Don't Miss!
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಮಿರ್ ಖಾನ್ 'ಪಿಕೆ' ನೆನಪಿಸಿದ ವಿಜಯ್ ದೇವರಕೊಂಡ 'ಲೈಗರ್'!
ಸಿನಿಮಾರಂಗದಲ್ಲಿ ಹೆಚ್ಚು ಕ್ರೇಜ್ ಹೊಂದಿರುವ ನಟ ವಿಜಯ್ ದೇವರಕೊಂಡ ಸ್ವಪ್ರಯತ್ನದಿಂದ ಸಿನಿಮಾ ಪ್ರವೇಶಿಸಿದ ನಟ. ಅತಿ ಕಡಿಮೆ ಸಮಯದಲ್ಲಿ ಜನಮನ್ನಣೆ ಗಳಿಸಿ ಸ್ಟಾರ್ ಪಟ್ಟ ಗಳಿಸಿದ ನಾಯಕರಲ್ಲಿ ಒಬ್ಬರು. ಹೀರೊ ಆಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ವಿಜಯ್ ಹಿಂತಿರುಗಿ ನೋಡದೆ ಯಶಸ್ಸಿನ ಮಟ್ಟಿಲು ಹತ್ತುತ್ತಾ ಮುಂದೆ ಸಾಗಿದ್ದಾರೆ.
ಹಾಗಂತ ವಿಜಯ್ ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಯಾವುದೇ ದೊಡ್ಡ ಮಟ್ಟದ ಬ್ರೇಕ್ ತೆಗೆದುಕೊಂಡಿಲ್ಲ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ ವಿಜಯ್ ದೇವಕೊಂಡ ಅಭಿಮಾನಿಗಳ ಬಳಗ ಬೆಳೆಯುವುದರ ಜೊತೆಗೆ, ಸ್ಟಾರ್ ಡಮ್ ಕೂಡ ಹೆಚ್ಚಾಗುತ್ತಿದೆ.
ಚಿತ್ರೀಕರಣದ
ವೇಳೆ
ಕಾರು
ಪಲ್ಟಿ,
ವಿಜಯ್
ದೇವರಕೊಂಡ,
ಸಮಂತಾಗೆ
ಗಾಯ
ಈ ಉತ್ಸಾಹದಿಂದಲೇ ಇದೀಗ 'ಲೈಗರ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸದ್ದು ಮಾಡಲು ಸಜ್ಜಾಗಿದ್ದಾರೆ. ವಿಜಯ್ ದೇವರಕೊಂಡ ಮುಂದಿನ ಸಿನಿಮಾ ಲೈಗರ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಹಲವರು ಹಲವು ರೀತಿಯಲ್ಲಿ ಅಚ್ಚರಿ ವ್ಯಕ್ತ ಪಡಿಸುತ್ತಿದ್ದಾರೆ.

'ಲೈಗರ್' ಲುಕ್‌ನಲ್ಲಿ ವಿಜಯ್ ದೇವರಕೊಂಡ!
ವಿಜಯ್ ದೇವರಕೊಂಡ ಆರಂಭದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದರು. ನಂತರ 'ಪೆಳ್ಳಿ ಚುಪ್ಲು' ಚಿತ್ರದ ಮೂಲಕ ವಿಜಯ್ ದೇವರಕೊಂಡ ಅವರನ್ನು ನಾಯಕನಾಗಿ ಪರಿಚಯವಾದರು. ಇದಾದ ಬಳಿಕ 'ಅರ್ಜುನ್ ರೆಡ್ಡಿ' ಮೂಲಕ ಸ್ಟಾರ್ ಸ್ಟೇಟಸ್ ಬಂದಿತ್ತು. 'ಗೀತ ಗೋವಿಂದಂ' ಮತ್ತು 'ಟ್ಯಾಕ್ಸಿವಾಲಾ' ಮುಂತಾದ ಚಿತ್ರಗಳ ಮೂಲಕ ಹಿಟ್‌ಗಳನ್ನು ಕೊಟ್ಟಿದ್ದಾರೆ. ಈಗ 'ಲೈಗರ್' ಮೂಲಕ ಮತ್ತೊಂದು ದಾಖಲೆ ಬರೆಯಲು ಸಿದ್ಧವಾಗಿದ್ದರೆ.
ಕರಣ್
ಜೋಹರ್
ಪಾರ್ಟಿಯಲ್ಲಿ
ರಶ್ಮಿಕಾ-ವಿಜಯ್
ದೇವರಕೊಂಡ
ಒಟ್ಟಿಗೆ
ಕಾಣಿಸಿಕೊಳ್ಳಲಿಲ್ಲ
ಯಾಕೆ?

ರೋಸ್ ಹಿಡಿದು ಬಂದ 'ಲೈಗರ್'!
'ಲೈಗರ್' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡುವುದರ ಜೊತೆಗೆ ಚಿತ್ರದ ಅಪ್‌ಡೇಟ್ ಕೊಟ್ಟಿದೆ ಸಿನಿಮಾ ತಂಡ. ಈ ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ರೋಸ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ಲುಕ್‌ನಲ್ಲಿ ಈ ಹಿಂದೆ ಹಿಂದಿಯ 'ಪಿಕೆ' ಚಿತ್ರದಲ್ಲಿ ನಟ ಆಮಿರ್ ಖಾನ್ ಕಾಣಿಸಿಕೊಂಡಿದ್ದರು. ಈ ಲುಕ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಪಾತ್ರದ ರಗಡ್‌ನೆಸ್ ಬಗ್ಗೆ ಹೇಳುತ್ತದೆ.
|
ಟ್ವೀಟ್ ಮಾಡಿದ ವಿಜಯ್ ದೇವರಕೊಂಡ!
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ ವಿಜಯ್ ದೇವರಕೊಂಡ, ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. "ನನ್ನ ಎಲ್ಲವನ್ನೂ ತೆಗೆದುಕೊಂಡ ಚಿತ್ರ. ಮಾನಸಿಕವಾಗಿ ಆಗಲಿ, ದೈಹಿಕವಾಗಿ ಆಗಲಿ, ಅಭಿನಯದಲ್ಲಾಗಲಿ ಇದು ನನ್ನ ಅತ್ಯಂತ ಸವಾಲಿನ ಪಾತ್ರ. ನಾನು ನಿಮಗೆ ಎಲ್ಲವನ್ನೂ ನೀಡುತ್ತೇನೆ. ಶೀಘ್ರದಲ್ಲೇ ಬರಲಿದೆ. ಲೈಗರ್." ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕರಣ್ ಜೋಹರ್ "ರೋಸ್, ರೋಸ್, ಇಂತಹ ಗಿಫ್ಟ್ ಸಿಗುವುದಿಲ್ಲ." ಎಂದು ಬರೆದುಕೊಂಡಿದ್ದಾರೆ.

'ಲೈಗರ್' ಆಗಿ ವಿಜಯ್ ಭೇಟೆ
ಟಾಲಿವುಡ್‌ನಲ್ಲಿ ಬಹಳ ದಿನಗಳಿಂದ ಸದ್ದು ಮಾಡುತ್ತಿರುವ ವಿಜಯ್ ದೇವರಕೊಂಡ 'ಲೈಗರ್' ಆಗಿ ಬೇಟೆಯಾಡಲು ರೆಡಿಯಾಗುತ್ತಿದ್ದಾರೆ. ಡೈನಾಮಿಕ್ ಡೈರೆಕ್ಟರ್ ಪೂರಿ ಜಗನ್ನಾಥ್ 'ಲೈಗರ್' ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಚಾರ್ಮಿ ಮತ್ತು ಪೂರಿ ಜಗನ್ನಾಥ್ ಜೊತೆಯಲ್ಲಿ ಕರಣ್ ಜೋಹರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇದರಲ್ಲಿ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸುತ್ತಿದ್ದಾರೆ.