For Quick Alerts
  ALLOW NOTIFICATIONS  
  For Daily Alerts

  ನಟಿ ಸಮಂತಾ ರಿಜೆಕ್ಟ್ ಮಾಡಿದ ಈ ಸಿನಿಮಾಗಳು ಸೂಪರ್ ಹಿಟ್ ಆಗಿವೆ

  |

  ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 10 ವರ್ಷಗಳ ಸಿನಿಮಾ ಪಯಣದಲ್ಲಿ ಸಮಂತಾ ಅದ್ಭುತ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ, ರಂಜಿಸುತ್ತಿದ್ದಾರೆ. ಈಗಲೂ ಬೇಡಿಯನ್ನು ಕುಗ್ಗಿಸಿಕೊಳ್ಳದ ಸಮಂತಾ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

  ಮದುವೆ ಬಳಿಕವೂ ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಸ್ಯಾಮ್ ಈ ಹಿಂದೆ ಅನೇಕ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ನಟ-ನಟಿಯರು ಸಿನಿಮಾ ರಿಜೆಕ್ಟ್ ಮಾಡುವುದು ಸಹಜ. ಅನೇಕ ಕಾರಣಗಳಿಂದ ತಿರಸ್ಕರಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿ ಬಳಿಕ ಅಷ್ಟೆ ನೊಂದುಕೊಂಡ ಉದಾಹರಣೆಗಳು ಇವೆ. ಸಮಂತಾ ಕೂಡ ಸಾಕಷ್ಟು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಅಕ್ಕಿನೇನಿ ಸೊಸೆ ತಿರಸ್ಕರಿಸಿದ ಸಿನಿಮಾಗಳು ಸೂಪರ್ ಆಗಿವೆ. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿದೆ.

  ಕಂಗನಾಗೆ ಸಾಥ್ ನೀಡಿದ ನಟಿ ಸಮಂತಾ; ಬಾಲಿವುಡ್ 'ಕ್ವೀನ್' ಹೇಳಿದ್ದೇನು?

  ಕಾದಲ್ ಸಿನಿಮಾ

  ಕಾದಲ್ ಸಿನಿಮಾ

  ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಬಂದ ಕಾದಲ್ ಸಿನಿಮಾಗೆ ಮೊದಲು ಆಯ್ಕೆ ಸಮಂತಾ ಅಕ್ಕಿನೇನಿ ಆಗಿದ್ದರು. ಆದರೆ ಸಮಂತಾ ಈ ಸಿನಿಮಾವನ್ನು ತಿರಸ್ಕರಿಸುತ್ತಾರೆ. ಗೌತಮ್ ಕಾರ್ತಿಕ್, ಅರವಿಂದ್ ಸ್ವಾಮಿ, ಮತ್ತು ಅರ್ಜುನ್ ನಟಿಸಿದ್ದ ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಮೀನುಗಾರರ ಜೀವನದ ಸುತ್ತ ಸುತ್ತುವ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  ಎವಡು

  ಎವಡು

  ಟಾಲಿವುಡ್ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಟಿಸಿರುವ ಎವಡು ಸಿನಿಮಾಗೂ ಮೊದಲ ಆಯ್ಕೆ ಸಮಂತಾ ಆಗಿದ್ದರು. ಆದರೆ ಸ್ಯಾಮ್ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ. ಡೇಟ್ ಹೊಂದಾಣಿಕೆಯ ಕಾರಣ ಈ ಸಿನಿಮಾ ರಿಜೆಕ್ಟ್ ಮಾಡಿದ್ದಾರೆ. ಈ ಸಿನಿಮಾ ಕೂಡ ಭರ್ಜರಿ ಸಕ್ಸಸ್ ಕಾಣುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದೆ. ಚಿತ್ರದಲ್ಲಿ ನಾಯಕಿಯರಾಗಿ ಶ್ರುತಿ ಹಾಸನ್, ಆಮಿ ಜಾಕ್ಸನ್ ಮತ್ತು ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿದ್ದಾರೆ.

  ದಶಕದ ಬಳಿಕ ನನ್ನ ಕನಸಿನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ: ನಟಿ ಸಮಂತಾ

  ವಿಕ್ರಮ್ ಐ ಸಿನಿಮಾ

  ವಿಕ್ರಮ್ ಐ ಸಿನಿಮಾ

  ಸಮಂತಾ ರಿಜೆಕ್ಟ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ ತಮಿಳಿನ ಬ್ಲಾಕ್ ಬಸ್ಟರ್ ಹಿಟ್ ಐ ಸಿನಿಮಾ ಕೂಡ ಇದೆ. ಸಮಂತಾ ತಿರಸ್ಕರಿಸಿದ ಪ್ರತಿಷ್ಠಿತ ಸಿನಿಮಾ ಇದಾಗಿದೆ. ವಿಭಿನ್ನ ಪಾತ್ರದ ಮೂಲಕ ವಿಕ್ರಮ್ ಚಿತ್ರಪ್ರೇಕ್ಷಕರ ಮನ ಗೆದ್ದಿದ್ದರು. ಶಂಕರ್ ನಿರ್ದೇಶನದಲ್ಲಿ ಬಂದ ಐ ಸಿನಿಮಾ ಬಾಕ್ಸ್ ಆಫೀಸ್ ಭರ್ಜರಿ ಕಲೆಕ್ಷನ್ ಮಾಡಿತ್ತು. ಸ್ಯಾಮ್ ಮಾಡಬೇಕಿದ್ದ ಪಾತ್ರವನ್ನು ನಟಿ ಆಮಿ ಜಾಕ್ಸನ್ ನಿರ್ವಹಿಸಿದ್ದಾರೆ.

  ಸರ್ಕಾರದ ನಿರ್ಧಾರಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು? | Filmibeat Kannada
  ನಿನ್ನು ಕೋರಿ

  ನಿನ್ನು ಕೋರಿ

  ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ನಾಯಕನಾಗಿ ನಟಿಸಿರುವ ನಿನ್ನು ಕೋರಿ ಸಿನಿಮಾಗೂ ಮೊದಲ ಆಯ್ಕೆ ಸಮಂತಾ ಆಗಿದ್ದರು. ಬಳಿಕ ಸಮಂತಾ ಮಾಡಬೇಕಿದ್ದ ಪಾತ್ರವನ್ನು ನಿವೇತಾ ಥಾಮಸ್ ನಿಭಾಯಿಸಿದ್ದಾರೆ. ಲವ್ ಸ್ಟೋರಿ ಸಿನಿಮಾ ಇಗಿದ್ದು, ಚಿತ್ರ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ.

  ಇನ್ನು ಸಾಕಷ್ಟು ಸಿನಿಮಾಗಳು ಸಮಂತಾ ರಿಜೆಕ್ಟ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿದೆ. ಕನ್ನಡದ ಯು ಟರ್ನ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ನಟಿಸಿದ್ದ ಸಮಂತಾಗೆ ಹಿಂದಿಯಲ್ಲೂ ನಟಿಸುವ ಅವಕಾಶ ಒಲಿದು ಬಂದಿತ್ತು. ಆದರೆ ಸಮಂತಾ ಹಿಂದಿ ಯು ಟರ್ನ್ ನಲ್ಲಿ ನಟಿಸಲು ಒಲ್ಲೆ ಎಂದಿದ್ದಾರೆ ಎನ್ನುವ ಮಾಹಿತಿ ಕೂಡ ತಿಳಿದುಬಂದಿದೆ.

  English summary
  Here is the list of super hit movies rejected by Tollywood Actress Samantha Akkineni. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X