For Quick Alerts
  ALLOW NOTIFICATIONS  
  For Daily Alerts

  ತೆಲುಗು 'ಲವ್ ಮಾಕ್ಟೇಲ್' ಅಟ್ಟರ್ ಫ್ಲಾಪ್: ಕನ್ನಡ ಸಿನಿಮಾ ಬಜೆಟ್‌ನಷ್ಟು ಕಲೆಕ್ಷನ್ ಮಾಡ್ಲಿಲ್ಲ!

  |

  ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಲವ್ ಮಾಕ್ಟೇಲ್ ಸಿನಿಮಾ ತೆಲುಗಿಗೆ ರೀಮೆಕ್ ಆಗಿತ್ತು. ಕನ್ನಡ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದರಿಂದ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇತ್ತು. ಆದರೆ ಒಂದೇ ವಾರಕ್ಕೆ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಮುಕ್ತಾಯವಾಗಿದೆ.

  'ಗುರ್ತುಂದಾ ಶೀತಾಕಾಲಂ' ಹೆಸರಿನಲ್ಲಿ 'ಲವ್ ಮಾಕ್ಟೇಲ್' ಚಿತ್ರವನ್ನು ತೆಲುಗಿಗೆ ಕಟ್ಟಿಕೊಡಲಾಗಿತ್ತು. ತೆಲುಗಿನ ಭರವಸೆಯ ಯುವನಟ ಸತ್ಯದೇವ್ ಹಾಗೂ ತಮನ್ನಾ ಬಾಟಿಯಾ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಬಹಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಕಾರಣಾಂತರಗಳಿಂದ ರಿಲೀಸ್ ಆಗುವುದು ತಡವಾಗಿತ್ತು. ಒಂದು ಹಂತದಲ್ಲಿ ನಿಂತೇ ಹೋಯಿತು ಎಂದು ಕೊಂಡಿದ್ದ ಸಿನಿಮಾ ಅಂತೂ ಇಂತೂ ಥಿಯೇಟರ್‌ ಬಂದಿತ್ತು.

  "ಯಾವುದನ್ನು ಕೂಡ ನಿರೀಕ್ಷೆ ಮಾಡಬಾರದು.. ರಶ್ಮಿಕಾ ಬ್ಯಾನ್ ಮಾಡಿದ್ರೆ ಕನ್ನಡ ಇಂಡಸ್ಟ್ರಿಗೆ ನಷ್ಟ": ಮೈನಾ ನಾಗಶೇಖರ್

  ಕನ್ನಡದಲ್ಲಿ ಆದಿ, ನಿಧಿಮಾ ಜೋಡಿಯ ಭಾವನಾತ್ಮಕ ಪ್ರೇಮಕಥೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಆರಂಭದಲ್ಲಿ ಕೊಂಚ ಹಿನ್ನಡೆಯಾದರೂ ನಿಧಾನವಾಗಿ ಬಾಕ್ಸಾಫೀಸ್‌ ಶೇಕ್ ಮಾಡಿತ್ತು. ಆದರೆ ತೆಲುಗಿನಲ್ಲಿ ಸಿನಿಮಾ ಹೀನಾಯವಾಗಿ ಸೋಲುಂಡಿದೆ.

  ಒಟ್ಟು 39 ಲಕ್ಷ ಕಲೆಕ್ಷನ್

  ಒಟ್ಟು 39 ಲಕ್ಷ ಕಲೆಕ್ಷನ್

  'ಗುರ್ತುಂದಾ ಶೀತಾಕಾಲಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿದೆ. ತಮನ್ನಾ ರೀತಿಯ ಸ್ಟಾರ್ ಹೀರೊಯಿನ್ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ಸಿನಿಮಾ ಬಗ್ಗೆ ನಿರೀಕ್ಷೆ ಇತ್ತು. ಮೊದಲ ದಿನ ಸಿನಿಮಾ ಬಗ್ಗೆ ಒಳ್ಳೆ ಮಾತುಗಳು ಕೇಳಿಬಂದಿತ್ತು. ಸಿನಿಮಾ ಕಥೆ, ಸತ್ಯದೇವ್ ಹಾಗೂ ತಮನ್ನಾ ಅಭಿನಯಕ್ಕೂ ಮೆಚ್ಚುಗೆ ಸಿಕ್ಕಿತ್ತು. ಆದರೆ ಸಿನಿಮಾ ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಬರಲೇಯಿಲ್ಲ. ಒಂದೇ ವಾರಕ್ಕೆ ಥಿಯೇಟರ್‌ಗಳಿಂದ ಎತ್ತಂಗಡಿಯಾದ ಸಿನಿಮಾ ಒಟ್ಟು ಗಳಿಸಿರುವ 39 ಲಕ್ಷ ಮಾತ್ರ ಎಂದು ಟಾಲಿವುಡ್ ಸಿನಿ ಪಂಡಿತರು ಲೆಕ್ಕ ಕೊಡುತ್ತಿದ್ದಾರೆ.

  1.61 ಕೋಟಿ ರೂ. ನಷ್ಟ

  1.61 ಕೋಟಿ ರೂ. ನಷ್ಟ

  ಸಿನಿಮಾ 1.72 ಕೋಟಿ ಥ್ರಿಯೇಟ್ರಿಕಲ್ ಬ್ಯುಸಿನೆಸ್ ಮಾಡಿತ್ತು. ಬ್ರೇಕ್ ಈವನ್ ಆಗುವುದಕ್ಕೆ 2 ಕೋಟಿ ಶೇರ್ ಬರಬೇಕಿತ್ತು. ಆದರೆ ಸಿನಿಮಾ ಒಟ್ಟು ಕಲೆಕ್ಷನ್ 40 ಲಕ್ಷ ದಾಟಿಲ್ಲ. ಇದರಿಂದ ವಿತರಕರು 1.61 ಕೋಟಿ ನಷ್ಟ ಅನುಭವಿಸಿದ್ದಾರೆ. ಕೆಲವರು ಸಿನಿಮಾ ನೋಡಲು ಸೀರಿಯಲ್ ತರ ಇದೆ ಎಂದಿದ್ದಾರೆ. ಒಳ್ಳೆ ಸಿನಿಮಾ ಆದರೆ ಓಟಿಟಿ ಕಂಟೆಂಟ್ ಎನ್ನುವುದು ಕೆಲವರ ವಾದ. ಹಾಗಾಗಿ ಸಿನಿಮಾ ಡಿಜಿಟಲ್ ಮಾಧ್ಯಮದಲ್ಲಿ ಸದ್ದು ಮಾಡುವ ಸಾಧ್ಯತೆಯಿದೆ.

  ತಮನ್ನಾಗೆ ಕಥೆ ಹೇಳಿ ಒಪ್ಪಿಸಿದ್ದ ನಿರ್ದೇಶಕ

  ತಮನ್ನಾಗೆ ಕಥೆ ಹೇಳಿ ಒಪ್ಪಿಸಿದ್ದ ನಿರ್ದೇಶಕ

  ಸತತ ಸೋಲುಗಳಿಂದ ಕಂಗೆಟ್ಟಿದ್ದ ನಿರ್ದೇಶಕ ನಾಗಶೇಖರ್ 'ಲವ್ ಮಾಕ್ಟೇಲ್' ಮೂಲಕ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ತಮನ್ನಾಗೆ ಕಥೆ ಹೇಳಿ ಒಪ್ಪಿಸಿ ಗೆದ್ದಿದ್ದರು. ನಿರ್ಮಾಪಕರನ್ನು ಹುಡುಕಿ ಸಿನಿಮಾ ಮಾಡಿದ್ದರು. ಆದರೆ ಅವರ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿದೆ. ಕನ್ನಡದಲ್ಲಿ ಸೂಪರ್ ಹಿಟ್ ಆದ ಸಿನಿಮಾ ತೆಲುಗಿನಲ್ಲಿ ಸೋತಿದ್ದು ಯಾಕೆ ಎನ್ನುವ ಚರ್ಚೆ ಶುರುವಾಗಿದೆ.

  ತಮಿಳಿನಲ್ಲಿ ನಾಗಶೇಖರ್ ಹೀರೊ

  ತಮಿಳಿನಲ್ಲಿ ನಾಗಶೇಖರ್ ಹೀರೊ

  ಅಮರ್ ನಂತರ ನಾಗಶೇಖರ್ ಕನ್ನಡಕ್ಕಿಂತ ಹೆಚ್ಚು ತೆಲುಗು, ತಮಿಳಿನತ್ತ ಮುಖ ಮಾಡಿದ್ದಾರೆ. ತೆಲುಗಿನಲ್ಲಿ ನಿರ್ದೇಶಿಸಿದ್ದ 'ಗುರ್ತುಂದಾ ಶೀತಾಕಾಲಂ' ಸಿನಿಮಾ ಸೋತಿದೆ. 'ನವೆಂಬರ್ ಮಳೆಯಿಳ್ ನಾನು ಅವಳುಂ' ಹೆಸರಿನ ತಮಿಳು ಚಿತ್ರದಲ್ಲಿ ಒಂದು ವಿಭಿನ್ನ ಕಥೆ ಹೇಳಲು ನಾಗಶೇಖರ್ ಮುಂದಾಗಿದ್ದಾರೆ. ಚಿತ್ರವನ್ನು ನಿರ್ದೇಶನ ಮಾಡುವುದರ ಜೊತೆಗೆ ಹೀರೊ ಆಗಿ ನಟಿಸುತ್ತಿದ್ದಾರೆ.

  English summary
  Love Mocktail Remake Gurthunda Seethakalam turns out to be box office disaster. Satyadev and Tamanna bhatia Starrer Movie Didnt Impress Audience. know more.
  Sunday, December 18, 2022, 9:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X