For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿ ರೇಸ್‌ನಿಂದ ಹಿಂದೆ ಸರಿದ ಮಹೇಶ್ ಬಾಬು

  |

  ಈ ಬಾರಿಯ ಸಂಕ್ರಾಂತಿ ಹಬ್ಬವನ್ನು ತೆಲುಗು ಚಿತ್ರರಂಗ ರಂಗೇರಿಸಿದೆ. ಹಲವು ಸ್ಟಾರ್ ನಟರ ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗುವುದರಲ್ಲಿವೆ. ಮಹೇಶ್ ಬಾಬು, ಪವನ್ ಕಲ್ಯಾಣ್, ಪ್ರಭಾಸ್ ಇನ್ನೂ ಇತರೆ ಸ್ಟಾರ್ ನಟರ ಸಿನಿಮಾಗಳು ಸಂಕ್ರಾಂತಿ ರೇಸ್‌ನಲ್ಲಿದ್ದವು. ಆದರೆ ಈಗ ಮಹೇಶ್ ಬಾಬು ರೇಸ್‌ನಿಂದ ಹಿಂದೆ ಸರಿದಿದ್ದಾರೆ.

  ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಠ' ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗುವುದಿತ್ತು, ಆದರೆ ಈಗ ಚಿತ್ರತಂಡವು ಬಿಡುಗಡೆ ದಿನಾಂಕವನ್ನು ಬದಲಾಯಿಸಿಕೊಂಡಿದೆ. ಆ ಮೂಲಕ ಸಂಕ್ರಾಂತಿ ರಿಲೀಸ್‌ ರೇಸ್‌ನಿಂದ ಹಿಂದೆ ಸರಿದಿದೆ.

  ಜನವರಿ 12 ರಂದು ಬಿಡುಗಡೆ ಆಗುವುದಾಗಿ ಪ್ರಕಟಿಸಿದ್ದ 'ಸರ್ಕಾರು ವಾರಿ ಪಾಠ' ಸಿನಿಮಾವು ಇದೀಗ ಏಪ್ರಿಲ್ 1 ಕ್ಕೆ ಬಿಡುಗಡೆ ಆಗಲಿದೆ. ಆ ಮೂಲಕ ಮಹೇಶ್ ಬಾಬು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಸಿನಿಮಾವನ್ನು ತೆರೆಯ ಮೇಲೆ ನೋಡಲು ಇನ್ನಷ್ಟು ದಿನ ಕಾಯಬೇಕಾಗಿದೆ.

  ಸಂಕ್ರಾಂತಿಗೆ ಸ್ಟಾರ್ ನಟರ ಸಿನಿಮಾ ಬಿಡುಗಡೆ ಖಾಯಂ

  ಸಂಕ್ರಾಂತಿಗೆ ಸ್ಟಾರ್ ನಟರ ಸಿನಿಮಾ ಬಿಡುಗಡೆ ಖಾಯಂ

  ತೆಲುಗು ಚಿತ್ರರಂಗದಲ್ಲಿ ಸಂಕ್ರಾಂತಿ ಹಬ್ಬದಂದು ಸಿನಿಮಾ ಬಿಡುಗಡೆ ಮಾಡಲು ನೂಕು-ನುಗ್ಗಲು ಸಾಮಾನ್ಯ. ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬದಂದು ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುವುದು ಪಕ್ಕಾ. ಈ ಬಾರಿ ಕೊರೊನಾ ಕಾರಣದಿಂದ ಹಲವು ಸ್ಟಾರ್ ನಟರ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಹಲವು ನಟರು ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ ಪರಸ್ಪರ ಪೈಪೋಟಿ ಹೆಚ್ಚಾದ ಕಾರಣ ಕೆಲವರು ಬಿಡುಗಡೆ ದಿನಾಂಕ ಬದಲಾಯಿಸಿಕೊಂಡಿದ್ದಾರೆ.

  ಪವನ್ ಕಲ್ಯಾಣ್, ಪ್ರಭಾಸ್ ನಡುವೆ ಪೈಪೋಟಿ

  ಪವನ್ ಕಲ್ಯಾಣ್, ಪ್ರಭಾಸ್ ನಡುವೆ ಪೈಪೋಟಿ

  ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾ ಸಹ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ. ಜನವರಿ 12 ರಂದು ಪವನ್-ರಾಣಾ ನಟನೆಯ ಈ ಸಿನಿಮಾ ತೆರೆಗೆ ಬರಲಿದೆ. ಅದರ ಜೊತೆಗೆ ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಸಹ ಅದೇ ಸಮಯಕ್ಕೆ ಬಿಡುಗಡೆ ಆಗುತ್ತಿದೆ. ಜನವರಿ 14 ಕ್ಕೆ 'ರಾಧೆ-ಶ್ಯಾಮ್' ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಪವನ್ ಕಲ್ಯಾಣ್ ಹಾಗೂ ಪ್ರಭಾಸ್ ನಡುವಿನ ಪೈಪೋಟಿಯಲ್ಲಿ ಗೆಲುವು ಯಾರದ್ದಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

  ಇನ್ನೂ ಕೆಲವು ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗಲಿವೆ

  ಇನ್ನೂ ಕೆಲವು ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗಲಿವೆ

  ಇವುಗಳ ಹೊರತಾಗಿ ವೆಂಕಟೇಶ್ ನಟನೆಯ ಕೌಟುಂಬಿಕ ಹಾಸ್ಯ ಚಿತ್ರ 'ಎಫ್ 3' ಹಾಗೂ ರವಿತೇಜ ನಟನೆಯ 'ರಾಮ್ ರಾವ್ ಆನ್ ಡ್ಯುಟಿ' ಸಿನಿಮಾ ಸಹ ಇದೇ ಸಮಯಕ್ಕೆ ಬಿಡುಗಡೆ ಆಗಲಿದೆ. ಇದೆಲ್ಲವುದರ ಜೊತೆಗೆ ಭಾರತದ ಬಹುನಿರೀಕ್ಷಿತ ಸಿನಿಮಾ 'ಆರ್ಆರ್ಆರ್' ಒಂದು ವಾರದ ಮುಂಚೆ ಅಂದರೆ ಜನವರಿ 7 ರಂದು ಬಿಡುಗಡೆ ಆಗಲಿದೆ.

  ಏಪ್ರಿಲ್ 1 ಕ್ಕೆ ಸಿನಿಮಾ ಬಿಡುಗಡೆ

  ಏಪ್ರಿಲ್ 1 ಕ್ಕೆ ಸಿನಿಮಾ ಬಿಡುಗಡೆ

  ಇಷ್ಟೆಲ್ಲ ಸ್ಟಾರ್ ನಟರ ಸಿನಿಮಾಗಳ ನಡುವೆ ಪೈಪೋಟಿಗೆ ಬೀಳುವ ಬದಲಿಗೆ ಆರಾಮವಾಗಿ ಬೇರೆ ದೊಡ್ಡ ಸಿನಿಮಾಗಳ ಒತ್ತಡ ಇಲ್ಲದ ಸಮಯದಲ್ಲಿ ತೆರೆಗೆ ಬರಲು 'ಸರ್ಕಾರು ವಾರಿ ಪಾಠ' ಚಿತ್ರತಂಡ ನಿರ್ಧರಿಸಿರುವ ಕಾರಣ ಸಿನಿಮಾವನ್ನು ಏಪ್ರಿಲ್ 1 ಕ್ಕೆ ಬಿಡುಗಡೆ ಮಾಡಲಾಗುತ್ತಿದೆ. 'ಸರ್ಕಾರು ವಾರಿ ಪಾಠ' ಸಿನಿಮಾವನ್ನು ಪರಶುರಾಮ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿದ್ದಾರೆ. ಅನಷ್ಕಾ ಶೆಟ್ಟಿ ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

  ಐದು ಸಿನಿಮಾಗಳು ಬಿಡುಗಡೆ ಆಗಿವೆ

  ಐದು ಸಿನಿಮಾಗಳು ಬಿಡುಗಡೆ ಆಗಿವೆ

  ಈ ವರೆಗೆ ಮಹೇಶ್ ಬಾಬು ನಟನೆಯ ಸಿನಿಮಾಗಳಲ್ಲಿ 'ಠಕ್ಕರಿ ದೊಂಗ', 'ಒಕ್ಕಡು', 'ಬ್ಯುಸಿನೆಸ್ ಮ್ಯಾನ್', 'ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚಟ್ಟು', 'ನೇನೊಕ್ಕಡಿನೆ' ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಿದ್ದವು. ಇವುಗಳಲ್ಲಿ 'ಒಕ್ಕಡು', 'ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚಟ್ಟು' ಮತ್ತು 'ಬ್ಯುಸಿನೆಸ್‌ಮ್ಯಾನ್' ಸಿನಿಮಾಗಳು ಸೂಪರ್ ಹಿಟ್ ಆಗಿದ್ದರೆ, 'ಠಕ್ಕರಿ ದೊಂಗ' ಪ್ಲಾಫ್ ಹಾಗೂ 'ನೆನೊಕ್ಕಡಿನೆ' ಸಾಧಾರಣ ಮಟ್ಟದ ಕಲೆಕ್ಷನ್ ಮಾಡಿತ್ತು.

  English summary
  Mahesh Babu's new movie Sarkaru Vaari Paata releasing on April 01. Earlier movie scheduled to release on January 12.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X