For Quick Alerts
  ALLOW NOTIFICATIONS  
  For Daily Alerts

  ಅಲ್ಲು ಎದುರಲ್ಲಿ ತಮನ್ 'ಫೇಕ್ ಕಲೆಕ್ಷನ್' ಹೇಳಿಕೆ: ಮಹೇಶ್ ಬಾಬು ಫ್ಯಾನ್ಸ್ ಗರಂ

  |

  ಸೌತ್ ಇಂಡಸ್ಟ್ರಿಯಲ್ಲಿ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಭಾರಿ ಪೈಪೋಟಿ ನಡೆಸುತ್ತಿದೆ. ಮಹೇಶ್ ಬಾಬು ಅಭಿನಯದ ಸರಿಲೇರು ನೇಕೆವ್ವರು ಚಿತ್ರ ನೂರು ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಮತ್ತೊಂದೆಡೆ ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಂಲೋ ಚಿತ್ರವೂ ನೂರು ಕೋಟಿ ಗಳಿಸಿ ಮುಂದೆ ಸಾಗಿದೆ.

  ಬುಕ್ ಮೈ ಶೋನಲ್ಲಿ ಮಹೇಶ್, ಅಲ್ಲು, ರಕ್ಷಿತ್, ರಜನಿಗಿಂತ ಹೆಚ್ಚು ರೇಟಿಂಗ್ ಸಿಕ್ಕಿದ್ದು ಆ ಚಿತ್ರಕ್ಕೆ!ಬುಕ್ ಮೈ ಶೋನಲ್ಲಿ ಮಹೇಶ್, ಅಲ್ಲು, ರಕ್ಷಿತ್, ರಜನಿಗಿಂತ ಹೆಚ್ಚು ರೇಟಿಂಗ್ ಸಿಕ್ಕಿದ್ದು ಆ ಚಿತ್ರಕ್ಕೆ!

  ಆ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಸಂತಸ ಹಂಚಿಕೊಂಡರು. ಅದಾದ ಬಳಿಕ ಈ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಸಂಭ್ರಮಿಸಿದರು. ನಾ ಮುಂದು, ತಾ ಮುಂದು ಎಂದು ಗೆದ್ದು ಬೀಗುತ್ತಿರುವ ಈ ಸಂದರ್ಭದಲ್ಲಿ ಅಲಾ ವೈಕುಂಠಪುರಂಲೋ ಚಿತ್ರದ ಸಂಗೀತ ನಿರ್ದೇಶಕ ಎಸ್ ತಮನ್ ಕಲೆಕ್ಷನ್ ಬಗ್ಗೆ ನೀಡಿದ ಹೇಳಿಕೆಯೊಂದು ಈಗ ಮಹೇಶ್ ಬಾಬು ಅಭಿಮಾನಿಗಳನ್ನು ಕೆರಳಿಸಿದೆ. ಅಷ್ಟಕ್ಕೂ, ತಮನ್ ಏನಂದ್ರು? ಮುಂದೆ ಓದಿ...

  ಅಲಾ ವೈಕುಂಠಪುರಂಲೋ ವೇದಿಕೆಯಲ್ಲಿ ನಡೆದಿದ್ದೇನು?

  ಅಲಾ ವೈಕುಂಠಪುರಂಲೋ ವೇದಿಕೆಯಲ್ಲಿ ನಡೆದಿದ್ದೇನು?

  ಅಲಾ ವೈಕುಂಠಪುರಂಲೋ ಸಿನಿಮಾದ ಸಕ್ಸಸ್ ಮೀಟ್ ವೇದಿಕೆಯಲ್ಲಿ ಸುಮಾರು 8 ರಿಂದ 10 ನಿಮಿಷ ಮಾತನಾಡಿದ ಎಸ್ ತಮನ್, ಚಿತ್ರದ ಯಶಸ್ಸಿನ ಬಗ್ಗೆ, ಹಾಡುಗಳು ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡರು. ಬಳಿಕ ನಿರ್ದೇಶಕ ತ್ರಿವಿಕ್ರಮ್ ಹಾಗೂ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದರು. ವೇದಿಕೆಯಿಂದ ನಿರ್ಗಮಿಸುವ ಕೊನೆಯಲ್ಲಿ ಕಲೆಕ್ಷನ್ ಕುರಿತು ಒಂದೇ ಒಂದು ಮಾತು ಬಳಸಿದರು. ಅದು ವಿವಾದಕ್ಕೆ ಕಾರಣವಾಗಿದೆ.

  ಕಲೆಕ್ಷನ್ ನಲ್ಲಿ ಮಹೇಶ್ ಬಾಬು ಸಿನಿಮಾ ಹಿಂದಿಕ್ಕಿ ದಾಖಲೆ ಬರೆದ ನಟ ಅಲ್ಲು ಅರ್ಜುನ್ಕಲೆಕ್ಷನ್ ನಲ್ಲಿ ಮಹೇಶ್ ಬಾಬು ಸಿನಿಮಾ ಹಿಂದಿಕ್ಕಿ ದಾಖಲೆ ಬರೆದ ನಟ ಅಲ್ಲು ಅರ್ಜುನ್

  ಗಳಿಕೆ ಬಗ್ಗೆ ತಮನ್ ಹೇಳಿದ್ದೇನು?

  ಗಳಿಕೆ ಬಗ್ಗೆ ತಮನ್ ಹೇಳಿದ್ದೇನು?

  ''ಈ ಸಿನಿಮಾ ನಿಜವಾದ ಸಂಗೀತ ಕೇಳಿತು, ನಿಜವಾದ ಮಾತುಗಳನ್ನಾಡಿ ಎಂದು ಹೇಳಿದೆ, ನಿಜವಾದ ಗಳಿಕೆ ಹೇಳು ಎಂದು ಹೇಳಿದೆ, ಇವತ್ತು ಹೇಳ್ತಾ ಇದ್ದೀವಿ ನಾವು ಗೆದ್ವಿ'' ಎಂದು ಹೇಳಿದ್ದಾರೆ. ವೇದಿಕೆ ಮುಂಭಾಗದಲ್ಲಿ ಕೂತಿದ್ದ ಅಲ್ಲು ಅರ್ಜುನ್, ನಿರ್ದೇಶಕ ತ್ರಿವಿಕ್ರಮ್ ಈ ಮಾತು ಕೇಳಿ ಜೋರಾಗಿ ನಗಲು ಆರಂಭಿಸಿದರು. ಇದೀಗ, ಮಹೇಶ್ ಬಾಬು ಅಭಿಮಾನಿಗಳನ್ನು ಕೆರಳಿಸಿದೆ.

  'ಬಾಹುಬಲಿ' ಪ್ರಭಾಸ್ ರೆಕಾರ್ಡ್ ನ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್.!'ಬಾಹುಬಲಿ' ಪ್ರಭಾಸ್ ರೆಕಾರ್ಡ್ ನ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್.!

  ಮಹೇಶ್ ಬಾಬು ಫ್ಯಾನ್ಸ್ ಗೆ ಏಕೆ ಕೋಪ?

  ಮಹೇಶ್ ಬಾಬು ಫ್ಯಾನ್ಸ್ ಗೆ ಏಕೆ ಕೋಪ?

  ಸರಿಲೇರು ನೀಕೆವ್ವರು ಮತ್ತು ಅಲಾ ವೈಕುಂಠಪುರಂಲೊ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಫೈಟ್ ಮಾಡ್ತಿದೆ. ಎರಡೂ ಚಿತ್ರಗಳ ಕಲೆಕ್ಷನ್ ರಿಪೋರ್ಟ್ ಭಾರಿ ಚರ್ಚೆಗೆ ಕಾರಣವಾಗ್ತಿದೆ. ಇಂತಹ ಸಮಯದಲ್ಲಿ ''ನಾವು ನಿಜವಾದ ಕಲೆಕ್ಷನ್ ಹೇಳ್ತಿವಿ'' ಎಂದು ತಮನ್ ಹೇಳಿದ ಆ ಮಾತು ಪ್ರಿನ್ಸ್ ಅಭಿಮಾನಿಗಳಿಗೆ ಕೋಪ ತರಿಸಿದೆ. ಅಂದ್ರೆ ತಮನ್ ಅವರು ಪರೋಕ್ಷವಾಗಿ ಸರಿಲೇರು ನೀಕೆವ್ವರು ಚಿತ್ರದ ಗಳಿಕೆ ಫೇಕ್ ಎನ್ನುತ್ತಿದ್ದಾರೆ ಎಂದು ಕೆಂಡಾಮಂಡಲರಾಗಿದ್ದಾರೆ.

  'ಬಾಹುಬಲಿ-2' ದಾಖಲೆ ಧೂಳಿಪಟ ಮಾಡಿದ ಮಹೇಶ್ ಬಾಬು 'ಸರಿಲೇರು ನೀಕೆವ್ವರು''ಬಾಹುಬಲಿ-2' ದಾಖಲೆ ಧೂಳಿಪಟ ಮಾಡಿದ ಮಹೇಶ್ ಬಾಬು 'ಸರಿಲೇರು ನೀಕೆವ್ವರು'

  ತಮನ್ ವಿರುದ್ಧ ನಿಂದನೆ

  ತಮನ್ ವಿರುದ್ಧ ನಿಂದನೆ

  ಎಸ್ ತಮನ್ ಅವರು ಹೇಳಿಕೆ ಖಂಡಿಸಿ, ಮಹೇಶ್ ಬಾಬು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡ್ತಿದ್ದಾರೆ. ತಮನ್ ಅವರನ್ನು ನಿಂದಿಸಿ ಕಾಲೆಳೆಯುತ್ತಿದ್ದಾರೆ. ಮಹೇಶ್ ಬಾಬು ಅವರು ತಮನ್ ಜೊತೆಯಲ್ಲಿ ಕೆಲಸ ಮಾಡಬಾರದು ಎಂದು ಒತ್ತಾಯಿಸುತ್ತಿದ್ದಾರೆ.

  'ಸರಿಲೇರು ನೀಕೆವ್ವರು' ಸಿನಿಮಾ ನೋಡಿ ರಶ್ಮಿಕಾ ತಂಗಿ ಹೇಳಿದ್ದೇನು?'ಸರಿಲೇರು ನೀಕೆವ್ವರು' ಸಿನಿಮಾ ನೋಡಿ ರಶ್ಮಿಕಾ ತಂಗಿ ಹೇಳಿದ್ದೇನು?

  ಮಹೇಶ್ ಮುಂದಿನ ಚಿತ್ರದಲ್ಲಿ ತಮನ್?

  ಮಹೇಶ್ ಮುಂದಿನ ಚಿತ್ರದಲ್ಲಿ ತಮನ್?

  ಅಂದ್ಹಾಗೆ, ಮಹೇಶ್ ಬಾಬು ನಟಿಸುತ್ತಿರುವ ಮುಂದಿನ ಚಿತ್ರಕ್ಕೆ ಎಸ್ ತಮನ್ ಅವರೇ ಸಂಗೀತ ನಿರ್ದೇಶಕರಗಾಗಿ ಆಯ್ಕೆಯಾಗಿದ್ದಾರೆ. ಮಹರ್ಷಿ ಸಿನಿಮಾ ಮಾಡಿದ್ದ ವಂಶಿ, ಮಹೇಶ್ ಬಾಬು ಅವರ 27ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಈ ಚಿತ್ರಕ್ಕೆ ತಮನ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

  English summary
  Telugu actor Mahesh Babu fans are very angry about SS Thaman fake collection statement. thaman made comment at ala vaikunta puram lo success meet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X