Don't Miss!
- News
ನೋಡ ಬನ್ನಿರಾ ಪರಶುರಾಮ ಥೀಮ್ ಪಾರ್ಕ್: ಸಚಿವ ಸುನಿಲ್ ಕುಮಾರ್ ಸಂದರ್ಶನ
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದೇವರಕೊಂಡ ಜೊತೆ 5 ದಿನ 100 ಮಂದಿಗೆ ಉಚಿತ ಪ್ರವಾಸ: ನೀವು ಆ ಅದೃಷ್ಟವಂತರಾಗಬಹುದು!
'ಅರ್ಜುನ್ ರೆಡ್ಡಿ' ಆಗಿ ವಿಜಯ್ ದೇವರಕೊಂಡ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ್ದು ಗೊತ್ತೇಯಿದೆ. ದೇವರಕೊಂಡಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರೊಟ್ಟಿಗೆ ಒಳ್ಳೆ ರಿಲೇಶನ್‌ಶಿಪ್ ಕೂಡ ಮೇಂಟೇನ್ ಮಾಡ್ತಿರ್ತಾರೆ. ಇದೀಗ 100 ಜನ ಅಭಿಮಾನಿಗಳನ್ನು ಉಚಿತವಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.
ಕೆಲ ವರ್ಷಗಳಿಂದ ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ 'ದೇವರಸಂತಾ' ಹೆಸರಿನಲ್ಲಿ ವಿಜಯ್ ಉಡುಗೊರೆಗಳನ್ನು ಕೊಡುತ್ತಾ ಬರುತ್ತಿದ್ದಾರೆ. ಈ ವರ್ಷ 100 ಜನ ಅಭಿಮಾನಿಗಳನ್ನು ಉಚಿತವಾಗಿ ಪ್ರವಾಸಕ್ಕೆ ಕಳುಹಿಸುವುದಾಗಿ ಟಾಲಿವುಡ್ ಅರ್ಜುನ್ ರೆಡ್ಡಿ ಹೇಳಿದ್ದರು. ಆ ಮಾತನ್ನು ನಡೆಸಿಕೊಡಲು ಮುಂದಾಗಿದ್ದಾರೆ. 100 ಜನರನ್ನು ಎಲ್ಲಾ ವೆಚ್ಚ ಭರಿಸಿ ಪ್ರವಾಸಕ್ಕೆ ಕಳುಹಿಸುವುದಾಗಿ ಹೇಳಿದ್ದರು. ಡೆಸ್ಟಿನೇಷನ್ ಸೆಲೆಕ್ಟ್ ಮಾಡಿಕೊಳ್ಳಿ ಎಂತೂ ಸುವರ್ಣಾವಕಾಶ ಕೊಟ್ಟಿದ್ದರು. ಇದೀಗ ಮನಾಲಿಗೆ ಪ್ರವಾಸಕ್ಕೆ ಕಳುಹಿಸುವುದಾಗಿ ವಿವರಿಸಿ ವಿಡಿಯೋ ಶೇರ್ ಮಾಡಿದ್ದಾರೆ.
ಜಪಮಾಲೆ
ಬಿಟ್ಟಿರದ
ಸಮಂತಾ:
ಆಧ್ಯಾತ್ಮದತ್ತ
ಹೊರಳಿದ್ರಾ
ಸ್ಯಾಮ್?
ಏನಿದು
ಲಕ್ಷ
ಜಪ
ಸೀಕ್ರೆಟ್?
ಯಾರೆಗೆಲ್ಲಾ ಈ ಸುವರ್ಣವಕಾಶ ಸಿಗಲಿದೆ? ಈ ಉಚಿತ ಪ್ರವಾಸಕ್ಕೆ ಹೋಗಲು ಏನು ಮಾಡಬೇಕು? ಯಾರೆಲ್ಲಾ ಹೋಗಬಹುದು? ಎನ್ನುವುದನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ವಿಜಯ್ ದೇವರಕೊಂಡ ಹಂಚಿಕೊಂಡಿರುವ ವಿಡಿಯೋದಲ್ಲಿ ಏನಿದೆ ಅಂದರೆ, "ಹ್ಯಾಪಿ ನ್ಯೂ ಇಯರ್ ಮೈ ಲವ್ಸ್.. ಇದು ದೇವರಶಾಂತ ಅಪ್‌ಡೇಟ್, ನಾನು ಇದುವರಗೆ ಹೇಳಿದಂತೆ ನಿಮ್ಮಲ್ಲಿ 100 ಮಂದಿಯನ್ನು ಫುಡ್, ಟ್ರಾವೆಲ್, ಅಕಾಮಿಡೇಷನ್ ವೆಚ್ಚಗಳೊಂದಿಗೆ ಹಾಲಿಡೇ ಟ್ರಿಪ್‌ಗೆ ಕಳುಹಿಸಲಿದ್ದೇನೆ. ನೀವು ಸೆಲೆಕ್ಟ್ ಮಾಡಿಕೊಂಡಂತೆ ನೂರು ಮಂದಿಯನ್ನು ಮನಾಲಿಗೆ ಐದು ದಿನಗಳ ಪ್ರವಾಸಕ್ಕೆ ಕಳುಹಿಸುತ್ತಿದ್ದೇನೆ. ಮಂಜಿನಿಂದ ಮುಚ್ಚಲ್ಪಟ್ಟ ಪರ್ವತಗಳನ್ನು ನೀವು ನೋಡಲಿದ್ದೀರಿ. ದೇವಸ್ಥಾನಗಳು, ಮಠಗಳು ನೋಡಲು ನಿಮ್ಮ ಟೂರ್ ಕಾರ್ಯಕ್ರಮಗಳನ್ನು ಪ್ಲಾನ್ ಮಾಡಿ" ಎಂದಿದ್ದಾರೆ.

ಪ್ರವಾಸಕ್ಕೆ ವಿಜಯ್ ಕೂಡ ಬರ್ತಾರೆ
"18 ವರ್ಷ ಮೇಲ್ಪಟ್ಟವರು, ಇನ್‌ಸ್ಟಾದಲ್ಲಿ ಅಟಾಚ್ ಮಾಡಲಾದ 'ದೇವರಸಂತಾ' ಗೂಗಲ್ ಡಾಕ್ಯುಮೆಂಟ್ ಫಾಮ್ ಪೂರ್ಣಗೊಳಿಸಬೇಕು. ಅದರಲ್ಲಿ 100 ಜನರನ್ನು ಸೆಲೆಕ್ಟ್ ಮಾಡಿ ಈ ವಕೇಶನ್‌ಗೆ ಕಳುಹಿಸುತ್ತೇವೆ. ನಾನು ಕೂಡ ನಿಮ್ಮ ಪ್ರಯಾಣದಲ್ಲಿ ಭಾಗಿಯಾಗಲು ಇಷ್ಟಪಡುತ್ತೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಮತ್ತಷ್ಟು ಅದ್ಭುತ ವರ್ಷ ನಿಮ್ಮ ಮುಂದಿದೆ" ಎಂದು ವಿಜಯ್ ತನ್ನ ಪೋಸ್ಟ್‌ಗೆ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈಗಾಗಲೇ ಲಕ್ಷಕ್ಕೂ ಅಧಿಕ ಜನ ಫಾಮ್ ತುಂಬಿ ಕಳುಹಿಸಿದ್ದಾರೆ.

'ಲೈಗರ್' ಸೋಲಿನ ಪೆಟ್ಟು
ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಬಹುಕೋಟಿ ವೆಚ್ಚದಲ್ಲಿ ಪುರಿ ಜಗನ್ನಾಥ್ ಈ ಚಿತ್ರವನ್ನು ನಿರ್ಮಿಸಿದ್ದರು. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದುಕೊಂಡಿದ್ದ ವಿಜಯ್ ದೇವರಕೊಂಡಗೆ ನಿರಾಸೆ ಕಾದಿತ್ತು. ಸಿನಿಮಾ ದೊಡ್ಡಮಟ್ಟದಲ್ಲಿ ನಷ್ಟ ತಂದೊಡ್ಡಿತ್ತು. ಇನ್ನು ಈ ಸೋಲಿನಿಂದ ಇಡೀ ಚಿತ್ರತಂಡ ಹೊರ ಬಂದಿಲ್ಲ.

ಸೈಲೆಂಟ್ ಆದ ದೇವರಕೊಂಡ
'ಲೈಗರ್' ಹೀನಾಯವಾಗಿ ಸೋಲುಂಡ ಮೇಲೆ ವಿಜಯ್ ದೇವರಕೊಂಡ ಸೈಲೆಂಟ್ ಆಗಿದ್ದಾರೆ. ಸಮಂತಾ ಅನಾರೋಗ್ಯದಿಂದ ಬಳಲುತ್ತಿರುವುದರಿಂದ 'ಖುಷಿ' ಸಿನಿಮಾ ಶೂಟಿಂಗ್ ನಿಂತು ಹೋಗಿದೆ. ಇನ್ನು 'ಲೈಗರ್' ನಂತರ ಅದೇ ಕಾಂಬಿನೇಷನ್‌ನಲ್ಲಿ 'ಜನ ಗಣ ಮನ' ಸಿನಿಮಾ ಬರಬೇಕಿತ್ತು. ದೊಡ್ಡಮಟ್ಟದಲ್ಲಿ ಸಿನಿಮಾ ಮುಹೂರ್ತ ಕೂಡ ನಡೆದಿತ್ತು. ಆದರೆ ಈಗ ಈ ಸಿನಿಮಾ ನಿರ್ಮಾಣವಾಗುವುದೇ ಅನುಮಾನ ಎನ್ನಲಾಗ್ತಿದೆ.