For Quick Alerts
  ALLOW NOTIFICATIONS  
  For Daily Alerts

  ಪ್ರೇಮಿಗಳ ದಿನಕ್ಕೆ ವಿಶೇಷ ಉಡುಗೊರೆ ಪಡೆದ ಮಹೇಶ್ ಬಾಬು, ಅಲ್ಲು ಅರ್ಜುನ್

  |

  ನಟ ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ಗೆ ಈ ಪ್ರೇಮಿಗಳ ದಿನ ವಿಶೇಷವಾಗಿದೆ. ಇಬ್ಬರಿಗೂ ತಮ್ಮ ಪ್ರೀತಿ ಪಾತ್ರರಿಂದ ಒಳ್ಳೆಯ ಉಡುಗೊರೆ ದೊರೆತಿದೆ.

  ನಟ ಅಲ್ಲು ಅರ್ಜುನ್ ಗೆ ಪತ್ನಿ ಸ್ನೇಹ ರೆಡ್ಡಿ ಯಿಂದ ಪ್ರೇಮಿಗಳ ದಿನದ ಸಲುವಾಗಿ ವಿಶೇಷ ಉಡುಗೊರೆ ದೊರೆತಿದೆ. ಉಡುಗೊರೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟ ಅಲ್ಲು ಅರ್ಜುನ್.

  ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್, 'ಬಹಳ ಧನ್ಯವಾದಗಳು ಕ್ಯೂಟಿ, ಪ್ರೇಮಿಗಳ ದಿನದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ. ಪ್ರತಿವರ್ಷವೂ ಪ್ರೇಮಿಗಳ ದಿನದಂದು ಸ್ನೇಹ ರೆಡ್ಡಿ ಅಲ್ಲು ಅರ್ಜುನ್‌ಗೆ ಉಡುಗೊರೆ ನೀಡುತ್ತಾರೆ.

  ಮಗಳಿಂದ ಉಡುಗೊರೆ ಪಡೆದ ಮಹೇಶ್ ಬಾಬು

  ಮಗಳಿಂದ ಉಡುಗೊರೆ ಪಡೆದ ಮಹೇಶ್ ಬಾಬು

  ಇನ್ನು ಸುಂದರ ನಟ ಮಹೇಶ್ ಬಾಬು ಗೆ ಸಹ ಪ್ರೀತಿ ಪಾತ್ರರಿಂದ ಉಡುಗೊರೆ ಬಂದಿದೆ. ಆದರೆ ಅದು ಪತ್ನಿಯಿಂದ ಅಲ್ಲ ಮಗಳಿಂದ ಬಂದಿರುವ ಉಡುಗೊರೆ. ಸುಂದರ ಉಡುಗೊರೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಮಹೇಶ್ ಬಾಬು.

  ಟ್ರೈಲರ್ ಬಿಡುಗಡೆಯಲ್ಲೂ ಕುತೂಹಲ ಮೂಡಿಸಿದ ದರ್ಶನ್ | Filmibeat Kannada
  ಮಗಳಿಂದ ಮುದ್ದಾದ ಉಡುಗೊರೆ ಪಡೆದ ಮಹೇಶ್

  ಮಗಳಿಂದ ಮುದ್ದಾದ ಉಡುಗೊರೆ ಪಡೆದ ಮಹೇಶ್

  ಮಹೇಶ್ ಮಗಳು ಸಿತಾರಾ, 'ಲವ್ ಯೂ ಅಪ್ಪ-ಅಪ್ಪ. ನಿಮಗೆ ಪ್ರೇಮಿಗಳ ದಿನದ ಶುಭಾಶಯಗಳು' ಎಂದು ಬರೆದಿರುವ, ತಾನೇ ರಚಿಸಿರುವ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೃದಯ, ಚಿಟ್ಟೆ,ಹೂವುಗಳ ಚಿತ್ರವನ್ನು ಬರೆದಿದ್ದಾಳೆ ಪುಟಾಣಿ ಸಿತಾರಾ.

  ಸ್ನೇಹ ರೆಡ್ಡಿ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ

  ಸ್ನೇಹ ರೆಡ್ಡಿ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ

  ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ಇಬ್ಬರೂ ಪ್ರೇಮ ವಿವಾಹ ಆಗಿದ್ದರು. ಮಹೇಶ್ ಬಾಬು ಅವರು ತಮ್ಮ ಸಹನಟಿಯಾಗಿದ್ದ ನಮ್ರತಾ ಶಿರೋಡ್ಕರ್ ಅನ್ನು ಪ್ರೀತಿಸಿ ತಂದೆಯನ್ನು ಒಪ್ಪಿಸಿ ಮದುವೆಯಾದರು. ಇನ್ನು ಅಲ್ಲು ಅರ್ಜುನ್ ಅವರು ಯಾವುದೋ ಪಾರ್ಟಿಯಲ್ಲಿ ಸ್ನೇಹ ರೆಡ್ಡಿಯನ್ನು ನೋಡಿ ಇಷ್ಟಪಟ್ಟು, ಮನೆಯಲ್ಲಿ ಒಪ್ಪಿಸಿ, ಅವರ ಮನೆಯ ಹಿರಿಯರನ್ನು ಒಪ್ಪಿಸಿ ಮದುವೆಯಾದರು. ಸ್ನೇಹ ರೆಡ್ಡಿ ಮನೆಯಲ್ಲಿ ಮದುವೆಗೆ ಮೊದಲು ಒಪ್ಪಿರಲಿಲ್ಲವಂತೆ.

  ಇಬ್ಬರೂ ನಟರು ಚಿತ್ರೀಕರಣದಲ್ಲಿ ಬ್ಯುಸಿ

  ಇಬ್ಬರೂ ನಟರು ಚಿತ್ರೀಕರಣದಲ್ಲಿ ಬ್ಯುಸಿ

  ಕೆಲಸದ ವಿಷಯಕ್ಕೆ ಬರುವುದಾದರೆ ಮಹೇಶ್ ಬಾಬು ಈಗಷ್ಟೆ 'ಸರ್ಕಾರು ವಾರಿ ಪಾಠ' ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನು ದುಬೈ ನಲ್ಲಿ ಮುಗಿಸಿದ್ದಾರೆ. ಇನ್ನು ನಟ ಅಲ್ಲು ಅರ್ಜುನ್ ಸಹ ಪುಷ್ಪ ಸಿನಿಮಾದ ಎರಡು ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ.

  English summary
  Actor Mahesh Babu and Allu Arjun recivies special gifts for valentine's day. They sare photo on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X