twitter
    For Quick Alerts
    ALLOW NOTIFICATIONS  
    For Daily Alerts

    ದಿಲ್ ರಾಜು ಬಗ್ಗೆ ಯಾರೂ ಮಾತಾಡಲ್ಲ: ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದ 'ಲೈಗರ್' ವಿತರಕ!

    |

    'ಲೈಗರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ. ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾ ಬೇಜಾನ್ ಸದ್ದು ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಬಿಡುಗಡೆ ಬಳಿಕ ಈ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿತ್ತು.

    ಸದ್ಯ 'ಲೈಗರ್' ಸಿನಿಮಾ ಸೋಲಿನ ಡಿಬೇಟ್ ಇನ್ನೂ ನಿಂತಿಲ್ಲ. ಒಂದಲ್ಲ ಒಂದು ಮ್ಯಾಟರ್ ಟಾಲಿವುಡ್‌ನಿಂದ ಹೊರಬೀಳುತ್ತಿದೆ. ಈ ಮಧ್ಯೆ 'ಲೈಗರ್' ಸಿನಿಮಾ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದ ವಾರಂಗಲ್ ಶ್ರೀನು ಹೊಸ ಬಾಂಬ್ ಸಿಡಿಸಿದ್ದಾರೆ. ಸಿನಿಮಾ ಸೋಲಿನ ಬೆನ್ನಲ್ಲೇ ನಿರ್ಮಾಪಕ ದಿಲ್ ರಾಜು ವಿರುದ್ಧವೂ ಮಾತಾಡಿದ್ದಾರೆ.

    'ಮತ್ತೆ ತಿರುಗೇಟು ನೀಡುತ್ತೇವೆ' ಎಂದ ಚಾರ್ಮಿ: 'ಲೈಗರ್' ಸೋಲಿನ ಬಳಿಕ ಸೋಶಿಯಲ್ ಮೀಡಿಯಾಗೆ ಬ್ರೇಕ್!'ಮತ್ತೆ ತಿರುಗೇಟು ನೀಡುತ್ತೇವೆ' ಎಂದ ಚಾರ್ಮಿ: 'ಲೈಗರ್' ಸೋಲಿನ ಬಳಿಕ ಸೋಶಿಯಲ್ ಮೀಡಿಯಾಗೆ ಬ್ರೇಕ್!

    ವಾರಂಗಲ್ ಶ್ರೀನುಗೆ 100 ಕೋಟಿ ರೂ. ನಷ್ಟ?

    ವಾರಂಗಲ್ ಶ್ರೀನುಗೆ 100 ಕೋಟಿ ರೂ. ನಷ್ಟ?

    ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ಸಿನಿಮಾ 'ಲೈಗರ್' ವಿತರಣೆ ಹಕ್ಕು ವಾರಂಗಲ್ ಶ್ರೀನು ಪಾಲಾಗಿತ್ತು. ದೊಡ್ಡ ಮೊತ್ತವನ್ನೇ ನೀಡಿ ಶ್ರೀನು 'ಲೈಗರ್' ಹಕ್ಕನ್ನು ಖರೀದಿ ಮಾಡಿದ್ದರು. ಆದರೆ, ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದರಿಂದ ವಿತರಕ ವಾರಂಗಲ್ ಶ್ರೀನುಗೆ ಅತೀ ಹೆಚ್ಚು ನಷ್ಟ ಆಗಿದೆ ಎನ್ನಲಾಗಿದೆ. ಅಲ್ಲದೆ ಕಳೆದ ಒಂದು ವರ್ಷದಲ್ಲಿ ವಾರಂಗಲ್ ಶ್ರೀನು ಸುಮಾರು 100 ಕೋಟಿ ರೂ. ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಶ್ರೀನು ಟಾಲಿವುಡ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "100 ಕೋಟಿ ರೂ. ಲಾಸ್ ಆಗಿದೆ ಅನ್ನೋದು ಸುಳ್ಳು. ಆದರೆ, ಲೈಗರ್ ಸಿನಿಮಾಗೆ ಹೂಡಿದ್ದ ಹಣದಲ್ಲಿ ಸುಮಾರು ಶೇ.65ರಷ್ಟು ನಷ್ಟ ಆಗಿದೆ." ಎಂದು ಹೇಳಿಕೆ ನೀಡಿದ್ದಾರೆ.

    ದಿಲ್ ರಾಜು Vs ಶ್ರೀನು

    ದಿಲ್ ರಾಜು Vs ಶ್ರೀನು

    ಟಾಲಿವುಡ್‌ನ ವಿತರಕರ ವಲಯದಲ್ಲಿ ಇಬ್ಬರ ಹೆಸರು ಜಾಲ್ತಿಯಲ್ಲಿ ಇದ್ದೇ ಇರುತ್ತೆ. ಒಬ್ಬರು ವಾರಂಗಲ್ ಶ್ರೀನು ಆದರೆ, ಇನ್ನೊಬ್ಬರು ದಿಲ್ ರಾಜು. ಇವರಿಬ್ಬರ ನಡುವೆ ಒಳಗೊಳಗೆ ಪೈಪೋಟಿ ನಡೆಯುತ್ತಲೇ ಇರುತ್ತೆ. ಇಬ್ಬರ ಆಯ್ಕೆ ಮಾಡಿಕೊಂಡ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಹಾಗಾಗಿಯೇ ವಾರಂಗಲ್ ಶ್ರೀನುಗೆ 'ಮ್ಯಾನ್ ವಿತ್ ಗೋಲ್ಡನ್ ಟಚ್' ಅಂತ ಕರೆಯುತ್ತಾರೆ. ಸದ್ಯ ಟಾಲಿವುಡ್‌ನಲ್ಲಿ ಇವರಿಬ್ಬರೂ ಗಳಿಕೆ ವಿಚಾರದಲ್ಲಿ ಪೈಪೋಟಿಗೆ ಬಿದ್ದಿದ್ದಾರೆ.

    ನಾನೇ ಟಾರ್ಗೆಟ್

    ನಾನೇ ಟಾರ್ಗೆಟ್

    ವಿತರಕ ವಾರಂಗಲ್ ಶ್ರೀನು ಹಲವು ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. ಈಗಾಗಲೇ 'ಹುಷಾರು', 'ಕಬಾಲಿ','ಇಸ್ಮಾರ್ಟ್ ಶಂಕರ್', 'ಗಡ್ಡಲ ಕೊಂಡ ಗಣೇಶ್','ನಾಂದಿ' ಹಾಗೂ 'ಕ್ರ್ಯಾಕ್' ಅಂತಹ ಸಿನಿಮಾಗಳನ್ನು ಈಗಾಗಲೇ ವಿತರಣೆ ಮಾಡಿದ್ದಾರೆ. ಆದ್ರೀಗ ಸಿನಿಮಾ 'ಲೈಗರ್' ಬಾರಿ ನಷ್ಟ ಅನುಭವಿಸುವಂತಾಗಿದೆ. ಈ ಬೆನ್ನಲ್ಲೇ " ನನ್ನನ್ನು ಕಾರಣವಿಲ್ಲದೆ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ, ಯಾರೊಬ್ಬರೂ ದಿಲ್ ರಾಜುಗೆ ಆದ ನಷ್ಟಗಳ ಬಗ್ಗೆ ಬರೆಯೋದೇ ಇಲ್ಲ." ಎಂದು ವಾರಂಗಲ್ ಶ್ರೀನು ಹೇಳಿಕೆ ಕೊಟ್ಟಿದ್ದಾರೆ.

    Recommended Video

    ಗಣೇಶೋತ್ಸವದಲ್ಲಿ ಪಾಲ್ಗೊಂಡ ಜಮೀರ್ ಅಹ್ಮದ್‌ ಖಾನ್ ಅವರ ಪುತ್ರ ಝೈದ್ ಖಾನ್ | Filmibeat Kannada
    'ಲೈಗರ್' ಒಂದು ವಿಧ್ವಂಸಕ

    'ಲೈಗರ್' ಒಂದು ವಿಧ್ವಂಸಕ

    ವಾರಂಗಲ್ ಶ್ರೀನು ವಿತರಣೆ ಮಾಡಿದ 'ಲೈಗರ್' ಸಿನಿಮಾ ಹೀನಾಯವಾಗಿ ಸೋತಿದೆ. ಪ್ಯಾನ್ ಇಂಡಿಯಾ ಸಿನಿಮಾ ಸೋಲನ್ನು ವಾರಂಗಲ್ ಶ್ರೀನು 'ವಿಧ್ವಂಸಕಕಾರಿ' ಎಂದು ಬಣ್ಣಿಸಿದ್ದಾರೆ. ಅಲ್ಲದೆ, ವಾರಂಗಲ್ ಶ್ರೀನುಗೆ ಸಿನಿಮಾ ಇಷ್ಟ ಆಗಿದೆ. ಆದರೆ, ಕ್ಲೈಮ್ಯಾಕ್ಸ್‌ ವೇಳೆ 7 ರಿಂದ 10 ನಿಮಿಷಗಳು ಚೆನ್ನಾಗಿಲ್ಲ." ಎಂದು ಹೇಳಿದ್ದಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ವಾರಂಗಲ್ ಶ್ರೀನು ತನ್ನ ಸೋಲನ್ನು ಬೇರೆಯವರ ಮೇಲೆ ಹಾಕುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದರು.

    English summary
    Liger Distributor Warangal Srinu Says He is Being Targeted No One Writes About Dil Raju, Know More.
    Tuesday, September 6, 2022, 0:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X