For Quick Alerts
  ALLOW NOTIFICATIONS  
  For Daily Alerts

  Liger First Review : 'ಲೈಗರ್' ಸಿನಿಮಾದ ಮೊದಲ ವಿಮರ್ಶೆ ಇಲ್ಲಿದೆ!

  |

  ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಸದ್ಯ ರಿಲೀಸ್‌ಗೆ ರೆಡಿಯಾಗಿದೆ. ಪ್ಯಾನ್ ಸಿನಿಮಾಗಳ ಸಾಲಿನಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿರುವ ಮತ್ತೊಂದು ಸಿನಿಮಾ ಎಂದರೆ ಅದು 'ಲೈಗರ್'. ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ನಟನೆಯ ಈ ಸಿನಿಮಾ ಈಗಾಗಲೇ ಹೆಚ್ಚು ಕ್ರೇಜ್ ಹುಟ್ಟು ಹಾಕಿದೆ.

  ಸಿನಿಮಾ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಸಿನಿಮಾದ ಪ್ರಚಾರ ಕಾರ್ಯವನ್ನು ಸಿನಿಮಾ ತಂಡ ದೊಡ್ಡ ಮಟ್ಟದಲ್ಲಿ ಮಾಡುತ್ತಿದೆ. ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಮತ್ತು ಇಡೀ ಚಿತ್ರತಂಡ ಭಾರತದಾದ್ಯಂತ ಸುತ್ತುತ್ತಿದೆ.

  ಪ್ರೀ ಬುಕಿಂಗ್‌ನಲ್ಲೇ ಕೋಟ್ಯಂತರ ಬಾಚಿದ 'ಲೈಗರ್': ಫುಲ್ ಖುಷಿಯಲ್ಲಿ ವಿಜಯ್ ದೇವರಕೊಂಡಪ್ರೀ ಬುಕಿಂಗ್‌ನಲ್ಲೇ ಕೋಟ್ಯಂತರ ಬಾಚಿದ 'ಲೈಗರ್': ಫುಲ್ ಖುಷಿಯಲ್ಲಿ ವಿಜಯ್ ದೇವರಕೊಂಡ

  ಈಗ ಸಿನಿಮಾದ ಪ್ರಚಾರ ಮುಗಿದಿದ್ದು, 'ಲೈಗರ್' ಹೇಗಿದೆ? ಹೇಗಿರಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದ್ದು, ಒಂದು ದಿನ ಮೊದಲೇ 'ಲೈಗರ್' ವಿಮರ್ಶೆ ಹೊರ ಬಂದಿದೆ. ಹಾಗಿದ್ದರೆ ಸಿನಿಮಾ ಹೇಗಿದೆ? ಚಿತ್ರದ ಹೈಲೈಟ್ಸ್ ಏನು ಎನ್ನುವುದನ್ನು ಮುಂದೆ ಓದಿ...

  'ಲೈಗರ್‌'ಗೆ 3 ಸ್ಟಾರ್!

  'ಲೈಗರ್‌'ಗೆ 3 ಸ್ಟಾರ್!

  ಸೌತ್ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆಯೊಂದಿಗೆ ಬರ್ತಿರೋ ಲೈಗರ್ ರಿಲೀಸ್‌ಗೆ ಇನ್ನೊಂದು ದಿನ ಬಾಕಿ ಇದೆ. ಆದರೆ ಅದಾಗಲೇ ಚಿತ್ರದ ವಿಮರ್ಶೆ ಹೊರ ಬಿದ್ದಿದೆ. ಉಮೈರ್ ಸಂದು ಈ ಚಿತ್ರದ ವಿಮರ್ಶೆ ಮಾಡಿದ್ದು, 3 ಸ್ಟಾರ್ ಕೊಟ್ಟಿದ್ದಾರೆ. " ಲೈಗರ್ ಸಿನಿಮಾ ಸೀಟಿ ಮಾರ್ ಎಂಟರ್ಟೈನರ್. ಇದು ವಿಜಯ್ ದೇವರಕೊಂಡ ಒನ್ ಮ್ಯಾನ್ ಶೋ... ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ವಿಜಯ್ ದೇವರಕೊಂಡ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಅತ್ಯುತ್ತಮವಾದ ಸಂಟ್‌ಗಳಿವೆ. ನಿರ್ದೇಶನ ಉತ್ತಮವಾಗಿದೆ. ಹಾಗೇ ರಮ್ಯಾ ಕೃಷ್ಣ ವಿಶೇಷವಾದ ಪಾತ್ರ ಸರ್ಪ್ರೈಸ್ ಎನಿಸುತ್ತದೆ." ಎಂದು ಬರೆದುಕೊಂಡಿದ್ದಾರೆ.

  200 ಕೋಟಿ ರೂ. ಗಳಿಕೆಯ ನಿರೀಕ್ಷೆ!

  200 ಕೋಟಿ ರೂ. ಗಳಿಕೆಯ ನಿರೀಕ್ಷೆ!

  'ಲೈಗರ್' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಚಿತ್ರದ ಗಳಿಕೆಯ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರಲ್ಲೂ ಚಿತ್ರತಂಡ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್ ಗಳಿಕೆ ಕಾಣಲಿದೆ ಎನ್ನುವ ನಿರೀಕ್ಷೆಯಲ್ಲಿದೆ. ಈ ವಿಚಾರವನ್ನು ಈ ಹಿಂದೆ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಹೇಳಿಕೊಂಡಿದ್ದರು. ಈ ಸಿನಿಮಾ ಎಷ್ಟು ಗಳಿಕೆ ಕಾಣಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ, ಲೈಗರ್ ಸಿನಿಮಾ 200 ಕೋಟಿ ರೂ. ಗಳಿಕೆ ಮಾಡಲಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಮೊದಲ ದಿನ ಎಷ್ಟು ಓಪನಿಂಗ್ ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಸೃಷ್ಟಿಯಾಗಿದೆ.

  'ಲೈಗರ್' ಬಾಲಿವುಡ್ ಗಳಿಕೆ ಮೇಲೆ ಕಣ್ಣು!

  'ಲೈಗರ್' ಬಾಲಿವುಡ್ ಗಳಿಕೆ ಮೇಲೆ ಕಣ್ಣು!

  ಇನ್ನು ಬಾಲಿವುಡ್‌ನಲ್ಲಿ ಸೌತ್ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಕಾರಣ 'ಲೈಗರ್' ಚಿತ್ರ ಬಾಲಿವುಡ್‌ನಲ್ಲಿ ಸದ್ದು ಮಾಡಲಿದೆ ನಿರೀಕ್ಷೆಗಳು ಹುಟ್ಟಿದೆ. ಹಾಗಾಗಿ ಈ ಸಿನಿಮಾದ ಬಾಲಿವುಡ್ ಗಳಿಕೆಯ ಮೇಲೆ ಕಣ್ಣು ಇದ್ದೇ ಇದೆ. ಹಾಗೊಂದು ವೇಳೆ 'ಲೈಗರ್' ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರೆ, ವಿಜಯ್ ದೇವರಕೊಂಡ ಕೂಡ ಉತ್ತರದ ಪ್ರೇಕ್ಷಕರ ಮನಗೆದ್ದ ಅಂತೆಯೇ ಅರ್ಥ. ಹಾಗಾಗಿ ಈ ಸಿನಿಮಾ ಬಾಲಿವುಡ್‌ನಲ್ಲಿ ಯಾವ ಮಟ್ಟಿಗೆ ಗಳಿಕೆ ಕಾಣಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ

  ನಾಳೆ 'ಲೈಗರ್' ತೆರೆಗೆ!

  ನಾಳೆ 'ಲೈಗರ್' ತೆರೆಗೆ!

  ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಾಯಕಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ತಾಯಿಯಾಗಿ ರಮ್ಯಾ ಕೃಷ್ಣ ನಟಿಸಿದ್ದು ವಿಶೇಷ ಪಾತ್ರವೊಂದರಲ್ಲಿ ಜಗತ್‌ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ನಟಿಸಿದ್ದಾರೆ. ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ಸಹ ಪುರಿ ಜಗನ್ನಾಥ್ ನಿರ್ಮಾಪಕರೂ ಆಗಿದ್ದಾರೆ.

  English summary
  Liger First Review By Member of the Overseas Censor Board Umair Sandhu, Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X