ಯ. ನೋಡಿ ಬೇಸರಪಟ್ಟುಕೊಳ್ಳಬೇಕಷ್ಟೆ. ಹಾಗಾಗಿ ಆರ್‌ಆರ್‌ಆರ್‌ ಸಿನಿಮಾದ ಫೈಟ್‌ ದೃಶ್ಯಗಳನ್ನು ನೋಡುವಾಗ ಕಣ್ಣಲ್ಲಿ ನೀರು ಬರುತ್ತವೆ' ಎಂದಿದ್ದಾರೆ ವಿಜಯೇಂದ್ರ.

  ಇಬ್ಬರೂ ಹೊಡೆದಾಡುತ್ತಾರೆ, ಒಂದಾಗುತ್ತಾರೆ: ವಿಜಯೇಂದ್ರ ಪ್ರಸಾದ್

  ಇಬ್ಬರೂ ಹೊಡೆದಾಡುತ್ತಾರೆ, ಒಂದಾಗುತ್ತಾರೆ: ವಿಜಯೇಂದ್ರ ಪ್ರಸಾದ್

  ಜೊತೆಗೆ ಕತೆಯ ಸಣ್ಣ ಭಾಗವನ್ನು ಬಿಟ್ಟುಕೊಟ್ಟಿರುವ ವಿಜಯೇಂದ್ರ ಪ್ರಸಾದ್, ಸಿನಿಮಾದಲ್ಲಿ ಜೂ.ಎನ್‌ಟಿಆರ್ ಹಾಗೂ ರಾಮ್‌ ಚರಣ್ ತೇಜ ನಡುವೆ ಫೈಟ್ ಇದೆ. ಇಬ್ಬರೂ ಹೊಡೆದಾಡುತ್ತಾರೆ. ಇಬ್ಬರೂ ಒಳ್ಳೆಯವರೇ ಆದರೆ ಸಂದರ್ಭ ಅವರನ್ನು ಹೊಡೆದಾಡುವಂತೆ ಮಾಡಿಬಿಡುತ್ತದೆ. ಆ ನಂತರ ಇಬ್ಬರೂ ಮತ್ತೆ ಒಂದಾಗುತ್ತಾರೆ' ಎಂದಿದ್ದಾರೆ ವಿಜಯೇಂದ್ರ.

  ಮತ್ತೊಂದು ಹೊಸ ದಾಖಲೆ ಬರೆದು ಭಾರತದಲ್ಲೇ No 1 ಆದ KGF 2 | Filmibeat Kannada
  ಅಕ್ಟೋಬರ್ 13 ಕ್ಕೆ ಬಿಡುಗಡೆ ಆಗಲಿದೆ

  ಅಕ್ಟೋಬರ್ 13 ಕ್ಕೆ ಬಿಡುಗಡೆ ಆಗಲಿದೆ

  'ಆರ್‌ಆರ್‌ಆರ್‌ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಸಿನಿಮಾ ನೋಡಿ ನನಗೆ ತೃಪ್ತಿ ಎನಿಸಿತು. ಸಿನಿಮಾ ಒಂದು ಭಿನ್ನ ಅನುಭೂತಿ ನೀಡುತ್ತದೆ. ನಾನು ಸಿನಿಮಾ ನೋಡಬೇಕಾದರೆ ಆ ಅನುಭೂತಿ ಅನುಭವಿಸಿದೆ' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್. 'ಆರ್‌ಆರ್‌ಆರ್‌' ಸಿನಿಮಾವು ಅಕ್ಟೋಬರ್ 13 ಕ್ಕೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಕನ್ನಡ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

  English summary
  KV Vijayendra Prasad talked aobout RRR movie and shared some intresting things. He is the story writer of RRR movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X