twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ನಿರ್ದೇಶಕ ಕಲಾತಪಸ್ವಿ ಕೆ ವಿಶ್ವನಾಥ್ ಇನ್ನಿಲ್ಲ; ಸಂತಾಪ‌ ಸೂಚಿಸಿದ ಎನ್‌ಟಿಆರ್, ಎ ಆರ್ ರಹಮಾನ್

    |

    ಕಲಾತಪಸ್ವಿ ಎಂದೇ ಖ್ಯಾತಿಯನ್ನು ಗಳಿಸಿದ್ದ ತೆಲುಗು ನಟ ಕಾಶಿನಾಧುನಿ ವಿಶ್ವನಾಥ್ ಅವರು ನಿನ್ನೆ ( ಫೆಬ್ರವರಿ 2 ) ಇಹಲೋಕ ತ್ಯಜಿಸಿ ಬಾರದ ಊರಿಗೆ ಪಯಣ ಬೆಳೆಸಿದ್ದಾರೆ. ನಟನಾಗಿ ಹಾಗೂ ನಿರ್ದೇಶಕನಾಗಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದ ವಿಶ್ವಾನಥ್ ಅವರ ಸಾಲು ಸಿನಿಮಾ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ವಿಶ್ವಾನಾಥ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ತೆಲುಗು ಸಿನಿಮಾರಂಗಕ್ಕೆ ಅಪಾರವಾದ ಕೊಡುಗೆ ನೀಡಿರುವ ಕೆ ವಿಶ್ವನಾಥ್ ಅವರು ಐದು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದರು. ಇಷ್ಟೇ ಅಲ್ಲದೇ ದೇಶದ ಹಲವು ದೊಡ್ಡ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರು ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ವೌಹಿನಿ ಸ್ಟುಡಿಯೋಸ್‌ಗೆ ಆಡಿಯೊಗ್ರಾಫರ್ ಆಗಿ ಚೆನ್ನೈನಲ್ಲಿ ತನ್ನ ಸಿನಿ ಜೀವನವನ್ನು ಆರಂಭಿಸಿದ ಇವರು 1951ರಲ್ಲಿ ತೆರೆಕಂಡ ಪಾತಾಳ ಭೈರವಿ ಚಿತ್ರದ ಮೂಲಕ ಅದುರ್ತಿ ಸುಬ್ಬರಾವ್ ಅವರ ಅಡಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಆರಂಭಿಸಿದ್ದರು. ಹೀಗೆ ಸಿನಿ ಜೀವನ ಆರಂಭಿಸಿದ್ದ ಕೆ ವಿಶ್ವನಾಥ್ 1965ರಲ್ಲಿ ಆತ್ಮ ಗೌರವಮ್ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದರು. ತಮ್ಮ ನಿರ್ದೇಶನದ ಮೊದಲ ಸಿನಿಮಾ ರಾಜ್ಯ ನಂದಿ ಪ್ರಶಸ್ತಿಯನ್ನು ಪಡೆದುಕೊಂಡಿತು.

    ಈ ರೀತಿ ಮೊದಲ ಚಿತ್ರದಲ್ಲೇ ಗೆದ್ದ ವಿಶ್ವನಾಥ್ 1980ರಲ್ಲಿ ಶಂಕರಾಭರಣಂ ಎಂಬ ಚಿತ್ರವನ್ನು ನಿರ್ದೇಶಿಸಿ ಅಭೂತಪೂರ್ವ ಯಶಸ್ಸು ಹಾಗೂ ಖ್ಯಾತಿಯನ್ನು ಪಡೆದುಕೊಂಡರು. ಈ ಚಿತ್ರಕ್ಕೆ ದೇಶವ್ಯಾಪಿ ಮನ್ನಣೆ ಸಿಕ್ಕಿತ್ತು. ಈ ಚಿತ್ರ ನಾಲ್ಕು ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ಕೆ ವಿಶ್ವನಾಥ್ ಅವರು ಕಮಲ್ ಹಾಸನ್, ಚಂದ್ರ ಮೋಹನ್, ವಿಕ್ಟರಿ ವೆಂಕಟೇಶ್, ಶೋಬನ್ ಬಾಬು, ಕೃಷ್ಣಂ ರಾಜು ಸೇರಿದಂತೆ ಹಲವು ಪ್ರಮುಖ ನಟರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು 1992ರಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೂ ಸಹ ಪಾತ್ರರಾಗಿದ್ದ ಇವರು ಐದಾರು ರಾಷ್ಟ್ರ ಪ್ರಶಸ್ತಿ ಹಾಗೂ ಮೂರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

    Legendary director K Viswanath is died at the age of 92; celebrities mourns for huge loss

    ಸದ್ಯ ಕೆ ವಿಶ್ವನಾಥ್ ಅವರ ಅಗಲಿಕೆಗೆ ಸಿನಿಮಾ ಕ್ಷೇತ್ರದ ಹಲವು ದಿಗ್ಗಜ ನಟರು ಹಾಗೂ ಇತರೆ ಕಲಾವಿದರು ಸಂತಾಪ ಸೂಚಿಸಿದ್ದು, ತೆಲುಗು ಚಿತ್ರದ ಖ್ಯಾತಿಯನ್ನು ದೇಶಾದ್ಯಂತ ಸಾರಿದ ಸಾಧಕರಲ್ಲಿ ಕೆ ವಿಶ್ವಾನಾಥ್ ಅವರೂ ಕೂಡ ಒಬ್ಬರು, ಅವರು ಶಂಕರಾಭರಣಂ ಹಾಗೂ ಸಾಗರ ಸಂಗಮಂ ರೀತಿಯ ಹಲವು ಅದ್ಭುತ ಚಿತ್ರಗಳನ್ನು ನೀಡಿದ್ದಾರೆ, ಇದು ತುಂಬಲಾರದ ನಷ್ಟ ಎಂದು ಜೂನಿಯರ್ ಬರೆದುಕೊಂಡಿದ್ದಾರೆ. ಇದರ ಜತೆಗೆ ಎಆರ್ ರಹಮಾನ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಸ್ಟಾರ್ ನಟರು, ನಿರ್ದೇಶಕರು, ಸಂಗೀತ ನಿರ್ದೇಶಕರು ಹಾಗೂ ನಿರ್ಮಾಪಕರು ದಿಗ್ಗಜ ನಿರ್ದೇಶಕನ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    English summary
    Legendary director K Viswanath is died at the age of 92; celebrities mourns for huge loss. Take a look
    Friday, February 3, 2023, 8:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X