twitter
    For Quick Alerts
    ALLOW NOTIFICATIONS  
    For Daily Alerts

    2022ರಲ್ಲಿ ಟಾಲಿವುಡ್‌ನಲ್ಲಿ ಗೆದ್ದದ್ದು ಈ 28 ಚಿತ್ರಗಳು ಮಾತ್ರ; ಉಳಿದವುಗಳೆಲ್ಲಾ ಫ್ಲಾಪ್!

    |

    2022ರಲ್ಲಿ ಭಾರತ ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್ ಚಿತ್ರಗಳು ಮಕಾಡೆ ಮಲಗಿದರೂ ಗೆದ್ದು ಬೀಗಿದ್ದು ಮಾತ್ರ ಸೌತ್ ಸಿನಿಮಾಗಳು ಎಂಬುದು ತಿಳಿದಿರುವ ವಿಷಯವೇ. ಬಾಯ್‌ಕಾಟ್ ಬಿಸಿಗೆ ಬಾಲಿವುಡ್ ಚಿತ್ರಗಳು ವಿಲವಿಲ ಎಂದು ಒದ್ದಾಡಿ ನಷ್ಟ ಅನುಭವಿಸಿದರೆ ಹಿಂದಿಗೆ ಡಬ್ ಆದ ದಕ್ಷಿಣ ಭಾರತದ ಚಿತ್ರಗಳೇ ಉತ್ತರ ಭಾರತದಲ್ಲಿ ಕೋಟಿ ಕೋಟಿ ಗಳಿಸಿದವು.

    ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಚಿತ್ರಗಳ ಪೈಕಿ ಬಹುತೇಕ ಚಿತ್ರಗಳು ದಕ್ಷಿಣ ಭಾರತದ ಚಿತ್ರಗಳೇ ಆಗಿದ್ದು, ಟಾಲಿವುಡ್, ಸ್ಯಾಂಡಲ್‌ವುಡ್ ಹಾಗೂ ಕಾಲಿವುಡ್ ಚಿತ್ರಗಳು ಈ ವರ್ಷ ಇಂಡಸ್ಟ್ರಿ ಹಿಟ್ ನೀಡುವಲ್ಲಿ ಯಶಸ್ವಿಯಾಗಿವೆ ಹಾಗೂ ಈ ಮೂರೂ ಇಂಡಸ್ಟ್ರಿಗಳೂ ಸಹ 500 ಕೋಟಿ ಕ್ಲಬ್ ಚಿತ್ರ ನೀಡುವಲ್ಲಿ ಗೆದ್ದಿವೆ.

    'ಉಪ್ಪೇನ' ನಟಿ ಕೃತಿ ಶೆಟ್ಟಿ ಕೈ ತಪ್ಪಿದ ಬಾಲಿವುಡ್ ಆಫರ್: ಇದೇ ಕಾರಣ! 'ಉಪ್ಪೇನ' ನಟಿ ಕೃತಿ ಶೆಟ್ಟಿ ಕೈ ತಪ್ಪಿದ ಬಾಲಿವುಡ್ ಆಫರ್: ಇದೇ ಕಾರಣ!

    ಇನ್ನು ಆರ್ ಆರ್ ಆರ್ ರೀತಿಯ ಸಾವಿರ ಕೋಟಿ ಕ್ಲಬ್ ಚಿತ್ರ ನೀಡಿದ ತೆಲುಗು ಚಿತ್ರರಂಗ ಹಲವಾರು ಹಿಟ್ ಚಿತ್ರಗಳನ್ನು ನೀಡಿದೆ. ಇದೀಗ ವರ್ಷಾಂತ್ಯದಲ್ಲಿ ಬಾಕ್ಸ್ ಆಫೀಸ್ ಮಾಹಿತಿಗಳನ್ನು ಆಂಧ್ರ ಬಾಕ್ಸ್ ಆಫೀಸ್ ಡಾಟ್ ಕಾಮ್ ಎಂಬ ವೆಬ್ ತಾಣ ಹಂಚಿಕೊಂಡಿದ್ದು, ತಮ್ಮ ಥಿಯೇಟ್ರಿಕಲ್ ಹಕ್ಕಿನ ಮೊತ್ತವನ್ನು ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿ ಹಿಟ್ ಹಾಗೂ ಸಾಧಾರಣಕ್ಕಿಂತ ಉತ್ತಮ ಎನಿಸಿಕೊಂಡ 28 ತೆಲುಗು ಚಿತ್ರಗಳಾವುವು ಎಂಬುದನ್ನು ಘೋಷಿಸಿದೆ. ಈ ಕುರಿತಾದ ಪಟ್ಟಿ ಈ ಕೆಳಕಂಡಂತಿದೆ.

    ಸೂಪರ್ ಹಿಟ್/ ಬ್ಲಾಕ್‌ಬಸ್ಟರ್

    ಸೂಪರ್ ಹಿಟ್/ ಬ್ಲಾಕ್‌ಬಸ್ಟರ್

    1. ಬಂಗಾರ್ರಾಜು

    2. ಡಿಜೆ ಟಿಲ್ಲು

    3. ಆರ್ ಆರ್ ( ಈ ವರ್ಷ ತೆಲುಗು ರಾಜ್ಯಗಳಲ್ಲಿ ಅತಿಹೆಚ್ಚು ಗಳಿಸಿದ ಚಿತ್ರ )

    4. ಕೆಜಿಎಫ್ ಚಾಪ್ಟರ್ 2 ( ಡಬ್ ) ( ಸೂಪರ್ ಬ್ಲಾಕ್‌ಬಸ್ಟರ್ )

    5. ಮೇಜರ್ ( ಡಬಲ್ ಬ್ಲಾಕ್‌ಬಸ್ಟರ್ )

    6. ವಿಕ್ರಮ್ ( ಡಬ್ ) ( ಹಿಟ್ )

    7. ಬಿಂಬಿಸಾರ ( ಡಬಲ್ ಬ್ಲಾಕ್‌ಬಸ್ಟರ್ )

    8. ಕಾರ್ತಿಕೇಯ 2 ( ಸೂಪರ್ ಬ್ಲಾಕ್‌ಬಸ್ಟರ್ )

    9. ಕಾಂತಾರ ( ಡಬ್ ) ( ಸೂಪರ್ ಬ್ಲಾಕ್‌ಬಸ್ಟರ್ )

    10. ಮಸೂದ ( ಬ್ಲಾಕ್ ಬಸ್ಟರ್ )

    11. ಲವ್ ಟುಡೇ ( ಡಬ್ , ಹಿಟ್ )

    12. ಹಿಟ್ ದ ಸೆಕೆಂಡ್ ಕೇಸ್ ( ಹಿಟ್ )

    13. ಸೀತಾ ರಾಮಮ್ ( ಡಬಲ್ ಬ್ಲಾಕ್ ಬಸ್ಟರ್ )

    14. ಅವತಾರ್ ದ ವೇ ಆಫ್ ವಾಟರ್ ( ಸೂಪರ್ ಬ್ಲಾಕ್ ಬಸ್ಟರ್ )

    15. ಧಮಾಕಾ ( ಸೂಪರ್ ಹಿಟ್ )

    ಸಾಧಾರಣ ಹಾಗೂ ಸಾಧಾರಣಕ್ಕಿಂತ ಉತ್ತಮ

    ಸಾಧಾರಣ ಹಾಗೂ ಸಾಧಾರಣಕ್ಕಿಂತ ಉತ್ತಮ

    1. ರೌಡಿ ಬಾಯ್ಸ್

    2. ಭೀಮ್ಲಾ ನಾಯಕ್

    3. ಅಶೋಕವನಂಲೋ ಅರ್ಜುನ ಕಲ್ಯಾಣಂ

    4. ಡಾನ್ ( ಡಬ್ )

    5. ಎಫ್ 3

    6. 777 ಚಾರ್ಲಿ ( ಡಬ್ )

    7. ವಿಕ್ರಾಂತ್ ರೋಣ ( ಡಬ್ )

    8. ಒಕೆ ಒಕ ಜೀವಿತಮ್

    9.ಬ್ರಹ್ಮಾಸ್ತ್ರ ( ಡಬ್ )

    10. ಸರ್ಕಾರು ವಾರಿ ಪಾಟ

    11. ಪೊನ್ನಿಯಿನ್ ಸೆಲ್ವನ್ 1 ( ಡಬ್ )

    12. ಸರ್ದಾರ್ ( ಡಬ್ )

    13. ಗಾಲೋಡು

    ಮಿಕ್ಕ ಚಿತ್ರಗಳೆಲ್ಲಾ ಸೋತವು

    ಮಿಕ್ಕ ಚಿತ್ರಗಳೆಲ್ಲಾ ಸೋತವು

    ಹೀಗೆ ಮೇಲ್ಕಂಡ 28 ಚಿತ್ರಗಳು ಬ್ಲಾಕ್‌ಬಸ್ಟರ್, ಹಿಟ್, ಸಾಧಾರಣಕ್ಕಿಂತ ಉತ್ತಮ ಎನಿಸಿಕೊಂಡರೆ ಈ ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳೆಲ್ಲಾ ಥಿಯೇಟ್ರಿಕಲ್ ಹಕ್ಕಿಗಿಂತ ಹೆಚ್ಚು ಗಳಿಸುವಲ್ಲಿ ವಿಫಲವಾಗಿ ಸೋಲುಂಡವು.

    ಬ್ಲಾಕ್ ಬಸ್ಟರ್ ಹಾಗೂ ಸಾಧಾರಣಕ್ಕಿಂತ ಉತ್ತಮ ಲೆಕ್ಕಾಚಾರ ಹೇಗೆ?

    ಬ್ಲಾಕ್ ಬಸ್ಟರ್ ಹಾಗೂ ಸಾಧಾರಣಕ್ಕಿಂತ ಉತ್ತಮ ಲೆಕ್ಕಾಚಾರ ಹೇಗೆ?

    ಯಾವ ಚಿತ್ರಗಳು ತಮ್ಮ ಥಿಯೇಟ್ರಿಕಲ್ ಹಕ್ಕಿನ ಮೊತ್ತಕ್ಕಿಂತ ಹೆಚ್ಚು ಹಣವನ್ನು ಗಳಿಸಿ ಸಂಪೂರ್ಣ ಲಾಭ ತರುತ್ತವೆಯೋ ಅವುಗಳನ್ನು ಬ್ಲಾಕ್‌ಬಸ್ಟರ್ ಎನ್ನಲಾಗುತ್ತದೆ. ಥಿಯೇಟ್ರಿಕಲ್ ಹಕ್ಕಿಗಿಂತ 200% ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳನ್ನು ಡಬಲ್ ಬ್ಲಾಕ್ ಬಸ್ಟರ್ ಎನ್ನಲಾಗುತ್ತೆ, 150ರಿಂದ 200% ಹೆಚ್ಚು ಗಳಿಸಿದ ಚಿತ್ರಗಳನ್ನು ಬ್ಲಾಕ್ ಬಸ್ಟರ್ ಎಂದು ಪರಿಗಣಿಸಲಾಗುತ್ತೆ. ಅದೇ ರೀತಿ 120ರಿಂದ 150% ಗಳಿಸಿದ ಚಿತ್ರಗಳನ್ನು ಸೂಪರ್ ಹಿಟ್ ಹಾಗೂ 100ರಿಂದ 120% ಗಳಿಸಿದ ಚಿತ್ರಗಳನ್ನು ಹಿಟ್ ಎಂದು ನಿರ್ಧರಿಸಲಾಗುತ್ತರೆ. 90ರಿಂದ 100% ಗಳಿಸಿದ ಚಿತ್ರಗಳನ್ನು ಸಾಧಾರಣಕ್ಕಿಂತ ಉತ್ತಮ ಎಂದು ಪರಿಗಣಿಸಲಾಗುತ್ತೆ. ಇನ್ನು 80ರಿಂದ 90% ಗಳಿಸಿದ ಚಿತ್ರಗಳನ್ನು ಸಾಧಾರಣ ಎನ್ನುತ್ತಾರೆ. ಉಳಿದ ಚಿತ್ರಗಳನ್ನು ಫ್ಲಾಪ್, ಡಿಸಾಸ್ಟರ್ ಆಗಿ ಸೋತ ಚಿತ್ರಗಳು ಎನ್ನಲಾಗುತ್ತದೆ.

    Read more about: rrr kgf 2 best of 2022 tollywood
    English summary
    List of 28 telugu blockbuster and above average films in the year 2022. Take a look
    Wednesday, December 28, 2022, 10:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X