Don't Miss!
- News
Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹೇಶ್ ಬಾಬು - ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಮೂರನೇ ಚಿತ್ರದ ಶೂಟಿಂಗ್ ಶುರು
ಕಳೆದ ವರ್ಷ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಮಹೇಶ್ ಬಾಬು ನಟನೆಯ 28 ನೇ ಚಿತ್ರ ಯಾವ ನಿರ್ದೇಶಕವ ಜತೆ ಎಂಬುದು ಘೋಷಣೆಯಾಗಿತ್ತು. ಹೌದು, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜತೆ ಮಹೇಶ್ ಬಾಬು ಕೈಜೋಡಿಸುವುದು ಖಚಿತವಾಗಿತ್ತು. ಈ ಚಿತ್ರಕ್ಕೆ ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಬಂಡವಾಳ ಹೂಡಿದ್ದು, ನಾಲ್ಕು ತಿಂಗಳ ಹಿಂದೆಯೇ ಪುಟ್ಟ ಟೀಸರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ಘೋಷಿಸಿತ್ತು.
ಹೀಗೆ ನಾಲ್ಕು ತಿಂಗಳ ಹಿಂದೆ ಘೋಷಣೆಯಾಗಿದ್ದ ಈ ಚಿತ್ರದ ಚಿತ್ರೀಕರಣ ನಾಳೆಯಿಂದ ( ಜನವರಿ 18 ) ಶುರುವಾಗಲಿದೆ. ನಾಳೆ ಹೈದರಾಬಾದ್‌ನಲ್ಲಿ ರಾಮ - ಲಕ್ಷ್ಮಣ್ ಮಾಸ್ಟರ್ ನಿರ್ದೇಶನದ ಅಡಿಯಲ್ಲಿ ಸಾಹಸ ದೃಶ್ಯವೊಂದರ ಮೂಲಕ ಚಿತ್ರೀಕರಣ ಶುರುವಾಗಲಿದೆ. ಇನ್ನು ಈ ಚಿತ್ರದಲ್ಲಿ ನಾಯಕಿಯರಾಗಿ ನಟಿ ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ನಟಿಸಲಿದ್ದು, ಎಸ್ಎಸ್ ಥಮನ್ ಸಂಗೀತ ನಿರ್ದೇಶನವಿರಲಿದೆ.
ಇನ್ನು ಫ್ಯಾಮಿಲಿ ಓರಿಯೆಂಟೆಡ್ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ತ್ರಿವಿಕ್ರಮ್ ಶ್ರೀನಿವಾಸ್ ಅಲಾ ವೈಕುಂಟಪುರಂಲೋ ರೀತಿಯ ಬಿಗ್ಗೆಸ್ಟ್ ಹಿಟ್ ಚಿತ್ರದ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ಅನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇನ್ನು ಅತಡು ಹಾಗೂ ಖಲೇಜ ಚಿತ್ರಗಳಲ್ಲಿ ಜತೆಗೆ ಕೆಲಸ ಮಾಡಿದ್ದ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಜೋಡಿ ಹದಿಮೂರು ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ.
ಈ ಚಿತ್ರದಲ್ಲಿ ಆಕ್ಷನ್ ಜತೆಗೆ ಫ್ಯಾಮಿಲಿ ಕತೆ ಇರಲಿದ್ದು, ಮಹೇಶ್ ಬಾಬು ಉದ್ದನೆಯ ಕೂಡಲು, ಗಡ್ಡದೊಂದಿಗೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆರಂಭದಲ್ಲಿ ಬಿಡುಗಡೆ ಮಾಡಿದ್ದ ಟೀಸರ್‌ನಲ್ಲೇ ಮಹೇಶ್ ಬಾಬು ಲುಕ್ ಕಂಡು ಸಿನಿ ರಸಿಕರು ಹಾಗೂ ಮಹೇಶ್ ಬಾಬು ಅಭಿಮಾನಿಗಳು ಮಹೇಶ್ ಬಾಬು ಅವರನ್ನು ವಿಭಿನ್ನ ಲುಕ್‌ನಲ್ಲಿ ನೋಡಬಹುದು ಎಂದು ಸಂತಸ ವ್ಯಕ್ತಪಡಿಸಿದ್ದರು.